ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, November 5, 2010

ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು

ಪ್ರಿಯ ಬಂಧುಗಳೇ,
ನನ್ನ ಮಿತ್ರರಾದ ಶ್ರೀ ರಾಮ್ ಪ್ರಸಾದ್, ಶ್ರೀ ರಾಕೇಶ್ ಹಾಗೂ ನನ್ನ ಮಗ ಶ್ರೀಕಂಠ-ಇವರುಗಳು ನನಗೊಂದು ಮೇಲ್ ಕಳುಹಿಸಿ ನನ್ನ ಆರ್ಕುಟ್ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಅಶ್ಲೀಲ ಕೊಂಡಿಯೊಂದನ್ನು ಹಲವರಿಗೆ ಮೇಲ್ ಮಾಡಿರುವ ಬಗ್ಗೆ ಎಚ್ಛರಿಸಿದ್ದಾರೆ. ಅಂತರ್ಜಾಲದ ಸದುಪಯೋಗ ಪಡಿಸಿಕೊಳ್ಳಲು ಕೆಲವರಿಂದ ಪ್ರಯತ್ನ ಸಾಗುತ್ತಿದ್ದರೆ, ಇನ್ನು ಕೆಲವರು ಅದರ ದುರುಪಯೋಗ ಮಾಡುತ್ತಿದ್ದು ಕಿರಿಕಿರಿಗೆ ಕಾರಣರಾಗುತ್ತಾರೆ. ಅಂತೂ ಎಲ್ಲರಿಗೂ ಆ ಭಗವಂತನು ಸನ್ಮತಿ ಕೊಡಲೆಂದು ಪ್ರಾರ್ಥಿಸುತ್ತಾ, ವೇದಸುಧೆಯ ಅಭಿಮಾನಿಗಳಿಗೆ ಯಾರಿಗಾದರೂ ಈ ರೀತಿಯ ಕೊ೦ಡಿ  ಬಂದಿದ್ದರೆ  ಅದನ್ನು ಶಾಶ್ವತವಾಗಿ ಅಳಿಸಿ ವೇದಸುಧೆಯ ಸದ್ವಿಚಾರಗಳನ್ನು ಸ್ವೀಕರಿಸಬೇಕಾಗಿ ಕೋರುವೆ.ಅಂತೂ ಆರ್ಕುಟ್ ಅಕೌಂಟ್ ನ್ನು ಶಾಶ್ವತವಾಗಿ ಡಿಲೀಟ್ ಮಾಡಿ ನಿಟ್ಟುಸಿರು ಬಿಟ್ಟಿರುವೆ. ಅನಿವಾರ್ಯವಾಗಿ ಎಲ್ಲಾ ಪಾಸ್ ವರ್ಡ್ ಬದಲಿಸಬೇಕಾಯ್ತು.ಒಂದು ಅಂಶವನ್ನಂತೂ ಈ ಘಟನೆ ಸಾಬೀತು ಪಡಿಸಿತು-" ಸಂವೇದನಾಶೀಲ ಸ್ನೇಹಿತರು ಕಾಲಕಾಲದಲ್ಲಿ ಎಚ್ಛರಿಸುತ್ತಾ ಮಾರ್ಗದರ್ಶನ ಮಾಡುತ್ತಾರೆ". 
-ಶ್ರೀಧರ್

1 comment:

  1. ಆಘಾತಕಾರಿ ವಿಷಯ. ಆದರೆ, ನೀವಂದಂತೆ [[ಸಂವೇದನಾಶೀಲ ಸ್ನೇಹಿತರು ಕಾಲಕಾಲದಲ್ಲಿ ಎಚ್ಛರಿಸುತ್ತಾ ಮಾರ್ಗದರ್ಶನ ಮಾಡುತ್ತಾರೆ]] ಎಂಬುದು ನಿಜ.

    ReplyDelete