ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Sunday, June 3, 2012

ವೇದದ ಆಶಯಓಂ

          ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
          ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ:||
[ಅಥರ್ವ-7.60.2]

ಅರ್ಥ: ಈ ಮನೆಯು ಆನಂದದಿಂದಲೂ, ಪರಾಕ್ರಮೀ-ಉತ್ಸಾಹಶೀಲ ಜನರಿಂದಲೂ ,ಉತ್ತಮ ನೀರು,ಹಾಲು,ತುಪ್ಪ ಮೊದಲಾದುವುಗಳಿಂದಲೂ ,ನ್ಯಾಯಮಾರ್ಗದಲ್ಲಿ ಸಂಪಾದಿಸಿದ , ಪ್ರಶಂಸನೀಯ ಸಂಪತ್ತಿನಿಂದಲೂ ಪೂರ್ಣವಾಗಿರಲಿ. ಗೃಹಿಣಿ-ಗೃಹಸ್ಥರು ಮನೆಗೆ ಬರುವ ಅಥಿತಿ, ಜ್ಞಾನಿಗಳನ್ನು ಸತ್ಕರಿಸಿ, ಜ್ಞಾನವನ್ನು ಪಡೆದುಕೊಳ್ಳಲಿ.

No comments:

Post a Comment