ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, November 19, 2010

ಮೂಢ ಉವಾಚ -12

ಮೂಢ ಉವಾಚ -12ಮತಿಗೆಟ್ಟು ಅರಚಾಡಿ ಬಂದ ಫಲವೇನು?
ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?||
ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?|
ಸಮಚಿತ್ತದಕ್ಕರೆಯೊಂದೆ ಒಲಿಸುವುದು ಮೂಢ||


ನೀ ಸರಿಯಾಗಿದ್ದರದುವೆ ಸಾಕು|
ಪರರ ಗೊಡವೆ ನಿನಗೇಕೆ ಬೇಕು?||
ತಿದ್ದುವ ಹಂಬಲಕೆ ಕಡಿವಾಣ ಹಾಕು|
ಮನವನನುಗೊಳಿಸಿ ಶಾಂತನಿರು ಮೂಢ||


ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?
ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು|
ಪಾತ್ರಾಪಾತ್ರರನರಿತಡಿಯಿಡು ಮೂಢ||


ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ|
ಮನೆಮಂದಿಯೇ ನಿನ್ನ ಹೀಗಳೆಯುತಿರಲಿ||
ಕೆರಳದಿರಲಿ ಕೊರಗದಿರಲಿ ಮನವು|
ಧೃತಿಗೆಟ್ಟು ದಾರಿ ತಪ್ಪದಿರಲಿ ಮೂಢ||
**************
-ಕವಿನಾಗರಾಜ್.

No comments:

Post a Comment