Pages

Sunday, December 5, 2010

5.12.2010 ರಂದು ಹಾಸನದಲ್ಲಿ ಶುಭಾರಂಭಗೊಂಡ ಶ್ರೀ ರಾಮಕೃಷ್ಣ ಸೇವಾಶ್ರಮ.

ವೇದಿಕೆ

ಸ್ವಾಮಿ ಸುರೇಶಾನಂದಜಿ ಮಹಾರಾಜ್

ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್

ಭಕ್ತವೃಂದ

 ಹಾಸನದ ಎನ್.ಡಿ.ಆರ್.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಆಶ್ರಮಕ್ಕಾಗಿ  ಶ್ರೀ ಪ್ರಸಾದ್ ಇವರು ನೀಡಿರುವ ಕೊಠಡಿಯಲ್ಲಿ ಸ್ಥಾಪಿತವಾಗಿರುವ  ಶ್ರೀ ರಾಮಕೃಷ್ಣ-ವಿವೇಕಾನಂದ ಮತ್ತು ಶಾರದಾದೇವಿ ಯವರ ಭಾವ ಚಿತ್ರ

3 comments:

  1. ಬೆಂಗಳೂರಿನ "ರಾಮಕೃಷ್ಣ ವಿದ್ಯಾರ್ಥಿ ಮಂದಿರಂ" ಹಳೆಯ ವಿದ್ಯಾರ್ಥಿಯಾದ ನನಗೆ ಎರಡು ವರ್ಷಗಳ ಕಾಲ
    ರಾಮಕೃಷ್ಣ ಮಠದ ಒಡನಾಟದ ಭಾಗ್ಯ ಲಭಿಸಿತ್ತು. ಸ್ವಾಮೀ ಜಗದಾತ್ಮಾನಂದರು, ಪುರುಷೋತ್ತಮಾನಂದರು ಮತ್ತು ಹರ್ಷಾನಂದಜಿಯವರೊಂದಿಗೆ ಸಂಭಾಷಿಸುವ,
    ಅವರ ಎದುರಿನಲ್ಲಿ ವೇದ ಮಂತ್ರಗಳ ಪಠಣ ಮಾಡುವ ಭಾಗ್ಯ ಕೂಡ ನನ್ನದಾಗಿತ್ತು. ಕೇವಲ ೩೯ ವರ್ಷ ಮಾತ್ರ ಬದುಕಿ ವಿಶ್ವ ವಿಜೇತರಾದ ಸ್ವಾಮೀ ವಿವೇಕಾನಂದರ ಅದ್ಭುತ ಜೀವನದ ಕುರಿತಾದ
    ಅರಿವು ಮೂಡಿದ್ದು ಅಲ್ಲಿಯೇ. ನೂರು ವರ್ಷಗಳ ಹಿಂದೆಯೇ ಅಮೇರಿಕಾ ದೇಶದಲ್ಲಿ ಪಾದಾರ್ಪಣೆ ಮಾಡಿ ಭಾರತೀಯ ಪರಂಪರೆ ಮತ್ತು ಆಧುನಿಕ ವಿಜ್ಞಾನ ಎರಡರಲ್ಲಿಯೂ ನೂತನ ದೃಷ್ಟಿ-ಸೃಷ್ಟಿ ಮಾಡಿದ
    ವಿವೇಕರ, ರಾಮಕೃಷ್ಣರ ಈ ಸಂಸ್ಥೆ ದೇಶದ ಹೆಮ್ಮೆ. ಇಂತಹ ರಾಮಕೃಷ್ಣ ಆಶ್ರಮ ನಿಮ್ಮಲ್ಲಿ ಪ್ರಾರಂಭ ಆಗಿರುವುದು ಭಾಗ್ಯವೇ ಸರಿ.

    ReplyDelete
  2. ಶ್ರೀ ಶಿವರಾಮ ಭಟ್ಟರೇ, ನಿಮ್ಮ ವಿವರಣಾತ್ಮಕ ಪ್ರತಿಕ್ರಿಯೆಯನ್ನು ಮನಸಾ ಸ್ವಾಗತಿಸುತ್ತೇನೆ. ನನ್ನ ಅಭಿಪ್ರಾಯ ಕೂಡ ಅದೇ ಆಗಿದೆ, ಇವತ್ತಿನ ದಿನದಲ್ಲಿ ನಿಜವಾದ ವಿರಾಗಿಗಳು, ನಿಸ್ವಾರ್ಥ ಕಾವಿಧಾರಿಗಳು ಆಶ್ರಮಗಳಲ್ಲಿದ್ದರೆ ಅವರು ರಾಮಕೃಷ್ಣಾಮದಲ್ಲಿಯೇ ಎಂಬಷ್ಟು ಅಭಿಮಾನ ನನ್ನಲ್ಲಿದೆ. ವೇದಸುಧೆಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ, ನಿಮ್ಮಂತಹ ಹಲವು ಕೈಗಳು ವೇದಸುಧೆಯ ಉದ್ದೇಶವನ್ನು ಕಾರ್ಯಗತಗೊಳಿಸುತ್ತವೆ ಎಂಬ ಅನಿಸಿಕೆ ಕೂಡ ನಮ್ಮೆಲ್ಲರದು. ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  3. ಹೌದು, ಅಕ್ಷರಶಃ ಸತ್ಯ, ಈವತ್ತಿಗೆ ಶ್ರೀರಾಮಕೃಷ್ಣ ಪರಮಹಂಸರಂತೆ ಹಾಗೂ ವಿವೇಕಾನಂದರಂತೆ ಯಾವೊಂದು ಪ್ರಚಾರ ಮತ್ತು ಫಲಾಪೇಕ್ಷೆಯ ಬಯಸದಿರುವ
    ಕಾವಿಧಾರಿಗಳಿದ್ದರೆ, ಅದು ರಾಮಕೃಷ್ಣ ಆಶ್ರಮಗಳಲ್ಲೇ...

    ನನ್ನ ಕೋಣೆಯಲ್ಲಿ ನಿತ್ಯವೂ ನಾನು ಧ್ಯಾನ ಮಾಡುವುದು ಸ್ವಾಮಿವಿವೇಕಾನಂದರ ಫೋಟೋ ಮುಂದೇ.. ಅವರೇ ನನ್ನ ಗುರೂಜಿ...

    ReplyDelete