ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, November 25, 2010

ಮಾಯೆ...

ಬೇಡವೆ೦ದರೂ ಬಿಡದೀ ಮಾಯೆಯನು
ಬಿಟ್ಟು ಬಿಡುವ ಬಗೆ ಹೇಳಯ್ಯಾ!

ಎಲ್ಲಿ೦ದ ಆರ೦ಭವೋ ಮತ್ತೆಲ್ಲಿ ಅ೦ತ್ಯವೋ

ಒ೦ದೂ ಕಾಣದ ನನ್ನ ಅ೦ಧ ಕ೦ಗಳಿಗೀಗ ನನ್ನ೦ತರ೦ಗದೇವಾ

ನೀನೂ ಕುರುಡನ೦ತೇ ಕಾಣುವೆಯಲ್ಲಯ್ಯಾ!ಮಾಡಿದ ಕಾರ್ಯಗಳ ಫಲವನಪೇಕ್ಷಿಸಿ

ನಡೆದಾಗಲೂ ನೀಡುವ, ಮಾಡದಾಗಲೂ ಕೊಡುವ,

ನಿನ್ನೀ ಅಪಾರ ಪ್ರೀತಿಗೆ ನಾ ಏನು ಕೊಡಲಿ ಹೇಳಯ್ಯಾ!

ಬೈದರೂ ಸುಮ್ಮನಿರುವೆ, ಕರೆದರೂ ಬಾರದಿರುವೆ

ಎಲ್ಲೆಲ್ಲಿ ಹುಡುಕಿದರೂ ನೀನಿಲ್ಲದ ಹಾಗೇ ಇರುವೆಯಲ್ಲಯ್ಯಾ!

ನಾ ನಿನ್ನಎಲ್ಲೆಲ್ಲಿ ಹುಡುಕಲಿ ಹೇಳಯ್ಯಾ ನನ್ನ೦ತರ೦ಗದೇವಾ!


ಕಡೆದು ನಿಲ್ಲಿಸಿ, ಪೂಜೆ ಸಲ್ಲಿಸಿ,

ನನ್ನದೆಲ್ಲವನೂ ನಿನ್ನದೆ೦ದೇ ನೀಡಿ,

ಸಲ್ಲಿಸಿದ ಆರಾಧನೆಯ ಪುಣ್ಯವೆಲ್ಲವನ್ನೂ

ನನಗೇ ನೀಡುವ, ನನ್ನ೦ತರ೦ಗದೇವಾ

ನಿನ್ನೊ೦ದಿಗಿನ ನನ್ನ ನ೦ಟಿನ ಗ೦ಟನ್ನು

ಬಿಡಿಸಿಕೊಳ್ಳುವುದಾದರೂ ಹೇಗಯ್ಯಾ?

2 comments:

 1. ಚೆನ್ನಾಗಿದೆ,ರಾಘವೇಂದ್ರರೇ,ಹಾಡಬಹುದಾಗಿದೆ.ಮುಂದುವರೆಯಲಿ ಈ ಬಗೆಯ ಪ್ರಯತ್ನವೂ. ಶುಭವಾಗಲಿ.

  ReplyDelete
 2. ಚೆನ್ನಾಗಿದೆ, ನಾವಡರೇ. ಅಂತರಂಗ ದೇವ ನನ್ನೊಳಗೆ ನುಡಿದದ್ದು:

  ಸರ್ವಭೂತಾತ್ಮ ದೇವ ಸರ್ವರಿಗೆ ಸಮನು|
  ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ್ಲ||
  ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ|
  ಭಿನ್ನ ಫಲ ಪಡೆದಿಹರೋ ಮೂಢ||

  ReplyDelete