ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, January 11, 2011

ನನ್ನ೦ತೆ ನನ್ನ ಜಗತ್ತು....

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..

ನನ್ನ೦ತೆ ನನ್ನ ಜಗತ್ತು....
ಇದೇ ನನ್ನ ಜೀವನ ದರ್ಶನ..

ಡಾ||ಜ್ಞಾನದೇವ್

6 comments:

 1. ....S U P E R B !!!! Shridhar Sir !!....And Thanks for the share !!...

  ReplyDelete
 2. ಅದು ಡಾ||ಜ್ಞಾನದೇವ್ ಅವರಿಗೆ ಸಲ್ಲುತ್ತದೆ.

  ReplyDelete
 3. ನನಗೆ ಎಲ್ಲಿ ಏನು ಸಿಗುತ್ತದೆ ತಿಳಿಯದು , ಅದಕ್ಕೆ ತಂದುಕೊಟ್ಟ ಕೈಗೆ ಥ್ಯಾಂಕ್ಸ್ ಹೇಳಿದ್ದು !!!...I like your humility & need to learn it from you Sir !!!....ವಂದನೆಗಳು !!...ಅಂದ ಹಾಗೆ ಮೊದಲ ವಾಕ್ಯದಲ್ಲಿ 'ತೆರೆಯಲಾಗಿದೆ' ಬದಲಿಗೆ "ತೆರೆದಿದೆ " ಇದ್ದಿದ್ದರೆ ಚೆನ್ನಿತ್ತೇನೋ ??!!...btw Can have the English version ,if any ,of the quote Mr Sridhar ??...

  ReplyDelete
 4. ಆತ್ಮೀಯ ಶ್ರೀಧರ್ ಗೆ
  ನನ್ನ ಒ೦ದು ಪುಟ್ಟ ಬರಹವನ್ನು ವೇದಸುಧೆಗೆ ಸೇರಿಸಿರುವುದು ನನಗೆ ಅಭಿಮಾನ ಹಾಗೂ ಸ೦ತಸದ ವಿಷಯ. ನಾನು ಇನ್ನು ಮು೦ದೆ ಉದಾತ್ತ ಚಿ೦ತನೆಗೆ ಸ್ಫೂರ್ತಿಯನ್ನು ನೀಡುವ ನನ್ನ ಬರಹಗಳನ್ನು ವೇದಸುಧೆಗೆ ಕಳುಹಿಸುತ್ತೇನೆ.
  ವ೦ದನೆಗಳೊ೦ದಿಗೆ ನಿಮ್ಮವ
  ಡಾ ಜ್ಞಾನದೇವ್ ಮೊಳಕಾಲ್ಮುರು

  ReplyDelete
 5. ಡಾ|| ಜ್ಞಾನದೇವ್ ಅವರದು ಪುಟ್ಟ ಬರಹ ಆದರೂ ಗೀತೆಯ "ನಹೀ ಜ್ಞಾನೇನ ಸದೃಶಂ.." ಸಾಲನ್ನು ನೆನಪಿಸುತ್ತದೆ. ಅಲ್ಲದೇ ನನ್ನದೊಂದು ಪ್ರಕಟಿತ ಕವನ "ಅಭಿಜ್ಞಾನ" ವನ್ನೂ ಸಹ ನೆನಪಿಗೆ ತಂದಿದೆ.
  ಅವರಿಗೆ, ಧನ್ಯವಾದಗಳು

  ಅಭಿಜ್ಞಾನ

  ReplyDelete