ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, November 20, 2010

ಇಬ್ಬರು ಮಿತ್ರರನ್ನು ವೇದಸುಧೆಬಳಗಕ್ಕೆ ಸ್ವಾಗತಿಸೋಣ

ಶ್ರೀ ಹೆಚ್.ಎನ್.ಪ್ರಕಾಶ್:
ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಣೆ. ಸಂಗೀತ ಗಾರರು. ಹಿಂದೂಸ್ಥಾನೀ ಸಂಗೀತದಲ್ಲಿ ಆಸಕ್ತಿ. ಅಂತರ್ಜಾಲದಲ್ಲಿ ಹಲವಾರು ಮಿತ್ರರನ್ನು ಹೊಂದಿದ್ದು,ಇವರ ವಾರದ ಪತ್ರ ತಪ್ಪದೆ ಹಲವಾರು ವರ್ಷಗಳಿಂದ ನಿರಂತರವಾಗಿ ಸ್ನೇಹಿತರನ್ನು ತಲುಪುತ್ತಿದೆ.ಚಿಂತಕರು,ಆಧ್ಯಾತ್ಮಿಕ ಚಟುವಟಿಕೆಗಳು  ಮತ್ತು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ವಿಶಿಷ್ಟವಾಗಿ ತೊಡಗಿಸಿಕೊಂಡಿರುವ ಶ್ರೀಯುತರು  ಸಾಹಿತಿಗಳೂ ಹೌದು.ಇನ್ನು ಮುಂದೆ ಸಿಂಧು ಪುಟದಲ್ಲಿ ಬರೆಯಲಿರುವ ಶ್ರೀಯುತರ ಗಾಯನವನ್ನೂ ವೇದಸುಧೆಯಲ್ಲಿ ಮುಂದೆ ಕೇಳೋಣ.

ಶ್ರೀ ಕೆ.ವಿ. ರಾಮಸ್ವಾಮಿ:
ಹಾಸನದ ಕೊಥಾರಿ ಕಾಫೀ ಕ್ಯೂರಿಂಗ್ ವರ್ಕ್ಸ್ ನಲ್ಲಿ ಉದ್ಯೋಗಿಗಳಾಗಿದ್ದ ಇವರು ಪ್ರಸ್ತುತ ಹಾಸನದಲ್ಲಿ ಕ.ವಿ.ಪ್ರ.ನಿ.ನಿ, ನೌಕರರ ಸಹಕಾರ ಸಂಘದಲ್ಲಿ ಲೆಕ್ಖ ಪರಿಶೋಧಕರು. ಸಾಮಾಜಿಕ-ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಯುತರು  ಅಧ್ಯಾತ್ಮದಲ್ಲಿ ಆಸಕ್ತಿಯುಳ್ಳವರು.ಮನೆಯಲ್ಲಿ ಇಂತರನೆಟ್ ಸೌಲಭ್ಯವಿಲ್ಲದಿದ್ದರೂ ಕೂಡ ತಾವು ಬರೆದ ಚಿಂತನೆಗಳನ್ನು ಸಿ.ಡಿ ಮೂಲಕ ವೇದಸುಧೆಯಲ್ಲಿ ಹಂಚಿಕೊಳ್ಳಲಿರುವರು.
ಈ ಇಬ್ಬರೂ ಮಿತ್ರರಿಗೆ ವೇದಸುಧೆಬಳಗದ ಪರವಾಗಿ ಹೃತ್ಪೂರ್ವಕ ಸ್ವಾಗತ.

2 comments:

  1. ಶ್ರೀ ಹೆಚ್.ಎನ್.ಪ್ರಕಾಶ್ ಮತ್ತು ಶ್ರೀ ಕೆ.ವಿ. ರಾಮಸ್ವಾಮಿ ಅವರಿಗೆ ವೇದಸುಧೆಗೆ ಸ್ವಾಗತ.

    ReplyDelete
  2. ವೇದಸುಧೆ ಬಳಗಕ್ಕೆ ನೂತನ ಮಿತ್ರದ್ವಯರಿಗೆ ಸ್ವಾಗತ. ನಿಮ್ಮಿಂದ ವೇದಸುಧೆಯ ಪ್ರಭೆ ಬೆಳಗಲಿ.

    ReplyDelete