Pages

Sunday, December 19, 2010

ಬಲಿವೈಶ್ವದೇವ ಯಜ್ಞ - ಈ ನನ್ನ ಅಭಿಪ್ರಾಯ ಸರಿಯೇ?

ಶ್ರೀ ಸುಧಾಕರ ಶರ್ಮರಿಗೆ  ಮತ್ತು ಶ್ರೀ ಶ್ರೀಧರ್ ರವರಿಗೆ  ನಮಸ್ಕಾರಗಳು.
ನನ್ನ ಒಂದೆರಡು ಪ್ರಶ್ನೆಗಳು: 
ಬಲಿವೈಶ್ವದೇವ ಯಜ್ಞ

1.   ಈಗಿನ ಯಾಂತ್ರಿಕ ಯುಗದಲ್ಲಿ ನೀವು ಹೇಳಿದಂತೆ ಸಮಾಧಾನವಾಗಿ ಟಿವಿ ನೋಡದೆ, ಪೇಪರ್ ಓದದೆ, ಇನ್ನೊಬ್ಬರ ಜೊತೆ ಮಾತಾಡದೆ ಊಟ ಮಾಡುವುದು ಕಷ್ಟ.  ಅದರಲ್ಲೂ ನಾವು ಹೊರಗೆ ಹೋಟೆಲ್ ಮುಂತಾದ ಕಡೆಗಳಲ್ಲಿ ತಿನ್ನುವಾಗ ನಿಂತುಕೊಂಡೆ ತಿನ್ನಬೇಕಾಗುತ್ತದೆ. ಅದೂ ಮಸಾಲೆದೋಸೆ ಇತ್ಯಾದಿ,.....,  ಹಾಗೆ ತಿನ್ನುವಾಗ (ಅಂದರೆ ಒಂದೆರಡು ಅನ್ನದ ಅಗಳು ತಿನ್ನುವ ಬದಲು),  " ಪ್ರಾಣಾಯ ಸ್ವಾಹ....................... " ಮಂತ್ರ ಹೇಳಿಕೊಂಡು ತಿಂದಾಗ  ಏನಾದರೂ  ತೊಂದರೆಯಾಗುತ್ತದೆಯೇ?

2. ಹಿಂದೆ ವೇದಗಳ ಕಾಲದಲ್ಲಿ ಆಹಾರ, ನೀರು, ಗಾಳಿ ಇತ್ಯಾದಿಗಳು ಕಲಬೆರಿಕೆಯಾಗಿರಲಿಲ್ಲ, ಹಾಗಾಗಿ ಅವರು ತಿನ್ನುವ ಆಹಾರವನ್ನು 'ಪ್ರಾಣಾಯ ಸ್ವಾಹ..................' ಎಂದು ತಿನ್ನುತ್ತಿದ್ದರು, ಆದರೆ ಈಗ  ನಾವು ತಿನ್ನುವ ಆಹಾರ, ನೀರು, ಗಾಳಿ ಇತ್ಯಾದಿಗಳು ವಿಷಮಯವಾಗಿದೆ, ಹಾಗಾಗಿ ನಾವು 'ಪ್ರಾಣಾಯ ಸ್ವಾಹ..........' ಎಂದಾಗ  ಅದರಿಂದ ಏನಾದರೂ Negative effect   ಇದೆಯೇ? (ಅಂದರೆ ನನ್ನ ಆಭಿಪ್ರಾಯ "ಹಿಂದೆ ವೇದಗಳ ಕಾಲದಲ್ಲಿ ಜನರು ತಾವು 'ಪ್ರಾಣಾಯಸ್ವಾಹ...... 'ಹೇಳಿ  ಸೇವಿಸಿದ 'ಶುದ್ಧ' ಆಹಾರ ಅಮೃತವಾಗುತ್ತಿತ್ತು, ಈಗ ನಾವು ತಿನ್ನುವ 'ಕಲಬೆರಿಕೆ' ಆಹಾರದಲ್ಲಿ ವಿಷ ತುಂಬಿರುವುದರಿಂದ ಈ 'ಪ್ರಾಣಾಯಸ್ವಾಹ........ ' ಹೇಳದೆ ಇದ್ದರೆ,  ಶರೀರ ವಿಷವನ್ನು ಸಾಧ್ಯವಾದಷ್ಟು ಹೊರಗೆ ಕಳುಹಿಸುತ್ತದೆ, ಈ ಮಂತ್ರ ಹೇಳಿ ತಿಂದರೆ ಅನ್ನದಲ್ಲಿರುವ  ವಿಷ ದೇಹವನ್ನು ವ್ಯಾಪಿಸುತ್ತದೆ." ಈ ನನ್ನ ಅಭಿಪ್ರಾಯ ಸರಿಯೇ?)

ವಂದನೆಗಳೊಂದಿಗೆ
ಜಿ.ಎ.ಸ್. ಶ್ರೀನಾಥ

4 comments:

  1. ನನಗೆ ತಿಳಿದ ಮಟ್ಟಿಗೆ, ಮೊದಲಾಗಿ ನಿಂತು ತಿನ್ನುವುದನ್ನೂ, ಎಡಗೈಲಿ ತಿನ್ನುವುದನ್ನೂ ವೇದ ನಿರಾಕರಿಸುತ್ತದೆ. ಊಟ/ತಿಂಡಿ ಕೂಡ ನಾವು ನಮ್ಮೊಳಗಿನ ಪರಮಾತ್ಮನಿಗೆ ನಿವೇದಿಸುವ ಒಂದು ಕ್ರಿಯೆ. ನೀವೇ ನೋಡಿ: ಆರಾಮಾಗಿ ಒಂದೆಡೆ ಕುಳಿತು ತಿನ್ನುವುದಕ್ಕೂ ಅವಸರದಲ್ಲಿ ತಿನ್ನುವುದಕ್ಕೂ ಬಹಳ ಅಂತರವಿದೆಯಲ್ಲವೇ? ಇದಲ್ಲದೇ ವೇದವನ್ನು ಅನುಸರಿಸುವ ನಾವು ವೇದ ಮಂತ್ರಗಳನ್ನು ಶುದ್ಧ ಕಲ್ಪನೆಯಲ್ಲೇ ಬಳಸಬೇಕೇ ವಿನಃ ಕಲಬೆರಕೆ ಆಹಾರಕ್ಕೆ ಬಳಸಬಾರದೆಂದು ವೇದ ಹೇಳುವುದೂ ಇಲ್ಲ, ಹಾಗೆ ಹೇಳುವುದರಿಂದ ಹಾನಿಯೂ ಆಗುವುದಿಲ್ಲ. ಆದರೆ ಊಟದ ಬದಲು ನಿಂತು ಮಸಾಲೆದೋಸೆಯನ್ನು ತಿನ್ನುವ ಪರಿಸರಕ್ಕೆ ವೇದ ಒಗ್ಗುವುದಿಲ್ಲ, ಹಾಗೆ ಬಳಸಿದರೆ ಅದು ವೇದಮಂತ್ರಗಳಿಗೆ ನಾವು ಮಾಡುವ ಶಿಷ್ಟಾಚಾರದಲ್ಲಿಯ ದೋಷ/ಅಪಚಾರ. ಈ ಕುರಿತು ಶ್ರೀಯುತ ಶರ್ಮರು ತಡವಾಗಿ ಬರೆಯಬಹುದು, ಧನ್ಯವಾದ

    ReplyDelete
  2. ಶ್ರೀ ಶ್ರೀನಾಥ್,
    ನಮಸ್ತೆ,
    ನಿಮ್ಮ ಪ್ರಶ್ನೆಗಳು ಪ್ರಾಮಾಣಿಕವಾಗಿವೆಯಾದರೂ ಮೂಲವನ್ನು ಮರೆತು ಪ್ರಶ್ನೆಗಳು ಮೂಡಿವೆ ಎಂದೇ ನನ್ನ ಅನಿಸಿಕೆ.ಬೆಂಗಳೂರಿನ ಗಡಿಬಿಡಿ ಜೀವನದಲ್ಲಿ ಜನರು "ತಮಗಾಗಿ" ಎಷ್ಟು ಗಂಟೆಗಳನ್ನು ನೀಡಬಲ್ಲರೆಂಬುನ್ನು ನಿರ್ಧರಿಸಿದಮೇಲೆ ಉಳಿದೆಲ್ಲಾ ಪ್ರಶ್ನೆಗಳ ಪರಿಹಾರ ಸಿಗಬಹುದು.ಊಟವೆಂಬುದನ್ನು ಒಂದು ಯಜ್ಞದಂತೆ ಭಾವಿಸಿ ಸಮಾಧಾನಚಿತ್ತದಿಂದ ಊಟಮಾಡಿದರೆ ಮಾತ್ರ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಬಹುದೇ ಹೊರತೂ ಟಿ.ವಿ ನೋಡಿಕೊಂಡೇ ಊಟ ಮಾಡುವುದು ಅನಿವಾರ್ಯ ವೆಂದಾದರೆ ಒಂದನ್ನು ಕಳೆದು ಕೊಳ್ಳುವುದೂ ಅನಿವಾರ್ಯವೇ.ನಮ್ಮ ನಿತ್ಯ ಜೀನನ ಶೈಲಿಯಬಗ್ಗೆ ಒಮ್ಮೆ ವಿವರವಾಗಿ ಚರ್ಚಿಸೋಣ.ಬಹುಷ: ಶರ್ಮರು ಈ ಬಗ್ಗೆ ವಿವರವಾದ ಲೇಖನವನ್ನೇ ಬರೆಯಬಹುದು.

    ReplyDelete
  3. ವಿ.ಆರ್.ಭಟ್ ಮತ್ತು ಶ್ರೀದರ್ ರವರಿಗೆ ಪ್ರಣಾಮಗಳು.

    ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು,

    1. ನಾನು ಈ ಮಂತ್ರವನ್ನು ಊಟ / ತಿಂಡಿ ತಿನ್ನುವಾಗ ಹೇಳಿದರೆ ಆಗುವ ಪರಿಣಾಮ ಓಳ್ಳೆಯದೇ ಆಗಿದೆ. ಅಂದರೆ ಊಟ ಮಾಡಿದ್ದು ಚೆನ್ನಾಗಿ ಜೀರ್ಣವಾಗಿ ಹಸಿವಾಗುತ್ತದೆ. ( ಈ ಮುಂಚೆ ನನಗೆ ಹಸಿವಾಗುತ್ತಿರಲಿಲ್ಲ). ಒಂದೆರಡು ದಿನ ಈ ಮಂತ್ರವನ್ನು ಹೇಳುವುದನ್ನು ಬಿಟ್ಟ ಮೇಲೆ ಹಸಿವೆಯಾಗುವುದು ಕಮ್ಮಿಯಾಗಿದೆ.

    2. ವಾರಕೊಮ್ಮೆ ನಾನು ಬೆಳಿಗ್ಗೆ ತಿಂದರೆ ಮತ್ತೆ ಮಾರನೇ ದಿನ ಬೆಳಿಗ್ಗೆಯವರೆಗೆ ಏನನ್ನೂ ತಿನ್ನುವುದಿಲ್ಲ. ಮುಂಚೆ ಇಡೀದಿನ ಹಸಿವಾಗುತ್ತಿರಲಿಲ್ಲ ಈಗ ಸಂಜೆ ವೇಳೆಗೆ ಹಸಿವಾಗುತ್ತಿದೆ.

    3. ನಾವು ಊಟ ಮಾಡುವಾಗ ಟಿವಿ ನೋಡುತ್ತಿದ್ದರೂ, ಪೇಪರ್ ಓದುತ್ತಿದ್ದರೂ, ಇನ್ನೊಬ್ಬರ ಜೊತೆ ಮಾತನಾಡುತ್ತಿದ್ದರೂ, ಮೊದಲ 5 ತುತ್ತುಗಳನ್ನು ಮಂತ್ರ ಹೇಳಿಕೊಂಡು ತಿನ್ನುವಾಗ ನಮ್ಮ ಗಮನ ಊಟದ ಮೇಲಿರುವುದೇ ಹೊರತು ಟಿವಿ, ಪೇಪರ್ ಇತ್ಯಾದಿಗಳ ಮೇಲಲ್ಲ. ಹಾಗಾಗಿ ಇವುಗಳಿಂದ ಏನೂ ತೊಂದರೆಯಿಲ್ಲ ಎನ್ನುವುದು ನನ್ನ ಅಭಿಪ್ರಾಯ.

    4. ಇನ್ನು ಕಲಬೆರಿಕೆ (ವಿಷಯುಕ್ತ) ಆಹಾರದ ಬಗ್ಗೆ ಬಹುಶಃ ವೈಜ್ಞಾನಿಕವಾಗಿ ಪರೀಕ್ಷಿಸಿಯೇ ಹೇಳಬೇಕಾಗಬಹುದು

    ಇದರ ಬಗ್ಗೆ ಇನ್ನಷ್ಟು ಅನುಭವ / ಮಾಹಿತಿಯಿದ್ದರೆ ಅದನ್ನು ಇಲ್ಲಿ ಹಂಚಿಕೊಳ್ಳಿರೆಂದು ಸ್ನೇಹಿತರಲ್ಲಿ ನನ್ನ ಪ್ರಾರ್ಥನೆ.

    ReplyDelete
  4. ಊಟವೊಂದೇ ಅಲ್ಲ, ಪ್ರತಿಯೊಂದು ಕೆಲಸವನ್ನೂ ಯಜ್ಞದಂತೆ ಮಾಡಬೇಕೆಂಬುದು ವೇದದ ಆದೇಶವಾಗಿದೆ.
    ಯಜ್ಞವೆಂದರೆ ಅತ್ಯುತ್ತಮ ರೀತಿಯಲ್ಲಿ ಮಾಡಿದ ಯಾವುದೇ ಕೆಲಸ.
    "ಯಜ್ಞೋ ವೈ ಶ್ರೇಷ್ಠತಮಂ ಕರ್ಮ"
    ಇನ್ನು ಆಹಾರಸೇವನೆಯ ಬಗ್ಗೆ ವೇದ ಮತ್ತು ಆಯುರ್ವೇದ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು.
    1. ಊಟ ಏಕೆ ಮಾಡಬೇಕು?
    ನಿರಂತರ ಕಾರ್ಯಚಟುವಟಿಕೆಗಳಿಂದ ಕಳೆದುಹೋದ ಶಕ್ತಿಯನ್ನು ಮರುಪೂರೈಕೆ ಮಾಡಲು. (ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಶಕ್ತಿಯಿರಬೇಕು ಎಂಬುದನ್ನು ಮತ್ತ ಹೇಳಬೇಕಿಲ್ಲ).
    2. ಯಾವಾಗ ತಿನ್ನಬೇಕು?
    ಹಸಿವಾದಾಗ. ಹಸಿವೆಯಲ್ಲಿ ಎರಡು ವಿಧ - ನಿಜ ಹಸಿವು, ಕಳ್ಳ ಹಸಿವು!
    ಗಡಿಯಾರ ನೋಡಿ ಊಟ ಮಾಡುವವರಿಗೆ ಆ ಸಮಯಕ್ಕೆ ಸರಿಯಾಗಿ ಹೊಟ್ಟೆಯಲ್ಲಿ ಏನೋ ಒಂದು ತರಹ ಆಗುತ್ತದೆ. ಅದನ್ನು ಹಸಿವೆಂದು ತಿನ್ನುತ್ತಾರೆ. ಇದು ಕಳ್ಳ ಹಸಿವು. ನಮಗೆ ಇಷ್ಟವಾದ ತಿನಿಸನ್ನು ನೋಡಿದಾಗಲೂ ಹಸಿವಿನಂತೆ ಏನೂ
    ಆಗುತ್ತದೆ. ಇದೂ ಕಳ್ಳ ಹಸಿವು.
    ಮೊದಲು ತಿಂದ ಆಹಾರ ಜೀರ್ಣವಾದಮೇಲೆ ಆಹಾರ ತಿನ್ನುವ ಬಯಕೆ ಆದಲ್ಲಿ ಅದು ನಿಜ ಹಸಿವು. ಮೊದಲು ತಿಂದ ಆಹಾರ ಜೀರ್ಣವಾಗಿದೆ ಎಂದು ತಿಳಿಯುವುದು ಹೇಗೆ?
    ಉದ್ಗಾರ ಶುದ್ಧಿರುತ್ಸಾಹೋ ವೇಗೋತ್ಕರ್ಷೋ ಯಥೋಚಿತಃ|
    ಲಘುತಾ ಕ್ಷುತ್ ಪಿಪಾಸಾ ಚ ಜೀರ್ಣಾಹಾರಸ್ಯ ಲಕ್ಷಣಮ್||
    ಉಸಿರು ಶುದ್ಧವಾಗಿರಬೇಕು, ಬಾಯಿ ವಾಸನೆಯಿರಬಾರದು, ಕಮರು ತೇಗು ಮೊದಲಾದವು ಇರಬಾರದು; ಉತ್ಸಾಹ, ಲವಲವಿಕೆ ಇರಬೇಕು; ಮಲಮೂತ್ರಾದಿಗಳು ಕಾಲಕಾಲಕ್ಕೆ ಸರಿಯಾಗಿ ಆಗಿ, ಅವುಗಳ ಶೇಷ ಶರೀರದಲ್ಲಿ ಇರಬಾರದು; ಹಗುರವಾಗಿದೆ ಎನಿಸಬೇಕು, ಮೈ-ಮನಗಳು ಭಾರವಾಗಿವೆ ಎಂದೆನಿಸಬಾರದು; ನೀರನ್ನು ಕುಡಿದರೂ ಅದರ ಸವಿ ನಾಲಿಗೆಗೆ ಅರಿವಾಗಬೇಕು. ಇಂತಹ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಚುಮು ಚುಮು ಎಂದು, ಆಹಾರ ಸೇವಿಸಬೇಕು ಎಂದೆನಿಸಿದರೆ ಅದು ನಿಜವಾದ ಹಸಿವು.!! (ಎಷ್ಟು ಸಲ ನಾವು ಊಟಕ್ಕೆ ಮುಂಚೆ ಎಷ್ಟೆಲ್ಲಾ ಪರಿಶೀಲನೆ ಮಾಡಿದ್ದೇವೆ?! - ನನ್ನನ್ನೂ ಸೇರಿಸಿಕೊಂಡು!)
    3. ಏನು ಸೇವಿಸಬೇಕು?
    ಆಗಲೇ ಹೇಳಿದ ಹಾಗೆ ಸತ್ವಭರಿತವಾದ ಆಹಾರವನ್ನು ಸೇವಿಸಬೇಕು.
    (ಮುಂದುವರೆಸುವೆ)

    ReplyDelete