Pages

Sunday, August 15, 2010

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು \
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ

4 comments:

  1. ಕಗ್ಗಕ್ಕೇ ಲಗ್ಗೆ!

    ReplyDelete
  2. ಅಡಿಗಡಿಗೆ ಕಾಡಿ ಶಿರನರವ ತೀಡಿ
    ಮಿಡಿದಿಹುದು ಉಡಿಯೊಳಗಿನ ಕಿಡಿಯು
    ಗಡಿಬಿಡಿಯಡಲಡಿಯಿಡದೆ ತಡೆತಡೆದು
    ಸಿಡಿನುಡಿಯ ನೀಡು ಮುದನುಡಿಯ ಮೂಢ
    ......ಒಂದು ಪದವನ್ನು ಹೀಗೆ ಬದಲಿಸಿದರೆ?

    ReplyDelete
  3. ನೀವು ಸೂಚಿಸಿದ ಬದಲಾವಣೆ ಸಹ ಸೂಕ್ತ. ಸಿಡಿನುಡಿಗೆ ಸಿಹಿನುಡಿ ಹೊಂದಿಕೊಳ್ಳುತ್ತದೆ. ಮುದ ಎನ್ನುವುದು ಮೂಢನಿಗೆ ಹೊಂದಿಕೊಳ್ಳಬಹುದು.

    ReplyDelete
  4. "ಅದರದು"-ಬಹುಶ: "ಅದುರದು" ಆಗಬೇಕಿತ್ತೇನೋ?

    ಚೆಂದದ ಚುಟುಕುಗಳು!

    ReplyDelete