Pages

Thursday, July 29, 2010

ಸ್ವಾರ್ಥ

ಸ್ವಾರ್ಥ
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು
ಅಪ್ಪ ಅಮ್ಮರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗು ಬಂದೀತೆಂದು ಹಲ್ಲು ಮುರಿದಿತ್ತು
ಓಡಿ ಹೋದಾರೆಂದು ಕಾಲು ತುಂಡರಿಸಿತ್ತು.
ಬೇಡವೆಂದವರ ಕೈಯ ಕಡಿದಿತ್ತು
ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು

-ಕ.ವೆಂ.ನಾಗರಾಜ್

1 comment:

  1. ಸ್ವಾರ್ಥದ ಜೊತೆಗೆ ದ್ವೇಷವೂ ಕೂಡಿದಾಗ ಆಗಬಹುದಾದ ಅನಾಹುತಗಳನ್ನು ಅನಾವರಣಗೊಳಿಸಿದ್ದೀರಿ.
    ಚೆನ್ನಾಗಿದೆ, ನಾಗರಾಜ್, ಹೊರಬೀಳಲಿ ನಿಮ್ಮ ಬತ್ತಳಿಕೆಯಲ್ಲಿರುವುದೆಲ್ಲಾ!

    ReplyDelete