ದಿನಾಂಕ 10.11.2014 ರಂದು ಮೊದಲಭಾರಿಗೆ ವೇದಭಾರತಿಯಿಂದ ಸಾಮೂಹಿಕ ಅಗ್ನಿಹೋತ್ರ ಮಾಡ ಬೇಕಾಗಿದೆ. ಅಂದು ಭಾಗವಹಿಸುವವರೆಲ್ಲಾ ಹೊಸಬರು. ಅವರಿಂದ ಅಗ್ನಿಹೋತ್ರ ಮಾಡಿಸುವಾಗ ಅನುಸರಿಸಬೇಕಾದ ಕ್ರಮ ಹೇಗಿರಬೇಕೆಂಬುದಕ್ಕೆ ಇಂದು ಹತ್ತು ಜನರು ಐದು ಹೋಮ ಕುಂಡದಲ್ಲಿ ಒಂದು ಸ್ಯಾಂಪಲ್ ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಿದೆವು.ಇರುವವರೆಲ್ಲಾ ಹೊಸಬರೆಂದು ಭಾವಿಸಿ ಎಲ್ಲಾ ಸೂಚನೆಗಳನ್ನು ಕೊಡುತ್ತಾ ಹೊಸಬರಿಂದ ಮಾಡಿಸುವಂತೆ ಮಾಡಿಸಿದೆವು. 6.00 ಗಂಟೆಗೆ ಸರಿಯಾಗಿ ಓಂಕಾರ ನಂತರ ಈಶ್ವರಸ್ತುತಿಯೊಂದಿಗೆ ಆರಂಭವಾದ ಅಗ್ನಿಹೋತ್ರವು 6.30 ಕ್ಕೆ ಮುಗಿಯಿತು. ನಂತರ ಹತ್ತು ನಿಮಿಷ ವೇದದ ಭಜನೆ ಮಾಡಿದೆವು. ಸಾಮೂಹಿಕ ಅಗ್ನಿಹೋತ್ರದ ದಿನವೂ ಸಹ ಅರ್ಧ ಗಂಟೆ ಅಗ್ನಿಹೋತ್ರ, ಹತ್ತು ನಿಮಿಷ ಭಜನೆ ,ಹತ್ತು ನಿಮಿಷ ಸೂಚನೆಗಳು ನಂತರ 10 ನಿಮಿಷ ಪುಸ್ತಕ ಬಿಡುಗಡೆ ,30 ನಿಮಿಷ ಸ್ವಾಮೀಜಿಯವರ ಉಪನ್ಯಾಸ ವಾದರೆ 30 ನಿಮಿಷ ಸು.ರಾಮಣ್ಣನವರ ಭಾಷಣ ಇರುತ್ತದೆ. ಪ್ರಸಾದ ವಿತರಣೆಯ ನಂತರ ಕಾರ್ಯಕ್ರಮ ಮುಗಿಯುತ್ತದೆ.


No comments:
Post a Comment