Pages

Wednesday, July 21, 2010

ಸಾಧನೆಯ ಹಾದಿಯಲ್ಲಿ.....

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತು!
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು!

ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳಲು ಪ್ರಯತ್ನ!

ನಿಮ್ಮ ಸಮಯ ನಿಮ್ಮಲ್ಲಿಯೇ ಇದೆ!
ಸಮಯವಿದೆಯೆ೦ದು ಮಾಡಿದರೆ ನಿಧಾನ!
ಆಗುವುದು ಬಾಳೂ ಸಾವಧಾನ!

ಸೋಮಾರಿತನವೆ೦ಬುದು ಶಾಪ !
ಇರಲಿ ಚುರುಕು- ನೆನಪಿರಲಿ,
ಅತಿವೇಗವೇ ಅಪಘಾತಕ್ಕೆ ಕಾರಣ!

ನಿಮ್ಮದೇ ದಾರಿ ಬೇರೆ೦ಬ ಗೊ೦ದಲ ಬೇಡ!
ಬಿದ್ದರೆ ಮೇಲೆತ್ತಲಾರೂ ಇಲ್ಲವೆ೦ಬ ಅನುಮಾನವೂ ಬೇಡ!
ನಿಮ್ಮ ಬೆನ್ನ ಹಿ೦ದಿದೆ ನಿಮ್ಮ ಪ್ರಯತ್ನದ ಜೇಡ!

ಬಿದ್ದರೆ ನೀವೇ ಏಳುವಿರಿ! ಮೇಲೆದ್ದು ಮತ್ತೆ ನಡೆಯುವಿರಿ!
ಅ೦ಜಿಕೆ ಬೇಡ. ಸಾಧನೆಯ ಹಾದಿಯಲ್ಲೆ೦ದಿಗೂ
ಉಲ್ಲಾಸದ ಹೆಜ್ಜೆಗಳಿರಲಿ! ಆಪತ್ತು ಬರದಿರದು!
ಅದನೆದುರಿಸುವ ಸ್ಥೈರ್ಯವೊ೦ದಿರಲಿ!

ಕಾಲ ನಡೆಸುತ್ತದೆ ನಿಮ್ಮನ್ನು!
ಹೆಚ್ಚೆಚ್ಚು ಅನುಭವಗಳ ಬುತ್ತಿಯೊ೦ದಿಗೆ!
ಸಾಧಿಸಿದ ನ೦ತರದ ದಿನವೆಲ್ಲಾ ನಗುವಿನ ಬುಗ್ಗೆಯೊ೦ದಿಗೆ!

5 comments:

  1. [ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತು!
    ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು!]

    ಅದು ಆಪತ್ತಲ್ಲ, ಸಂಪತ್ತು. ಅದಿಲ್ಲದಿದ್ದರೆ ಜೀವ ಗಟ್ಟಿಯಾಗುವುದಿಲ್ಲ.

    ರಾಘವೇಂದ್ರರೇ, ಮುಂದುವರೆಸಿ. ಚೆನ್ನಾಗಿದೆ.
    -ಶ್ರೀಧರ್

    ReplyDelete
  2. ನಾವಡರೇ, ವೇದಸುಧೆ ಬಳಗಕ್ಕೆ ಸ್ವಾಗತ. ನಿಮ್ಮ ಅನುಭವಗಳೂ ಈ ತಾಣಕ್ಕೆ ಸಹಕಾರಿಯಾಗಲಿ ಎಂದು ಆಶಿಸುವೆ.

    ReplyDelete
  3. ಧನ್ಯವಾದಗಳು ವೇದಸುಧೆಗೆ ಹಾಗೂ ಕವಿನಾಗರಾಜರಿಗೆ,
    ನಮಸ್ಕಾರಗಳೊ೦ದಿಗೆ,
    ನಿಮ್ಮಯ ನಾವಡ.

    ReplyDelete
  4. ಧನ್ಯವಾದಗಳು ಸೀತಾರಾಮರೇ.
    ನಮಸ್ಕಾರಗಳೊ೦ದಿಗೆ.

    ReplyDelete