ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Friday, November 5, 2010

ಮೂಢ ಉವಾಚ

ಮೂಢ ಉವಾಚ -10

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ|
ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ||
ನಿಂತ ನೀರು ಕೊಳೆತು ನಾರುವುದು ನೋಡ|
ಕೂಡಿಟ್ಟವರ ಪಾಡು ಬೇರಲ್ಲ ಮೂಢ||


ಆಳಿದವರಳಿದುಳಿಸಿಹುದೇನು ಕೇಳು|
ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?
ಅವಗುಣವ ಶಪಿಸಿ ಜನರು ಗುಣವ ನೆನೆವರು|
ಎರಡು ದಿನದಲಿ ಎಲ್ಲ ಮರೆಯುವರು ಮೂಢ||
*****************
-ಕವಿನಾಗರಾಜ್.

2 comments:

  1. ಚಿಕ್ಕದಾಗಿ,ಚೊಕ್ಕದಾಗಿ,ಅದೆಷ್ಟು ಚೆಂದವಿದೆಯೆಂದರೆ "ಬಣ್ಣಿಸಲಸದಳವು"

    ReplyDelete
  2. ಚಿಕ್ಕ, ಚೊಕ್ಕ, ಚೆಂದದ ಪ್ರತಿಕ್ರಿಯೆಗೆ ವಂದನೆ.

    ReplyDelete