Pages

Tuesday, January 1, 2013

ಟಿ.ವಿ.ದಾರಾವಾಹಿ ಮತ್ತು ನಾವು

‎4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ ಉಸಿರುಗಟ್ಟಿಸಿ ಸಾಯಿಸಬೇಕೇ? ಕಣ್ಣಾಮುಚ್ಚೆ ಆಟ ಆಡುವ ನೆಪದಲ್ಲಿ ಮಗುವಿಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿನ ಸಂಪಿನೊಳಗೆ ಮುಳುಗಿಸಬೇಕೇ? ಮಹಡಿಯ ಮೇಲಿನಿಂದ ದೂಕಬೇಕೇ?, , , , , ಇತ್ಯಾದಿ ಹಲವಾರು ಪ್ಲಾನುಗಳು ನಿಮಗೆ ಬೇಕೇ? ಸಾಯಿಸಿದರೂ ಅನುಮಾನ ಬರದಂತೆ ಹೇಗೆ ಸಾಯಿಸಬಹುದು? ಅದರಲ್ಲೂ ಮಗುವಿನ ಅಜ್ಜಿ, ಚಿಕ್ಕಪ್ಪ, ಅತ್ತೆ, ಹತ್ತಿರದ ಸಂಬಂಧಿಗಳು ಮಗುವನ್ನು ಸಾಯಿಸುವ ಯೋಚನೆಯಲ್ಲೇ ಸದಾ ಇರುವುದನ್ನು ಕಾಣಬೇಕೇ? ಹಾಗಾದರೆ ಸುವರ್ಣ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿರುವ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಪ್ಪದೆ ನೋಡಿ. ನಿಮಗೂ ಇಂತಹ ಹಲವಾರು ಮನೆಹಾಳು ಐಡಿಯಾಗಳು ಬರಬಹುದು. ಈ ಧಾರಾವಾಹಿ ನಿಮಗೆ ಇಷ್ಟವಾದರೆ ಅದರ ಲೇಖಕರು, ಪಾತ್ರಧಾರಿಗಳು, ಚಾನೆಲ್ ಮಾಲಿಕರು, ಕಾರ್ಯಕ್ರಮ ನಿರ್ವಾಹಕರು, ಪ್ರಾಯೋಜಕರು,... ಎಲ್ಲರನ್ನೂ ಅಭಿನಂದಿಸಿರಿ. ಇದು ವಿಕೃತರ ಸೃಷ್ಟಿ ಎನ್ನಿಸಿದರೆ ಸಂಬಂಧಿಸಿದವರಿಗೆ ಧಿಕ್ಕಾರ-ಗಟ್ಟಿಧ್ವನಿಯ ಧಿಕ್ಕಾರ ಹೇಳಲು ಮರೆಯದಿರಿ.

-Kavi Nagaraj

ಕವಿನಾಗರಾಜರು ಫೇಸ್ ಬುಕ್ ನಲ್ಲಿ ತಮ್ಮ ಸಂಕಟವನ್ನು ತೋಡಿಕೊಂಡಿರುವುದನ್ನು ಇಲ್ಲಿ ಹಾಗೆಯೇ ಪ್ರಕಟಿಸಿರುವೆ.

ನನಗ್ಯಾಕೋ  ನಮ್ಮ ತಾಯಂದಿರಮೇಲೆ ಬಲು ಬೇಸರವಾಗುತ್ತಿದೆ. ನಿಮಗೆ ಸಿಟ್ಟು ಬರುತ್ತೆ, ಅಲ್ವಾ? ನಾನಂತೂ ಹತ್ತಾರು ಮನೆಗಳಲ್ಲಿ ತಾಯಂದಿರನ್ನು ನೋಡಿ ಬಲು ನೊಂದುಕೊಂಡಿದ್ದೇನೆ. ದಿನಕ್ಕೆ ನಾಲ್ಕಾರು ದಾರಾವಾಹಿಗಳನ್ನು ಅವರು ನೋಡಲೇ ಬೇಕು. ಅದೇ ದಾರವಾಹಿಯ ಸಮಯದಲ್ಲಿ ಯಾವುದಾದರೂ ಮುಖ್ಯ ಸಮಾಚಾರಗಳು ಪ್ರಕಟವಾಗುತ್ತಿದ್ದರೂ ಸುದ್ಧಿ ನೋಡಲು ಅವಕಾಶವಿಲ್ಲ. ಒಂದು ವೇಳೆ ಸುದ್ಧಿ ನೋಡಬೇಕೆಂದು ನೀವು ಚಾನಲ್ ಬದಲಿಸದರೆ ಕಥೆ ಮುಗಿದಂತೆಯೇ! 
"ಏನೋ ಬೇಜಾರು, ಅಂತಾ ದಾರಾವಾಹಿ ನೋಡ್ತಾರೆ, ಅವರಿಗ್ಯಾಕ್ರೀ ತೊಂದರೆ ಕೊಡ್ತೀರಿ? "......ದಾರಾವಾಹಿಯನ್ನು ನೋಡುವ ತಾಯಂದಿರ ಹೆಣ್ಣುಮಕ್ಕಳಿರ್ತಾರಲ್ಲಾ ಅಥವಾ ಸೊಸೆ ಇರ್ತಾರಲ್ಲಾ, ಅವರು  ಅವರ ಪತಿಗೆ ಹೇಳುವ ಮಾತಿದು.
ಎಷ್ಟೋ ಮನೆಯಲ್ಲಿ  ಈ ದಾರಾವಾಹಿಯನ್ನು ನೋಡಲು ಅವಕಾಶವಿಲ್ಲವೆಂದು  ಎಲ್ಲಿ ದಾರಾವಾಹಿಯನ್ನು ನೋ   ಡಲು     ಯಾರೂ ಅಡ್ಡಿಮಾಡುವುದಿಲ್ಲವೋ ಅಂತಹಾ ಮಕ್ಕಳ ಮನೆಗೆ ಅವರ ತಾಯಂದಿರು ಹೋಗಿಬಿಡ್ತಾರೆ!!
ಹೌದು, ವಯಸ್ಸು ಅರವತ್ತು-ಎಪ್ಪತ್ತು ಆಗಿರುವ ತಾಯಂದಿರ ಕಥೆ ಇದು.
ಹೋಗಲೀ ನೋಡುವ ದಾರಾವಾಹಿಯ ಕಥೆ ಏನು ಗೊತ್ತಾ?  ಗಂಡನಿಗೆ ಮೋಸ ಮಾಡಿ ಪ್ರಿಯಕರನ ಜೊತೆ ಮೋಜು ಮಾಡುವ ಹೆಣ್ಣಿನ ದೃಶ್ಯ! ಪ್ರಿಯಕರನಿಗಾಗಿ ಗಂಡನನ್ನು ಕೊಲೆಮಾಲು ಸಂಚು ರೂಪಿಸುವ ದೃಶ್ಯ!  ತಮ್ಮ ಕಛೇರಿಯಲ್ಲಿ  ಕೆಲಸಮಾಡುವ ಹುಡುಗಿರ ಜೊತೆ ಚೆಲ್ಲಾಟ‘ವಾಡುವ ಗೃಹಸ್ಥ   ಭೂಪರು! 
ಹುಡುಗಿಯರ ರೌಢಿಸಮ್ !!

ಅಬ್ಭಬ್ಭಾ!! ನಿಜವಾಗಿ ಹೇಳ್ರೀ ನೀವು ನೋಡುವ ದಾರಾವಾಹಿಗಳಲ್ಲಿ ಮೇಲಿನ ಯಾವುದಾದರೊಂದು ದೃಶ್ಯ ಇಲ್ಲದೆ ದಾರಾವಾಹಿ ನಡೆಯುತ್ತದೆಯೇ? ಇಂತಹಾ ದಾರಾವಾಹಿಗಳನ್ನು ನೋಡುತ್ತಾ ಬಹುಪಾಲು ಕಾಲಕಳೆಯುವ ನಮ್ಮ ತಾಯಂದಿರನ್ನು ನೋಡಿದಾಗ ಅವರ ಇಂತಹ   ಸ್ಥಿತಿ ಕಂಡು ಮರುಕ ಹುಟ್ಟುವುದಿಲ್ಲವೇ?

ಟಿ.ವಿ ಯಲ್ಲಿ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳು  ನಡೆಯುವುದಿಲ್ಲವೇ? ಹತ್ತಾರು ಚಾನಲ್ ಗಳಲ್ಲಿ  ನಿಮ್ಮ  ಮನಸ್ಸಿಗೆ ಮುದನೀಡುವ, ನಿಮ್ಮ ಅರಿವನ್ನು ಹೆಚ್ಚಿಸುವ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು     ಅನುಕೂಲವಾಗಬಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಆದರೆ ಅವೆಲ್ಲಾ ಇಂತಹ ದಾರಾವಾಹಿಗಳನ್ನು ನೋಡುವವರಿಗೆ ಹಿಡಿಸದು, ಅಷ್ಟೇಕೆ, ಮಕ್ಕಳು  ನೋಡಬಹುದಾದ ಕಾರ್ಯಕ್ರಮಗಳನ್ನು ಮಕ್ಕಳು          ನೋಡುತ್ತಿದ್ದರೆ,  ನಿಮಗೇನೂ ಕೆಲಸ ವಿಲ್ಲವೇನ್ರೋ, ಓದಿಕೊಳ್ಳಿ, ಎಂದು ಮಕ್ಕಳನ್ನು ಬೈದು, ಈ ತಾಯಂದಿರು ಮಾಡುವ ಕೆಲಸವೇನು ಗೊತ್ತಾ? ಮನೆಹಾಳುಮಾಡುವ ದಾರಾವಾಹಿಗಳನ್ನು ನೋಡುವುದೇ ಆಗಿದೆ. ಅಸಭ್ಯ ದೃಶ್ಯಗಳನ್ನು ನೋಡುವವರಲ್ಲಿ  ಅತಿ ಹೆಚ್ಚಿನವರು ಅರವತ್ತು ಎಪ್ಪತ್ತು ವರ್ಷದ ತಾಯಂದಿರು, ಎಂಬ ನಾನು ಕಂಡ   ಸತ್ಯವನ್ನು ಅತ್ಯಂತ ನೋವಿನಿಂದ ಹೇಳ ಬಯಸುತ್ತೇನೆ, ಅಲ್ಲದೆ  ವಿಚಾರ ಮಾಡಲು ಸಮರ್ಥರಾದವರು  ಅವರ ವಯಸ್ಸು ಎಷ್ಟೇ ಇರಲಿ, ಕೆಟ್ಟ  ದಾರಾವಾಹಿಗಳನ್ನು ನೋಡುವವರಿಗೆ ಅವರು ಹಿರಿಯರಾದರೂ ಚಿಂತೆಇಲ್ಲ  ತಿಳಿ ಹೇಳಲೇ ಬೇಕು. ದೂರ ದರ್ಶನ ನೋಲು ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ.
ನನ್ನ ಮಾತಿಗೆ ಹಲವರು ಆಕ್ಷೇಪಣೆ ಮಾಡುತ್ತಾರೆಂಬ ಅರಿವು ನನಗಿದೆ." ಕೇವಲ ಹೆಂಗಸರು ನಿಮ್ಮ ಕಣ್ಣಿಗೆ ಬಿದ್ರಾ? ಗಂಡಸರು  ನೋಡುವುದಿಲ್ಲವೇ? ಅನ್ನೋ ಮಾತು ಬಂದೇ ಬರುತ್ತೆ. ಹೌದು, ಗಂಡಸರು ನೋಡಿದರೆ ಅದೂ ತಪ್ಪೇ. ಆದರೆ ನನ್ನ ಕಣ್ಣಿಗೆ  ತಾಯಂದಿರ ಸಂಖ್ಯೆ ಹೆಚ್ಚು  ಕಂಡಿದೆ. ಅವರಲ್ಲಿ ಕ್ಷಮೆ ಕೋರುತ್ತಾ " ಅಮ್ಮಾ, ನೀವು  ಒಂದು ಮನೆಯ ಹಿರಿಯರು, ಮನೆಯಲ್ಲಿ ಕೆಲವರಿಗೆ ತಾಯಿ, ಕೆಲವರಿಗೆ ಅತ್ತೆ, ಕೆಲವರಿಗೆ ಅಜ್ಜಿ.....ಆದರೆ ನೀವು ಎಲ್ಲರಿಗೂ ದೇವರು. ನೀವು ಸಮಾಜವನ್ನು  ತಿದ್ದಬಲ್ಲಿರಿ, ನಿಮ್ಮನ್ನು ತಿದ್ದುವ ಹೀನ ಸ್ಥಿತಿ ಈ ಸಮಾಜಕ್ಕೆ ಬಾರದಿರಲೆಂದೇ ಭಗವಂತನಲ್ಲಿ  ನನ್ನ ಪ್ರಾರ್ಥನೆ.

1 comment: