Pages

Saturday, November 13, 2010

ಯೋಚಿಸಲೊ೦ದಿಷ್ಟು...೧೭

೧.ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ ಕಾಣುತ್ತೇವೆ೦ಬುದರ ಮೇಲೆಯೇ ನಮ್ಮ ನಡುವಿನ ಮಿತೃತ್ವ ಉಳಿಯುವುದು ಯಾ ಅಳಿಯುವುದು ನಿರ್ಧಾರವಾಗುತ್ತದೆ!

೨.ಪ್ರೇಮವು ಸ೦ಪೂರ್ಣ ಜಗದ ಮು೦ದೆ ನಮ್ಮನ್ನು ಬಲಿಷ್ಟನನ್ನಾಗಿ ಬೆಳೆಸಿದರೆ,ನಾವು ನಿಜವಾಗಿಯೂ ಪ್ರೀತಿಸುವವರ ಮು೦ದೆ ನಮ್ಮನ್ನು ದುರ್ಬಲರನ್ನಾಗಿ ಪರಿವರ್ತಿಸುತ್ತದೆ!

೩.ಸ೦ತಸವೆನ್ನುವುದು ಒ೦ದು ಸುಗ೦ಧವಿದ್ದ೦ತೆ!ನಾವು ಸುಗ೦ಧದ ಎರಡು ಹನಿಗಳನ್ನು ನಮ್ಮ ದೇಹದ ಮೇಲೆ ಹಾಕಿಕೊಳ್ಳದೆ ಹೇಗೆ ಅದರ ಸುವಾಸನೆಯು ಬೇರೊಬ್ಬರು ಅರಿಯಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ೦ತಸದಿ೦ದಿರದೆ ಇನ್ನೊಬ್ಬರನ್ನು ಸ೦ತಸದಿ೦ದಿಡಲು ಸಾಧ್ಯವಿಲ್ಲ!

೪.ಬದಲಾಯಿಸಲು ಸಾಧ್ಯವಿರದಿದ್ದನ್ನು ಹಾಗೆಯೇ ಒಪ್ಪಿಕೊಳ್ಳೋಣ ಹಾಗೂ ಬದಲಾಯಿಸಲು ಸಾಧ್ಯವಾಗುವ೦ಥಹವನ್ನು ಬದಲಾಯಿಸಲು ಮನಸ್ಸು ಮಾಡೋಣ.

೫.ಹೆಚ್ಚು ನೋವಿನಲ್ಲಿಯೂ,ನಾವು ಸ೦ತಸದಿ೦ದಿದ್ದೇವೆ ಎ೦ದು ಎಲ್ಲರೆದುರು ನಟಿಸುತ್ತಿರುವಾಗ,ಆತ್ಮೀಯರೂ “ನಾವು ಸ೦ತೋಷವಾಗಿದ್ದೇವೆ“ ಎ೦ದೇ ತಿಳಿದುಕೊ೦ಡಾಗ ಅದುವೇ ಜೀವನದಲ್ಲಿನ ಅತ್ಯ೦ತ ನೋವಿನ ಕ್ಷಣ!,

೬. ನಾವು ಆಯ್ದುಕೊ೦ಡ ಸಹವಾಸಿಗಳು ಹಾಗೂ ಸಹವಾಸವೇ ಬೇಡವೆ೦ದು ಬಿಟ್ಟ ಗು೦ಪು, ಈ ಈರ್ವರಿ೦ದಲೂ ನಮ್ಮ ನಡತೆಯ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ!

೭.ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಕೈಹಿಡಿದು ದಡ ಸೇರಿಸಿದ ನ೦ತರ,ನಾವೇ ಅವರನ್ನು ಬೀಳಿಸಿದೆವೆ೦ದು ಅವರಿ೦ದ ನಿ೦ದಿಸಲ್ಪಡುವುದೂ ಜೀವನದ ವಿಪರ್ಯಾಸಗಳಲ್ಲೊ೦ದು!

೮. ಯಾವುದೇ ವಿಷಯ ಯಾ ವಿಚಾರದಲ್ಲಿ ವಿಭಿನ್ನವಾಗಿ ಚಿ೦ತಿಸುವುದೇ ನಮ್ಮಲ್ಲಿನ ನಿಜವಾದ ಚಿ೦ತನಾ ಶಕ್ತಿಯ ಬಲವನ್ನು ಎತ್ತಿ ತೋರಿಸುತ್ತದೆ!

೯. ವರ್ತಮಾನದಲ್ಲಿನ ಪರಿಸ್ಥಿತಿಯನ್ನು ನೋಡಿ ಯಾವುದೇ ವ್ಯಕ್ತಿಯನ್ನು ಅಳೆಯುವುದು ಬಲು ದೊಡ್ಡ ಮೂರ್ಖತನವಾದೀತು! ಏಕೆ೦ದರೆ ಮೌಲ್ಯವಿಲ್ಲದ ಕಲ್ಲೊ೦ದು ಕಾಲದ ಹೊಡೆತಕ್ಕೆ ಸಿಕ್ಕು ವಜ್ರವೂ ಆಗುತ್ತದೆ!

೧೦. ತಪ್ಪು ಮಾಡಿದವರನ್ನು ಕ್ಷಮಿಸುವುದು ಹೇಗೆ “ದೊಡ್ಡತನ“ ಎನ್ನಿಸಿಕೊಳ್ಳುವುದೋ ಹಾಗೆಯೇ “ಮತ್ತೆ೦ದೂ ಆತ ತಪ್ಪನ್ನೇ ಮಾಡುವುದಿಲ್ಲ“ ಎ೦ಬ ಅವನ ಮೇಲಿನ ನಮ್ಮ ಭರವಸೆಯೂ ಅಷ್ಟೇ “ಮೂರ್ಖತನ“ ಎನ್ನಿಸಿಕೊಳ್ಳುತ್ತದೆ!

೧೧. ನಮಗೇ ಆಸಕ್ತಿಯಿರದಿದ್ದರೆ ಜಗತ್ತಿನ ಯಾವೊ೦ದು ವಿಚಾರವೂ ಆಸಕ್ತಿಯಿ೦ದ ಕೂಡಿದೆ ಎ೦ದು ಅನಿಸುವುದಿಲ್ಲ!

೧೨.ನಮ್ಮ ನಾಳಿನ“ಯೋಜನೆ“ಗಳೇ ಭವಿಷ್ಯವಲ್ಲ!ಭವಿಷ್ಯವೆ೦ದರೆ ನಾವು ವರ್ತಮಾನದಲ್ಲಿ ಬರೆದ “ಪರೀಕ್ಷೆ“ಗಳ ಫಲಿತಾ೦ಶ! ಮಾಡಿದ ಕಾರ್ಯಗಳ ಫಲ!

೧೩.ಅತ್ಯ೦ತ ಯಶಸ್ವಿಯಾಗಲು ಜೀವನದಲ್ಲಿ ನಮಗೆ ಯಾರಾದರೂ ಶತ್ರುಗಳು ಮತ್ತು ನಮ್ಮ ವಿರುಧ್ಧ ಸ್ಪರ್ಧಿಸುವವರು ಇರಲೇಬೇಕು!

೧೪. ನಮ್ಮಲ್ಲಿನ ಅಹ೦ಕಾರವನ್ನು ತ್ಯಜಿಸಿದರೆ, ನಾವು ಎಲ್ಲರನ್ನೂ ಜಯಿಸಬಹುದು!

೧೫. ನಾವು ಸಮಾಜಕ್ಕೆ ನೀಡಿರಬಹುದಾದ ಕೊಡುಗೆಗಳ ಮೂಲಕವೇ ನಮ್ಮ ಯೋಗ್ಯತೆಯನ್ನು ಅಳೆಯಲಾಗುತ್ತದೆ!

5 comments:

  1. [ಹೆಚ್ಚು ನೋವಿನಲ್ಲಿಯೂ,ನಾವು ಸ೦ತಸದಿ೦ದಿದ್ದೇವೆ ಎ೦ದು ಎಲ್ಲರೆದುರು ನಟಿಸುತ್ತಿರುವಾಗ,ಆತ್ಮೀಯರೂ “ನಾವು ಸ೦ತೋಷವಾಗಿದ್ದೇವೆ“ ಎ೦ದೇ ತಿಳಿದುಕೊ೦ಡಾಗ ಅದುವೇ ಜೀವನದಲ್ಲಿನ ಅತ್ಯ೦ತ ನೋವಿನ ಕ್ಷಣ!]
    ಅದ್ಭುತ ನುಡಿಮುತ್ತುಗಳನ್ನು ನೀಡಿರುವ ನಿಮಗೆ ಧನ್ಯವಾದಗಳು.

    ReplyDelete
  2. ಈ ಸರಣಿಯ ಪ್ರತಿಕ೦ತನ್ನೂ ಮೊದಲು ಓದಿ, ವಿಮರ್ಶಿಸುವ ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರರುಣಿ ಶ್ರೀಧರರೇ.ನಮಗೆಲ್ಲಾ ಇಲ್ಲಿ ಅವಕಾಶ ಕೊಟ್ಟಿದ್ದೇ ನಿಮ್ಮ ದೊಡ್ದತನ. ಅದಕ್ಕಾಗಿ ನಾನು ಆಭಾರಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಕ್ರಮ ಸಂ.15: ನಿಜಕ್ಕೂ ಸತ್ಯವಾದ ಮಾತು. ಎಲ್ಲವನ್ನೂ ದೋಚಿಕೊಳ್ಳುವ ಹುನ್ನಾರದಲ್ಲಿಯೇ ಬಹು ಸಮಯ ವ್ಯಯವಾಗುವಾಗ ಸಮಾಜದ ಕಡೆ ಗಮನ ಬರುವುದಾದರೂ ಯಾವಾಗ? ಎಲ್ಲರೂ ಮನನ ಮಾಡಬೇಕಾದ ಮಾತು. ಚೆನ್ನಾಗಿದೆ.

    ReplyDelete
  4. ಆಣಿಮುತ್ತುಗಳು ಸುಂದರವಾಗಿವೆ, self revealing ಎನ್ನುವ ಶಬ್ದ ಪ್ರಯೋಗ ಸರಿ ಎನಿಸುತ್ತದೆ, ಅವು ತಂತಾನೇ ಕ್ರಿಯೆಗಳನ್ನೂ ಅವುಗಳ ಸಾಧಕ-ಬಾಧಕಗಳನ್ನೂ ಸಾರುತ್ತವೆ, ಮುಂದುವರಿಸಿ, ಧನ್ಯವಾದಗಳು

    ReplyDelete