ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Thursday, November 25, 2010

ಆಶಯ

ಆಶಯ
ನಾವು ಸೈನಿಕ ಪಹರೆ ಪಡೆಯು
ಗಡಿಯ ರಕ್ಷಣೆ  ಧ್ಯೇಯವೂ
ಭಾರತಾಂಬೆಯು ನಮ್ಮ ತಾಯಿಯು
ಮುಡಿಪು ಅವಳಿಗೆ ಕಾಯವೂ  //೧//

ನಾವು ಹರಿಸಿದ ರಕ್ತದಾಣೆ
ಸಲ್ಲದೆಂದಿಗೂ ಹಾನಿಯೂ
ನಮ್ಮ ತ್ಯಾಗ ಬಲಿದಾನದಾಣೆ
ಇರದು ಗಡಿಯಾ ಗ್ಲಾನಿಯೂ  //೨//

ಅಳಿದವರ ಮನೆಮನೆಯ ತ್ಯಾಗವು
ಎಣೆಯೇ ಇಲ್ಲದ ಕಾವ್ಯವೂ
ಧೀರ ತಾಯಿಯ ವೀರ ವನಿತೆಯ
ಹೊಣೆಯೆ ಎಲ್ಲವು ನಿಮ್ಮವೂ  // ೩//

ಇರಲಿಶಾಶ್ವತ ಹಸಿರು ಹೊಲನೆಲ
ನಾದ ರೈತರ ದೇಗುಲ
ನಮ್ಮ ಭಾರತ ವಿಶ್ವ ಸುಂದರ
ಗೆಲ್ಗೆ ಮನುಕುಲಮಂದಿರ  //೫//

 ನಮ್ಮ ಧ್ಯೇಯವು ಒಂದೇ ಎಂದಿಗೂ
ತಾಯ ನೆಲದಾ ರಕ್ಷೆಯೂ
ಹರಸಿ ನಮ್ಮನು  ಇರಲಿಎಂದಿಗು
ನಮ್ಮದದುವೇ ಲಕ್ಷವೂ   //೬//

2 comments:

 1. ಶ್ರೀ ಗೋಪಿನಾಥ್,
  ಹಾಡು ಚೆನ್ನಾಗಿದೆ, ಹಾಡಲು ಸೊಗಸಾಗಿದೆ, ನೀವು ಹಾಡಿ ಅಥವಾ ಹಾಡಿಸಿ ಕ್ಲಿಪ್ ಹಾಕುವಿರಾ? ಅಥವಾ....ಬೇರೆಯವರಿಂದ ರಾಗಹಾಕಿಸಿ,ಹಾಡಸಿ ಕ್ಲಿಪ್ ನಾನು ಹಾಕಲೇ?

  ReplyDelete
 2. ಮಾನ್ಯ ಶ್ರೀಧರ್ ಅವರೇ
  ಕೆಲಸದ ಗಡಿಬಿಡಿಯಿಂದಾಗಿ ಈಗ ನಾನು ವ್ಯಸ್ತ.
  ನೀವೇ ಹಾಡಿಸಿ ಕ್ಲಿಪ್ ಹಾಕಿಸಿ .

  ReplyDelete