Pages

Thursday, November 11, 2010

ಇದ್ದರಿರಬೇಕು ನಿನ್ನಂತೆ



ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|
ನೀನಿರುವ ಕಾಲದಲಿ ಪರಿಮಳವ ಹರಡಿ
ಬಹುಬೇಗ ನೀ ಬಾಡುವೆಯಲ್ಲಾ|
ನಿನ್ನನಾರು ಬಹುಕಾಲ ಇರಬೇಡವೆಂದವರು|
ಇದ್ದರಿರಬೇಕು.......

ನಿನ್ನನೇ ತೇಯುತ್ತಾ ಕರಗಿಹೋಗುವೆ ನೀನು|
ಅಳಿಯುವಾಗಲು ಅಳದೆ ಕೊಡುವೆ ಶ್ರೀಗಂಧವನು|
ನಿನ್ನ ಕೊರಡೆಂದ ನಾ ಕೊನೆಗಾಲದಲ್ಲಿ
ಸುಟ್ಟು ಬೂದಿಯಾಗದಿರೆ ಕೊಳೆತು ನಾರುವೆನಿಲ್ಲಿ|
ಇದ್ದರಿರಬೇಕು.......

ನಿನ್ನನೇ ಉರಿಸುತ್ತಾ ಕೊಡುವೆ ಬೆಳಕನ್ನು|
ನಿನ್ನನರಿಯದೆ ಆದೆ ಬಿರುಗಾಳಿ ನಾನು|
ಭೇದಭಾವ ಅರಿಯದ ಜ್ಯೋತಿ ನೀನು|
ನಿನ್ನ ಬೆಳಕಲಿ ಬದುಕು ಸವೆಸುವವ ನಾನು|
ಇದ್ದರಿರಬೇಕು.......

-----------------------------

ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾರಮೇಶ್

3 comments:

  1. ಶ್ರೀಧರ್, ಭಾವನೆಗಳಿರಬೇಕು, ನಿಮ್ಮಂತೆ.

    ReplyDelete
  2. ಭಗವಂತನಿಗಾಗಿ ತೇಯುವ ಗಂಧ, ಉರಿಯುವ ಕರ್ಪೂರ ತಮ್ಮ ಕರಗುವಿಕೆಯಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳತ್ತವೆ. ಕೊನೆಯದಾಗಿ ಕರ್ಪೂರದಾರತಿಯನ್ನು ಮಾಡುವ ಉದ್ದೇಶವೇ ಅದು,ಹೇಗೆ ಕರ್ಪೂರ ಬೆಳಗಿ ಎಲ್ಲರನ್ನೂ ರಂಜಿಸಿ ತನ್ನನ್ನು ತಾನೇ ಉರಿಸಿ ಆರಿಹೋಗುವುದೋ ಹಾಗೆಯೇ ನಮ್ಮ ಜೀವನವೂ ಹಲವು ಒಳ್ಳೆಯದನ್ನು ಸಾಧಿಸಿ ಪರಮಾತ್ಮನಲ್ಲಿ ಲೀನವಾಗಲಿ ಎಂಬುದು ಪ್ರತಿದಿನದ ಬೇಡಿಕೆ;ಬೇಡಿಕೆಯನ್ನು ಬಾಯಲ್ಲಿ ಹೇಳುವ ಬದಲು ಕರ್ಪೂರ ಬೆಳಗುವ ಮೂಲಕ ನಿವೇದಿಸುವುದು ಒಂದು ರಿವಾಜು. ಕವನ ಹಿಡಿಸಿತು, ಧನ್ಯವಾದಗಳು

    ReplyDelete
  3. ಶ್ರೀ ನಾಗರಾಜ್ ಮತ್ತು ಶ್ರೀ ಭಟ್ಟರೇ,
    ಭಾವನೆಯೇ ಬಂಡವಾಳವೆಂದು ಈಗಾಗಲೇ ನನ್ನ ಬಂಡವಾಳ ಬಿಚ್ಚಿಟ್ಟಿರುವೆ.ಮೆಚ್ಚಿದ್ದಕ್ಕೆ ಆಭಾರಿ.ಅಂತೂ ವೇದಸುಧೆಯಲ್ಲಿ ನಿಮ್ಮಂತವರೆಲ್ಲಾ ಬರೆಯುತ್ತಿರುವುದರಿಂದ ನಾನು ಹೆಚ್ಚು ಶ್ರಮಪಡುತ್ತಿಲ್ಲ. ಯಾವಾಗಲಾದರೊಮ್ಮೆ ಭಾವನೆಗಳು ಸ್ಫುರಿಸಿದಾಗ ಅದಕ್ಕೆ ಅಕ್ಷರ ಕೊಡುವ ಕೆಲಸ ಮಾಡುವೆ ಅಷ್ಟೆ.

    ReplyDelete