
ಅದ್ಭುತ!
ಇದು ನಾನು ಹೇಳಿದ್ದಲ್ಲ.
ಶಿಬಿರ ಹೇಗಿದೆ? ಎಂದು ಕೇಳಿದಾಗ ಒಬ್ಬ ಗೃಹಿಣಿ ಹೇಳಿದ್ದು!
ಸಾರ್, ನಮಗೆ ಜೀವನ ಕಡೆಗಾಲದಲ್ಲಿ ಇಂತಹ ಅದ್ಭುತ ಜೀವನ ವಿಧಾನ ತಿಳಿಸಿ ಕೊಡುವ ಅವಕಾಶ ಮಾಡಿಕೊಟ್ಟಿರಲ್ಲಾ! ಸಾರ್, ನಿಮಗೆ ಶತ ಶತ ನಮನ.
ಹೌದು, ಹಾಸನದ ಸಹಯೋಗ ಶಿಕ್ಷಕರ ತರಬೇತಿ ಶಿಬಿರ ಅವರ ಅನಿಸಿಕೆಯಂತೆಯೇ ನಡೆಯುತ್ತಿದೆ.
ಮೊದಲೆರಡು ದಿನ ಶರೀರ ರಚನೆ, ಶರೀರ ಶಾಸ್ತ್ರದ ಪರಿಚಯವನ್ನು ಶ್ರೀ ಪ್ರದೀಪ್ ಜಿ ಮಾಡಿಕೊಟ್ಟರೆ , ಇನ್ನೆರಡು ದಿನದ ಶಿಬಿರದಲ್ಲಿ ದಾವಣಗೆರೆಯ ಶ್ರೀ ಷಣ್ಮುಖಪ್ಪಾ ಜಿ ನಮ್ಮ ಜೀವನ ವಿಧಾನವನ್ನು ಆಮೂಲಾಗ್ರವಾಗಿ ತಿಳಿಸುತ್ತಾ, ಊಟ ಹೇಗೆ ಮಾಡಬೇಕು, ಎಷ್ಟು ಮಾದಬೇಕು, ಹೇಗೆ ಮಾಡಬೇಕು, ಯಾವಾಗ ಮಾಡಬೇಕು , ಎಂಬುದನ್ನು ತಿಳಿಸಿ ಕೊಡುವಾಗ ಅವರಿಗೆ ಕೊಟ್ಟಿರುವ ಎರಡು ಅವಧಿಗಳು ಏನೇನೂ ಸಾಲದಾಯ್ತು. ಮತ್ತೊಮ್ಮೆ ಹಾಸನಕ್ಕೆ ಬಂದು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ.
ಬಹುಪಾಲು ಜನವರಿ ಮಾಸದಲ್ಲಿ ನಡೆಯುವ ಒಂದು ದಿನದ [ ಎಂಟು ಗಂಟೆಯ] ಈ ಕಾರ್ಯಾಗಾರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಜೀವನ ವಿಧಾನ, ಆಹಾರ ನೀತಿ, ಯೋಗ ದಿಂದ ಆಧ್ಯಾತ್ಮಿಕ ಉನ್ನತಿ, ಅಗ್ನಿಹೋತ್ರ ಪ್ರಾತ್ಯಕ್ಷಿಕೆ ....... ಈ ಎಲ್ಲಾ ಸಂಗತಿಗಳನ್ನೂ ತಿಳಿಸಲಾಗುವುದು.





No comments:
Post a Comment