Pages

Friday, April 27, 2018

ಆಚಾರ್ಯರ ಬಾಲಕೃಷ್ಣಜೀಅವರ ಪರಿಚಯ

ಮುಂಬೈನ ಅರ್ಚನಾ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಚಾರ್ಯ ಬಾಲಕೃಷ್ಣಜಿ ಇತ್ತೀಚೆಗೆ ಮಾಡಿದ ಹಿಂದಿ ಉಪನ್ಯಾಸವನ್ನು ಹಿರಿಯ ಮಿತ್ರರಾದ ಶ್ರೀ ದಿವಾಕರ್ ಡೋಂಗ್ರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆರಂಭದಲ್ಲಿ ಟ್ರಸ್ಟ್ ವತಿಯಿಂದ ಪರಿಚಯ ಮಾಡಿಕೊಡಲಾಯ್ತು. 

 ಆಚಾರ್ಯರ ಬಾಲಕೃಷ್ಣಜೀಅವರ ಪರಿಚಯ :

                 ಯಾರ ನಾಮೋಚ್ಚಾರಣೆಯಿಂದ ಆಯುರ್ವೇದ ಪ್ರಪಂಚವು ಧನ್ಯತಾಭಾವವನ್ನು ಅನುಭವಿಸುತ್ತ್ತಿದೆಯೊ, ಯಾರ ಭೇಟಿಯು ನಮ್ಮ ಕನಸುಗಳು ನನಸಾಗುವಷ್ಟು ಶ್ರಮದಾಯಕವಾಗಿದೆಯೊ, ಯಾರಕೀರ್ತಿಯು ಸಮಗ್ರ ಭಾರತದಲ್ಲಿ ಜನಜನಿತವಾಗಿದೆಯೊ ಅಂತಹ, ಭಾರತದೇಶದ ವಿಶಿಷ್ಠ ಸಾಧಕರೋರ್ವರನ್ನುಈ ಕಾರ್ಯಕ್ರಮಕ್ಕೆ ಸ್ವಾಗತಿಸುವ, ಅವರನ್ನುನಿಮಗೆಲ್ಲ ಪರಿಚಯಿಸುವ ಸೌಭಾಗ್ಯ ನನಗೆ ಈ ವೇದಿಕೆಯಿಂದ ಲಭಿಸಿದೆ. ಸ್ವಯಂ ನಾನು, ನಮ್ಮ ಪುಟ್ಟ ಸಂಸ್ಥೆ ’ಅರ್ಚನಾಟ್ರಸ್ಟ್’ ನ ವತಿಯಿಂದ ಆಯುರ್ವೇದ ಮತ್ತು ಸಂಸ್ಕೃತ ವಾಙ್ಮಯದ ವಿದ್ವಾಂಸರಾದ ಪರಮ ಪೂಜನೀಯರಾದ ಆಚಾರ್ಯ ಬಾಲಕೃಷ್ಣಜೀಯವರನ್ನು ಅಭಿಮಾನಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದಿನ ಈ ಶುಭ ಸಂಜೆ ’ಸ್ವಸ್ಥಜೀವನಸೂತ್ರ’ ವೆಂಬಕಾರ್ಯಕ್ರಮದಲ್ಲಿ ನಾವೆಲ್ಲರೂ ಸ್ವಸ್ಥಜೀವನಸೂತ್ರವನ್ನುತಿಳಿದುಕೊಳ್ಳುವಲ್ಲಿ ಆಚಾರ್ಯ ಬಾಲಕೃಷ್ಣಜೀಯವರು ನಮಗೆ ಮಾರ್ಗದರ್ಶನನೀಡಲಿದ್ದಾರೆ. ಆಚಾರ್ಯರೇ, ತಾವು ವಿವಿಧ ಟಿ.ವಿ.ಚಾನೆಲ್ಗಳಲ್ಲಿ ಆಯುರ್ವೇದ ಪದ್ಧತಿಯಕುರಿತಾದ ಕಾರ್ಯಕ್ರಮಗಳನ್ನು ನೀಡಿ ಲಕ್ಷಾಂತರ ಶ್ರೋತೃ-ದರ್ಶಕರ ಮನ ಸೂರೆಗೈದಿದ್ದೀರಿ. ತಾವುತಮ್ಮಅತ್ಯಮೂಲ್ಯ ಸಮಯವನ್ನು ನಮ್ಮೊಂದಿಗೆ ಹಂಚಿಕೊಂಡಿರುವುದಕ್ಕಾಗಿ ನಾವೆಲ್ಲ ನಿಮಗೆ ಆಭಾರಿಗಳಾಗಿದ್ದೇವೆ. ಆಚಾರ್ಯ ಬಾಲಕೃಷ್ಣಜೀಯವರನ್ನು ಪರಿಚಯಿಸುವಅಗತ್ಯವಿಲ್ಲವಾದರೂ ಔಪಚಾರಿಕವಾಗಿ ನಾನು ಅವರ ಬಹುಮುಖಿ ಪ್ರತಿಭೆಯನ್ನು ನಿಮಗೆಲ್ಲ ಪರಿಚಯಿಸುತ್ತಿದ್ದೇನೆ. ಆಯುರ್ವೇದ ವೈದ್ಯ ಪದ್ಧತಿಯಗೌರವಾನ್ವಿತ ಸಾಧಕಆಚಾರ್ಯ ಬಾಲಕೃಷ್ಣಜೀಯವರ ಜನನ ೪, ಆಗಸ್ಟ್ ೧೯೫೬ರಲ್ಲಿ ಆಯಿತು.ಅವರುತಂದೆ ತಾಯಿಗಳ ಪ್ರೀತಿ ಮತ್ತು ತಮ್ಮ ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ಆಯುರ್ವೇದ ಮತ್ತು ಸಂಸ್ಕೃತ ಭಾಷೆಯಅಧ್ಯಯನದಲ್ಲಿ ಅಪಾರ ಸಾಧನೆಗೈದರು.ಆಚಾರ್ಯರುತಮ್ಮ ಸತತಅಧ್ಯಯನ, ಪರಿಶ್ರಮಗಳಿಂದ ಹಿಮಾಲಯಕಡಿದಾದ ಪರ್ವತ ಶ್ರೇಣಿಗಳ ಕಣಿವೆಗಳು ಮತ್ತುಗಹನವಾದ ಅರಣ್ಯಗಳಲ್ಲಿ ಓಡಾಡಿ ಔಷಧಗಿಡ ಮೂಲಿಕೆಗಳ ಬಗ್ಗೆ ಸಂಶೋಧನೆಗೈದುಅಪಾರಜ್ಞಾನವನ್ನು ಸಂಪಾದಿಸಿದರು. ಆಯುರ್ವೇದ ಮತ್ತು ಸಂಸ್ಕೃತದಲ್ಲಿ ಆಚಾರ್ಯರದು ಅಪಾರವಾದ ಸಾಧನೆ ಮತ್ತುಜ್ಞಾನ ಸಿದ್ಧಿ. ಆಚಾರ್ಯ ಬಾಲಕೃಷ್ಣಜೀಯವರು ತಪಸ್ವಿಗಳು, ಬ್ರಹ್ಮಚರ್ಯವ್ರತ ಸಾಧಕರೂಆಗಿದ್ದಾರೆ.ಇವರ ದೂರದರ್ಶಿತ್ವದ ಫಲವಾಗಿಯೋಗ ಮಂದಿರ, ಪತಂಜಲಿ ಟ್ರಸ್ಟ್ನ ವತಿಯಿಂದ ವಿಶ್ವಆಯುರ್ವೇದಆಸ್ಪತ್ರೆ, ಯೋಗ ಕೇಂದ್ರಗಳು, ಪ್ರಯೋಗ ಶಾಲೆಗಳು, ವಿಶ್ವವಿದ್ಯಾಲಯ, ಪತಂಜಲಿಆಯುರ್ವೇದಕಾಲೇಜು, ಪತಂಜಲಿ ಶಿಕ್ಷಣ ಸಂಸ್ಥೆಯೂ ಸೇರಿದಂತೆ ಅನೇಕ ಸಂಸ್ಥೆಗಳು ಸ್ಥಾಪಿಸಲ್ಪಟ್ಟವು.ಆತ್ಮೋನ್ನತಿಯೊಂದಿಗೆರಾಷ್ಟ್ರ ಸೇವೆಯಲ್ಲೂತಮ್ಮನ್ನು ತೊಡಗಿಸಿಕೊಂಡವರು ಪೂಜನೀಯಆಚಾರ್ಯಜೀಯವರು.ಆಚಾರ್ಯ ಬಾಲಕೃಷ್ಣರು ವರ್ತಮಾನಕಾಲದ ಧನ್ವಂತರಿಯೆಂದೇ ಗುರುತಿಸಲ್ಪಡುತ್ತಾರೆ.ಆಚಾರ್ಯ ಬಾಲಕೃಷ್ಣ ಅವರ ಈ ಭವ್ಯ ದಿವ್ಯ ಸಾಧನೆಗಾಗಿ ಭಾರತದ ಹಿಂದಿನ ರಾಷ್ಟ್ರಪತಿ ಅಬ್ದುಲ್ಕಲಾಮ್ಅವರಿಂದ ಗೌರವ ಪುರಸ್ಕಾರ, ನೇಪಾಲದ ಮಹಾರಾಜರಿಂದ ಪುರಸ್ಕಾರ, ಕರ್ನಾಟಕ ಸರಕಾರದಿಂದ ನೀಡಲ್ಪಟ್ಟ ’ಸುಜ್ಞಾನಶ್ರೀ’ ಪುರಸ್ಕಾರಗಳು ಅವರ ಸಾಧನೆಗೆ ಸಂದ ಗೌರವಗಳಾಗಿವೆ. ಆಚಾರ್ಯರು ಸಾವಿರಾರುಜನರನ್ನುರೋಗಮುಕ್ತರನ್ನಾಗಿ ಮಾಡಿದ್ದಾರೆ. ಅವರು ಇದುವರೆವಿಗೂ ಹತ್ತು ಲಕ್ಷ್ಷಕ್ಕೂ ಮಿಕ್ಕಿ ರೋಗಿಗಳ ತಪಾಸಣೆಗೈದಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯು ಭಾರತೀಯಸಂಸ್ಕೃತಿ ಮತ್ತು ಪ್ರಕೃತಿಯೊಂದಿಗೆ ಸಮ್ಮಿಳಿತವಾದ ಚಿಕಿತ್ಸಾ ಪದ್ಧತಿಯಾಗಿದೆ. ಮನುಷ್ಯನುದೈಹಿಕವಾಗಿ ಸ್ವಸ್ಥನಾದಾಗ ಮಾತ್ರ ಅವನ ದೈನಂದಿನ ಕೆಲಸ ಕಾರ್ಯಗಳ ಜತೆಗೆ ಸಿದ್ಧಿ ಸಾಧನೆಗಳನ್ನು ಮಾಡಬಹುದಾಗಿದೆ. ಆಚಾರ್ಯರ ಸಂಗಡವಿದ್ದಾಗಪ್ರತಿಯೊಂದು ವ್ಯಾಧಿಗೂಒಂದುಪರಿಹಾರವಿದೆ, ಪ್ರತಿಯೊಂದು ನೋವಿಗೂ ಒಂದುಸಮಾಧಾನವಿದೆ. ಒಂದು ಮುಗುಳ್ನಗುವಿನ ಎದುರು ಮರಣವೂ ಸೋಲನ್ನೊಪ್ಪಿಕೊಳ್ಳಬಹುದು ಬದುಕು ಅಷ್ಟು ತ್ರಾಸದಾಯಕವೆನಿಸದಿರಬಹುದು. ಆಚಾರ್ಯಜೀ, ನಾವು ನಮ್ಮ ಶರೀರವನ್ನು ಎಷ್ಟು ಸ್ವಸ್ಥ ಮತ್ತು ನಿರೋಗಿಯನ್ನಾಗಿಡಬಹುದು, ನಮ್ಮಆಹಾರ ಪದ್ಧತಿ ಹೇಗಿರಬೇಕು, ಶರೀರಕ್ಕೆ ಬರಬಹುದಾದ ರೋಗಗಳ ಕುರಿತಂತೆ ಚಿಕಿತ್ಸೆ ಮತ್ತು ಅನುಪಾನ ಹೇಗಿರಬೇಕು ಇವೆಲ್ಲವುಗಳ ಕುರಿತು ನಮಗಿಂದು ನಿಮ್ಮ ಮಾರ್ಗದರ್ಶನದಅವಶ್ಯಕತೆಯಿದೆ.ನಾವೀಗ ಈ ಕುರಿತಂತೆ ಸೂಕ್ತ ಮಾರ್ಗದರ್ಶನವನ್ನು ನೀಡಲುಆಚಾರ್ಯಜೀಅವರನ್ನು ವೇದಿಕೆಗೆ ಸ್ವಾಗತಿಸೋಣ.

No comments:

Post a Comment