ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Friday, August 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ

*************

-ಕವಿನಾಗರಾಜ್.

5 comments:

  1. ಕೊನೆಯದು ತುಂಬಾ ಚೆನ್ನಾಗಿದೆ. ಒಳ್ಳೆ ಚುಟುಕುಗಳು.

    ReplyDelete
  2. ಧನ್ಯವಾದಗಳು ಶ್ರೀಯುತ ಭಟ್ಟರು ಮತ್ತು ಸೀತಾರಾಮರಿಗೆ.

    ReplyDelete
  3. ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ , ಭೇಟಿ ಹೀಗೇ ಮುಂದುವರೆಯುತ್ತಿರಲಿ . ನಿಮ್ಮ ವೇದಜೀವನ, ಕವಿಮನ ಗಳಿಗೆ ಬೇಟಿ ಕೊಟ್ಟೆ . ತುಂಬಾ ಪ್ರಭುದ್ದವಾದ ಬರಹ , ನಾವೆಲ್ಲಾ ಇನ್ನೂ ಕಲಿಯುವುದಿದೆ ನಿಮ್ಮಿಂದ . ಧನ್ಯವಾದಗಳು

    ReplyDelete