Pages

Thursday, April 8, 2010

ದುರ್ಜನರೊಂದಿಗೆ ಸ್ನೇಹ


ದುರ್ಜನೇನ
ಸಮಂ ಸಖ್ಯಂ

ವೈರಂ ಚಾಪಿ ನಕಾರಯೇತ್|
ಉಷ್ಣೋ ದಹತಿ ಚಾಂಗಾರ:

ಶೀತ: ಕೃಷ್ಣಾಯತೇ ಕರಂ||
ದುರ್ಜನರೊಂದಿಗೆ ಸ್ನೇಹವನ್ನಾಗಲೀ ವೈರವನ್ನಾಗಲೀಮಾಡಕೂಡದು.

ಉರಿವ ಕೆಂಡ ಕೈಸುಟ್ಟರೆ, ತಣ್ಣಗಿನ ಇದ್ದಿಲು ಕೈಯನ್ನುಕಪ್ಪು ಮಾಡುತ್ತದೆ .

2 comments:

  1. ಕೆಂಡ ಬಿಸಿ ಇದ್ದಾಗ ಕೈಸುಡುತ್ತದೆ, ತಣ್ಣಗಾದಾಗ ಕಪ್ಪು ಮಸಿ ಕೈಗೆ ತಾಗುತದೆ ಹೇಗೋ ಹಾಗೇ ದುರ್ಜನರ ಸಹವಾಸ, ಅವರ ಸ್ನೇಹ ಅಥವಾ ವೈರ ಎರಡೂ ಸಲ್ಲ ಅಂದರೆ

    ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ
    ದುರ್ಜನರ ಸಹವಾಸ ಹೆಜ್ಜೇನು ಕಡಿದಂತೆ

    ಇದನ್ನೇ ನಮ್ಮ ಆಡುಭಾಷೆಯಲ್ಲಿ ಸಹಿಸಲಾರದ್ದು ಎನ್ನುವ ಸಲುವಾಗಿ ' ಬಿಸಿತುಪ್ಪ ' ಎನ್ನುತ್ತಾರೆ , 'ಜಿಡ್ಡು ವಾಸನೆ ತುಪ್ಪ' ಕೂಡ ಹಾಗೇ ಅಲ್ಲವೇ ?

    ಅಲ್ಲವೇ, ಸುಭಾಷಿತ ಎಷ್ಟು ರಸವತ್ತಾಗಿರುತ್ತದೆ ನೋಡಿ, ಶ್ರೀಧರ್ ಸಾಹೇಬರೇ ಧನ್ಯವಾದಗಳು

    ReplyDelete