Pages

Sunday, August 29, 2010

ಮೂಢ ಉವಾಚ -5

ಬಾಳು
ಬಾರದದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ


ತನ್ನತನ
ಸ್ವಾಭಿಮಾನಿಯ ಜಗವು ಗುರುತಿಪುದು
ಹಸಿವಾದರೂ ಹುಲಿಯು ಹುಲ್ಲು ತಿನ್ನದು
ಕೊಂಡಾಡಿದರೂ ಶಿರ ಚೆಂಡಾಡಿದರೂ
ತನ್ನತನವ ಉಳಿಸಿಕೊಳ್ಳೆಲೋ ಮೂಢ


ನಡೆ ನುಡಿ
ಸಲ್ಲದ ನಡೆಯು ತೋರಿಕೆಯ ಜಪತಪವು
ಪರರ ಮೆಚ್ಚಿಸಲು ಡಂಭದಾಚರಣೆಯು
ಹಿತಕಾಯದು ಮರುಳೆ ಮತಿ ನೀಡದು
ಕಪಟ ಫಲಕಾಗಿ ಬಳಲದಿರು ಮೂಢ


ಹಸಿವು
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡ ಬೇಡ
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ
********
-ಕವಿನಾಗರಾಜ್.

2 comments:

  1. ಒಂದಕ್ಕಿಂತ ಒಂದು ಅರ್ಥಪುರಿತವಾಗಿವೆ.

    ReplyDelete
  2. ಧನ್ಯವಾದಗಳು, ಸೀತಾರಾಮರೇ.

    ReplyDelete