



ಶ್ರೀಮತಿ ಕಲಾವತಿ.ಶ್ರೀಮತಿ ಕೋಮಲಾ ಮತ್ತು ಶ್ರೀಮತಿ ಪ್ರೇಮ ...ಇವರೆಲ್ಲಾ ಹಾಸನ ವೇದಭಾರತಿಯ ಸದಸ್ಯೆಯರು. ಸಾಮಾಜಿಕ ಚಟುವಟಿಗಳಲ್ಲಿ ಸಕ್ರಿಯರಾಗಿರುವ ಇವರು ಸ್ಪಂದನ ವೇದಿಕೆಯ ಹೆಸರಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಕಳೆದ ಭಾನುವಾರ ಅವರೊಂದು ಕಾರ್ಯಕ್ರಮ ಯೋಜಿಸಿದರು ಹಾಸನಕ್ಕೆ ಸುಮಾರು ಮೂವತ್ತು ಕಿಲೋ ಮೀಟರ್ ದೂರದ ಹಳ್ಳಿಯೊಂದರಲ್ಲಿ ವನಮಹೋತ್ಸವವನ್ನು ಆಚರಿಸಲು ನಿರ್ಧರಿಸಿದರು. ಅದಕ್ಕೆ ಅಗತ್ಯವಾದ ಗಿದಗಳನ್ನೆಲ್ಲಾ ಪಡೆದರು. ಗಿದವನ್ನು ನೆಡುವುದರ ಜೊತೆಗೆ ಆ ಹಳ್ಳಿಯ ಜನರಿಗೆ ಅಗ್ನಿಹೋತ್ರದ ಮತ್ತು ವೇದದ ಪರಿಚಯ ಮಾಡಿಕೊಡುವ ಆಸೆ ಅವರಿಗೆ. ಸಾಮಾನ್ಯವಾಗಿ ಜೊತೆಯಲ್ಲಿ ನಾವು ನಾಲ್ಕಾರು ಪುರುಷಕಾರ್ಯಕರ್ತರು ನಾಲ್ಕಾರು ಭಗಿನಿಯರೂ ಒಟ್ಟಾಗಿ ಹೋಗಿ ಅಗ್ನಿಹೋತ್ರ ನಡೆಸಿ ಅಲ್ಲಿನ ಜನರಿಗೆ ವೇದದ ಅರಿವು ಮೂಡಿಸುವ ಯತ್ನ ಈಗ್ಗೆ ಒಂದು ವರ್ಷದಿಂದ ಸಾಗಿದೆ. ಆದರೆ ಮೊನ್ನೆ ಭಾನುವಾರ ನಾನು ದೂರದ ಬಾಣಾವರಕ್ಕೆ RSS ಕಾರ್ಯಕ್ರಮಕ್ಕಾಗಿ ಹೋಗಬೇಕಾಯ್ತು. ಸುರಿಯುವ ಮಳೆ ಬೇರೆ.
ಬೇರೆ ಯಾವ ಪುರುಷ ಕಾರ್ಯಕರ್ತರೂ ಹೊರಟಿಲ್ಲ. ಆದರೂ ಧೀಮಂತ ಈ ಮಹಿಳೆಯರು ಸುಮ್ಮನಾಗಲಿಲ್ಲ. ಒಂದು ವಾಹನದಲ್ಲಿ ಗಿಡಗಳನ್ನು ತೆಗೆದುಕೊಂದು ಇವರೆಲ್ಲಾ ಬಸ್ ನಲ್ಲಿ ಹೋಗಿ ಕಾರ್ಯಕ್ರಮವನ್ನು ತ್ಯಶಸ್ವಿಯಾಗಿ ಮಾಡಿಕೊಂದು ಬಂದರುಆವರ ಬಗ್ಗೆ ನಿಜವಾಗಿ ಹೆಮ್ಮೆ ಎನಿಸಿತು.
No comments:
Post a Comment