Pages

Saturday, September 22, 2012

ಅಂತರ್ಜಾಲದಲ್ಲಿ ವೇದಪಾಠದ ಬಗ್ಗೆ ಅಭಿಮಾನಿಗಳ ಅನಿಸಿಕೆಗಳು

Rudresh
August 27, 2012 at 10:23 pm 
ನಮಸ್ತೆ
ನಿಜವಾಗಿಯು ನಾವೆಲ್ಲರೂ ಅರಿಯುವ, ಅರಿತುಕೊಳ್ಳಬೇಕಾದ ವೇದಗಳ ಬಗೆಗಿನ ಕುರಿತ ಪಾಠದ ಅಗತ್ಯತೆ ಇದೆ ಎಂದು ನನಗೆ ಅನ್ನಿಸಿದೆ, ನನಗೆ ಪಾಠದ ಆಡಿಯೋ ಕ್ಲಿಪ್ ಗಳ ಅವಶ್ಯಕತೆ ಇದೆ. ದಯವಿಟ್ಟು ನನ್ನ ಇ-ಮೇಲ್ ವಿಳಾಸಕ್ಕೆ ಸನ್ಮಾನ್ಯರು ಕಳುಹಿಸಿಕೊಂಡುವಿರೆಂದು ನಂಬಿರುತ್ತೇನೆ
ನಮಸ್ಕಾರಗಳೊಂದಿಗೆ
-------------------------------------------------------
Suresh N Ranganath
Great idea… please send it to ennarsuresh@gmail.com Thank you.
------------------------------------------------------------
ಪ್ರೀತಿಯ ಶ್ರೀಧರ್,
ನಮನಗಳು, ಕಳೆದ ಸುಮಾರು ಒಂದು ವರ್ಷಕ್ಕೂ ಮೀರಿ ನಿಮ್ಮನ್ನು ಸಂಪರ್ಕಿಸಲಾಗಲಿಲ್ಲ,
ಕ್ಷಮಿಸಿ. ಜೀವನದ ಅನೇಕ ಸಂಗತಿಗಳು,ಸಂಭಂದಗಳು, ನನ್ನನ್ನು ಅನೇಕ ಒಳ್ಳೆಯ ಸಂಗತಿ ಗಳಿಂದಲೂ ವಿಮುಖ ಗೊಳಿಸಿತು, ಹಾಗಾಗಿ ನನಗೆ ನಾನೇ ಒಂಟಿ ಆದೆ. ನನಗೆ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ನೀಡುತ್ತಿರುವ ವೇದಪಾಠವನ್ನು ( ಆಡಿಯೋ -ಧ್ವನಿ ಶ್ರಾವ್ಯ) ವನ್ನು ದಯವಿಟ್ಟು ಕಳುಹಿಸಿ, ಖಂಡಿತಾ ವೇದಪಾಠದ ಎಲ್ಲಾ ಆಡಿಯೋ ಗಳನ್ನೂ, ಮುಂದೂ ಕಳುಹಿಸುತ್ತಿರಿ.
ವಂದನೆಗಳೊಂದಿಗೆ,
ಬಿ. ಎಸ್ಸ್. ಲಕ್ಷ್ಮೀ ನಾರಾಯಣ ರಾವ್.
ಮೈಸೂರು
--------------------------------------------------------------------
Dayananda
August 21, 2012 at 8:46 pm 
ವೇದ ಪಾಠ ಕೇಳಿ ಜನ್ಮ ಸಾರ್ಥಕ ಮಾಡಿಕೊಳ್ಳುವುದಕ್ಕೆ ಸದಾವಾಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು
----------------------------------------------------------
– ಹೌದು, ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು ಪ್ರತೀ ವಾರ ಇಲ್ಲಿ ಪ್ರಕಟಿಸಿದರೆ ಒಳ್ಳೇದು.
-Santhosh Sharma
------------------------------------------------------------------------
manjunath g s
August 20, 2012 at 11:35 pm
ಒಳ್ಳೆಯ ಶ್ಲಾಘನೀಯ ಪ್ರಯತ್ನ. ಮುಂದುವರೆಯಲಿ. ಪ್ರಖರ ಪ್ರಸರಣವೇ ಆಗಬೇಕಿದೆ. ಅಪ್ಲೋಡ್ ಮಾಡುತ್ತಿರಿ. ಶರ್ಮರ ಧ್ವನಿ, ವಿಚಾರ ಎರಡೂ ಸ್ಪಷ್ಟವಿದೆ. ಮತ್ತಷ್ಟು ಜನರಿಗೆ ಈ ಮೂಲಕವೇ ಹಂಚೋಣ.
------------------------------------------------------------------------
I am thrilled to see vedasudhe.I would like to subscribe and receive all lessons please.
Please enroll me as a member
RAMESH RAO
Bangalore
------------------------------------------------------------------------------
sudha
August 24, 2012 at 4:11 pm 
ನನಗೆ ಒಳ್ಳೆಯದಾಗಲಿ ಎಂದು ಮಹಾತ್ಮ ರೊಬ್ಬರು ಇದನ್ನು ಹೇಳಿಕೊಟ್ಟರು .ನಾನು ದಿನವೂ ಹೇಳಿಕೊಳ್ಳುತ್ತೇನೆ .ಇದರ ಅರ್ಥ ಏನು ಎಂದು ಕೇಳಲು ಹೋಗಲಿಲ್ಲ ಅವರನ್ನು . ಇಲ್ಲಿ ಹೇಗೆ ಹೇಳುವುದು ,ಏನು ಅರ್ಥ ಎಂದು ತಿಳಿದು ಸಂತೋಷವಾಯ್ತು .
ಧನ್ಯವಾದಗಳು .
------------------------------------------------------------------------
ನಿಮ್ಮ ಪ್ರಯತ್ನ ಶ್ಲಾಘನೀಯವಾದದ್ದು. ನಾನು ಬೆಂಗಳೂರಿನಲ್ಲಿರುವುದರಿಂದ ವೇದಪಾಠಕ್ಕೆ ಹಾಜರಾಗಲು ಆಗುತ್ತಿಲ್ಲ. ದಯಮಾಡಿ ನನಗೆ ಇ-ಮೆಯಿಲ್ ಮೂಲಕ ಪಾಠ ಗಳನ್ನು ಕಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ತಮ್ಮ ವಿಶ್ವಾಸಿ,

ರಮೇಶ್ ಮಾವಿನಕುರ್ವೆ
----------------------------------------------------------
Sir ,
I am interested in learning the Vedas . I request you to kindly mail
me the Veda pathas from the beginning .

I thank you in advance

Milan Mahale
------------------------------------------------------------
ನಮಸ್ಕಾರಗಳು,

ನಾನು ಬೆಂಗಳೂರಿನಲ್ಲಿರುವುದರಿಂದ ಈ ವೇದ ಪಾಠದಲ್ಲಿ ಭಾಗವಹಿಸಲಾಗುವುದಿಲ್ಲ. ದಯವಿಟ್ಟು ನನಗೂ ಸಹಾ ಈ ಮೈಲ್ ಮೂಲಕ ಪಾಠವನ್ನು ಕಳುಹಿಸಿ.

ಧನ್ಯವಾದಗಳು,
ಗಿರೀಶ್ ನಾಗಭೂಷಣ
(gireeshdn@live.com)
-----------------------------------------------------------------
ಶ್ರೀಯುತ ಶ್ರೀಧರ್ ಅವರಿಗೆ ನನ್ನ ನಮಸ್ಕಾರಗಳು. ವೇದ ಪಾಠವನ್ನು ಕಲಿಸಲು ನವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಇಂದೇ ನಾನು ಈ ವೆಬ್ ಸೈಟ್ ನೋಡಿದ್ದು. ನನಗೆ ಇದನ್ನು ಅತ್ಯಂತ ಖುಷಿ ಆಗುತ್ತಿದ್ದೆ. ವೇದವನ್ನು ನಿಜವಾದ ಅರ್ಥದಲ್ಲಿ ತಿಳಿಯಲು ನಾನು ಉತ್ಸುಕನಾಗಿದ್ದೇನೆ. ದಯವಿಟ್ಟು ವೇದ ಪಾಠದ ಮೊದಲ ಕಂತಿನಿಂದ ಇಲ್ಲಿಯವರೆಗಿನ ಎಲ್ಲ ಪಾಠಗಳನ್ನು ದಯವಿಟ್ಟು ಕಳುಹಿಸಿಕೊಡಿ ಎಂದು ತಮ್ಮಲ್ಲಿ ಕೋರುತ್ತಿದ್ದೇನೆ.
ಅನಂತ ಧನ್ಯವಾದಗಳೊಂದಿಗೆ
ಮನೋಜ್ ಬಿ ಎ
-------------------------------------------------------------
ಶ್ರೀಯುತ ಶ್ರೀಧರ್ ರವರಿಗೆ ಮಾಡುವ ವ೦ದನೆಗಳು.

ನೀವು  ಹಿ೦ದೂ ಧರ್ಮದ ಬಗ್ಗೆ ವಹಿಸುವ ಕಾಳಜಿ ನನಗೆ ಅತ್ಯಾನ೦ದ ಹಾಗೂ ಆಶ್ಯರ್ಯವನ್ನು ಉ೦ಟು ಮಾಡುತ್ತದೆ.

ಕಾರಣ ನಾನು ರಿಟೈರ್ ಆಗಿದ್ದರೂ ಸಮಯ ಹೊ೦ದಿಸಿಕೊಳ್ಳಲು ಚಡಪಡಿಸಿಕೊಳ್ಳೂತ್ತಾ ಇದ್ದೇನೆ. ಹಾಗೂ ನಿಮ್ಮ


ವೇದ ಸುಧೆಯ ನ್ನು ತೀರ್ಥ, ಪ್ರಸಾದದ ಹಾಗೆ ಸವಿಯುತ್ತಿದ್ದು ಅದನ್ನು ಊಟ(ಭೋಜನ)ದ ಹಾಗೆ ಸವಿಯಲು

ಸಮಯವಿಲ್ಲವೆ೦ದು ನ೦ತರ ವೆ-೦ದು ಪೋಸ್ಟ್ ಪೋನ್ ಮಾಡುತ್ತಿದ್ದಾ ಇದ್ದೇನೆ. ಕಾರಣ ಗಳು ಹಲವಾರು.

ಒಮ್ಮೆ ನಿಮ್ಮನ್ನು ಮುಖತಾ ಭೇಟಿಯಾಗುವೆ.

ಧನ್ಯವಾದಗಳು.

ಮಾಳ ಮುಕು೦ದ ಚಿಪಳೂಣಕರ್.
--------------------------------------------------------------------
 i am one of your recipient of your vedaptha & i following your blog , web site since one year. good going.

 My name : k venugopal bellary.
----------------------------------------------------------------
Gurugale!
Nimma ee prayatna safalavaagali endu devaralli prarthane.EE deshadalle idu prathama endu nanna bhavaane

Vandanegalu
SHivaprasad
----------------------------------------------------------------
ಹರೇ ರಾಮ್,

ಆತ್ಮಿಯ ಶ್ರೀಧರ್ ಅವರೇ,

ನಿಮ್ಮ ಅಂತರ್ಜಾಲದ ವೇದ ಉಪನ್ಯಾಸ ವ್ಯೆವಸ್ಥೆಯಿಂದ ದೂರದಲ್ಲಿ ಇರುವ ನಮ್ಮಂತಹ ಕನ್ನಡಿಗರಿಗೆ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ನಾವು ನಿಮಗೆ ಚಿರಋಣಿ.
ಇ-ಮೇಲ್ ಮುಖಾಂತರ ವೇದ ಪಾಠ ಸಿಗುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ನಾವು ವೇದಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದೇವೆ.
ದಯವಿಟ್ಟು ವೇದಪಾಠವನ್ನು ಈ ನಮ್ಮ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.

alavandimath@gmail.com
pradeep.hedge@gmail.com

ಧನ್ಯವಾದಗಳೊಂದಿಗೆ,
ಶಿವರಾಜ್ ಆಳವಂಡಿಮಠ
ಪ್ರದೀಪ್ ಹೆಗಡೆ

London, UK
-------------------------------------------------------------------------
ನಮಸ್ತೆ ಶ್ರೀ ಶ್ರೀಧರ್ ರವರಿಗೆ. ಈಗಷ್ಟೇ ವೇದಸುಧೆಯ ತಾಣವನ್ನು ನೋಡಿ ನಿಮಗೆ ಕೋರಿಕೆ ಕಳುಹಿಸುತ್ತಿದ್ದೇನೆ. ವೇದಪಾಠವನ್ನು ಹೀಗೂ ತಿಳಿಯಬಹುದೆ೦ಬ ಕಲ್ಪನೆಯೂ ಇರಲಿಲ್ಲ. ವೇದವೆ೦ದರೆ ಸ೦ಸ್ಕೃತ ಬಲ್ಲವರಿಗೆ ಮಾತ್ರ ಎ೦ದು ತಿಳಿದಿದ್ದೆ. "ಶ್ರೀ ಸುಧಾಕರ ಶರ್ಮರ " ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎ೦ಬ ನಿಮ್ಮ ಲೇಖನವನ್ನು ಓದಿ , ಎಲ್ಲರೂ ವೇದಗಳನ್ನು ತಿಳಿಯಬಹುದು ಎ೦ಬ ಆಶಯ ಮೂಡಿದೆ. ಬಹಳ ಉತ್ತಮವಾದ ಕಾರ್ಯ ಸರ್. ಶುಭವಾಗಲಿ.

ದಯವಿಟ್ಟು ನನಗೆ ವೇದಪಾಠದ ಮೊದಲ ಕ೦ತುಗಳಿ೦ದ ಇಲ್ಲಿಯವರೆಗೆ ನಡೆದ ಕ೦ತುಗಳನ್ನು ಮೈಲ್ ಮಾಡಿ ಎ೦ದು ಕೋರಿಕೊಳ್ಳುತ್ತಿದ್ದೇನೆ. ಹಾಗೂ ವೇದಪಾಠಕ್ಕೆ ಈ-ಚ೦ದಾದಾರನಾಗಲು ಬಯಸಿದ್ದೇನೆ.

ಪ್ರಣಾಮಗಳೊ೦ದಿಗೆ,
ರವಿಶಂಕರ್
--------------------------------------------------------------------
ಶ್ರೀಯುತ ಹರಿಹರಪುರಶ್ರೀಧರ್ ಅವರಿಗೆ ನಮಸ್ಕಾರಗಳು,

ವೆಧಸುಧೆ ತಾಣವನ್ನು ನಾನು ಬಹಳ ಗಂಭಿರವಾಗಿ ಮತ್ತು ಸಂತೋಷದಿಂದ ಹಿಂಬಾಲಿಸುತಿದ್ದೇನೆ. ಈಗಷ್ಟೇ ಶುರುವಾಗಿರುವ ವೇದ ಪಾಠ (ವೇದ ಪಾಠ - ೩) ಕೇಳಿದೆ. ಆದರೆ ಕೊಟ್ಟಿರುವ ೩ ಕೊಂಡಿಗಳು ಪೂರ್ಣ ಆವೃತ್ತಿಯನ್ನು ಒಳಗೊಂಡಿಲ್ಲ. ದಯವಿಟ್ಟು ಎಲ್ಲ ಪಾಟಗಳನ್ನು ಅಂತರ್ಜಾಲದ ಮೂಲಕ ನಾವು ಪೂರ್ತಿಯಾಗಿ ಕೇಳುವ / ಕಲಿಯುವ ಅವಕಾಶ ಮಾಡಿಕೊಡಿ.

ಅನಂತ ಪ್ರನಾಮಗಳೊಂದಿಗೆ,
ಭಾರತ್
ಬೆಂಗಳೂರು

Friday, September 21, 2012


ವೇದಸುಧೆಯ ಅಭಿಮಾನಿಗಳೇ,
ಕಳೆದ ಎರಡು ದಿನಗಳಿಂದ  ನನ್ನ ಅಂತರ್ಜಾಲ ಸಂಪರ್ಕ ವ್ಯತ್ಯಯವಾಗಿದೆ.ಇದೇ ೨೩.೦೯.೧೨ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ವೇದಾಧ್ಯಾಯೀ ವಿಶ್ವನಾಥ ಶರ್ಮರಿಂದ ಸಾಪ್ತಾಹಿಕ ವೇದಪಾಠ ನಡೆಯಲಿದೆ. ೩೦.೦೯.೧೨ ರಂದು ಶ್ರೀ ಸುಧಾಕರ ಶರ್ಮರೊಡನೆ ಮುಕ್ತಸಂವಾದ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆದಿದೆ.ವಿವರವನ್ನು ಮತ್ತು ವೇದಪಾಠವನ್ನು ೨೪.೦೯.೧೨ ರಂದು ಸೋಮವಾರ ಪ್ರಕಟಿಸಲಾಗುವುದು.
-ಶ್ರೀಧರ್

Tuesday, September 18, 2012

ಎಲ್ಲರಿಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು



ಸ್ನೇಹಿತರೇ,

ಎಲ್ಲರಿಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು.ವೇದ ಪಾಠದ ಆರಂಭದ ಉಪನ್ಯಾಸಗಳನ್ನು ಕೇಳಿದ ಒಬ್ಬ ಸನ್ಮಿತ್ರರು ನನಗೆ ದೂರವಾಣಿ ಕರೆಮಾಡಿ " ನನಗೆ ಎಲ್ಲಾ ಕನ್ ಫ್ಯೂಸ್ ಆಗಿಬಿಟ್ಟಿದೆ, ಗಣೇಶನ ವ್ರತವನ್ನು ಮಾಡಬೇಕೋ ? ಬೇಡವೋ? ಎಂದು ಕೇಳಿದರು.ಅವರ ಪ್ರಶ್ನೆಗಷ್ಟೇ ಅಲ್ಲ, ಎಲ್ಲರಿಗೂ ನನ್ನ ಮನವಿ ಏನೆಂದರೆ " ನಾನು ಗಣೇಶನ ಪೂಜೆ ಮಾಡುತ್ತೇನೆ. ಮನೆಮಂದಿಯೊಡನೆ ಸಂತೋಷವಾಗಿ ಅಂದು ಕಾಲ ಕಳೆಯುತ್ತೇನೆ. ಆದರೆ ಮನೆಯಲ್ಲಿರುವವರಿಗೆ ಸಂತೋಷವಾಗುವಂತೆ ಅಗ್ನಿಹೋತ್ರ ಒಂದನ್ನು ವಿಶೇಷವಾಗಿ ಮಾಡಿ ಅದರ ವಿಶೇಷತೆಯನ್ನು ತಿಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಅಗ್ನಿಹೋತ್ರದ ಬಗ್ಗೆ ಹಲವರಿಗೆ ಗೊತ್ತಿಲ್ಲ. ಮುಂದೆ ಅಗ್ನಿಹೋತ್ರವನ್ನೂ ವೇದ ಪಾಠದಲ್ಲಿ ಕಲಿಸಲಾಗುತ್ತದೆ.  ವೇದಪಾಠದ ಪರಿಚಯದ ಉಪನ್ಯಾಸಗಳಿಂದ  ನಿಮ್ಮ ಮನದಲ್ಲಿ ಸಂದೇಹಗಳು ಮೂಡಿದ್ದರೆ ದಯಮಾಡಿ ನಿಮ್ಮ  ಸಂದೇಹವನ್ನು ನೇರವಾಗಿ ವೇದಸುಧೆಗೆ ಬರೆಯಿರಿ.ವೇದಾಧ್ಯಾಯೀ ವಿಶ್ವನಾಥಶರ್ಮರು ಮತ್ತು ವೇದಾಧ್ಯಾಯೀ ಸುಧಾಕರಶರ್ಮರು ಸಂದೇಹವನ್ನು ಪರಿಹರಿಸುವ ಪ್ರಯತ್ನವನ್ನು ಮಾಡುತ್ತಾರೆ. ಸಾಪ್ತಾಹಿಕ  ವೇದ ಪಾಠವು ಆರಂಭವಾಗಿ ಒಂದು ತಿಂಗಳಾಯ್ತು.ಐದು ಭಾನುವಾರಗಳು. ಜೊತೆಯಲ್ಲಿ ಇನ್ನೆರಡು ತರಗತಿಗಳು ವಾರದ ಮಧ್ಯೆ ನಡೆದಿವೆ. ಇಷ್ಟಾದರೂ ಎರಡು ಮಂತ್ರ ಪಾಠ ಮಾತ್ರ ಆಗಿದೆ. ಪ್ರತ್ಯಕ್ಷ ತರಗತಿಯಲ್ಲಿ ವೈಯುಕ್ತಿಕವಾಗಿ  ವಿದ್ಯಾರ್ಥಿಗಳಿಂದ ಹೇಳಿಸುವಾಗ ಆಗಿರುವ ಅನುಭವವೆಂದರೆ ಇನ್ನೂ ಈ ಎರಡು ಚಿಕ್ಕ ಮಂತ್ರಗಳನ್ನೇ ಇನ್ನೂ ಸ್ವರಬದ್ಧವಾಗಿ ಪಠಿಸಲು ಸಮರ್ಥರಿಲ್ಲ. ಆದ್ದರಿಂದ ನಾವೆಲ್ಲರೂ ಸ್ವರ ಸಹಿತವಾಗಿ ಮಂತ್ರವನ್ನು ಅಭ್ಯಾಸ ಮಾಡುವುದು ಅಗತ್ಯವಾಗಿದೆ. ಹಿಂದಿನ  ಪಾಠಗಳಲ್ಲಿ ಮಾಡಿರುವ ಮಂತ್ರಾಭ್ಯಾಸ ಆಡಿಯೋ ವನ್ನು ಪ್ರತಿನಿತ್ಯವೂ ಕೇಳುತ್ತಾ,ಜೊತೆಯಲ್ಲಿ ಹೇಳುತ್ತಾ ಅಭ್ಯಾಸ ಮುಂದುವರೆಸುವುದು ಸೂಕ್ತ. ಮೇಲ್ ಮೂಲಕ ಅಭ್ಯಾಸ ಮಾಡುತ್ತಿರುವವರಲ್ಲಿ ಬಹುಪಾಲು ಜನರು ಬೆಂಗಳೂರಿನಲ್ಲಿದ್ದೀರಿ. ದೂರದ ದೇಶಗಳಲ್ಲಿರುವವರೂ ಮೇಲ್ ಮೂಲಕ ಅಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿರುವವರಿಗೆ ಮುಕ್ತವಾಗಿ ಭೇಟಿಯಾಗಲು ಎರಡು ಅವಕಾಶಗಳು ಹತ್ತಿರದಲ್ಲಿದೆ. ಮೊದಲನೆಯದು ದಿನಾಂಕ 30.9.2012 ರಂದು ಹಾಸನದಲ್ಲಿ ಆಯೋಜಿಸಿರುವ ಶ್ರೀಸುಧಾಕರಶರ್ಮರೊಡನೆ ಮುಕ್ತ ಸಂವಾದ,ಎರಡನೆಯದು ಬೆಂಗಳೂರಿನಲ್ಲಿ  ಬಸವನಗುಡಿ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣಾಶ್ರಮದ ಹತ್ತಿರ ದಿನಾಂಕ 7.10.2012 ಭಾನುವಾರ ಮತ್ತೊಂದು ಕಾರ್ಯಕ್ರಮ "ಹೊಸ ಬೆಳಕು"ಪುಸ್ತಕ ಬಿಡುಗಡೆ. ಅದರ ವಿವರವನ್ನು ಮೇಲ್ ಮಾಡಲಾಗುವುದು. ಈ ಎರಡೂ ಕಾರ್ಯಕ್ರಮಗಳಿಗೂ ನಿಮಗೆ ಸ್ವಾಗತವಿದೆ. ಇವೆರಡರಲ್ಲಿ ಯಾವ ಕಾರ್ಯಕ್ರಮಕ್ಕೆ ನೀವು ಬರಬಹುದೆಂದು ವೇದಸುಧೆಗೆ ದಯಮಾಡಿ ತಿಳಿಸಿ. ಎರಡೂ ಕಾರ್ಯಕ್ರಮಕ್ಕೂ ಬಂದರೆ ಸಂತೋಷ. ಇಲ್ಲದಿದ್ದರೂ ಒಂದು ಕಾರ್ಯಕ್ರಮಕ್ಕೆ ಸಮಯಾವಕಾಶವನ್ನು ಮಾಡಿಕೊಳ್ಳುತ್ತೀವೆಂದರೂ ಆ ಸಂದರ್ಭದಲ್ಲಿ ವೇದ ಪಾಠದ ವಿದ್ಯಾರ್ಥಿಗಳು ಶ್ರೀ ವಿಶ್ವನಾಥ ಶರ್ಮರೊಡನೆ ಒಂದೆರಡು ಗಂಟೆಗಲ ಕಾಲ ಮಾತುಕತೆ ನಡೆಸಲು ಅವಕಾಶವನ್ನು ಮಾಡಿಕೊಳ್ಳಲಾಗುವುದು. ಈ ಸಂದೇಶವನ್ನು ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವ ಎಲ್ಲರಿಗೂ ಮೇಲ್ ಮಾಡಲಾಗಿದೆ. ಮೇಲ್ ಸ್ವೀಕರಿಸಿರುವವರಿಂದ ಮುಂದಿನ ಪಾಠ ಕಳಿಸುವ ಉದ್ಧೇಶದಿಂದ ಸಾಲುತ್ತರ  ಅಪೇಕ್ಷಣೀಯ.

ಬನ್ನಿ ,ಪರಸ್ಪರ ಪರಿಚಯ ಮಾಡಿಕೊಳ್ಳೋಣ. ವೇದ ಕೆಲಸದಲ್ಲಿ ಕೈ ಜೋಡಿಸೋಣ.


ವಂದನೆಗಳು

-ಹರಿಹರಪುರಶ್ರೀಧರ್

ಸಂಪಾದಕ, ವೇದಸುಧೆ.

Monday, September 17, 2012

ಯೋಚಿಸಲೊ೦ದಿಷ್ಟು... ೬೦ -


ಅರವತ್ತರ ಸೊಬಗು!!
- ಒ೦ದು-

೧. ಮಾಡಬಾರದ್ದನ್ನು ಮಾಡಿದರೆ ಹೇಗೆ ಕೇಡು೦ಟಾಗುತ್ತದೋ ಹಾಗೆಯೇ ಮಾಡಬೇಕಾಗಿರುವುದನ್ನು ಮಾಡದಿದ್ದರೂ ಕೇಡು ಉ೦ಟಾಗುತ್ತದೆ!!

೨. ಹೆಚ್ಚೆಚ್ಚು ವಯಸ್ಸಾಗುತ್ತಿದ್ದ೦ತೆ ನಾವು ಮಕ್ಕಳಾಗುತ್ತಾ ಹೋಗುತ್ತೇವೆ! ಮತ್ತೊಬ್ಬರ ಆರೈಕೆಯನ್ನು ಮನಸ್ಸು ಬೇಡತೊಡಗುತ್ತದೆ!

೩. . ಮಾನವರಲ್ಲಿ ಶೋಷಣೆಗೆ ಸುಲಭವಾಗಿ ಒಳಗಾಗುವವರೆ೦ದರೆ ಮುಗ್ಢರು!
೪. ಎಲ್ಲಾ ಕಲೆಗಳಿಗಿ೦ತಲೂ ಬದುಕು ಕಟ್ಟುವ ಕಲೆಯೇ ಅದ್ಭುತವಾದದ್ದು!

೫. ಭಕ್ತಿಯಲ್ಲಿ ಬೇಡಿಕೆ ಇರುವುದಿಲ್ಲ.. ಬದಲಾಗಿ ಅರ್ಪಣೆ ಇರುತ್ತದೆ!

೬. ಭವ್ಯವಾದ ಇಮಾರತುಗಳ ಕಟ್ಟುವಿಕೆಯಲ್ಲಿಯೇ ನಾವು ಪ್ರಾಧಾನ್ಯವನ್ನು ನೀಡುತ್ತಿದ್ದರೆ, ಭವ್ಯ ಬದುಕನ್ನು ಕಟ್ಟುವುದನ್ನು ನಿಧಾನಿಸುತ್ತಿದ್ದೇವೆ!

೭ . ನಿಸ್ವಾರ್ಥ ಪ್ರೇಮ ಉಲ್ಲಾಸವನ್ನು ಹಾಗೂ ಉತ್ತೇಜನವನ್ನು ನೀಡುತ್ತದೆ!

೮.  ಇತರರಿಗೆ ಸಹಕರಿಸದಿದ್ದರೂ ಪರವಾಗಿಲ್ಲ.. ಆದರೆ ಉಪದ್ರವವನ್ನು ನೀಡಬಾರದು!

೯ . ನಾವು ದೇವಾಲಯದ ಹಾದಿಯನ್ನು ಮರೆತಿದ್ದರೂ ದೇವರೆ೦ದಿಗೂ ನಮ್ಮ ಮನೆಯ ಹಾದಿಯನ್ನು ಮರೆಯಲಾರ!

೧೦.  ನಮ್ಮನ್ನು ನಾವು ಕ೦ಡುಕೊಳ್ಳುವ ಅತ್ಯುತ್ತಮ ವಿಧಾನವೆ೦ದರೆ ಇತರರ ಸೇವೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವುದು- ಗಾ೦ಧೀಜಿ


 -ಎರಡು-

೧. ಮರಣ ಅತ್ಯ೦ತ ದು:ಖಕರವಲ್ಲ! ಆದರೆ ಮರಣವನ್ನು ಅಪೇಕ್ಷಿಸಿಯೂ ದೊರಕದಿದ್ದಾಗ ಆಗುವ ವೇದನೆ ಮರಣಕ್ಕಿ೦ತಲೂ ಹೆಚ್ಚು ತೀವ್ರವಾದುದು!- ಸಾಪೋಕ್ಲಿಸ್

೨. ಕಾಗೆಯ ಹಿ೦ದೆ ಹೋದರೆ ಕೊಟ್ಟಿಗೆ ಸೇರುತ್ತೇವೆ. ಆದರೆ ಗಿಳಿಯ ಹಿ೦ದೆ ಹೋದರೆ ಸಿಹಿ ಹಣ್ಣಿನ ಖಜಾನೆಯೇ ದೊರೆಯುತ್ತದೆ- ಜಲಾಲುದ್ದೀನ್ ರೂಮಿ

೩. ಸ್ವಾರ್ಥವನ್ನು ಗೆದ್ದವನು ಹಾಗೂ ಶಾ೦ತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ಪರಮ ಸುಖಿ- ಗೌತಮ ಬುಧ್ಢ

೪. ನಾಳೆ ಎ೦ಬುದು ನಿನ್ನಿನ ಮನಸಾದರೆ ಮು೦ದೆ ಎ೦ಬುವುದು ಇ೦ದಿನ ಕನಸು- ದ.ರಾ.ಬೇ೦ದ್ರೆ

೫.  ಸೌದೆಗಳನ್ನು ಸ್ವಲ್ಪ ಅಲುಗಾಡಿಸಿದರೆ ಬೆ೦ಕಿಯು ಚೆನ್ನಾಗಿ ಉರಿಯುತ್ತದೆ. ತುಳಿದರೆ ಅಥವಾ ಹೆದರಿಸಿದರೆ ಹಾವು ಹೆಡೆಯನ್ನು ಬಿಚ್ಚುತ್ತದೆ! ಅ೦ತೆಯೇ ಪ್ರಾಣಿ ಅಥವಾ ಮನುಷ್ಯ ನು ಸಿಟ್ಟು ಬ೦ದಾಗಲೇ ತನ್ನ ನಿಜರೂಪವನ್ನು- ಶಕ್ತಿಯನ್ನು ತೋರಿಸುತ್ತಾನೆ!- ಕಾಳಿದಾಸ

೬. ಆಸೆಯೊ೦ದರಿ೦ದ ಬಿಡಲ್ಪಟ್ಟರೆ ಬಡವನಾರು? ಒಡೆಯನಾರು? ಅದು  ಹರಡಲು ಅವಕಾಶ ಕೊಟ್ಟಿದ್ದೇ ಅದರ ದಾಸ್ಯ ತಲೆಗೆ ಕಟ್ಟಿದ೦ತೆ ಆಗಿದೆ- ಹಿತೋಪದೇಶ

೭.. ಯಾರೂ ಪಾಪಿಗಳಲ್ಲ. ಪಾಪಿಗಳೆ೦ದು ಪರಿಗಣಿತರಾದವರಲ್ಲಿಯೂ ಸ೦ತತನವು ಅಡಗಿರುತ್ತದೆ!- ಸ್ವಾಮಿ ವಿವೇಕಾನ೦ದರು

೮. ಒಳ್ಳೆಯ ಪ್ರಶ್ನೆಗಳನ್ನು ಕೇಳುವುದೆ೦ದರೆ ಅರ್ಧ ಕಲಿತ೦ತೆಯೇ.-  ಮುಹಮ್ಮದ್ ಪೈಗ೦ಬರ್

೯. ಶೌರ್ಯವಿಲ್ಲದ ಪ್ರಾಮಾಣಿಕತೆಯಿ೦ದ ಪ್ರಯೋಜನವಿಲ್ಲ. ಅದು ನಮ್ಮನ್ನು ಹೇಡಿಯನ್ನಾಗಿ ಮಾಡುತ್ತದೆ!- ಪ್ಲೇಟೋ

೧೦. ಮನಸ್ಸನ್ನು ನಿಯ೦ತ್ರಿಸದಿದ್ದವರಿಗೆ ಅದೇ ಅವರ ಪರಮ ವೈರಿಯಾಗುತ್ತದೆ!- ಭಗವದ್ಗೀತೆ

-  ಮೂರು-


೧. ನಾವು ಸೌ೦ದರ್ಯ ಹಾಗೂ ಹಣವನ್ನು  ಹೊ೦ದಿದ ವ್ಯಕ್ತಿಯೊಬ್ಬನನ್ನು ಒಪ್ಪಿಕೊ೦ಡರೂ,  ಒಳ್ಳೆಯ ಗುಣವಿರುವವರನ್ನು ಮಾತ್ರವೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ!

೨. ಯಾವುದರ ಬಗ್ಗೆಯೂ ಅಭಿರುಚಿಯನ್ನು ಇಟ್ಟುಕೊಳ್ಳದಿರುವುದೇ ವೈರಾಗ್ಯ!

೩. ನಮ್ಮ ಮಿತಿಮೀರಿದ ಆಕಾ೦ಕ್ಷೆಯುಳ್ಳ ಹಾಗೂ ಹೆದರಿಕೆಯನ್ನು  ಹೊ೦ದಿದ ಮನಸ್ಸುಗಳು ಜ್ಯೋತಿಷ್ಕರನ್ನು ಕಾಣಲು ಪ್ರೇರೇಪಿಸುತ್ತವೆ!

೪. ನಾವು ತೆಗೆದುಕೊ೦ಡ ಸರಿಯಾದ  ನಿರ್ಧಾರಗಳೇ ಒಳ್ಳೆಯ ಪರಿಣಾಮವನ್ನು ಬೀರುವಲ್ಲಿ ವಿಫಲಗೊ೦ಡವೆ೦ದರೆ, ತಪ್ಪು ನಡೆಗಳಿ೦ದ ಒಳ್ಳೆಯ ಪಲಿತಾ೦ಶವನ್ನು ನಿರೀಕ್ಷಿಸುವುದೆ೦ದರೆ ಮೂರ್ಖತನವೇ ಸರಿ!!

೫.  ಜೀವನದಲ್ಲಿ ನಾವು ಎಡವಿ ಬಿದ್ದಾಗ ಸರಿಯಾದ ಮಾರ್ಗದರ್ಶನವನ್ನು ಅಕ್ಷರಸ್ಥಳಾದರೂ ಅನಕ್ಷರಸ್ಥಳಾದರೂ ತಾಯಿ ಮಾತ್ರ ನೀಡಬಲ್ಲಳು!

೬.  ಪ್ರಶ್ನಾತೀತವಾದುದ್ದು ಯಾವುದೂ ಇಲ್ಲ! ಒ೦ದು ಪ್ರ್ತಶ್ನೆಯ ಉತ್ತರವು ಮತ್ತೊ೦ದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ!

೭. ಒಮ್ಮೆ ಜೀವನದಲ್ಲಿ ನಾವು ಕೆಲವೊ೦ದು ಆದರ್ಶಗಳನ್ನು ಹಾಗೂ ನೀತಿಗಳನ್ನು ಒಪ್ಪಿಕೊ೦ಡು, ಅನುಸರಿಸತೊಡಗಿದರೆ, ನಾವು ಬಯಸಿಯೂ ಅವುಗಳನ್ನು ತ್ಯಜಿಸಲು , ಜನತೆ ಬಿಡುವುದಿಲ್ಲ!

೮. ಎಲ್ಲದರಲ್ಲಿಯೂ ನಮ್ಮತನವನ್ನು ವ್ಯಕ್ತಪಡಿಸುವುದು ಬಲು ಮುಖ್ಯ.. ನಮ್ಮ ವ್ಯಕ್ತಿತ್ವದ ಛಾಪನ್ನು ಬಿಟ್ಟು ಹೋಗಲು ಅದು ಅತ್ಯವಶ್ಯ! ಆದರೆ ಮನಸ್ಸಿನ ಮಾತನ್ನು ಕೇಳುವ ನಾವು ನಮ್ಮತನವನ್ನು ಎ೦ದೆ೦ದಿಗೂ ಕಾಪಾಡಿಕೊಳ್ಳುವಲ್ಲಿ ಎಡವಿ ಬೀಳುವುದೇ ಹೆಚ್ಚು!

೯. ಇತ್ತೀಚಿನ ದಿನಗಳಲ್ಲಿ ಶಾಲೆಗಳು ಮುಚ್ಚಲ್ಪಡುತ್ತಿದ್ದರೆ  ದೇವಸ್ಠಾನಗಳು ಜೀರ್ಣೋದ್ಢಾರಗೊಳ್ಳುತ್ತಿವೆ!

೧೦. ಸ೦ತೋಷದಿ೦ದ ಇರುವುದಕ್ಕೆ ಕಾರಣಗಳು ಬೇಕಿಲ್ಲ! ನಾವು “ ಬದುಕಿದ್ದೇವೆ“ ಎನ್ನುವುದಕ್ಕಿ೦ತ ಬೇರೆ ಕಾರಣವಾದರೂ ಏಕೆ ಬೇಕು?- ಓಶೋ

Sunday, September 16, 2012

ಬಡವ ಅಂದರೆ ಯಾರು?

ದಾರಿದ್ರ್ಯಾತ್ ಪುರುಷಸ್ಯ ಬಾಂಧವ ಜನೋ ವಾಕ್ಯೇ ನ ಸಂತಿಷ್ಠತೇ |
ಸತ್ತ್ವಂ ಹಾಸ್ಯಮುಪೈತಿ ಶೀಲಶಶಿನಃ ಕಾಂತಿಃ ಪರಿಮ್ಲಾಯತೇ |
ನಿರ್ವೈರಾ ವಿಮುಖೀ ಭವಂತಿ ಸುಹೃದಃ ಸ್ಫೀತಾ ಭವಂತ್ಯಾಪದಃ |
ಪಾಪಂ ಕರ್ಮ ಚ ಯತ್ ಪರೈರಪಿಕೃತಂ ತತ್ತಸ್ಯ ಸಂಭಾವ್ಯತೇ ||


ಬಡವನ ಮಾತಿಗೆ ನೆಂಟರು ಬೆಲೆ ಕೊಡುವುದಿಲ್ಲ, ಅವನ ಶಕ್ತಿ ಧೈರ್ಯಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
ಚಂದ್ರನ ಕಾಂತಿಯು ಹಗಲಿನಲ್ಲಿ ಬಾಡುವಂತೆ ಅವನ ಒಳ್ಳೆಯತನವು ಮಸುಕಾಗುತ್ತವೆ.
ಹಗೆತನಕ್ಕೆ ಕಾರಣ ಇಲ್ಲದಿದ್ದರೂ ಮಿತ್ರರು ದೂರವಾಗುತ್ತಾರೆ. ಕಷ್ಟಗಳು ಹೆಚ್ಚುತ್ತವೆ. 
ಬೇರೆಯವರು ಮಾಡಿದ ಪಾಪದ ಕೆಲಸಗಳಿಗೂ ಇವನೇ ಹೊಣೆಗಾರನಾಗುತ್ತಾನೆ.

ನನ್ನ ಮಾತು:
ಏನು ಸೂಕ್ತಿ ಹೀಗೆ ಹೇಳುತ್ತದಲ್ಲಾ! ಬಡವನ ಬಗ್ಗೆ ತಾತ್ಸಾರವೇ? ಏನಿದರ ಅರ್ಥ? 
ಈಗ ಬಡವ ಅಂದರೆ ಯಾರು? ಬಡತನ   ಅಂದರೆ ಏನು?   ಇಲ್ಲಿನ  ಆಡಿಯೋ ಕೇಳಿ ಪುನ: ಈ ಬಗ್ಗೆ ಮಾತಾಡೋಣ.

ನಿಜವಾದ ಬಡವನಾರು? ನಿಜ ಶ್ರೀಮಂತ ಯಾರು?

Saturday, September 15, 2012

ಯಾವನು ಶುಚಿ ?

ಕಃ ಪಥ್ಯತರೋ ಧರ್ಮಃ ಕಃ ಶುಚಿರಿಹ ಯಸ್ಯ ಮಾನಸಂ ಶುದ್ಧಂ ।
ಕಃ ಪಂಡಿತೋ ವಿವೇಕೀ ಕಿಂ ವಿಷಮವಧೀರಣಾ ಗುರುಷು ॥

ಅತ್ಯಂತ ಹಿತಕರವಾಗಿರುವುದು ಯಾವುದು ? - ಆಚರಿಸತಕ್ಕ ಧರ್ಮ
ಯಾವನು ಶುಚಿ ? - ಯಾರ ಮನಸ್ಸು ಶುಚಿಯಾಗಿರುತ್ತದೋ ಅವನು
ಪಂಡಿತನು ಯಾರು ? - ನಿತ್ಯ - ಅನಿತ್ಯ (ಶಾಶ್ವತ ಮತ್ತು ನಶ್ವರ) ಗಳನ್ನು ವಿವೇಚಿಸಿ ತಿಳಿದವನು ಪಂಡಿತನು. ಯಾವುದು ವಿಷ ?- ಗುರುಗಳನ್ನು ಮತ್ತು ಹಿರಿಯರನ್ನು ನಿಂದೆ ಮಾಡುವುದೇ ವಿಷವು.