
ವೇದಸುಧೆಗೆ ನಿನ್ನೆ ಒಂದು ವಿಶೇಷ ದಿನವೇ ಹೌದು.ಹಲವಾರು ದಿನಗಳಿಂದ ಬಯಸುತ್ತಿದ್ದ ವೇದಪಾಠ ಸಾಪ್ತಾಹಿಕ ತರಗತಿಯು ನಿನ್ನೆ ಉದ್ಘಾಟನೆಯಾಗಿ ಇಂದು ಮೊದಲಪಾಠ ಶುರುವಾಯ್ತು. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಬಹಳ ವಿಶಿಷ್ಟವಾಗಿ ಆರಂಭಿಸಿದ ವೇದಪಾಠವು ಹಲವರಿಗೆ ಅಚ್ಚರಿಯುಂಟುಮಾಡಿತು. ವೇದ ಪಾಠ ಎಂದರೆ ಹೀಗೂ ನಡೆಯುತ್ತದೆಯೇ! ಎಂಬ ಆಶ್ಚರ್ಯ ಕೆಲವರಿಗೆ. ಕೆಲವರು ಕೇಳಿದರು" ಪೂಜೆಯ ಮಂತ್ರಗಳನ್ನು ಯಾವಾಗ ಹೇಳಿಕೊಡ್ತೀರಿ? ಬಹುಪಾಲು ಜನರಿಗೆ ವಿಶ್ವನಾಥಶರ್ಮರು ಪೀಠಿಕೆಯ ರೂಪದಲ್ಲಿ ಮಾಡಿದ ಉಪನ್ಯಾಸದಿಂದ "ಇಲ್ಲಿ ನಡೆಯುವ ವೇದ ಪಾಠವೆಂದರೆ ಕೇವಲ ಮಂತ್ರ ಕಲಿಯುವುದಲ್ಲ" ಎಂಬ ಅರಿವುಂಟಾಗಿದೆ.ವೇದಸುಧೆಯ ಅಭಿಮಾನಿಗಳು ಬಯಸುವುದಾದರೆ ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು ಪ್ರತೀ ವಾರ ಇಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಫೀಡ್ ಬ್ಯಾಕ್ ಇದ್ದರೆ ಉತ್ತಮ
ಕೊಂಡಿಯಲ್ಲಿರುವ ಆಡಿಯೋ ಕ್ಲಿಪ್ ನಿಮಗೆ ಮೇಲ್ ಮಾಡಬೇಕೇ? ನನಗೊಂದು ಮನವಿ ಮೇಲ್ ಕಳಿಸಿ.ಕೂಡಲೇ ಮೇಲ್ ಮಾಡುವೆ.
.
No comments:
Post a Comment