ಇಷ್ಟಂತೂ ಸತ್ಯ. ನಮ್ಮ ದೇಶದಲ್ಲಿ ವೇದವನ್ನು ಎಲ್ಲದಕ್ಕೂ ಆಧಾರವೆಂದು ಹೇಳುತ್ತಲೇ ನೂರಾರು ದಾರ್ಶನಿಕರು ಅವರು ಕಂಡ ಸತ್ಯವನ್ನು ಪ್ರತಿಪಾದಿಸುತ್ತಾ ಅಂತೂ ಇಂತೂ ವೇದದ ಸುತ್ತ ಮುತ್ತವೇ ಸುತ್ತುತ್ತಾ, ವೇದದ ವಿರುದ್ಧವಾಗಿಯೂ ನಡೆಯುತ್ತಾ ನಮ್ಮ ಋಷಿಮುನಿಗಳು ಕೊಟ್ಟ ವಿಚಾರವನ್ನು ಅವರಿಗೆ ತೋಚಿದ ರೀತಿಯಲ್ಲಿ ಉಳಿಸಿದರು. ಉಳಿಸಿದರೆನ್ನುವುದಕ್ಕಿಂತಲೂ ವೇದವು ಅದರ ಗಟ್ಟಿತನದಿಂದ ಉಳಿದಿದೆ. ಇನ್ನು ಮುಂದೆಯೂ ಉಳಿಯುತ್ತದೆ.ಕಾರಣ ಅದು ಸಾರ್ವಕಾಲಿಕ ಸತ್ಯ. ಶಂಕರ,ಮಧ್ವ,ರಾಮಾನುಜ,ಬಸವಣ್ಣ, ಬುದ್ಧ,ಮಹಾವೀರ, ಗುರುನಾನಕ್ ಅಲ್ಲದೆ ಇತ್ತೀಚಿನ ವಿವೇಕಾನಂದ, ಡಾ.ಅಂಬೇಡ್ಕರ್ ವರಗೆ ಎಲ್ಲರೂ ಕೊಟ್ಟ ವಿಚಾರಗಳು ನಶಿಸಿದರೂ ವೇದವು ನಶಿಸಲು ಸಾಧ್ಯವೇ ಇಲ್ಲ.ಕಾರಣ ಅದು ಸಾರ್ವಕಾಲಿಕ, ಸಾರ್ವಭೌಮ, ಸಾರ್ವತ್ರಿಕ ಮತ್ತು ಸಾರ್ವದೇಶಿಕ. ಹಿಂದುಗಳಿಗೆ ಮಾತ್ರ ವೇದ ಸಂಬಂಧಿಸಿದ್ದೆಂಬ ತಪ್ಪು ಕಲ್ಪನೆ ಇದೆ. ಆದರೆ ವೇದವು ಸಕಲ ಮಾನವರಿಗಾಗಿ ಇದೆ.ಅದನ್ನು ಮರೆತಿರುವ ಪರಿಣಾಮವೇ ಈಗಿನ ಭಯೋತ್ಪಾದನೆ, ಮತೀಯ ಕಲಹ...ಎಲ್ಲವೂ ಕೂಡ. ಇವೆಲ್ಲ ಸಂಘರ್ಷಗಳಿಗೂ ಪರಿಹಾರ ಸಿಗಲು ಮತ್ತೆ ವೇದವೇ ಗತಿ. ನಮ್ಮ ವೇದ ಪಂಡಿತರು ಕೇವಲ ಪೂಜೆ-ಪುನಸ್ಕಾರಗಳು, ಹವನ ಹೋಮಗಳು, ಶ್ರಾದ್ಧಕರ್ಮಗಳು, ವ್ರತ ಕತೆಗಳಿಗೆ ಸೀಮಿತವಾಗದೆ ವೇದದ ಒಳಹೊಕ್ಕಿ ನೋಡುವ ಕಾಲ ಬಂದಿದೆ. ಆ ಕೆಲಸ ಎಷ್ಟು ಬೇಗ ಶುರುವಾಗುತ್ತದೋ ಅಷ್ಟು ಬೇಗ ಇಡೀ ವಿಶ್ವದ ಅಭ್ಯುದಯಕ್ಕೆ ಅಗತ್ಯವಾದ ಎಲ್ಲಾ ಮಾರ್ಗದರ್ಶನವೂ ಸಿಗುವುದರಲ್ಲಿ ಸಂಶಯವಿಲ್ಲ. ಈಗ ವೇದ ವಿದ್ವಾಂಸರನ್ನು ಎಚ್ಚರಿಸುವವರು ಬೇಕಾಗಿದ್ದಾರೆ. ಮೋದಿಯವರ ಸರ್ಕಾರವೂ ಕೂಡ ಈ ಬಗ್ಗೆ ಚಿಂತನೆ ನಡೆಸಬೇಕು." ವಿಶ್ವದ ಅಭ್ಯುದಯಕ್ಕಾಗಿ ವೇದ" ಗುರಿಯೊಡನೆ ರಭಸದ ಕೆಲಸವಾಗಬೇಕು. ನನಗೆಲ್ಲೋ ಹುಚ್ಚು ಅಂತೀರಾ? ಪರವಾಗಿಲ್ಲ. ಈ ಹುಚ್ಚನ್ನು ವಿದ್ವಾಂಸರಿಗೆ ಹಿಡಿಸುವ ಕೆಲಸವನ್ನು ಮಾಡಿ.
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, January 7, 2015
Tuesday, January 6, 2015
ಹಾಸನ ವೇದಭಾರತೀ,ಸಹಕಾರದೊಡನೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಒಂದು ಸಾವಿರ ಜನರ ಸಾಮೂಹಿಕ ಅಗ್ನಿಹೋತ್ರ
ಹಾವೇರಿ ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ ಪ್ರಯಾಣದ ಖರ್ಚು ಒಬ್ಬರಿಗೆ ರೂ 400.00 ನ್ನು ದಿನಾಂಕ 15.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406, ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಳಲು ಅವಕಾಶವಿದ್ದು ಪಾಲ್ಗೊಳ್ಳ ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.
ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.
ನೀನು ನನ್ನೊಳಗೇ ಇದ್ದೀಯ
ಭಗವಂತನೆಂಬುವನು ಒಬ್ಬನೇ.
ಅದೂ ಕೂಡ ಒಂದು ಶಕ್ತಿಯ ರೂಪದಲ್ಲಿ. ಅವನು ಗಂಡೂ
ಅಲ್ಲ.ಹೆಣ್ಣೂ ಅಲ್ಲ. ಆದರೂ ಭಗವಂತನನ್ನು ಪುಲ್ಲಿಂಗ ರೂಪದಲ್ಲಿ ಕರೆಯುವುದು ರೂಢಿಯಲ್ಲಿ ಬಂದಿದೆ.
ಅವನಿಗೆ
ದೇಹವೇ ಇಲ್ಲ. ಅದೊಂದು ಶಕ್ತಿ -ವಿದ್ಯುತ್
ಇದ್ದಂತೆ. ವಿದ್ಯುತ್ ಗೆ ಆಕಾರ ಹೇಗಿರಲು ಸಾಧ್ಯ?
ಕಣ್ಣಿಗೆ ಕಾಣುವ ಮೋಟಾರ್,ಜನರೇಟರ್, ವಿದ್ಯುತ್
ದೀಪಗಳನ್ನೇ ವಿದ್ಯುತ್ ಎಂದು ಕರೆದರೆ ಸರಿಯೇ? ವಿದ್ಯುತ್
ಪ್ರಭಾವದಿಂದ ಓಡುವ ಮೋಟಾರ್ ನ್ನು ನೋಡಬಹುದೇ ಹೊರತೂ
ವಿದ್ಯುತ್ ನ್ನು ನೋಡಲು ಸಾಧ್ಯವಿಲ್ಲ. ಅಲ್ಲವೇ?
ಹಾಗೆಯೇ
ಭಗವಚ್ಛಕ್ತಿ ಕೂಡ. ಅವನ ನಿಯಂತ್ರಣಕ್ಕೊಳಪಟ್ಟ ಜಗತ್ತನ್ನು ಕಾಣಬಹುದೇ ಹೊರತೂ ಅವನನ್ನು ನೋಡಲು ಸಾಧ್ಯವೇ
ಇಲ್ಲ. ನಮಗೆ ಶರೀರವಿದೆ. ಅದರ ಚಿತ್ರವನ್ನೂ ಬರೆಯಬಹುದು. ಆದರೆ ಇಲ್ಲದ
ಶರೀರದ ಚಿತ್ರ ಬರೆಯುವುದಾದರೂ ಹೇಗೆ? ಆದರೂ ಭಗವಂತನ ಹಲವಾರು ಕ್ರಿಯೆಗಳನ್ನು ಬಿಂಬಿಸುವ ರೂಪವನ್ನು
ಕಲ್ಪಿಸಿ ವಿಗ್ರಹಗಳನ್ನು ಶಿಲ್ಪಿಯೊಬ್ಬ ಕೆತ್ತಿದ.
ವಿದ್ವಾಂಸನೊಬ್ಬ ಭಗವಂತನ ಲೀಲಾ ಪ್ರಸಂಗಗಳನ್ನು ಸ್ತೋತ್ರ ರೂಪದಲ್ಲಿ ಬರೆದ. ಆ ವಿಚಿತ್ರ ಶಕ್ತಿಯನ್ನು
ಆರಾಧಿಸಿದ.ಆ ಪರಂಪರೆ ಮುಂದುವರೆಸಿದ. ಎಲ್ಲಿಯವರೆಗೆ ವಿಗ್ರಹಗಳು ಬಂದು ತಲುಪಿದೆಯೆಂದರೆ ಕ್ರಿಕೆಟ್
ಆಡುವ ಗಣಪನ ಮೂರ್ತಿಯನ್ನೂ ಸಹ ಇಂದು ಕಾಣಬಹುದು.ಕ್ರಿಕೆಟ್ ಗಣಪನಿಗೆ ಅಭಿಶೇಕ, ನೈವೇದ್ಯ, ಮಂಗಳಾರತಿ…ಎಲ್ಲವೂ
ನಡೆಯುತ್ತವೆ!!!
ವೇದವು
ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ-ಎಂಬ ಸಬೂಬು ಹೇಳಿ ಪಂಡಿತರುಗಳೇ
ಕತೆಗಳನ್ನು ಕಟ್ಟಿ ವಿಗ್ರಹಾರಾಧನೆಯನ್ನು ವೈಭವೀಕರಿಸಿದರು.
ಮನುಷ್ಯನ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಮಾಹಿತಿಗಳು ವೇದದಲ್ಲಿರುವುದನ್ನು ಸಾಮಾನ್ಯ ಜನರಿಗೆ ಪರಿಚಯಿಸಲೆ
ಇಲ್ಲ! ಬದಲಿಗೆ ಭಗವಂತನ ಸ್ತೋತ್ರಗಳನ್ನು ಹೇಳುವ , ಅವನ ಹೆಸರಲ್ಲಿ ಸಹಸ್ರನಾಮಗಳನ್ನು ಪಠಿಸುವ ಪದ್ದತಿಗಳನ್ನು
ಹುಟ್ಟುಹಾಕಿದರು. ನಾನೊಮ್ಮೆ ಚಿನ್ಮಯಾ ಮಿಷನ್ನಿನ ಆಶ್ರಮ ಒಂದಕ್ಕೆ ಹೋಗಿದ್ದೆ. ಅಲ್ಲಿ ಪೂಜೆ ಮಾಡುವಾಗ
ಹೇಳುವ ಚಿನ್ಮಯಾನಂದರ ಸಹಸ್ರನಾಮ ಕೇಳಿ ಅಚ್ಚರಿ ಗೊಂಡೆ.ಸಹಸ್ರನಾಮ ದಲ್ಲಿ ಒಂದು ನಾಮ ಏನು ಗೊತ್ತೆ?
“ ಓಂ ಆಂಗ್ಲಭಾಷಾಪ್ರವೀಣಾಯೈ ನಮಃ” ಈ ಸಹಸ್ರನಾಮ
ಅರ್ಚನೆ ಕೇಳಿದಾಗ ನಗು ಬರುವುದಿಲ್ಲವೇ? ಚಿನ್ಮಯಾನಂದರು ಭಗವದ್ಗೀತೆಯ ಸಾರವನ್ನು ಪ್ರಚುರಪಡಿಸುತ್ತಾ
ಹೋದರೆ ಅವರ ಅನುಯಾಯಿಗಳು ಚಿನ್ಮಯ ಸಹಸ್ರನಾಮ ಪ್ರಚುರಪಡಿಸುತ್ತಿದ್ದಾರಲ್ಲಾ!!
ಹಿಂದುಗಳನ್ನು
ನೋಡಿ ನೋಡಿ ಇತ್ತೀಚೆಗೆ ಕ್ರೈಸ್ತರೂ ಶುರುಮಾಡಿದರು “ ಜೀಸಸ್ ಸಹಸ್ರನಾಮ” ಹೀಗೆಯೇ ಮುಂದುವರೆದರೆ ಎಲ್ಲಾ
ರಾಜಕೀಯ ನಾಯಕರು, ಸಿನೆಮಾ ನಟರುಗಳ ಸಹಸ್ರನಾಮ ಬರಲು ಕಾಲ ದೂರವಿಲ್ಲ.
ಇದೇನು!
ಭಗವಂತನ ವಿಚಾರದಲ್ಲಿ ಹುಡುಕುವ ನಮ್ಮ ದಿಕ್ಕು ಸರಿ ಇದೆಯೇ? ಹೀಗೊಂದು ಚಿಂತನೆ ನನ್ನ ಮನದಲ್ಲಿ ಹೊಕ್ಕಾಗ….
ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ
ಯಾವ ಮಂತ್ರವ ಹೇಳಿ
ನಿನ್ನ ಮೆಚ್ಚಿಸಲಿ?
ಭಗವಂತನನ್ನು ಹುಡುಕುತ್ತಾ ಹೊರಟಾಗ ಬಂದ ಪ್ರಶ್ನೆಗಳು. “ಭಗವಂತಾ, ನಿನ್ನನ್ನು
ಎಲ್ಲಿ ಹುಡುಕಲಿ? ಎಲ್ಲಿದ್ದೀಯಾ ನೀನು? ನಿನ್ನನ್ನು ನಾನು ಹೇಗೆ ಆರಾಧಿಸಲಿ? ಯಾವ ಮಂತ್ರವನ್ನು ಹೇಳಿ
ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲಿ?
ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|
ನನ್ನ ಹುಚ್ಚುತನ ನೋಡು.ನಾನು ಸ್ನಾನ ಮಾಡುವುದು
ಅನಿವಾರ್ಯ. ಆದರೆ ನಿನಗೂ ಮಾಡಿಸುವ ಭ್ರಮೆ ನನ್ನದು. ನಿತ್ಯಶುದ್ಧನಾದ ನಿನಗೆ ಮಡಿಯ ಮಾಡಿಸುವ ಭ್ರಮೆ
ನನ್ನದು!! ನಾನು ಹಸಿವಿನಿಂದ ಇದ್ದು ನಿನಗೆ ನೈವೇದ್ಯ ಮಾಡುವ ಹುಚ್ಚು ನನಗೆ! ನಿನಗೆಲ್ಲಿಯ ಹಸಿವು?
ನಿನಗೆ ನಾನು ತಿನ್ನಿಸಿಯಾಯ್ತೇ?
ಕಣ್ಮುಚ್ಚಿ ಕುಳಿತಿರುವ ನಿನ್ನ
ದೇಗುಲದೀ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?
ಭಗವಂತಾ, ಕಣ್ಣು ಮುಚ್ಚಿ ಕುಳಿತಿರುವ ನಿನ್ನ
ವಿಗ್ರಹವನ್ನೇ ನೋಡಿ ಭ್ರಮಿಸಿದ ನನಗೆ ನಿನ್ನ ಪ್ರತ್ಯಕ್ಷ ದರ್ಶನ ಆಗಲೆ ಇಲ್ಲವಲ್ಲಾ! ಹೇಳು ಎಲ್ಲಿದ್ದೀಯಾ?
ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|
ಜಗತ್ತಿಗೆಲ್ಲಾ ಬೆಳಕು ಕೊಡುವ ನೀನು ಸ್ವಯಂ
ಪ್ರಕಾಶ. ನಿನ್ನನ್ನು ಪುಟ್ಟ ಹಣತೆಯ ಬೆಳಕಿನಲ್ಲಿ ಹುಡುಕುವ ನನ್ನ ಹುಚ್ಚುತನಕ್ಕೆ ಏನು ಹೇಳಲಿ? ಜಗತ್ತೆಲ್ಲವನ್ನೂ
ರಕ್ಷಿಸುವವನೇ ನೀನು, ನಿನಗೊಂದು ಗುಡಿ ಕಟ್ಟಿಸುವ ನನ್ನ ಹುಚ್ಚುತನ ನೋಡು. ನನ್ನ ಸಂತೋಷಕ್ಕೆ ನಾನು
ಏನು ಬೇಕಾದರೂ ಮಾಡಿಕೊಳ್ಳಬಹುದು.ಆದರೆ ನಾನು ಹೇಳುವುದು ನಿನ್ನ ಹೆಸರನ್ನು! ನಿನಗೆ ಮನೆ ಇಲ್ಲವಂತೆ! ಅದಕ್ಕೆ ಗುಡಿ ಕಟ್ಟಿಸಬೇಕಂತೆ!!
ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ
ಅಹುದೇ ದೇವ ತೋರು
ನಿನ್ನರೂಪ|
ಎಲ್ಲೆಲ್ಲೂ ಇರುವ ನಿನ್ನ ನಿಜವಾದ ರೂಪವನ್ನು ನೋಡುವ ನನ್ನ ಹುಚ್ಚು ಆಸೆ ನೋಡು ಹೇಗಿದೆ?
ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ನಿನ್ನನ್ನು ನಾನು ನೋಡುವುದಾದರೂ ಹೇಗೆ? ಒಂದು ವೇಳೆ ನಾನು ನೋಡುತ್ತಿದ್ದೇನೆಂದರೂ
ಆ ನೋಡುತ್ತಿರುವ ಕಣ್ಣಿನಲ್ಲೂ ನೀನೇ ಇದ್ದೀಯಲ್ಲಾ! ಆ ನಿನ್ನನ್ನು ನಾನು ಹೇಗೆ ನೋಡಲಿ?
ನನ್ನೊಳಗೆ ಇರುವ
ನಿನ್ನ ಮರೆತೂ ನಾನು
ಎಲ್ಲಿ ಕಾಣಲಿ ನಿನ್ನ ನಿಜದ ರೂಪ?
ಕೊನೆಯಲ್ಲಿ ನನಗೆ
ನಿನ್ನ ಬಗ್ಗೆ ಸ್ವಲ್ಪ ಅರಿವುಂಟಾಗುತ್ತಿದೆ. .
ನನ್ನಲ್ಲಿರುವ ನಿನ್ನನ್ನು ನಾನು ಮರೆತು ಎಲ್ಲೆಲ್ಲೋ ಹುಡುಕುತ್ತಿದ್ದೀನಲ್ಲಾ! ನನ್ನನ್ನು ಕ್ಷಮಿಸು
ದೇವ. ನಿನ್ನ ಅನುಭವ ನನಗೆ ಮಾಡಿಬಿಡು ಸಾಕು. ನಿನ್ನ ರೂಪವನ್ನು ನೋಡುವ ಭ್ರಮೆಯನ್ನು ತೊರೆದುಬಿಡುವೆ.
ಇದೆಲ್ಲಾ ಓದಿದ ಮೇಲೆ ಇವನೊಬ್ಬ ಆರ್ಯಸಮಾಜಿ
ಇವನು ವಿಗ್ರಹಾರಾಧನೆ ವಿರೋಧಿಸುತ್ತಾನೆ, ಎಂಬ ಭ್ರಮೆಗೆ ನೀವು ಬಂದರೆ ಅದು ನನ್ನ ತಪ್ಪಲ್ಲ. ಇದು ನನ್ನೊಳಗಿನ
ಮಾತು. ಮ್ಕನುಷ್ಯನ ಆತ್ಮೋದ್ಧಾರಕ್ಕೆ ಅಗತ್ಯವಾಗಿರುವುದು ಭಗವಂತನ ಸರ್ವವ್ಯಾಪಕತೆಯ ಬಗ್ಗೆ ಬಲವಾದ ನಂಬಿಕೆ ಹೊರತೂ ಅವನನ್ನು ಸಂಕುಚಿತಗೊಳಿಸಿ ಅದಕ್ಕೊಂದು
ಬಣ್ಣ ಕಟ್ಟುವುದಲ್ಲ. ಭಗವಂತನ ಈ ಭವ್ಯ ಸ್ಥಿತಿಯನ್ನು ಒಪ್ಪಿಅವನ ಗುಣಗಳನ್ನುನಮ್ಮದಾಗಿ ಮಾಡಿಕೊಳ್ಳುವುದೊಂದೇ
ನಮ್ಮ ಆತ್ಮೋದ್ಧಾರಕ್ಕೆ ಇರುವ ಮಾರ್ಗ.
ಕೆಳಗಿನ ಕೊಂಡಿಯಲ್ಲಿ ಮೇಲಿನ ಹಾಡನ್ನು ಕೇಳಬಹುದು.
http://sridhar.vedasudhe.com/%e0%b2%8e%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%81%e0%b2%a1%e0%b3%81%e0%b2%95%e0%b2%b2%e0%b2%bf-%e0%b2%a8%e0%b2%bf%e0%b2%a8%e0%b3%8d%e0%b2%a8/ಕೆಳಗಿನ ಕೊಂಡಿಯಲ್ಲಿ ಮೇಲಿನ ಹಾಡನ್ನು ಕೇಳಬಹುದು.
Sunday, January 4, 2015
ವಾಸ್ತು ಹಿಂದಿರುವ ವಿಜ್ಞಾನ
ವೇದಭಾರತಿಯ ಸತ್ಸಂಗದಲ್ಲಿ ಡಾ. ಜೆಸ್ಸಿ(ಮಾಯಾ) ಜೆ. ಮರ್ಸೆ ನೀಡಿದ ಉಪನ್ಯಾಸ
ವೇದಸುಧೆ ಅಂತರ್ಜಾಲ ತಾಣದ ಮೂಲಕ ಪರಿಚಿತರಾದ ಡಾ. ಜೆಸ್ಸಿ ಜೆ. ಮರ್ಸೆ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಢ್ ಟೆಕ್ನೊಲಜಿ ಯೂನಿವರ್ಸಿಟಿಯ ಚಾನ್ಸಲರ್. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸಕರಾಗಿ, ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿ, ವಿವಿಧ ಸಂಸ್ಥೆಗಳಿಗೆ ಸಲಹಾಕಾರರಾಗಿಯೂ ಹೆಸರು ಮಾಡಿದ್ದ ಅವರು ವಾಸ್ತುವ್ಯಾಸ ಡಾ. ಗಣಪತಿ ಸ್ಥಪತಿಯವರ ಶಿಷ್ಯೆಯಾಗಿ ವಾಸ್ತುಶಾಸ್ತ್ರದಲ್ಲಿ ಪರಿಣಿತಿ ಗಳಿಸಿದವರು. ಈ ವಿಷಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ ಈಗ ಮೇಲೆ ತಿಳಿಸಿದ ಯೂನಿವರ್ಸಿಟಿಯ ಚಾನ್ಸಲರ್ ಆಗಿ ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಿತ್ರ ಹರಿಹರಪುರ ಶ್ರೀಧರರೊಂದಿಗೆ ಆಗಾಗ್ಗೆ ವಿಚಾರ-ವಿನಿಮಯ ಮಾಡಿಕೊಳ್ಳುತ್ತಿದ್ದರು. ಪಂ. ಸುಧಾಕರ ಚತುರ್ವೇದಿ ಮತ್ತು ವೇದಾಧ್ಯಾಯಿ ಸುಧಾಕರ ಶರ್ಮರವರೊಂದಿಗೆ ಭೇಟಿಗೂ ಶ್ರೀಧರ್ ಸ್ವತಃ ವ್ಯವಸ್ಥೆ ಮಾಡಿದ್ದರು. ಅವಕಾಶವಾದಾಗ ಹಾಸನಕ್ಕೂ ಬರಲು ಅವರು ಆಹ್ವಾನಿಸಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ ಅವರು ೨.೧.೨೦೧೫ ರಂದು ಹಾಸನದ ವೇದಭಾರತಿಯ ಸತ್ಸಂಗಕ್ಕೂ ಬರುವುದಾಗಿ ತಿಳಿಸಿ ಅದರಂತೆ ಬಂದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭೆಗಳು, ಸೆಮಿನಾರುಗಳಲ್ಲಿ ಭಾಗವಹಿಸಿ ವಿದ್ವತ್ ಪೂರ್ಣ ವಿಚಾರ ಮಂಡಿಸುವ ಅವರು ಹಾಸನದಲ್ಲಿ ನಡೆಯುವ ಸತ್ಸಂಗಕ್ಕೂ ಅದೇ ಮಹತ್ವ ನೀಡಿ ಬಂದದ್ದು ವಿಶೇಷವೇ ಸರಿ. ದೊಡ್ಡವರು ದೊಡ್ಡವರಾಗಿಯೇ ಇರುತ್ತಾರೆ, ಸಣ್ಣ ವಿಷಯಕ್ಕೂ ಮಹತ್ವ ನೀಡುವುದರಿಂದಲೇ ಅವರು ದೊಡ್ಡವರಾಗುತ್ತಾರೆ ಎಂಬುದು ಇಲ್ಲಿ ವೇದ್ಯವಾಯಿತು.
ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಬಂದ ಅವರು ಸೀರೆ ಉಡಲು ಬಾರದಿದ್ದರೂ ಕಷ್ಟಪಟ್ಟು ಸೀರೆ ಧರಿಸಿ ಬಂದಿದ್ದರು. ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಿನಾಗರಾಜರು ಡಾ. ಜೆಸ್ಸಿಯವರ ಪರಿಚಯವನ್ನು ಸತ್ಸಂಗದಲ್ಲಿ ಹಾಜರಿದ್ದ ವೇದಾಸಕ್ತರು ಮತ್ತು ವೇದಾಧ್ಯಾಯಿಗಳಿಗೆ ಮಾಡಿಕೊಟ್ಟದ್ದಲ್ಲದೆ, ಸತ್ಸಂಗದಲ್ಲಿ ಪ್ರತಿನಿತ್ಯ ಮಾಡಲಾಗುವ ಅಗ್ನಿಹೋತ್ರದ ವಿವರ, ಮಹತ್ವಗಳನ್ನು ಡಾ. ಜೆಸ್ಸಿ ಮತ್ತು ಅವರ ಸಂಗಡಿಗರಿಗೆ ವಿವರಿಸಿದರು. ಅಗ್ನಿಹೋತ್ರ ಮತ್ತು ಎರಡು ಭಜನೆಗಳ ನಂತರದಲ್ಲಿ ಡಾ. ಜೆಸ್ಸಿಯವರನ್ನು ಮಾತನಾಡಲು ಕೋರಲಾಯಿತು. ವಾಸ್ತು ಹಿಂದಿರುವ ವಿಜ್ಞಾನ ಎಂಬ ವಿಷಯದಲ್ಲಿ ಅವರು ಮಾತನಾಡಿದ್ದು, ಅವರು ಪ್ರಸ್ತಾಪಿಸಿದ ಸಂಗತಿಗಳಲ್ಲಿ ಕೆಲವು ಅಂಶಗಳನ್ನು ಮಾತ್ರ ತಿಳಿಸುವ ಪ್ರಯತ್ನ ಇಲ್ಲಿ ಮಾಡಿದೆ. (ಡಾ.ಜೆಸ್ಸಿಯವರ ಇಂಗ್ಲಿಷ್ ಉಚ್ಛಾರಣೆ ನಮ್ಮ ಇಂಗ್ಲಿಷಿನಂತೆ ಅಲ್ಲವಾದ್ದರಿಂದ ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ತಿಳಿಸಿರುವುದರಲ್ಲಿ ಏನಾದರೂ ತಪ್ಪಿದ್ದರೆ ಅದು ಡಾ. ಜೆಸ್ಸಿಯವರ ತಪ್ಪಲ್ಲ, ಈ ಲೇಖಕನದು.)
ವಾಸ್ತು ಹಿಂದಿರುವ ವಿಜ್ಞಾನ
ಋಗ್ವೇದದ ಮೊದಲನೆಯ ಮಂತ್ರ ಅಗ್ನಿಮೀಳೇ ಪುರೋಹಿತಮ್ . . ಸಮರ್ಪಣಾ ಮನೋಭಾವವನ್ನು ಹೊಂದಲು ಹೇಳುತ್ತದೆ. ಈ ತ್ಯಾಗ ಮನೋಭಾವದಿಂದ ಮಾಡುವ ಕೆಲಸಗಳು ಸತ್ಪ್ರಭಾವ ಬೀರುತ್ತವೆ. ಈಗ ಅಗ್ನಿಹೋತ್ರ ಮಾಡಿದಿರಿ. ಅಗ್ನಿಹೋತ್ರದ ಜ್ವಾಲೆ, ಹರಡಿದ ಧೂಮದ ಪರಿಮಳ, ಹೇಳಿದ ಮಂತ್ರಗಳು ನಿಮ್ಮ ಮೇಲೆ ಪ್ರಭಾವ ಬೀರಿದವು ಅಲ್ಲವೇ? ಇದಕ್ಕೆ ಕಾರಣ ಇಲ್ಲಿ ಉಂಟಾದ ತರಂಗಗಳು (vibrations).. ಈ ವಿಶ್ವದ ಸೃಷ್ಟಿ ಸಹ ತರಂಗಗಳಿಂದಲೇ ಆದದ್ದು.
ಸಾವಿರಾರು ವರ್ಷಗಳ ಹಿಂದೆ ಇದ್ದ ಮಹಾಮುನಿ ಮಾಯನ್ ವಾಸ್ತುಶಾಸ್ತ್ರದ ಪ್ರಥಮ ಕೃತಿಕಾರರಾಗಿದ್ದಾರೆ. ಖಾಲಿ ಇರುವ ಸ್ಥಳ ಶಕ್ತಿಯ ಕೇಂದ್ರೀಕೃತ ಕ್ಷೇತ್ರವಾಗಿದ್ದು, ಈ ಭೌತಿಕ ಪ್ರಪಂಚದಲ್ಲಿನ ವಸ್ತುಗಳು ಮತ್ತು ಎಲ್ಲಾ ರೀತಿಗಳ ಉಗಮಕ್ಕೆ ಮೂಲವಾಗಿರುತ್ತದೆ ಎಂಬುದು ಆ ಋಷಿವಾಣಿಯಾಗಿದೆ. ಈ ಖಾಲಿ ಸ್ಥಳದಲ್ಲಿ ಶಕ್ತಿ ತರಂಗಗಳಿದ್ದು ಅದು ಗಣಿತದ ಲೆಕ್ಕಾಚಾರಕ್ಕೆ ಒಳಪಟ್ಟಿರುತ್ತದೆ. ವಿವಿಧ ರೀತಿಯ ಜೀವಿಗಳು ಇದ್ದು ಇವುಗಳು ಪಂಚಭೂತಗಳಿಂದ -ಆಕಾಶ, ವಾಯು, ಅಗ್ನಿ, ನೆಲ, ಜಲ- ಆದದ್ದು. ವಿವಿಧ ಜೀವಿಗಳ ಗುಣ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತವೆ. ಬೆಕ್ಕಿನ ಸ್ವಭಾವವೇ ಬೇರೆ, ನಾಯಿಯ ಸ್ವಭಾವವೇ ಬೇರೆ, ಮನುಷ್ಯನ ಸ್ವಭಾವವೇ ಬೇರೆ. ಮನುಷ್ಯರಲ್ಲೂ ವಿವಿಧ ಸ್ವಭಾವದವರನ್ನು ಕಾಣುತ್ತೇವೆ. ಈ ವ್ಯತ್ಯಾಸಗಳಿಗೂ ಕಾರಣ ತರಂಗಗಳೇ ಆಗಿವೆ. ‘Birds of same feather flock together’ ಎಂಬಂತೆ ನೀವುಗಳು ಇಲ್ಲಿ ಒಟ್ಟಿಗೇ ಸೇರುವುದಕ್ಕೂ ನಿಮ್ಮಲ್ಲಿನ ತರಂಗಗಳು ಹೊಂದಾಣಿಕೆಯಾಗಿರುವುದೇ ಕಾರಣ.
ವಾಸ್ತು (ವಾಸ್ತುಬ್ರಹ್ಮ ಅಥವ ವಾಸ್ತು ಪುರುಷ) ಅನ್ನುವುದು ಒಂದು ಶಕ್ತಿಯಾಗಿದ್ದು, ಇದರಿಂದಲೇ, ಇದರ ಮೂಲಕವೇ ಭೌತಿಕ ಸೃಷ್ಟಿ ಸಂಭವಿಸುತ್ತದೆ. ಇದನ್ನು ಧಾರ್ಮಿಕವಾಗಿ ದೇವರು ಅನ್ನುತ್ತಾರೆ, ಸೃಷ್ಟಿಕರ್ತ ಅನ್ನುತ್ತಾರೆ, ವೈಜ್ಞಾನಿಕವಾಗಿ ಕೇಂದ್ರೀಕೃತ ಶಕ್ತಿ ಕೇಂದ್ರ ಅನ್ನುತ್ತಾರೆ. ವಾಸ್ತು ಅನ್ನುವ ಪದದ ನಿಖರ ಅರ್ಥವೆಂದರೆ ಶಾಶ್ವತವಾಗಿ ಇರುವಂತಹದು.
ಭಾರತದಲ್ಲಿನ ದೇವಸ್ಥಾನಗಳು, ಈಜಿಪ್ಟಿನಲ್ಲಿನ ಪಿರಮಿಡ್ಡುಗಳು, ಮುಂತಾದವು ಗಣಿತದ ಲೆಕ್ಕಾಚಾರಗಳನ್ನು ಆಧರಿಸಿ ನಿರ್ಮಿಸಿದ್ದಾಗಿವೆ. ಆ ಸ್ಥಳಗಳಿಗೆ ಹೋದಾಗ ಆಗುವ ನಮ್ಮ ಅನುಭವಗಳಿಂದಲೇ ಇದನ್ನು ತಿಳಿಯಬಹುದು. ಅಲ್ಲಿನ ಕಟ್ಟಡ ರಚನೆಯ ರೀತಿಯ ಕಾರಣಗಳಿಂದ ಉಂಟಾಗುವ ತರಂಗಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿರುವ ಪ್ರಬಾವೀ ತರಂಗಗಳೇ ಬೇರೆ ರೀತಿಯಲ್ಲಿರುತ್ತವೆ. ವಾಸ್ತು ಪ್ರಕಾರ, ಗಣಿತದ ಲೆಕ್ಕಾಚಾರಗಳಿಗೆ ಅನುಗುಣವಾಗಿ ಕಟ್ಟಡಗಳನ್ನು ರಚಿಸಿದರೆ ಅದಕ್ಕೆ ತಕ್ಕಂತೆ ಮನುಷ್ಯನ ಸ್ವಭಾವಗಳ ಮೇಲೂ ಅದು ಪ್ರಭಾವ ಬೀರುತ್ತವೆ. ಅಪರಾಧಗಳ ಪ್ರಮಾಣವನ್ನೂ ಲೆಕ್ಕಾಚಾರದ ರಚನೆಗಳು ತಗ್ಗಿಸುತ್ತವೆ. ಇದನ್ನು ಪರಿಶೀಲಿಸಬಹುದಾಗಿದೆ. ಜೀವಿಗಳಿಗೆ ಆಯಸ್ಸಿನ ಮಿತಿ ಇರುಂತೆ ಕಟ್ಟಡದ ವಾಸ್ತುವಿಗೂ ಮಿತಿ ಇರುತ್ತದೆ.
ಸೀಮಿತ ಅವಧಿಯಲ್ಲಿ ಈ ವಿಷಯದ ಕುರಿತು ತಿಳಿಸುವುದು ಸುಲಭವಲ್ಲ. ಡಾ. ಗಣಪತಿ ಸ್ಥಪತಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನಾಲಜಿ ವಿದ್ಯಾಲಯದಲ್ಲಿ ವಾಸ್ತುಶಾಸ್ತ್ರವನ್ನು ವೈಜ್ಞಾನಿಕವಾಗಿ ಕಲಿಸುವ ಕೆಲಸ ನಡೆಯುತ್ತಿದೆ. ವಾಸ್ತುವಿಗೆ ಸಂಬಂಧಿಸಿದ ಸಂದೇಹ, ಸಲಹೆಗಳಿಗೆ ಮುಕ್ತವಾಗಿ ಸಂಪರ್ಕಿಸಿ ಪರಿಹಾರ ತಿಳಿದುಕೊಳ್ಳಬಹುದಾಗಿದೆ. ಪ್ರಪಂಚದ ಹಲವಾರು ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಆನ್ ಲೈನ್ ಮೂಲಕ ಶಿಕ್ಷಣ ಕೊಡಲಾಗುತ್ತಿದೆ ಮತ್ತು ಪ್ರತ್ಯಕ್ಷ ತರಗತಿಗಳಿಗೂ, ತರಬೇತಿಗೂ ಅವಕಾಶ ಮಾಡಲಾಗಿದೆ. ಆಸಕ್ತರು ಪ್ರಯೋಜನ ಹೊಂದಬಹುದು.
ಸೂರ್ಯ ಸಿದ್ಧಾಂತದಲ್ಲಿ ಹೇಳಿರುವಂತೆ ಖಾಲಿ ಸ್ಥಳದಲ್ಲಿನ ಪ್ರತಿಯೊಂದು ಕಣವೂ ಒಂದೊಂದು ಶಕ್ತಿಯ ಕಣಜವಾಗಿದ್ದು, ಶೃತಿಬದ್ಧವಾಗಿ ಚಲಿಸುತ್ತಿರುತ್ತದೆ/ಕುಣಿಯುತ್ತಿರುತ್ತದೆ. ಇಡೀ ವಿಶ್ವವು ಇಂತಹ ಕಣಗಳಿಂದ ತುಂಬಿದೆ. ವಾಸ್ತುಶಾಸ್ತ್ರ ಅನ್ನುವುದು ಇದನ್ನು ಭೌತಿಕ ಪ್ರಪಂಚಕ್ಕೆ ಕಲೆ, ಸಂಗೀತ, ನೃತ್ಯ, ಬರಹ, ಕಟ್ಟಡ ವಿನ್ಯಾಸ, ಮುಂತಾದುವುಗಳಿಂದ ಅಳವಡಿಸುವ ವಿಜ್ಞಾನವಾಗಿದೆ. ಜೀವಿಗಳ ಒಳಗೂ ಸಹ ಇಂತಹ ತರಂಗಗಳನ್ನು ಉಂಟುಮಾಡುವ ಕಣಗಳಿದ್ದು ಅವು ಶರೀರ ವೀಣೆಯ ತಂತಿಗಳಾಗಿ ಕೆಲಸ ಮಾಡುತ್ತವೆ. ಮಹಾಮುನಿ ಹೇಳುವಂತೆ ಮನುಷ್ಯನ ಶರೀರದ ತರಂಗಗಳು (ಜೀವಾತ್ಮನ ತರಂಗಗಳು) ಪರಮಾತ್ಮನ ತರಂಗಗಳೊಂದಿಗೆ ಹೊಂದಾಣಿಕೆಯಾದರೆ ಮೋಕ್ಷ ಸಾಧ್ಯ.
-ಕ.ವೆಂ.ನಾಗರಾಜ್.
Saturday, January 3, 2015
ಡಾ.ಜೆಸ್ಸೀ ಹಾಸನ ಭೇಟಿ- ಒಂದು ಯಶಸ್ವೀಕಾರ್ಯಕ್ರಮದ ಹಲವು ದೃಶ್ಯಗಳು
Sunday, December 21, 2014
Subscribe to:
Posts (Atom)



