ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ. ವೇದಭಾರತಿಯ ಎರಡು ವರ್ಷಗಳ ನಿರಂತರ ಸತ್ಸಂಗದ ಅದ್ಭುತ ಪರಿಚಯದ ಅಪೂರ್ವ ಅವಕಾಶ. ನಿನ್ನೆ ಹಾಸನದಲ್ಲಿ . ಅದರ ಆರಂಭವೇ ವೇದಭಾರತಿಯ ಸದಸ್ಯರು ನಡೆಸಿಕೊಟ್ಟ ಅಗ್ನಿಹೋತ್ರದಿಂದ.ಚಿತ್ರ ನೋಡಿ. ನಿಧಾನವಾಗಿ ವಿವರ ನೀಡುವೆ.
ವೇದಭಾರತಿಯ ಸತ್ಸಂಗದ ಕೈಪಿಡಿಯು ಕಾರ್ಯಕರ್ತರನ್ನು ಆಕರ್ಶಿಸಿತು. ಸ್ತ್ರೀಯರ ಕಂಠಸಿರಿಯಲ್ಲಿ ವೇದಮಂತ್ರಗಳನ್ನು ಆಲಿಸಿದ ಸಭೆಯು ತಲೆದೂಗಿತು. ನಮ್ಮ ಚಟುವಟಿಕೆಯನ್ನು ಗಮನಿಸಿದ ಹಿರಿಯ ಕಾರ್ಯಕರ್ತರು ಇಂದು ಬೆಳಿಗ್ಗೆ "ಎಲ್ಲರಿಗಾಗಿ ವೇದ " ಕಲ್ಪನೆಯ ಕುರಿತು ಮಾತನಾಡಲು ನನಗೆ ಅವಕಾಶ ನೀಡಿದರು. ಹೌದು ವಿಚಾರಗಳು ಕಾರ್ಯಕರ್ತರ ಹೃದಯ ಮುಟ್ಟಿದ್ದು ಅವರ ಮುಖಭಾವದಿಂದಲೇ ಗೋಚರಿಸಿತು. ಮಾತಿನ ವಿವರವನ್ನೂ ಮುಂದೆ ನೀಡುವೆ.





No comments:
Post a Comment