Pages

Tuesday, April 10, 2012

ಆ ಹುಡುಗರೆಲ್ಲಾ ಮೂವತ್ತು ವರ್ಷದ ಒಳಗಿನವರು!





ಆ ಹುಡುಗರೆಲ್ಲಾ ಮೂವತ್ತು ವರ್ಷದ ಒಳಗಿನವರು.ಮದುವೆ ಮನೆಯಲ್ಲಿ ಹರಟೆ ಹೊಡೀತಾ ಕುಳಿತಿದ್ದರು. ಬೇಡವೆಂದರೂ ಹರಟೆಯ ಮಾತುಗಳು ನನ್ನ ಕಿವಿಯಮೇಲೂ ಬೀಳುತ್ತಿತ್ತು. ಅಷ್ಟು ಜೋರಾಗಿತ್ತು. ಒಬ್ಬ ಹೇಳ್ತಾನೆ" ನಮ್ಮ ದೇಶ 400 ವರ್ಷದಷ್ಟು ಹಿಂದುಳಿದಿದೆ. ಫಾರಿನ್ ಕಂಟ್ರೀಸ್ ಎಷ್ಟು ಮುಂದುವರೆದಿವೆಗೊತ್ತಾ? ನಮ್ಮ ದೇಶದಲ್ಲಿ ಹೆಚ್ಚೆಂದರೆ 100 ಕಿಲೋ ಮೀಟರ್ ಸ್ಪೀಡ್ ನಲ್ಲಿ ಕಾರ್ ಓಡಿಸಬಹುದು. ಫಾರಿನ್ ಕಂಟ್ರೀಸ್ ನಲ್ಲಿ 400-500 ಕಿಲೋ ಮೀಟರ್ ಸ್ಪೀಡ್ ನಲ್ಲಿ ಹೋಗಬಹುದು ಗೊತ್ತಾ? ಅಮೇರಿಕಾ ನೋಡ್ರೀ, ಜಪಾನ್ ನೋಡ್ರೀ, ಚೈನಾ............
ನಮ್ಮ ದೇಶದಷ್ಟು ಗಲೀಜ್ ದೇಶ ಇನ್ನೊಂದಿಲ್ಲ. ನಾನ್ ಸೆನ್ಸ್. ಎಲ್ಲಿಂದರಲ್ಲಿ ಕಸಾ ಹಾಕ್ತಾರೆ. ಉಗುಳ್ತಾರೆ, ಛೇ! ಛೇ!!
ನನಗೆ ನಾನು ಇಂಡಿಯನ್ ಅನ್ನೋಕೆ ನಾಚಿಕೆ ಯಾಗುತ್ತೆ!!
ಅಲ್ಲಿಯವರೆಗೆ ನನಗೂ ಅವರ ಮಾತಿಗೂ ಸಂಬಂಧ ಇಲ್ಲಾ ಅಂತಾ ಕುಳಿತಿದ್ದವನಿಗೆ ಅವನ ಕೊನೆ ಸಾಲು ಕೇಳಿದ ತಕ್ಷಣ ನನ್ನ ಕೋಪ ನೆತ್ತಿಗೇರಿತು...ತಡೆಯಲಾಗಲಿಲ್ಲ...
ರೀ ಮಿಸ್ಟರ್, ಸಾಕ್ ಮಾಡ್ರೀ. ಎಲ್ಲಾ ಕಿವಿ ನೆಟ್ಟಿಗೆ ಮಾಡಿಕೊಂಡ್ ಕೇಳ್ತಾ ಇದಾರೆ ಅಂತಾ ಬಾಯಿಗೆ ಬಂದಹಾಗೆ ಮಾತನಾಡ್ ತಿದೀ ರಲ್ರೀ, ನಮ್ಮ ದೇಶದ ನ್ಯೂನತೆಗಳ ಪಟ್ಟಿ    ನಿಮ್ಮ ಹತ್ತಿರ ಇರೋಹಾಗೆ, ನಮ್ಮ ದೇಶದ ವೈಭವದ ಬಗ್ಗೆ ನಿಮಗೆ ಏನಾದ್ರೂ ಗೊತ್ತಿದೆ ಏನ್ರೀ?


ಅಲ್ಲಾ ಸಾರ್, ನನಗೆ ಬೇರೆ ದೇಶ ನೋಡೀ ನಮ್ಮ ದೇಶದ ಬಗ್ಗೆ ಒಂತರಾ ಗಿಲ್ಟೀ  ಫೀಲಿಂಗ್ ಇದೆ ಸಾರ್....


" ರೀ ಯಾವ ದೇಶದ ಬಗ್ಗೆ ಇಡೀ ಪ್ರಪಂಚ ನಮಗೆ ಏನಾದ್ರೂ ಇಲ್ಲಿ ಸಿಗುತ್ತಾ ಅಂತಾ ಕಾತುರದಿಂದ ಕಾಯ್ತಾ ಇದೆ! ಅಂತಾ ದೇಶದ ಬಗ್ಗೆ ನಿಮಗೆ ನಾಚಿಕೆ ಯಾಗುತ್ತಾ?


ಏನ್ಸಾರ್ ಅಂತಾದ್ದು?


" ಅದು ನಮ್ಮ ಸಂಸ್ಕೃತಿ, ಪರಂಪರೆ" ಎಷ್ಟು ದೇಶಗಳಿಂದ ನಮ್ಮ ದೇಶಕ್ಕೆ ಬಂದು " ನಮಗೆ ವೇದ ಕಲಿಸಿಕೊಡಿ. ಯೋಗ ಕಲಿಸಿ ಕೊಡಿ, ಸಂಸ್ಕೃತ ಕಲಿಸಿಕೊಡಿ, ಅಂತಾ ...ಬಾಯ್ ಬಾಯ್ ಬಿಡ್ತಾ ಇದಾರೆ! ಗೊತ್ತಾ ?!
ನೀವು ನಮ್ಮ ದೇಶದ ಬಗ್ಗೆ ಇಷ್ಟು ತೆಗಳ್ತಾ ಇದೀರಲ್ಲಾ, ಅದರ ಪರಿಹಾರಕ್ಕೆ ನೀವೇನು ಮಾಡಿದೀರಿ?


ಅಷ್ಟು ಹೊತ್ತಿಗೆ ಯಾಕೋ ತಮ್ನ್ನ ತಪ್ಪಿನ ಅರಿವು ಅವನಿಗಾಗಿತ್ತೆಂದು ಕಾಣುತ್ತೆ ಅವನ ಗುಂಪೆಲ್ಲಾ ಬಾಯ್ ಮುಚ್ಚಿದ್ದರು. ಕೊನೆಗೆ ಆ ಹುಡುಗ ಹೇಳಿದ " ನಾನು ನನ್ನ ದೇಶಕ್ಕೆ ಏನು ಮಾಡ್ತೀನಿ, ಅಂತಾ ಮಾಡಿದ ಮೆಲೆ ನಿಮಗೆ ಹೇಳ್ತೀನಿ, ಸಾರ್. ನನಗೆ ನಿಜವಾಗಿ ನಮ್ಮ ದೇಶಕ್ಕೆ ಏನಾದ್ರೂ ಒಳ್ಳೆಯದು ಮಾಡಬೇಕೆಂಬ ಆಸೆ ಇದೆ."


..............


ಯಾಕೋ ನನ್ನ ಮಾತು ಸ್ವಲ್ಪ ಗಟ್ಟಿಯಾಯ್ತು, ಎನಿಸಿ ಸುಮ್ಮನಾದೆ. ಪಾಪ! ಇಡೀ ದಿನ ಆ ಹುದುಗ ಏನೋ ತಪ್ಪು ಮಾಡಿಬಿಟ್ಟೆ , ಅಂತಾ ಸಪ್ಪ  ಮುಖ ಮಾಡಿಕೊಂಡ್ಡಿದ್ದ. ಮದುವೆ ಮನೆಯಿಂದ ಹೊರಡುವಾಗ ನನ್ನ ಹತ್ತಿರ ಬಂದು ಆಹುಡುಗ ಹೇಳಿದ" ಸಾರ್, ನಮಗೂ ನಿಮಗೂ ಜನರೇಶನ್ ಗ್ಯಾಪ್ ಇದೆ ನೋಡೀ...ಹಾಗಾಗಿ ನಾನು ತಪ್ಪು ಮಾತನಾಡಿದ್ರೆ ಕ್ಶಮಿಸಿ ಬಿಡಿ ಸಾರ್! ಎಂದು ಸಪ್ಪೆ ಮೋರೆ ಹಾಕಿ ಕೊಂಡೇ ಹೇಳಿದ.


ನಾನೆಂದೆ" ಛೇ! ಇದು ನಿನ್ನ ತಪ್ಪಲ್ಲಾ ತಮ್ಮಾ, ಇವತ್ತಿನ ಯುವಕರಿಗೆ ಮಾರ್ಗದರ್ಶನದ ಕೊರತೆ ಇದೆ. ತಾವು ಹೋಗುತ್ತಿರುವ ಮಾರ್ಗ ತಪ್ಪೆಂದು ಹಿರಿಯರಿಗೆ ಗೊತ್ತಾದರೂ ತಿದ್ದುವ ಪ್ರಯತ್ನ ಮಾಡದ ನಮ್ಮಂತ ಹಿರಿಯರ ತಪ್ಪು! ನಿಮ್ಮ ಬಗ್ಗೆ ನನಗೆ ಗೌರವ ವಿದೆ. ನೀವು ಇಷ್ಟು ಬೇಗ ಅರ್ಥ ಮಾಡಿಕೊಂಡಿರಿ. ಭಗವಂತ ನಿಮಗೆ ಒಳ್ಳೆ ಯದು ಮಾಡಲಿ.


..."ಸಾರ್, ನಾನು ಇನ್ಯಾವತ್ತೂ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲಾ ಸಾರ್, ಅಷ್ಟೇ ಅಲ್ಲಾ, ನನ್ನ ಸ್ನೇಹಿತರು ನಮ್ಮ ದೇಶದ ಬಗ್ಗೆ ಹೀನಾಯವಾಗಿ ಮಾತನಾಡಿದರೆ ಸಹಿಸಿಕೊಳ್ಲುವುದಿಲ್ಲಾ ಸಾರ್. "..........ಬರ್ತೇನೆ, ಮತ್ತೆ ನಿಮ್ಮನ್ನು ಭೇಟಿಯಾಗ್ತೀನಿ, ಸಾರ್.


............ನಾಲ್ಕೈದು ಗಂಟೆ ಮುಂಚೆ ಯಾವ ತರುಣನ ಬಗ್ಗೆ ನನಗೆ ಬೇಸರ ಮೂಡಿತ್ತೋ ಅದೇ ತರುಣನನ್ನು ಕೊನೆಯಲ್ಲಿ ಕಂಡು ಖುಷಿಯಾಯ್ತು. ಹಾಗೆಯೇ...ಇವತ್ತಿನ ಯುವಶಕ್ತಿಗೆ ದಾರಿಯಾರು? ಎಂಬ ಬಗ್ಗೆ ಮನದಲ್ಲೇ ಚಿಂತಿಸುವ ಹಾಗಾಯ್ತು......


6 comments:

  1. ಇಂದಿನ ಮೂವತ್ತು ವರ್ಷದ ಒಳಗಿನವರು ಇತರ ದೇಶಗಳಿಗಿಂತ ಉಚ್ಛ ಮಟ್ಟದ ತಂತ್ರಜ್ಞಾನ ಕಂಡು ಹಿಡಿಯದೇ, ಕೇವಲ ಇತರ ದೇಶಗಳ ಸಾಧನೆಗಳಷ್ಟೇ ಮಾತನಾಡುತ್ತಿದ್ದರೆ, ಇನ್ನು ಮೂವತ್ತು ವರ್ಷಗಳ ನಂತರ ಅವರೂ ಸಹ ಇದೇ ಮಾತುಗಳನ್ನು ಕೇಳಬೇಕಾಗುತ್ತದೆ.

    ReplyDelete
  2. ಆತ್ಮೀಯ ಶ್ರೀಧರ್ ಅವರೇ ಈ ತರಹದ ಮಾತುಗಳು ಯುವಕರು ಹೇಳುವುದು ಇದನ್ನು ಕೇಳಿ ನೀಮ್ಮಂತಹ ಹಿರಿಯರು ಕೊರಗುವು ಸಾಮಾನ್ಯವಾಗಿಬಿಟ್ಟಿದೆ. ಆದರೆ ಈ ರೀತಿ ಮಾತನಾಡುವ ಅನೇಕರಲ್ಲಿ ಪಾಶ್ಚಾತ್ಯ ಪ್ರೇಮಿಗಳಲ್ಲಿ ತಮ್ಮ ಮಾತಿಗೆ ಸಮರ್ಥನೆಯಾದ ಕಾರಣಗಳೂ ಇದ್ದೇ ಇರುತ್ತವೆ. ಆ ಹುಡುಗ ದೊಡ್ಡವರು ಎಂದೇನೋ ನಿಮ್ಮೊಡನೆ ವಾದಿಸಲಿಲ್ಲ ಎಂಬುದೇ ಪುಣ್ಯ. ನನಗನ್ನಿಸುವಂತೆ ಯುವಕರು ಈ ರೀತಿ ಮಾತನಾಡಲು ಕಾರಣ ಇಷ್ಟೇ. ಭಾರತದ ಭವ್ಯವಾದ ಸಂಸ್ಕೃತಿ ಬಗ್ಗೆ ನಾವೇನೋ ಹೇಳುತ್ತೇವೆ. ಆ ದಾರಿಯಲ್ಲಿ ಭಾರತೀಯ ಸಮಾಜ ನಡೆಯದೇ ಇರುವುದೇ ಇಂತಹ ಮಾತುಗಳು ಹುಟ್ಟಲು ಮತ್ತು ಈ ದೇಶದ ಇಮೇಜ್ ಹಾಳಾಗುವಂತಹ ಪರಿಸ್ಥಿತಿ ಉಂಟಾಗಲು ಕಾರಣ. ಸಮಾಜದ ವರ್ತನೆಯೇ ಸಮಸ್ತ ಯುವಕರನ್ನು ಪ್ರೇರೇಪಿಸುತ್ತದೆಯೇ ವಿನಾ ಮಾರ್ಗದರ್ಶನವನ್ನು ಎಷ್ಟು ಜನಕ್ಕೆ ತಲುಪಿಸಲು ಸಾಧ್ಯ ?

    ReplyDelete
  3. ನಿಮ್ಮ ಮಾತು ನಿಜ, ಬೈರಪ್ಪಾಜಿಯವರೇ, ನಾವು ಸರಿಮಾರ್ಗದಲ್ಲಿದ್ದರೆ ಕಿರಿಯರಿಗೆ ಸರಿಮಾರ್ಗದ ಬಗ್ಗೆ ಹೇಳಲೇ ಬೇಕಾಗಿಲ್ಲ.ಜೊತೆಗೆ ಮಾರ್ಗದರ್ಶನ ಮಾಡಲು ಅರ್ಹತೆ ಇದ್ದವರು ಮಾಡಬೇಕು. ಅದು ವಾನಪ್ರಸ್ತಾಶ್ರಮದ ಧರ್ಮ.

    ReplyDelete
  4. ನಾವು ಹಲವಾರು ವಿಷಯಗಳಲ್ಲಿ ಹೊರ ದೇಶದ ಅನುಕರಣೆ ಮಾಡುತ್ತಿದ್ದೇವೆ. ಮನುಷ್ಯನ ಸಹಜ ಗುಣದಂತೆ ಯಾರಿಂದ ಯಾವುದನ್ನ ತೆಗೆದುಕೊಳ್ಳಬೇಕು ಅನ್ನುವುದು ತಿಳಿಯದೆ ಇಲ್ಲದಿರುವುದು ಇವಕ್ಕೆಲ್ಲ ಕಾರಣ ಅನ್ನುವುದು ನನ್ನ ಅನಿಸಿಕೆ. ಯಾಕೆಂದರೆ ದಿನ ನಿತ್ಯದ ಆಗುಹೋಗುಗಳಲ್ಲಿ ವಿದೇಶಿ ಅನುಕರಣೆ ಮಾಡುವ ಜನ ಅದೇ ವಿದೇಶಿ ಜನರ ಹಲವು ಒಳ್ಳೆಯ ಗುಣವನ್ನ ತೆಗೆದುಕೊಳ್ಳುತ್ತಿಲ್ಲ. ವಿದೇಶದಲ್ಲಿ ಮಕ್ಕಳಿಗೆ ೧೮ ವರ್ಷವಾದ ಮೇಲೆ ಮನೆಯಿಂದ ಒದ್ದು ಹೊರಗೋಡಿಸುತ್ತಾರೆ. ಭಿಕ್ಷೆ ಬೇಡಿದರೂ ಸರಿ ತಮ್ಮ ಜೀವನವನ್ನ ತಾವೇ ನೋಡಿಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಮಗ ಬೆಳೆದು ಮದುವೆಯಾದ ಮೇಲೂ ಅಪ್ಪನ ಆಸ್ತಿಯೇ ಬೇಕು.. ಇದು ಸರಿ ಅಂತ ನಾನು ಹೇಳುತ್ತಿಲ್ಲ ಆದರೆ ಕೆಲವು ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿದೇಶಿಯರನ್ನ ಅನುಕರಿಸಿದರೂ ತಪ್ಪಿಲ್ಲ ಅಲ್ಲವೇ?

    ReplyDelete
    Replies
    1. ಉತ್ತಮವಾದ ಗುಣ ಎಲ್ಲಿಂದ ಬಂದರೇನು, ಅನುಸರಿಸಲು ಯೋಗ್ಯವಿದ್ದರೆ ಅನುಸರಿಸುವುದು ಉತ್ತಮ ವಲ್ಲವೇ?

      Delete