ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, August 17, 2012

ನಾನು ಸಾಯ ಬೇಕು!!


"ಓದುಗರ ಚರ್ಚೆಗಾಗಿ"

ಈಗಂತೂ ವೇದಸುಧೆಯಲ್ಲಿ ನನ್ನ ಲೇಖನಗಳನ್ನಾಗಲೀ ಕವನವನ್ನಾಗಲೀ ಪ್ರಕಟಿಸಬೇಕಾದರೆ ನೂರು ಭಾರಿ ಯೋಚಿಸುತ್ತೇನೆ. ಮೊನ್ನೆ ಒಂದು ಕವನ ಬರೆದೆ. ಅದಕ್ಕೆ ಉದ್ಧೇಶವಿತ್ತು. ಆದರೂ ವೇದಸುಧೆಯಲ್ಲಿ ಪ್ರಕಟಿಸುವ ಧೈರ್ಯಮಾಡಲಿಲ್ಲ. ಫೇಸ್ ಬುಕ್ ನಲ್ಲಿ ಪ್ರಕಟಿಸಿದೆ. ಪ್ರಕಟವಾದ ಎರಡು ದಿನಗಳಲ್ಲಿ  ಕವನವನ್ನು ಮೆಚ್ಚಿ  ಹಲವರು ಪ್ರತಿಕ್ರಿಯೆ ನೀಡಿದರು. ಮತ್ತೊಂದು ತಾಣ ಸಂಪದದಲ್ಲಿ ಪ್ರಕಟಿಸಿದೆ. ಆಗಲೂ ನನ್ನ ನಿರೀಕ್ಷೆಗೆ ಮೀರಿ ಓದುಗರು ಸ್ಪಂಧಿಸಿದ್ದರು. ನನ್ನ  ಮನದ ಭಾವನೆಗಿಂತಲೂ ಓದುಗರ ಭಾವನೆ ಇನ್ನೂ ಮಹತ್ವದ್ದಾಗಿದೆ. ಜನರ ಭಾವನೆಗಳನ್ನು ಕಂಡಮೇಲೆ   ಸಂಪದದಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟವಾದ  ಓದುಗರ ಅಭಿಮಾನದ ಮಾತುಗಳನ್ನೂ ಸಹ ನನ್ನ ಕವನದೊಡನೆ  ವೇದಸುಧೆಯಲ್ಲಿ  ಪ್ರಕಟಿಸುವ ಧೈರ್ಯ ಮಾಡಿದೆ. ಈಗ  ಚೆಂಡು ನಿಮ್ಮ ಅಂಗಳದಲ್ಲಿದೆ.


ನಾನು ಸಾಯದೆ ಗತಿಯೇ ಇಲ್ಲ|
ನಾನು ಹುಟ್ಟಿದ ಕೆಲವು ದಿನ
ಈ ನಾನುವಿನ ಕಾಟವಿರಲಿಲ್ಲ|
ಬೆಂಕಿ ಸುಡುತ್ತಿರಲಿಲ್ಲ
ಹಾವು ಕಡಿಯುತ್ತಿರಲಿಲ್ಲ||

ನಾನು ಹುಟ್ಟಿದ ಬಹುದಿನಗಳ
ಮೇಲೆ ಹುಟ್ಟಿದ ಈ ನಾನು
ನನಗಿಂತ ಮುಂಚೆಯೇ ಸಾಯಬೇಕು|
ಅದು ನನ್ನನ್ನು ಪದೇ ಪದೇ ಸಾಯಿಸುತ್ತಿದೆ
ಅದು ಮೊದಲು ಸಾಯಲೇ ಬೇಕು||

ಅದಕ್ಕಾಗಿಯೇ ನಾನು ವಿರುದ್ಧವಾಗಿ
ನಾನೇ ಹೋರಾಡಬೇಕಿದೆ|
ಸತ್ತಂತೆ ನಟಿಸುತ್ತದೆ ಕೆಲಒಮ್ಮೆ
ಮತ್ತೆ ಪುಟಿದೇಳುತ್ತದೆ!!
ಬೇರೆಯವರ ಏಳಿಗೆ ಸಹಿಸಲಾರದ
ಈ ನಾನು ಸಾಯಲೇ ಬೇಕು!!

ಈ ನಾನು ಸಾಯಲು
ಮೊದಲು ಅದರ ಕೊಬ್ಬು ಅಡಗಿಸಬೇಕು|
ಮಾನ ಕಳೆಯಬೇಕು
ಕೊರಗಿ ಕೊರಗಿ ಕೊನೆಗೊಮ್ಮೆ ಸಾಯಲೇ ಬೇಕು||ಕೆಲವು ಪ್ರತ್ರಿಕ್ರಿಯೆಗಳು:

1. ಪ್ರವೀಣ್.ಎಸ್ .ಕುಲಕರ್ಣಿ(ಚುಕ್ಕಿ)
ತುಂಬಾ ಸುಂದರವಾಗಿ ಬರೆದಿದ್ದಿರಾ.ನಿಜ ನಾನು ಸಾಯಲೇಬೇಕು


2. Rajendra Kumar Raikodi
ಆತ್ಮೀಯ ಹರಿಹರಪುರಶ್ರೀಧರ್ ಅವರೆ, ನಿಮ್ಮ ಕವನ ಸುಂದರ ಮತ್ತು ಅರ್ಥಗರ್ಭಿತವಾಗಿದೆ. ಧನ್ಯವಾದಗಳು.


3. Raju T
ಅರ್ಥಪೂರ್ಣವಾಗಿದೆ ಶ್ರೀಧರರವರೆ ...


4. ಸತೀಶ ಎನ್
ನಿಜ ನಾನು ಎಂಬುದು ಹುಟ್ಟುವುದು ನಿದಾನವಾಗಿ , ಸಾಯುವುದು ನಿದಾನವೆ . " ನಾನು " ಎಂಬುದನ್ನು ಸಾಯಿಸಲು " ನಾನು " ಎಂಬುದೇ ಬೇಕು ಅಲ್ಲವೇ ? ಒಳ್ಳೆಯ ಕವನ ಶ್ರೀಧರ್ ರವರೆ

5. ಡಿ.ನಂಜುಂಡ
ಉತ್ತಮ ಕವನ. ಧನ್ಯವಾದಗಳು


6. ಭಾಸ್ಕೀ
ನಾನು ಎಂಬುದು ಅಜ್ಞಾನದ ಸಾಗರ. ಇದನ್ನು ತಿಳಿದೂ ತಿಳಿದೂ ಅದರಲ್ಲೇ ಈಜಲು ಹೋಗುವ ಮನುಜ ಜನ್ಮವು ಅರ್ಥಹೀನ ಎನಿಸುವುದಿಲ್ಲವೇ? ನಿಮ್ಮ ಬರಹದಲ್ಲಿ ಮಹತ್ತರವಾದ ಸಾರವಿದೆ.
ಅಭಿನಂದನೆಗಳೊಂದಿಗೆ
ಭಾಸ್ಕೀ

7. ಶ್ರೀಧರ್ ಬಂಡ್ರಿ
.ಶ್ರೀಧರ್ ಸರ್,
ಕನಕದಾಸರನ್ನು, "ನಾನು ಸ್ವರ್ಗಕ್ಕೆ ಹೋಗುತ್ತೇನೆಯೇ?" ಎಂದು ವ್ಯಾಸರಾಯರು ಪ್ರಶ್ನಿಸಿದಾಗ, ಕನಕದಾಸರು, "ನಾನು" ಹೋದರೆ ಹೋಗಬಹುದು" ಎನ್ನುವ ಮಾರ್ಮಿಕ ಉತ್ತರವನ್ನು ಕೊಡುತ್ತಾರೆ. ಆ ಪ್ರಸಂಗವನ್ನು ನೆನಪಿಸಿತು ನಿಮ್ಮ ಈ ಕವನ. ಅದಕ್ಕಾಗಿ ನಿಮಗೆ ಅಭಿನಂದನೆಗಳು.

8. ಡಿ.ನಂಜುಂಡ
ನಾನು ನಾನೆನೆ ಅದು ನಾನಲ್ಲ,
ನಾನು ತಾನನವೆನೆ ಅದು ನಾನು.
ತನ್ನಿರವ ಮರೆವ ತಾನನವೆ ನಾನು
ತನುವಲ್ಲ ಮನವಲ್ಲ ನೋವುನಲಿವಲ್ಲ
ತನುಮನದಿರವ ಮರೆತರಿವು ನಾನು
ಗುರುಪದದ ಸಂಚರವು,
ಗುರುಪದದ ಇಂಚರವು
ಗುರುಪದದ ಅರಿವೆ ನಾನು.


9. ಈ ನಾನು ಸಾಯಲು ಮೊದಲು
ಅದರ ಕೊಬ್ಬು ಅಡಗಿಸಬೇಕು
ಮಾನ ಕಳೆಯಬೇಕು
ಕೊರಗಿ ಕೊರಗಿ
ಕೊನೆಗೊಮ್ಮೆ ಸಾಯಲೇ ಬೇಕು||
ಏನಿದೆಲ್ಲಾ ಶ್ರೀಧರ್ ಅವರೆ,
ಅವನೇ ನಾನು (ಸೋಹಂ) "ಅಹಂ ಬ್ರಹ್ಮಾಸ್ಮಿ"
"ಅಹಂ"ಕಾರ ಇರಲಿ. "ನಾನು" ಸಾಯಬಾರದು.
-ಗಣೇಶ.

ಶ್ರೀ ಗಣೇಶ್ ಅವರಿಗೆ ನನ್ನ  ಪ್ರತಿಕ್ರಿಯೆ:

"ಅಹಂ ಬ್ರಹ್ಮಾಸ್ಮಿ" ಬೇರೆ. ಈ ನಾನು ಬೇರೆ. ಅಹಂ ಬ್ರಹ್ಮಾಸ್ಮಿ ಚೇತನ ಕುರಿತಾದದ್ದು. ಈ ನಾನು ನನ್ನ ಅಹಂಕಾರ. ಅಹಂಕಾರವೂ ಇರಬೇಕು.ಅದು ನನ್ನ ಸದ್ವಿಚಾರಗಳನ್ನು ಸಮರ್ಥಿಸಿಕೊಳ್ಳ ಲು. ಆದರೆ ನನ್ನ ಎಲ್ಲವನ್ನೂ ಸಂಕುಚಿತವಾಗಿ ಬೀಗುವ ಈ ನಾನು ಹೋಗಬೇಕಾದರೆ ಅದರ ಕೊಬ್ಬು ಅಡಗಿಸಬೇಡವೇ? ನಮ್ಮನ್ನು ಬೇರೆಯವರು ಹೊಗಳುತ್ತಿದ್ದಾಗ ನಮ್ಮ ಮನ: ಸ್ಥಿತಿಗೂ ಬೇರೆಯವರು ತೆಗಳುವಾಗ ನಮ್ಮ ಮನ: ಸ್ಥಿತಿಗೂ ವೆತ್ಯಾಸ ಇದೆಯಲ್ಲವೇ? ಅದಕ್ಕೆ ಕಾರಣ ಈ ನಾನು .ಅದು ಸಾಯಬೇಕು. ಅದರಿಂದ ನನಗಂತೂ ತೊಂದರೆ ಆಗುತ್ತಿದೆ. ನಿಮಗೆ?

ಮೆಚ್ಚಿದವರು:
1.K Venkatesh Karanth Bhandarkar's Arts & science college, Mysore University
2.Kundapura Friends Kamlesh Kundapur Bhandarkars collage kundapur 
3.Shankar Hegde Bangalore, India 
4.Sadyojata Bhatta Dharvad,mysore
5.Padmasini Udyavara 
6. AP Phatak Jogalbettu ' perwaje
7.Nagarathna Bhushan Karkala
8.Ramachandra Shetty ,Site Civil Engineer
9. Sujatha Lokesh Adichunchanagiri polytechnic (chikamagaluru)
10.Siddaraju Kagalavadi
11.Nagaraju Vidyodaya Junior College
12.Ganesh Khare Kalasagar kala mahavidyalay 
13. Rudresh Rajashekharaiah Works at JSS Mahavidyapeetha, Mysore 
14.  Nataraj Kangod Cheif Operating Officer at Afghan TV13 comments:

 1. sogasagide,

  bhaktha kanakadasa chalanachitra andukotheeni...adaralli..swargakke yaaru hogutteera antha kelidaaga... "naanu hodare hodenu", idu nenapaguttade

  ReplyDelete
 2. ಧನ್ಯವಾದಗಳು ಶರ್ಮರೇ,
  ಈ ಕವನದ ಕೊನೆಯಲ್ಲಿ " ಅದರ ಕೊಬ್ಬು ಅಡಗಿಸಬೇಕು|ಮಾನ ಕಳೆಯಬೇಕು|ಕೊರಗಿ ಕೊರಗಿ ಕೊನೆಗೊಮ್ಮೆ ಸಾಯಲೇ ಬೇಕು" ಎನ್ನುವ ಪದಗಳನ್ನು ಬಳಸಿರುವೆ.ನಾನು ಎಂಬುದನ್ನು ದೂರಮಾಡಲು ಶಸ್ತ್ರಗಳಂತೆ ಉಪಯೋಗಿಸಿರುವ "ಮಾನ ಕಳೆಯಬೇಕು" ಇತ್ಯಾದಿ ಪದಗಳನ್ನು ನಾನು ತುಂಬಾ ತೂಗಿನೋಡಿ ಬರೆದದ್ದಲ್ಲ. ಈ ಪದಗಳನ್ನು ಬರೆದು ನಾನು ತಪ್ಪುಮಾಡಿದೆನೇನೋ ಅನ್ನಿಸುತ್ತಿದೆ. ಈ ಬಗ್ಗೆ ಇಲ್ಲಿ ಚರ್ಚೆ ನಡೆಯಬೇಕೆಂಬುದು ನನ್ನಾಸೆ.

  ReplyDelete
 3. ಇಲ್ಲಿ ನೀವು ಬಳಸಿರುವ “ಮಾನ “ ಪದದ ಅರ್ಥ? ಅಥವಾ “ ಮಾನ “ ಪದದ ಬಳಕೆ ಹೇಗೆ?
  ಮಾನ-ಮರ್ಯಾದೆ ಪದಗಳು ನಮ್ಮಲ್ಲಿ ಬಳಸುವ ಔಚಿತ್ಯ.. ಸ್ವಲ್ಪ ಮಾನ-ಮರ್ಯಾದೆ ಇದೆ... ಅವನೊಬ್ಬ ಮರ್ಯಾದೆವ೦ತ .. ಹೀಗೆ ಅಲ್ಲವೆ?
  ಹಾಗಾದರೆ ಮಾನ- ಮರ್ಯಾದೆ ಕಳೆದುಕೊ೦ಡರೆ.. ಆಗುವುದೇನು? ತಪ್ಪು ಅರ್ಥವಲ್ಲವೆ?
  ಅಥವಾ “ಮಾನ“ಬನ್ನಳೆಯಲು ಸೂಕ್ತ ಮಾನದ೦ಡಗಳಿವೆಯೇ? ಹಾಗಾದರೆ ಅವು ಯಾವುವು?
  ಕವನದ ಆರ೦ಭ-ಮಧ್ಯಭಾಗಗಳನ್ನೆಲ್ಲಾ ಅಧ್ಯಾತ್ಮಿಕದತ್ತ ಸೆಳೆಯುವ ಹಾಗೆ ಬರೆದು ಇದ್ದಕ್ಕಿದ್ದ೦ತೆ ಮಾನ ಕಳೆಯಬೇಕು ಅ೦ದರೆ ಪದಾರ್ಥವೇನು? ಅ೦ದರೆ ಲೌಕಿಕವಾಗಿ ಮರ್ಯಾದೆಗೆಡಬೇಕೆ೦ದೇ?

  ReplyDelete
  Replies
  1. ನಿಜ ರಾಘವೇಂದ್ರರೇ,ನಿಮ್ಮ ಅನಿಸಿಕೆಗೆ ಅರ್ಥವಿದೆ. ನಾನು ಎಂಬುದಿದೆಯಲ್ಲಾ ಅದು ತಣ್ಣಗಾಗಬೇಕಾದರೆ ಅದಕ್ಕೆ ಪೆಟ್ಟುಬೀಳಬೇಕು.ಪೆಟ್ಟು ಬೀಳಬೇಕೆಂಬ ಭಾವಾರ್ಥದಲ್ಲಿ ಆಡುಮಾತಿನ ಅದರ ಮಾನ ಕಳೆಯಬೇಕು, ಎಂಬ ವಾಕ್ಯ ಪ್ರಯೋಗ ಮಾಡಿರುವೆ. ಹೌದು, ವೇದದ ಮಾತಾಡುವವನ ಬಾಯಲ್ಲಿ ಒಂದು ರೀತಿಯ ಬಂಡಾಯದ ಪದ ಬಳಕೆಯಾಗಿದೆಯಲ್ಲಾ! ಅನ್ನಿಸಬಹುದು. ನಿಜ ಹೇಳಬೇಕೆಂದರೆ ನಾನು ಎಂಬುದು ನನಗೆ ಹೆಚ್ಚು ಕಾಟಕೊಟ್ಟಾಗ ನಾನು[ಈ ನಾನು ಆ ನಾನು ಅಲ್ಲ]ಹೆಚ್ಚು ತಲೆ ಖರ್ಚುಮಾಡದೆ ಹತ್ತು ನಿಮಿಷಗಳಲ್ಲಿ ಬರೆದ ಕವನ ಇದು. ಅದಕ್ಕಾಗಿಯೇ ಕೂದಲೇ ವೇದಸುಧೆಯಲ್ಲಿ ಬರೆಯದೆ ಫೇಸ್ ಬುಕ್ ನಲ್ಲಿ ಬರೆದೆ. ಬಂದಿರುವ ಪ್ರತಿಕ್ರಿಯೆಗಳಲ್ಲಿ ಅಲ್ಲೊಂದು ಇಲ್ಲೊಂದು[ನಿಮ್ಮದು] ನನ್ನ ತಪ್ಪು ತಿದ್ದುವ ಪ್ರಯತ್ನ ಮಾಡಿವೆ. ಅದಕ್ಕೆ ನಾನು ಕೃತಜ್ಞ. ಈಗ ನಿಮ್ಮ ಸರದಿ.ಕವನದ ಕೊನೆಯ ಸಾಲುಗಳನ್ನು ಅದೇ ಭಾವಾರ್ಥಬರುವಂತೆ ನೀವು ತಿದ್ದುಪಡಿಮಾಡಿ ಪ್ರಕಟಿಸುವಿರಾ?

   Delete
  2. ನಾನು ಹೋಗುವ ಮುನ್ನ
   ನಾನು ಸಾಯಲೇಬೇಕು!
   ನಾನದರ ಮಾನ ಕಳೆಯಬೇಕು..
   ಬುಡ ಸಹಿತ ಕೀಳಬೇಕು..
   ಮತ್ತೆ೦ದೂ ಹುಟ್ಟದ೦ತೆ ಕೊರಗಿ
   ಕೊರಗಿ ಅದು ಸಾಯಲೇಬೇಕು..
   ಮೇಲಿನ ಭಾವಾರ್ಥಕ್ಕೆ ಸರಿ ಹೊದಬಹುದು ಅನ್ನಿಸುತ್ತಿದೆ... ಇನ್ನು ನಿಮ್ಮ ಆಯ್ಕೆ..
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

   Delete
  3. ಧನ್ಯವಾದಗಳು ರಾಘವೇಂದ್ರರೇ.

   Delete
 4. ನಿಮ್ಮ ಕವನದ ಛಲ, ಮನದ ಬಲವನ್ನು ತೋರಿಸತ್ತೆ. ಉತ್ತಮ ಲೇಖನ..."ಸಾಕು ಎನ್ನುವನೇ ಸಾಹುಕಾರನು, ಇನ್ನು ಬೇಕು ಎನ್ನುವನೆಂದೂ ಬಡವ ಭಿಕಾರಿ".
  -ರಾ.ಗುರುದತ್ತ

  ReplyDelete
 5. ಕವನ ಚೆನ್ನಾಗಿದೆ , ಅಭಿನಂದನೆಗಳು.
  -veena-wadki

  ReplyDelete
 6. ನಾನು ಎಂಬ ಅಹಂ ಹೋಗಿಸಲು ಚಿಂತನೆ ಮಾಡಬೇಕು ಎಂದು ನಿಮ್ಮ ಕವನ ಎಚ್ಚರಿಸಿದೆ. ಶುಭವಾಗಲಿ.
  -s.nagaraj

  ReplyDelete
 7. ಆತ್ಮೀಯ ಶ್ರೀಧರ್ ರವರೆ,
  ನಿಮ್ಮ ಕವನ " ನಾನು ಸಾಯಲೇ ಬೇಕು "ಓದುವಾಗ ಗುರುನಾಥರ ಮಾತು ಜ್ಞಾಪಕಕ್ಕೆ ಬಂತು.
  " ಈ ನಾನು ಸುಮ್ಮನೆ ಇರೋಲ್ಲ ಸಾರ್, ಇದು ಕೆಣಕುತ್ತಲೇ ಇರುತ್ತೆ. ಪ್ರತಿಸಲಿ ಕೆಣಕಿದಾಗ ನಾನು, ನನ್ನದು ಎಂಬುದು ತಲೆ ಎತ್ತಿ ನಿಲ್ಲುತ್ತದೆ. ಆಗ ತಲೆ ಮೇಲೆ ಮಟ್ಟಲು ಆಗುತ್ತ್ಯೆ? ಮಟ್ಟಿದರೆ ಇನ್ನಷ್ಟು ಜಾಸ್ತಿಯಾಗುತ್ತೆ, ಅದಕ್ಕೆ ಈ ನಾನು ಎಂಬುದು ಬರುವ ಮುಂಚೆಯೇ "ನೀನು.....ನೀನು........ನೀನು.........ನೀನು........ಎಂಬುದನ್ನು ಶುರುಮಾಡಿಬಿಟ್ಟರೆ ಈ ನಾನು ಬಾಲ ಮುದಿರಿಕೊಂಡು ಬಿಡುತ್ತೆ ಅಲ್ವೇ ಸಾರ್. ಆದರೆ ನಾನು ಎಂಬುದನ್ನು ನೀನು ಎಂದು ಹೇಳೋದು ಎಷ್ಟು ಕಷ್ಟ ಗೊತ್ತೇ? ಆದರೆ ಬಿಡೋಹಾಗಿಲ್ಲ, ಮಾಡಲೇ ಬೇಕು."
  ಇದರ ಪ್ರಯತ್ನ ಸಾಧ್ಯವಾದಾಗಲೆಲ್ಲ ಮಾಡಲು ಆರಂಭ ಮಾಡಿದರೆ ನಾನು ಸಾಯಬಹುದು.
  ಉತ್ತಮ ಕವನಕ್ಕೆ ಧನ್ಯವಾದಗಳು

  ReplyDelete
  Replies
  1. ಪ್ರಕಾಶ್,
   ಧನ್ಯವಾದಗಳು.

   ನನ್ನ ಮಿತ್ರನೊಬ್ಬ ಹೇಳುತ್ತಿರುತ್ತಾನೆ" ಒಳ್ಳೆಯದಕ್ಕೆಲ್ಲಾ ನಾನು, ಕೆಟ್ಟದ್ದಕ್ಕೆಲ್ಲಾ ನೀನು" ....ಇದು ಎಲ್ಲರಲ್ಲೂ ಇರುವ ಮನಸ್ಥಿತಿ.

   ಈ ಕವನವನ್ನು ನಾನು[ ಮತ್ತೆ ತಲೆ ಎತ್ತುತ್ತಿದೆ!] ಕವನ ಬರೆಯಬೇಕೆಂದು ಬರೆದದದ್ದೇ ಅಲ್ಲ. ಹಾಗೇ ಅಹಂ ಜಾಸ್ತಿಯಾದಾಗ ಆಗುವ ನೋವಿನ ಬಗ್ಗೆ ಮನದಲ್ಲೇ ಚಿಂತನ-ಮಂಥನ ನಡೆಯುತ್ತಿತ್ತು. ಆಗ ಈ ಬರಹ ರಚನೆಯಾಯ್ತು.ನಾನು ಎಂಬುದನ್ನು ಬಿಡುವುದು ಬಲು ಕಷ್ಟ. ಅದನ್ನು ಬಿಡುವುದಕ್ಕಾಗಿಯೇ ನಿತ್ಯ ತಪಸ್ಸು ಮಾಡಬೇಕು.ನಾಲ್ಕು ದಿನ ಮೌನವಾಗಿದ್ದ ನಾನು ಐದನೇ ದಿನ ಬಾಲ ಬಿಚ್ಚದೆ ಇರದು! ಅದಕ್ಕಾಗಿಯೇ ಸ್ವಲ್ಪ ಹಗುರ ವಾದ ಪದಗಳನ್ನೇ ಕವನದ ಕೊನೆಯಲ್ಲಿ ಬಳಸಿದೆ.

   Delete

 8. Manjunatha G S
  18 Aug (7 days ago)

  to me
  ಶ್ರೀಧರ್ ಜಿ,
  ಬಹು ಆಪ್ಯಾಯಮಾನವಾದ ಕವನ. ಮನೆ ಮನೆಗೆ ರಾಮಕೃಷ್ಣ ೧೦೦ ಕಾರ್ಯಕ್ರಮದಲ್ಲಿನ ಇಬ್ರಾಹಿಮ್ ಸುತಾರ್ರವರ ಎಲ್ಲ ಮಾತುಗಳೂ ಒಮ್ಮೆ ಮನ:ಪಟಲದಲ್ಲಿ ಸುಳಿದು ಹೋಯಿತು. ನಾನು ನಾನೆನುತ್ತೆ.ಕಿರಿ ಕೊಡದ ನೀರ್ ..ಹಾಗಾಗಬಾರದು. 'ನೂನದಿಂದೆಲ್ಲವನು ಅಬ್ಧಿಯೊಳ್ ಇರಿಸಬೇಕು'. ಹೀಗೆ ಆಗಾಗ ಎಚ್ಹರಿಸುತ್ತಿರಿ.

  ಧನ್ಯವಾದ.

  ReplyDelete
  Replies
  1. ಮಿತ್ರ ಮಂಜು ಮೇಲ್ ಮಾಡಿ ತಮ್ಮ ಮೆಚ್ಚುಗೆ ಹಂಚಿಕೊಂಡಿದ್ದಾರೆ,ಅವರಿಗೂ ಧನ್ಯವಾದಗಳು.

   Delete