ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, April 8, 2010

ಹೊಸಬೆಳಕು

ವೇದಾಭಿಮಾನಿಗಳಲ್ಲಿ ವಿನಮ್ರ ವಿನಂತಿ. ವೇದಸುಧೆಯು ಆರಂಭವಾಗಿರುವುದೇ ಎಲ್ಲರಿಗಾಗಿ ವೇದ ಎಂಬ ಉದ್ಧೇಶದೊಡನೆ. ವೇದಾಧ್ಯಾಯೀ ಸುಧಾಕರಶರ್ಮರೇ ಇದಕ್ಕೆ ಪ್ರೇರಣೆ. ಶರ್ಮರು ಇದೇ ಉದ್ಧೇಶ ಹೊಂದಿರುವ "ಹೊಸಬೆಳಕು " ಎಂಬ ಒಂದು ದಾರಾವಾಹಿಯ ತಯಾರಿಯಲ್ಲಿದ್ದುದರಿಂದ ಅವರಿಂದ ಬರಹಗಳು ಹೆಚ್ಚು ಪ್ರಕಟವಾಗಲಿಲ್ಲ. ಅವರ ಕೆಲವು ವೀಡಿಯೋ ಗಳನ್ನು ಹಾಕಲಾಗಿದೆ ಮತ್ತು ಬಿನ್ ಫೈರ್ ಡಾಟ್ ಕಾಮ್ ನಲ್ಲಿ ಪೇರಿಸಿರುವ ಶರ್ಮರ ಉಪನ್ಯಾಸದ ವಿವರಗಳನ್ನು " ದ್ವನಿಮುದ್ರಿತ ಉಪನ್ಯಾಸಗಳು ಮಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಅಲ್ಲಿಂದಲೇ ನೀವು ಬಿನ್ಫೈರ್ ಡಾಟ್ ಕಾಮ್ ಪ್ರವೇಶಿಸಿ ಉಪನ್ಯಾಸಗಳನ್ನು ಆಲಿಸಬಹುದು.ಹೊಸಬೆಳಕು ದಾರಾವಾಹಿಯ ವಿವರಗಳು ವೇದಸುಧೆಯಲ್ಲೂ ಪ್ರಕಟವಾಗಲಿದೆ. ಯಾರೇ ವೇದ ವಿದ್ವಾಂಸರ ಬರಹಗಳಿಗೂ ವೇದಸುಧೆಯಲ್ಲಿ ಸ್ವಾಗತವಿದೆ.ಬರಹಗಳನ್ನು ವೇದಸುಧೆಗೆ ಮೇಲ್ ಮಾಡಬಹುದು.
ಇಂದು ಶರ್ಮರು ದೂರವಾಣಿಯ ಮೂಲಕ ವೇದಸುಧೆಯನ್ನು ಸಂಪರ್ಕಿಸಿ ಓದುಗರಿಂದ ಏನೇ ಸಂದೇಹಗಳಿದ್ದರೂ ಉತ್ತರಿಸುವುದಾಗಿ ಪುನ: ಒತ್ತಿ ಹೇಳಿದ್ದಾರೆ. ಆದ್ದರಿಂದ ವೇದಗಳ ಬಗ್ಗೆ ಪ್ರಶ್ನೆಗಳನ್ನು ನೀವು vedasudhe@gmail.com ಗೆ ಮೇಲ್ ಕಳುಹಿಸುವುದರ ಮೂಲಕ ಕೇಳಬೇಕಾಗಿ ವಿನಂತಿ.

No comments:

Post a Comment