





ಅರಸೀಕೆರೆಯ ವಾಸವೀ ಯುವಜನ ಸಂಘದವರ ಆಹ್ವಾನದ ಮೇರೆಗೆ ಅರಸೀಕೆರೆಗೆ ಹೊರಟಿದ್ದೆವು. ಹಾಸನದಿಂದ ಅರಸೀಕೆರೆಗೆ ಹೋಗಬೇಕಾದರೆ ಹಾರನಹಳ್ಳಿಯ ಮಾರ್ಗವಾಗೇ ಹೋಗಬೇಕು. ಹಾಸನದಿಂದ ಹೋಗುವಾಗ ಹಾರನಹಳ್ಳಿ ಮುಂಚೆಯೇ ರಸ್ತೆಯ ಬದಿಯಲ್ಲಿರುವ "ತಪಸ್ವೀ ಆಶ್ರಮದ " ಫಲಕ ನಮ್ಮನ್ನು ಸೆಳೆಯದೆ ಬಿಡಲಿಲ್ಲ. ಟೆಂಪೋ ಟ್ರಾವೆಲ್ಲರ್ ನಿಂದ ಇಳಿದ ಕೂಡಲೇ ನಮ್ಮನ್ನು ವಿಚಾರಿಸಿದವರು ಶ್ರೀ ವೆಂಕಟಾಚಲ ಅವರು. ಕೈಕಾಲು ತೊಳೆದುಕೊಂಡು ಕಾಫಿ ತೆಗೆದುಕೊಂಡು ದರ್ಶನ ಮಾಡಲು ತಿಳಿಸಿದರು.ಅರಸೀಕೆರೆಯ ಕಾರ್ಯಕ್ರಮಕ್ಕೆ ಇನ್ನೂ ಒಂದು ಗಂಟೆ ಸಮಯವಿತ್ತು. ಕೈಕಾಲು ತೊಳೆದ ನಾವು ಶಂಕರರ ಸನ್ನಿಧಿಯಲ್ಲಿ ಕುಳಿತು ಒಂದೆರಡು ವೇದ ಮಂತ್ರ ಹೇಳಿದೆವು. ನಂತರ ಕಾಫಿ ಹೀರಿ ಪಿರಮಿಡ್ ಧ್ಯಾನ ಮಂದಿರಕ್ಕೆ ತೆರಳಿದೆವು. ಅಲ್ಲಿ ಹದಿನೈದು ನಿಮಿಷ ಧ್ಯಾನ ಮಾಡಿ ಯೋಗಿ ನರಸಾರ್ಯರ ವೇದಿಕೆಯೊಳಗೆ ಪ್ರವೇಶಿಸಿದೆವು. ಅಲ್ಲಿ ಪುನ: ಹತ್ತು ನಿಮಿಷ ಕುಳಿತೆವು. ಅಂತೂ ಒಂದು ಗಂಟೆ ಕಳೆದದ್ದು ಗೊತ್ತೇ ಆಗಲಿಲ್ಲ. ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮದಲ್ಲಿ ಬಂದವರಿಗೆ ಅನ ಪ್ರಸಾದದ ವ್ಯವಸ್ಥೆಯೂ ಇದೆ. ಎಲ್ಲ ವ್ಯವಸ್ಥೆಯನ್ನೂ ಮಾಡಿರುವವರು ದಿ|| ಹಾರನಹಳ್ಳಿ ರಾಮಸ್ವಾಮಿಯವರ ಪುತ್ರರಾದ ಶ್ರೀ ಅಶೋಕ್ ಹಾರನಹಳ್ಳಿ ಯವರು.
No comments:
Post a Comment