Pages

Wednesday, August 29, 2012

ಈಶಾವಾಸ್ಯೋಪನಿಷದ್





ಈಶಾವಾಸ್ಯೋಪನಿಷದ್ 

ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತ:|
ತತ್ರ ಕೋ ಮೋಹ: ಕ: ಶೋಕ ಏಕತ್ವಮನುಪಶ್ಯತ:|| 7||

ಅರ್ಥ:
ಯಸ್ಮಿನ್ ಸರ್ವಾಣಿ ಭೂತಾನಿ= ಯಾವನಲ್ಲಿ ಎಲ್ಲಾ ಜೀವರಾಶಿಗಳೂ 
ಆತ್ಮ ಏವ ಅಭೂತ್= ಆತ್ಮ ಮಾತ್ರವೇ ಆಗಿರುತ್ತವೆಯೋ
ವಿಜಾನತ:= ತಿಳಿದವನಿಗೆ
ತತ್ರ= ಆ ಅವಸ್ಥೆಯಲ್ಲಿ
ಏಕತ್ವಮ್= ಆತ್ಮೈಕತ್ವವನ್ನು
ಅನುಪಶ್ಯತ:=ಅವಲೋಕಿಸುವವನಿಗೆ
ಕ: ಮೋಹ:= ಯಾವ ಮೋಹವು?
ಕ: ಶೋಕ:= ಯಾವ ದು:ಖವು?

ಸಪರ್ತಗಾತ್ ಶುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್|
ಕವಿರ್ಮನೀಷೀ ಪರಿಭೂ: ಸ್ವಯಂಭೂ:  ಯಥಾತರ್ಥ್ಯತೋsರ್ಥಾನ್
ವ್ಯವಧಾತ್ ಶಾಶ್ವತೀಭ್ಯ: ಸಮಾಭ್ಯ:||8||

ಅರ್ಥ:
ಸ= ಯಥೋಕ್ತ ಆತ್ಮನು
ಪರ್ಯಗಾತ್= ಎಲ್ಲಾ ಕಡೆಗೂ ವ್ಯಾಪಿಸಿದವನು
ಶುಕ್ರಂ=ಶುಭ್ರವಾಗಿರುವವನು
ಅಕಾಯಂ= ಅಶರೀರಿಯು
ಅವ್ರಣಂ= ಗಾಯಗಳಿಲ್ಲದವನು
ಅಸ್ನಾವಿರಂ= ನರಗಳಿಲ್ಲದವನು 
ಶುದ್ಧಂ= ಅವಿದ್ಯಾಮಲರಹಿತನು
ಕವಿ:=ದೃಷ್ಟಾರನು
ಮನೀಷೀ=ಮನಸ್ಸನ್ನು ಆಳುವವನು
ಪರಿಭೂ:=ಎಲ್ಲರಲ್ಲೂ ಇರುವವನು
ಸ್ವಯಂಭೂ:=ತನ್ನ ತಾನೇ ಇರುವವನೂ
ಶಾಶ್ವತೀಭ್ಯ: ಸಮಾಭ್ಯ:ಅರ್ಥಾನ್ ಯಥಾತಥ್ಯತ: ವ್ಯವಧಾತ್= ಶಾಶ್ವತವಾದ ಸಂವತ್ಸರ ಎಂಬ ಹೆಸರುಳ್ಳ  ಪ್ರಜಾಪತಿಗಳಿಗೆ ಸತ್ಯವಾಗಿ ಕರ್ತವ್ಯಾದಿಗಳನ್ನು ವಿಭಾಗ ಮಾಡಿಕೊಟ್ಟನು.

ಈ ಮಂತ್ರಗಳಿಗೆ ಭಾವಾರ್ಥವನ್ನೂ ಸಹ  "ಉಪನಿಷದಾಮೃತ" ದಲ್ಲಿ ಕೊಡಲಾಗಿದೆ. ಆದರೆ ವೇದಸುಧೆಯ  ಅಭಿಮಾನೀ  ವಿದ್ವಾಂಸರು  ಸರಳವಾಗಿ ಈ ಮಂತ್ರಗಳ ಸಾರವನ್ನು  ನಮ್ಮೊಡನೆ ಹಂಚಿಕೊಳ್ಳಲು ವಿನಂತಿಸುವೆ.

ಆಧಾರ:
ಆಡಿಯೋ ಕೃಪೆ: ಯೂಟ್ಯೂಬ್

ಮಂತ್ರ-ಅರ್ಥ:
"ಉಪನಿಷದಾಮೃತ"
ಸಂಪಾದಕರು: ರತ್ನಾಕರ ಹ. ಕುಲಕರ್ಣಿ
ಅಧ್ಯಾತ್ಮ ಭಂಡಾರ, ಶಾಂತಿಕುಟೀರ, ಕನ್ನೂರ
ವಿಜಾಪುರ-ಜಿಲ್ಲೆ


3 comments:

  1. ಈ ಮಂತ್ರಗಳು ಯಾವ ವೇದದಿಂದ ಬಂದಿವೆ. ಅದರ ಸಂಖ್ಯೆ ಯಾವುದು ಎಂದು ತಿಳಿಸಿದಲ್ಲಿ ವೇದ ಭಾಷ್ಯ ಸಮತಿಯವರು ಪ್ರಕಟಿಸಿರುವ ಪುಸ್ತಕಗಳನ್ನು ನೋಡಿ,ಅದರ ಸಂಕ್ಷೇಪ ಅರ್ಥ, ಭಾವಾರ್ಥ ಗಳನ್ನು ತಿಳಿಸುವ ಪ್ರಯತ್ನ ಮಾಡಬಹುದೇನೋ?

    ReplyDelete
  2. ಶ್ರೀ ವಾಸುದೇವ ರಾವ್ ಈಗ ಲೇಖನ ಓದಿ ಅದರ ಸಾರವನ್ನು ನಿಮ್ಮ ಗ್ರಂಥಗಳ ಆಧಾರದಿಂದ ತಿಳಿಸಬಹುದೇ?

    ReplyDelete
  3. ಜೀವಜಂತುಗಳಲ್ಲಿ ತನ್ನನ್ನೇ ಕಾಣುವವನಿಗೆ ಮೋಹವೋ ಶೋಕವೋ ಇಲ್ಲದೆ ಎಲ್ಲವೂ ಸಮಾನವಾಗಿರುವುದು ಅನುಭವಕ್ಕೆ ಬರುತ್ತದೆ. ಇದು ಧ್ಯಾನಸ್ಥಿತಿಯ ಮೂರ್ಧನ್ಯಾವಸ್ಥೆಯಲ್ಲಿ ಆಗುವಂಥ ಅನುಭವ. ಸಕಲ ಜೀವಜಂತುಗಳಲ್ಲಿ ತನ್ನನ್ನೂ, ತನ್ನಲ್ಲಿ ಸಕಲ ಜೀವಜಂತುಗಳನ್ನೂ ಕಾಣಬಲ್ಲವನು ಯೋಗಿಯೆಂದು ಭಗವದ್ಗೀತೆಯ ಆರನೆಯ ಅಧ್ಯಾಯದ ಇಪ್ಪತೊಂಬತ್ತನೆಯ ಶ್ಲೋಕದಲ್ಲಿ ಗೀತಾಚಾರ್ಯ ಹೇಳಿದ್ದಾನೆ.

    ReplyDelete