///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Friday, October 5, 2012
ವಿಮರ್ಶೆ ಮಾಡೋಣ ಬನ್ನಿ
ವೇದಸುಧೆಯ ಆತ್ಮೀಯ ಬಂಧುಗಳೇ,
"ಎಲ್ಲರಿಗಾಗಿ ವೇದ" ಎಂಬ ವಿಚಾರವನ್ನಿಟ್ಟುಕೊಂಡು ವೇದಸುಧೆಯು ಹೆಜ್ಜೆ ಇಡುವಾಗ ನಮಗೆ ಅತ್ಯಂತ ಸರಳವಾಗಿ, ಅತ್ಯಂತ ನಿಷ್ಟುರವಾಗಿ ಸತ್ಯದ ದಾರಿಯನ್ನು ಬಿಚ್ಚಿಡುತ್ತಿರುವ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಮಾತ್ರವೇ ಎಟುಕುತ್ತಾರೆ. ನೂರಾರು ವರ್ಷಗಳಿಂದ ಹಲವಾರು ಅರ್ಥರಹಿತ ಆಚರಣೆಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ಆ ಕಾರಣದಿಂದ ಶರ್ಮರ ಮಾತುಗಳು ಸ್ವಲ್ಪ ಕಠಿಣವಾಗಿಯೇ ತೋರುತ್ತದೆ. ಆದರೆ ತಾಳ್ಮೆಯಿಂದ ಅವರ ಮಾತುಗಳನ್ನು ಕೇಳಿ ನಂತರ ಆಳವಾಗಿ ನಮ್ಮೊಳಗೆ ಚಿಂತನ-ಮಂಥನ ನಡೆಸಿದರೆ "ಹೌದಲ್ವಾ? ಶರ್ಮರು ಸತ್ಯವನ್ನೇ ಹೇಳುತ್ತಿದ್ದಾರೆಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ.ನಾನು ಇಷ್ಟು ಸ್ಪಷ್ಟವಾಗಿ ಈ ಮಾತು ಹೇಳಲು ಕಾರಣವಿದೆ. ನಾಲ್ಕೈದು ವರ್ಷಗಳಿಂದ ಅವರೊಡನೆ ಬಹಳ ಚರ್ಚೆ ಮಾಡಿ ಕೊನೆಗೆ ಅವರ ಮಾತನ್ನು[ವೇದಾಧಾರಿತ] ಒಪ್ಪುವ ಅನಿವಾರ್ಯತೆ ನನಗೆ ಬಂದಿದೆ. ಅವರ ಮಾತುಗಳು ವೇದಾಧಾರಿತ ಅಲ್ಲಾ ,ಎಂದು ಯಾರೂ ಈವರಗೆ ಹೇಳಲೇ ಇಲ್ಲ. ಶರ್ಮರ ಮಾತುಗಳನ್ನು ಅವಲೋಕಿಸಲು ಎಲ್ಲಾ ವೇದ ಪಂಡಿತರಲ್ಲಿ ವೇದಸುಧೆಯು ಈಗಲೂ ವಿನಂತಿಸುತ್ತದೆ. ಅವರ ಮಾತುಗಳಿಗೆ ವೇದದ ಆಧಾರವಿಲ್ಲ. ಅಥವಾ ವೇದದ ಈ ಆಧಾರದಂತೆ ಅವರ ಮಾತುಗಳು ತಪ್ಪು ಎಂದು ಯಾರೇ ಪಂಡಿತರು ನಿರೂಪಿಸಿದರೂ ವೇದಸುಧೆಯು ಅವರ ಮಾತನ್ನು ಸ್ವೀಕರಿಸಲು ಸಿದ್ಧವಿದೆ. ವೇದಸುಧೆಗೆ ಬೇಕಾಗಿರುವುದು ಸತ್ಯ ಪಥ. ಎಲ್ಲಾ ವೇದ ವಿದ್ವಾಂಸರನ್ನೂ ಈ ಒಂದು ವಿಚಾರದಲ್ಲಿ "ಸತ್ಯ ಪಥ" ಮುನ್ನಡೆಯಲು ಮಾರ್ಗದರ್ಶನ ಮಾಡಿ-ಎಂದು ವೇದಸುಧೆಯು ವಿನಂತಿಸುತ್ತದೆ. ಇಲ್ಲಿ ಇಷ್ಟು ವಿಚಾರವನ್ನು ಪ್ರಸ್ತಾಪಿಸಲು ಕಾರಣ ಇದೆ. ಮೊನ್ನೆ ಹಾಸನದಲ್ಲಿ ಶ್ರೀ ಸುಧಾಕರಶರ್ಮರೊಂದಿದೆ ಮುಕ್ತ ಸಂವಾದವು ನಡೆದಿದೆ. ಅದರ ವೀಡಿಯೋ ಕ್ಲಿಪ್ ಗಳನ್ನು ಇನ್ನು ಮುಂದೆ ಒಂದೊಂದಾಗಿ ಇಲ್ಲಿ ಪ್ರಕಟ ಮಾಡಲಾಗುವುದು. ವಿದ್ವಜ್ಜನರು ದಯಮಾಡಿ ಇಂತಹ ಸತ್ಯ ಶೋಧನ ಪ್ರಯತ್ನಕ್ಕೆ ಕೈ ಜೋಡಿಸಬೇಕೆಂದರೆ ದಿನಕ್ಕೆ ಹತ್ತು ನಿಮಿಷ ಇಲ್ಲಿನ ವೀಡಿಯೋ ಕ್ಲಿಪ್ ಗಳನ್ನು ವೀಕ್ಷಿಸಬೇಕೆಂಬುದು ವೇದಸುಧೆಯ ಕಳಕಳಿಯ ಮನವಿ. ಆಗ ನಿಮ್ಮ ಅಭಿಪ್ರಾಯಗಳನ್ನು ವೇದದ ಆಧಾರದಲ್ಲಿ ಬಿಚ್ಚಿಡಲು ಅನುಕೂಲವಾಗುತ್ತದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಶರ್ಮರು ವೇದ ಮಂತ್ರ ದ ಅರ್ಥವನ್ನಷ್ಟೇ ಹೇಳಿದ್ದಾರೆ. ಅದರ ಮೂಲ ಮಂತ್ರವನ್ನು ಅಪೇಕ್ಷಿಸುವವರು ಖಂಡಿತವಾಗಿಯೂ ವೇದಸುಧೆಗೆ ಬರೆಯಿರಿ . ಶರ್ಮರಿಂದ ಆಧಾರ ಮಂತ್ರಗಳನ್ನು ಪಡೆದು ಪ್ರಕಟಿಸಲಾಗುವುದು. ನಮ್ಮ ಈ ಮೇಲ್ ವಿಳಾಸ’ mail@vedasudhe.com
Wednesday, October 3, 2012
ಚಪ್ಪಲಿ ಹೊಲಿದು ಮಗಳನ್ನು ಇಂಜಿನಿಯರ್ ಮಾಡಿಸಿದ ರಾಜೇಂದರ್!!
ನನ್ನ ತಂಗಿ ಮಗ ಸುಬ್ರಹ್ಮಣ್ಯ ತನ್ನ ಫೇಸ್ ಬುಕ್ ನಲ್ಲಿ ಈ ಫೋಟೋ ಹಾಕಿಕೊಂಡಿದ್ದ. ನೋಡುತ್ತಿದ್ದಂತೆಯೇ ನನ್ನ ಬಾಲ್ಯ ನೆನಪಾಯ್ತು. ನಮ್ಮಪ್ಪ ಅಮ್ಮ ಕಣ್ಮುಂದೆ ಬಂದರು. ಅಬ್ಭಾ! ಅದೊಂದು ರೋಚಕ ಅಧ್ಯಾಯ!! ಅಂದಿನ ಅನುಭವವೇ ಇಂದು ನನ್ನಲ್ಲೇನಾದರೂ ಮನುಷ್ಯತ್ವದ ಗುಣಗಳಿದ್ದರೆ ಅದಕ್ಕೆ ಕಾರಣ.ನನ್ನ ಕಥೆ ಹಾಗಿರಲಿ.
ಇಲ್ಲಿ ಮೀರಾ ಮತ್ತು ಅವಳ ತಂದೆ ರಾಜೇಂದರ್ ನಮ್ಮೆಲ್ಲರ ಮೆಚ್ಚುಗೆಗೆ ಸಹಜವಾಗಿ ಪಾತ್ರರಲ್ಲವೇ? ಹಗಲು ರಾತ್ರಿ ಚಪ್ಪಲಿ ಹೊಲಿದು ಮಗಳನ್ನು ಇಂಜಿನಿಯರ್ ಮಾಡಿಸಿದ ರಾಜೇಂದರ್!! ಬಡತನ ಲೆಕ್ಕಿಸದೆ ಓದಿದ ಮೀರಾ!!!
ನಿಮಗೆ ಶತ ಶತ ನಮನಗಳು
ಮಾಧ್ಯಮ-ಸಂವಾದ
ಹಾಸನ ಜನತೆಗೆ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪರಿಚಯವಾಗಿ ನಾಲ್ಕೈದು ವರ್ಷವಾಯ್ತು. ಹಾಸನದ ಶ್ರೀ ಶಂಕರ ಮಠದಲ್ಲಿ ಅವರ ನಾಲ್ಕಾರು ಉಪನ್ಯಾಸಗಳು ನಡೆದಿದ್ದು ಈಗ್ಗೆ ಎರಡು ವರ್ಷಗಳ ಹಿಂದೆ "ವೇದಸುಧೆ"ಯ ವಾರ್ಷಿಕೋತ್ಸವದಲ್ಲಿ ಅವರ ಉಪನ್ಯಾಸಗಳ ಸಿಡಿ. "ನಿಜವ ತಿಳಿಯೋಣ" ಬಿಡುಗಡೆಯಾಗಿತ್ತು. ಆ ನಂತರ ಶ್ರೀಯುತರ ಅನಾರೋಗ್ಯದಿಂದಾಗಿ ಹಾಸನಕ್ಕೆ ಅವರನ್ನು ಮತ್ತೆ ಕರೆಸಲಾಗಿರಲಿಲ್ಲ.ಹಾಸನದ ಜನತೆಗೆ ಶ್ರೀಯುತರ ಮಾತು ಕೇಳುವ ಕಾತುರತೆ ಇತ್ತು. ಅದಕ್ಕೆ ಅವಕಾಶವೂ ಒದಗಿಬಂತು. ಪ್ರವಾಸ ಮಾಡುವಷ್ಟು ಅವರ ಆರೋಗ್ಯ ಸುಧಾರಿಸದಿದ್ದರೂ ಹಾಸನದ ಜನತೆಯ ಮೇಲಿನ ಪ್ರೀತಿ ಮತ್ತು ವೇದ ಪ್ರಚಾರ ಮಾಡುವ ಅವರ ದೃಢ ನಿಲುವು ಅವರನ್ನು ಹಾಸನಕ್ಕೆ ಬರುವಂತೆ ಮಾಡಿತು. ದಿನಾಂಕ 29.09.2012 ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶ್ರೀಯುತರೊಡನೆ ಮಾಧ್ಯಮ-ಸಂವಾದ ನಡೆಯಿತು. ಮುಕ್ತವಾತಾವರಣದಲ್ಲಿ ಅತ್ಯಂತ ಸಂಬ್ರಮದಿಂದ ನಡೆದ ಸಂವಾದದ ಆಡಿಯೋ ಇಲ್ಲಿದೆ.http://www.vedasudhe.com/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%82%e0%b2%b5%e0%b2%be%e0%b2%a6/ ವಿಚಾರ ಮಾಡುವಂತಹ ಎಲ್ಲರೂ ಅತ್ಯಗತ್ಯವಾಗಿ ಕೇಳಲೇ ಬೇಕಾದ ಮಾತುಗಳು. ಎಲ್ಲವೂ 2-3 ನಿಮಿಷಗಳ ಆಡಿಯೋ ಕ್ಲಿಪ್ ಗಳು. ಕೇಳಿ ,ನಿಮ್ಮ ಅಭಿಪ್ರಾಯ ತಿಳಿಸಿ.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರಾಸ್ತಾವಿಕ ನುಡಿ:
ಪ್ರಶ್ನೆ-2 ವೇದಾಧ್ಯಯನ ಮಾಡಲು ಆಹಾರ ಮತ್ತು ವಸ್ತ್ರ ಸಂಹಿತೆ ಇದೆಯೇ?
ಪ್ರಶ್ನೆ-3 ವೇದ ಎಂದರೆ ಏನು?
ಪ್ರಶ್ನೆ-6 ವೇದಾಭ್ಯಾಸವನ್ನು ಮಾಡಲು ಉಪನಯನ ಸಂಸ್ಕಾರ ಆಗಿರಲೇ ಬೇಕೇ?
ಪ್ರಶ್ನೆ-7 ವೇದಗಳನ್ನು ಪರಮಪ್ರಮಾಣ ಎಂದು ಹೇಗೆ ಹೇಳುವಿರಿ?
ಪ್ರಶ್ನೆ-8 ಜಾತಿ ಪದ್ದತಿ ಹೇಗೆ ಬೆಳೆದು ಬಂತು?
ಪ್ರಶ್ನೆ-9 ವೇದದ ದೃಷ್ಟಿಯಲ್ಲಿ ಶಿಕ್ಷಣ ಅಂದರೆ.....?
Monday, October 1, 2012
ವೇದದಿಂದ ಮಾತ್ರ ಎಲ್ಲರಿಗೂ ಸೂಕ್ತ ಉತ್ತರ ಸಿಗಬಲ್ಲದು
ಶ್ರೀ ವಾಸುದೇವರಾವ್ ಅವರು ವೇದಸುಧೆಯ ಅಭಿಮಾನಿ, ಆರ್ಯಸಮಾಜಿ ಇರಬಹುದು. ಆದರೆ ಇವರು ಆರ್ಯ ಸಮಾಜಿಯ? ಬ್ರಹ್ಮಸಮಾಜಿಯಾ? ಅಥವಾ ಬಲಪಂತೀಯರೇ? ಎಡಪಂತೀಯರೇ? ಯಾವುದರ ಅಗತ್ಯವೂ ವೇದಸುಧೆಗೆ ಇಲ್ಲ. ಸತ್ಯ ಎಂದು ತಿಳಿದದ್ದನ್ನು ಹಂಚಿಕೊಳ್ಳಬೇಕು. ಯಾವ ಪೂರ್ವಾಗ್ರಹವೂ ವೇದಸುಧೆಗೆ ಇಲ್ಲ. ಒಂದೇ ಆಗ್ರಹ" ವೇದವನ್ನು ಅರ್ಥಮಾಡಿಕೊಳ್ಳಬೇಕು. ಕುರುಡುನಂಬಿಕೆ ದೂರವಾಗಬೇಕು. ಇದು ವೇದಸುಧೆಯ ಕಟು ನಿಲುವು. ವೇದಸುಧೆಯಲ್ಲಿ ಪ್ರಕಟವಾದ "ವೇದಗಳು ಎಲ್ಲಾ ಕಾಲಕ್ಕೂ ಪ್ರಸ್ತುತ" ಲೇಖನಕ್ಕೆ ಶ್ರೀಯುತರು ಬರೆದಿರುವ ಕಾಮೆಂಟ್ ಪ್ರತ್ಯೇಕ ಲೇಖನಕ್ಕೆ ಅರ್ಹವಾಗಿ ಕಂಡಿದ್ದರಿಂದ ಇಲ್ಲಿ ಪ್ರಕಟಿಸಲಾಗಿದೆ. ಶ್ರೀಯುತರು ತಿಳಿಸಿರುವ ಘಟನೆಯ ಸಂದರ್ಭದಲ್ಲಿ ಮತ್ಯಾರಾದರೂ ವೇದಸುಧೆಯ ಓದುಗರು ಉಪಸ್ಥಿತರಿದ್ದರೆ ಅಲ್ಲಿನ ಘಟನೆಯ ಬಗ್ಗೆ ವೇದಸುಧೆಯೊಡನೆ ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಬಹುದು.
Some years ago there was a discussion on Hinduism and its relevancy at palace grounds. Dr zakir Naik well known Islamic evengalist was the main speaker. Hundreds of Muslims were there to cheer him. From Hindu side, Ravishankar guruji of Art of Living fame spoke on Hinduism. Ravishankar's bland approach was in total contrast to the aggressive approach of Naik. Needless to say that Ravishankar was a total failure. The problem with Ravishankar was he did not consult of Vedas for point to point reply but relied on some slokas which were neither here nor there.In fact if he had consulted even once the 14th chapter of Satyarth Prakash written by Swami Dayanand and readied himself to
reply he would have won the day. The problem with our Hindu leaders is that they rarely study the religious text of other communities and repeat blindly some of their pet points which needless to say are often anti-vedic and bound to fail. I therefore urge these hindu leaders to study the books of other religions and learn to reply the way Swami Dayanand did in his famous book Satyarth Prakash. The minimum these so called leaders is to read the above book and prepare themselves to confront other religionists, Until this is done take it from me they would never taste success.One point that I would like to tell is these evengelists always avoid scholars from Aryasamaj. Why? Dr Naik was invited to participate in " Shastrath" number of times by Arysamaj bodies but cleverly he avoids but participates eagerly in debates organised by Non-Aryasamaj forums. In all these forums he would win the day because the Hindu bodies relie on trash called Puranas etc.
-Vasudevarao RaoSeptember 30, 2012 8:21 PM
Saturday, September 29, 2012
‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು

ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು ಪ್ರತಿಪಾದಿಸಿದರು.
ಭಾನುವಾರ ವೇದಗಳ ಕುರಿತಾದ ಮುಕ್ತ ಸಂವಾದ ನಡೆಸಿಕೊಡಲಿಕ್ಕಾಗಿ ಇಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಇಂದು ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ವೇದಗಳ ಕುರಿತಾದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಮಾನವ ಜೀವಿಯ ಜತೆಯಾಗಿಯೇ ಇರುವ ಹಾಗೂ ಇರಬೇಕಾದ ಹಲವಾರು ಸತ್ಯ ಸಂಗತಿಗಳ ಕುರಿತು ತಿಳಿವಳಿಕೆ, ಜ್ಞಾನ ಹಾಗೂ ಮುನ್ನಡೆಯಲು ಮಾರ್ಗದರ್ಶನ ಮಾಡುವುದರಿಂದ ವೇದಗಳು ಎಂದೆಂದಿಗೂ ಪ್ರಸ್ತುತವೇ ಎಂದು ಹಲವು ನಿದರ್ಶನಗಳ ಸಹಿತ ತಿಳಿಸಿಕೊಟ್ಟ ಅವರು, ಮತ್ತೊಬ್ಬರನ್ನು ಹಾಳು ಮಾಡುವ ಗುಣ, ಹಿಂಸೆ, ತಾರತಮ್ಯ ಅಥವಾ ಭೇದ ಭಾವ ಇತ್ಯಾದಿ ಯಾವುದೇ ನಕಾರಾತ್ಮಕ ಅಂಶಗಳು ವೇದಗಳಲ್ಲಿಲ್ಲ ಎಂದು ತಿಳಿಸಿದರು. ಮನು ಸ್ಮೃತಿ ಸೇರಿದಂತೆ ಹಲವಾರು ಸ್ಮೃತಿಗಳು ಆಯಾ ಕಾಲ ಕಾಲಮಾನಗಳಿಗೆ ತಕ್ಕಂತೆ ರಚಿತವಾದ ನಿಯಮಗಳೇ ಹೊರತು ಅವು ಪ್ರಸ್ತುತವಾಗುವುದಿಲ್ಲ ಹಾಗೂ ಹಲವಾರು ಕಲಬೆರಕೆ ಅಂಶಗಳೂ ಸಹ ಸೇರಿರುವುದರಿಂದ ಅವು ಪರಮ ಪ್ರಮಾಣವೂ ಆಗುವುದಿಲ್ಲ; ಆದರೆ ಮೂಲ ವೇದಗಳು ಮಾತ್ರ ಎಲ್ಲ ವಿಷಯಗಳಿಗೂ ಪರಮ ಪ್ರಮಾಣವಾಗುತ್ತವೆ. ಏಕೆಂದರೆ ವೇದಗಳೊಂದಿಗೆ ವ್ಯಾಕರಣ, ಶಿಕ್ಷಾ, ಛಂದಸ್ಸು, ಜ್ಯೋತಿಷ (ಖಗೋಳ ವಿಜ್ಞಾನವೇ ಹೊರತು ಈಗಿನ ಫಲ ಜ್ಯೋತಿಷ್ಯ ಅಲ್ಲ), ನಿರುಕ್ತ ಮತ್ತು ಕಲ್ಪ ಎಂಬ ಈ ೬ ವೇದಾಂಗಗಳ ಚೌಕಟ್ಟಿನ ನಡುವೆ ವೇದಗಳು ಬಂಧಿಸಲ್ಪಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಯಾವುದೇ ಕಲಬೆರಕೆಯಾಗಲಿ; ತಿದ್ದುಪಡಿಯಾಗಲಿ; ಬದಲಾವಣೆಯಾಗಲಿ ಮಾಡಲು ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಅವರು ಪರಮ ಪ್ರಮಾಣವೇ ಸರಿ; ಆದರೆ ಇದೇ ಮಾತನ್ನು ಇತರೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಹೇಳುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಲವು ಸಮರ್ಥನೆಗೊಂದಿಗೆ ಉತ್ತರ ಬಿಡಿಸಿಟ್ಟರು.
ಬ್ರೀಟೀಷರ ಮೆಕಾಲೆ ಪ್ರಣೀತವಾದ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಯಾರ ಉದ್ಧಾರವೂ ಸಾಧ್ಯವಿಲ್ಲ. ಈಗಿನ ಎಲ್.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಯಾವುದೇ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಲ್ಲಿ ಹೊರಗಿನ ವಿಷಯಗಳನ್ನು ಬಲವಂತವಾಗಿ ಮನುಷ್ಯನ ಮೆದುಳಿಗೆ ತುರುಕುವುದಾಗಿದೆ. ಆದ್ದರಿಂದ ಅದು ನಿಜವಾದ ಶಿಕ್ಷಣವೇ ಅಲ್ಲ. ಮನುಷ್ಯನೊಳಗಿನ ಪ್ರತಿಭೆ ಅಥವಾ ಶಕ್ತಿಯನ್ನು ಸಮಾಜದ ಉದ್ಧಾರಕ್ಕಾಗಿ ಹೊರಗೆ ಹಾಕುವುದೇ ನಿಜವಾದ ಶಿಕ್ಷಣ. ಆದರೆ ಅದು ನಡೆಯುತ್ತಿಲ್ಲ. ಈಗೆಲ್ಲಾ ಉಲ್ಟಾ ಶಿಕ್ಷಣವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ವಿಷಾದಿಸಿ, ಶಾಲೆಯ ಮೆಟ್ಟಿಲನ್ನೂ ಹತ್ತದವರು ಪ್ರತಿಭಾವಂತರಾಗಿ ಸಮಾಜ ಸುಧಾರಣೆ ಮಾಡಿದವರ ಪಟ್ಟಿಯನ್ನೇ ಮುಂದಿಟ್ಟರು!
ವೇದಗಳು ಜಗತ್ತಿನ ಸರ್ವರಿಗಾಗಿಯೇ ಇವೆ; ವೇದ ಎಂದರೆ ಜ್ಞಾನ ಎಂದರ್ಥ. ಅವು ಎಲ್ಲೂ ಜಾತಿ ಪದ್ಧತಿ, ಲಿಂಗ ಭೇದ, ಮೂರ್ತಿ ಪೂಜೆಗಳನ್ನು ಹೇಳಿಲ್ಲ; ಅವೆಲ್ಲ ಶತಮಾನಗಳಿಂದೀಚೆಗೆ ಹುಟ್ಟಿಕೊಂಡ ಸ್ವಾರ್ಥ ಲಾಲಸೆಯ ಪಿಡುಗುಗಳಾಗಿವೆ. ವೇದಗಳು ವಾಸ್ತವವಾಗಿ ವೇದಗಳು ವರ್ಣಗಳ ಕುರಿತು ಹೇಳುತ್ತವೆ; ವರ್ಣ ಎಂದರೆ ಜಾತಿಯಲ್ಲ; ಅದು ‘ಆಯ್ಕೆ’ ಎಂದರ್ಥ. ಸಾಮಾಜಿಕ ಅನಿಷ್ಟಗಳಾದ ಅಜ್ಞಾನ, ಅನ್ಯಾಯ, ಅಭಾವ ಮತ್ತು ಆಲಸ್ಯಗಳ ವಿರುದ್ಧ ಹೋರಾಡಲು ಯಾರಿಗೆ ಯೋಗ್ಯತೆ ಇದೆಯೋ; ಯಾರು ಆ ರೀತಿ ಹೋರಾಟ ಮಾಡಲು ‘ಆಯ್ಕೆ’ ಮಾಡಿಕೊಳ್ಳುವರೋ ಅಂತಹವರಿಗೆ ಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಹೆಸರು. ಅಂತಹ ಮನೋಭಾವ ಹುಟ್ಟಿನಿಂದಲೇ ಬರಬೇಕೆಂದೇನೂ ಇಲ್ಲ; ಯೋಗ್ಯತೆಯಿಂದ ಗಳಿಸಬೇಕು. ಈ ನಾಲ್ವರಲ್ಲಿ ಯಾರೂ ಜೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ. ಸಮಾಜೋದ್ಧಾರಕ್ಕೆ ಈ ಎಲ್ಲರೂ ಅಗತ್ಯವಾಗಿ ಬೇಕಾದವರೇ ಆಗಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ವರ್ಣಾಶ್ರಮಗಳು ಎಂದೆಂದಿಗೂ ಪ್ರಸ್ತುತ ಎಂದು ಶರ್ಮಾಜಿ ವ್ಯಾಖ್ಯಾನಿಸಿದರು.
ಅರ್ಥಪೂರ್ಣವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ‘ವೇದ ಭಾರತೀ’ ಸಂಚಾಲಕರುಗಳಾದ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು.
Subscribe to:
Comments (Atom)

