Pages

Monday, April 4, 2011

ಮನೆಯೊಡತಿಗೆ ಯೂಟ್ರಸ್ ಶಸ್ತ್ರ ಚಿಕಿತ್ಸೆ ಗ್ಯಾರಂಟಿ!!

ಅವರೆಲ್ಲಾ ೨೫ ರಿಂದ ೩೦ ರ ವಯೋಮಾನದ ಕಟ್ಟುಮಸ್ತಾದ ತರುಣರು. ಉಗಾದಿ ಸಂಬ್ರಮವನ್ನು ಅವರು ಆಚರಿಸಿದ್ದು ಹೇಗೆ ಗೊತ್ತೆ? ಟಿ.ವಿ.ಮುಂದೆ ಕುಳಿತಿದ್ದಾರೆ. ಪ್ರಖ್ಯಾತ ಜ್ಯೋತಿಷಿಯೊಬ್ಬರು ಒಂದಿಷ್ಟು ಬುರುಡೆ ಬಿಡುತ್ತಿದ್ದಾರೆ. ಇವರೆಲ್ಲಾ ತದೇಕಚಿತ್ತದಿಂದ ಬೆರಗಾಗಿ ಆಲಿಸುತ್ತಿದ್ದಾರೆ. ಆಗ ವಾಸ್ತು ವಿಚಾರ ಹೇಳುತ್ತಿದ್ದರೆಂದು ಕಾಣುತ್ತದೆ. ಜ್ಯೋತಿಷಿಯು ಬಡಬಡಾಯಿಸುತ್ತಾರೆ" ವಾಯುವ್ಯ ಮೂಲೆಯಲ್ಲಿ ಮನೆಯ ಮಹಾದ್ವಾರವಿದ್ದರೆ ಮುಂದಿನ ಯುಗಾದಿಯೊಳಗಾಗಿ ಆಮನೆಯೊಡತಿಗೆ ಯೂಟ್ರಸ್ ಶಸ್ತ್ರ ಚಿಕಿತ್ಸೆ ಗ್ಯಾರಂಟಿ"
ಈ ತರುಣರು ಬೆರಗಾಗಿ ಕೇಳುತ್ತಿದ್ದಾರೆ.ಅದೇ ಸಮಯಕ್ಕೆ ಆ ಮನೆಗೆ ನಾನು ಪ್ರವೇಶಿಸಿದ್ದೆ. ಆ ತರುಣರನ್ನು ಕಂಡು ನನಗೆ ಮರುಕವಾಯ್ತು.ಅವರಲ್ಲಿ ಬಹುಪಾಲು ತರುಣರು ನಿರುದ್ಯೋಗಿಗಳು. ಅವರ ಬಗ್ಗೆ ನನಗೆ ಸಲುಗೆ ಇದೆ. ನಾನೆಂದೆ" ನಿಮಗೆ ಬೇರೆ ಕೆಲಸ ಇಲ್ಲವೇನ್ರಪ್ಪಾ?  ನಿಮಗೆ ಟಿ.ವಿ.ನೋಡ್ಲೇ ಬೇಕೂಂದ್ರೆ ಬೇರೆ ಯಾವ ಕಾರ್ಯಕ್ರಮವೂ ಸಿಗಲಿಲ್ಲವಾ? ನೀವು ಬೇಕಾದ್ರೆ ಸಿನೆಮಾ ನೋಡಿ, ಕ್ರಿಕೆಟ್ ಬೇಕಾದ್ರೂ ನೋಡಿ. ಆದರೆ ಇಂತಾ ಕಾರ್ಯಕ್ರಮ ನೋಡ್ತೀರಲ್ಲಾ! ಒಂದು ವೇಳೆ ನಿಮ್ಮ ಮನೆಯ ಮಹಾದ್ವಾರವು ವಾಯುವ್ಯಕ್ಕೆ ಇದೆ ಎಂದು ಭಾವಿಸಿ. ಈಗ ಹೋಗಿ ಬಾಗಿಲು ಬದಲಿಸುತ್ತೀರಾ?  ಇರೋದೇ 20X30 ಅಡಿ ವಿಸ್ತೀರ್ಣದ ಮನೆ. ಅನಿವಾರ್ಯವಾಗಿ ವಾಯುವ್ಯದಿಂದಲೇ ಪ್ರವೇಶಿಸುವ ಸಂದರ್ಭಬಂದರೆ ಏನು ಮಾಡುವಿರಿ?
ಇಂತಹ ವೈಜ್ಞಾನಿಕ ಕಾಲದಲ್ಲೂ ಇಂತಹ ಬುರುಡೆಗಳ ಮಾತು ಕೇಳುತ್ತಾ ಕಾಲಹರಣ ಮಾಡ್ತೀರಲ್ಲಾ!" ಅಂದಾಗ ನಿರುತ್ತರರಾದರು. ವಿಚಾರವಾದಿಗಳೆಂದು ಬಡಬಡಿಸುವವರು ಇಂತಹಾ ಕಾರ್ಯಕ್ರಮಗಳನ್ನು  ವಿರೋಧಿಸಬೇಡವೇ?
ಅಲ್ಲಾ ಜ್ಯೋತಿಷಿ ಏನಾದ್ರೂ ಹೇಳಲಿ ಪರವಾಗಿಲ್ಲ, ಆದರೆ  "ಆ ಮನೆಯಲ್ಲಿ  ಮನೆಯೊಡತಿಗೆ ಶಸ್ತ್ರಚಿಕಿತ್ಸೆ ಗ್ಯಾರಂಟಿ! ಸಾವು ಶತಸಿದ್ಧ! ಆಕ್ಸಿಡೆಂಟ್ ಆಗುತ್ತೆ! " ಇದೆಲ್ಲಾ ಏನ್ರೀ? ಅವನೇನು ಬ್ರಹ್ಮನೇ? ಇಂತೋರ್ ಮಾತೆಲ್ಲಾ ಕೇಳ್ತಾ ಕೂರ್ತೀವಲ್ಲಾ! ನಮ್ಮ ಬುದ್ಧಿಗೆ ಏನ್ ಹೇಳ್ಬೇಕು?

8 comments:

  1. ಸರಿಯಾಗಿ ಹೇಳಿದಿರಿ

    ReplyDelete
  2. ಅವನೇನೋ ಬುರುಡೆ ದಾಸಯ್ಯ!ಕುಳಿತು ಕೇಳುವ ನಮ್ಮ ಬುರುಡೆಯೊಳಗೆ ಮೆದುಳು ಅನ್ನುವುದೊಂದು ಇರಬೇಕಲ್ವಾ?

    ReplyDelete
  3. ನಾನು ಹೇಳೋದೂ ಅದನ್ನೇ ಡಾಕ್ಟ್ರೇ

    ReplyDelete
  4. ನಾನು ಹೇಳೋದೂ ಅದನ್ನೇ !!!!

    ReplyDelete
  5. Nice article uncle. What an irony that most of youngsters, who do not care about our culture and tradition, have started fearing those people who blabber in TV claiming themselves as astrologers after taking a short 1 month crash course in astrology. This might interest you as well - http://samvaada.com/themes/article/227/1/zee_kannada_narendra_sharma.htm

    ReplyDelete
  6. Even after studying for years falsehood cannot become truth!
    ಸುಳ್ಳು ಸುಳ್ಳೇ!
    ಸಾರ್ವಜನಿಕವಾಗಿ ಬಂದು ತಮ್ಮ ಈ Astrology ತರ್ಕಬದ್ಧ, ವೈಜ್ಞಾನಿಕ ಎಂದು ತೋರಿಸುವ ಕೆಚ್ಚು ಯಾವ ಜ್ಯೋತಿಷಿಗೂ ಇಲ್ಲ.
    ಅನೇಕ ವರ್ಷಗಳಿಂದ `ಜ್ಯೋತಿಸಿಗಳೇ! ಸತ್ಯದ ಕೊಲೆ ಮಾಡಬೇಡಿ' ಎಂಬ ಕಿರುಹೊತ್ತಿಗೆಯನ್ನು ಕರ್ನಾಟಕಾದ್ಯಂತ ಸುಮಾರು 10,000 ಪ್ರತಿಗಳನ್ನು ಉಚಿತವಾಗಿ ಹಂಚಿರುತ್ತೇವೆ. ಅದನ್ನು Challenge ಮಾಡುವ ಜ್ಯೋತಿಷಿಗಳೇ ಇಲ್ಲ.
    ನಂಬಿದವನು ಕೆಟ್ಟ!
    ಇವರ ಜ್ಯೋತಿಷ್ಯದ ಬಗ್ಗೆ ಪ್ರಶ್ನಿಸಿದಾಗ ಅದರೊಂದಿಗಿರುವ Astronomy
    ಭಾಗವನ್ನು ತೋರಿಸುತ್ತಾರೆ. ಆ ಗಣಿತ ಬಾಗ ಸರಿಯೆನ್ನುವಷ್ಟರಲ್ಲಿ Astrologyಯ ಬುರುಡೆ ಶುರುಮಾಡಿಬಿಡುತ್ತಾರೆ.
    They are too dangerous for the Society!

    ReplyDelete
  7. ಪ್ರತಿಕ್ರಿಯಿಸಿರುವ ಶ್ರೀ ಸುಬ್ರಹ್ಮಣ್ಯ, ಡಾ|| ಕೃಷ್ಣಮೂರ್ತಿ,ಶ್ರೀಸೀತಾರಾಂ ಮತ್ತು ವೇದಾಧ್ಯಾಯೀ ಶ್ರೀಸುಧಾಕರಶರ್ಮರಿಗೆ ಧನ್ಯವಾದಗಳು. ಪ್ರೀತಿಯ ಅನಂತ, ನೀನು ಕೊಟ್ಟಿರುವ ಕೊಂಡಿಯನ್ನು ತೆರೆದೆ. ಬರಹ ಇಷ್ಟವಾಯ್ತು. ಕೆಲವು ಸಾಲುಗಳನ್ನು ಇಲ್ಲಿ ಅಂಟಿಸಿರುವೆ.
    [ನಾವು ಯಾವುದೇ ಕಾರ್ಯಕ್ರಮವನ್ನು ಇಚ್ಚೆಯಿಲ್ಲದೆ ನೋಡಿದರೂ ಸಹ ಅಲ್ಲಿನ ವಿಷಯಗಳು ನಮ್ಮ ಅರಿವಿಗೇ ಬರದಂತೆ ನಮ್ಮನ್ನು ಹೊಕ್ಕಿರುತ್ತವೆ ಹಾಗೂ ಮೆದುಳಿನ ಒಳಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳತ್ತಾ ಬಂದು ಪೂರ್ಣವಾಗಿ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ, ಈ ಕಾರಣದಿಂದಲೆ ನಮಗೆ ಕೆಲವು ವಿಷಯಗಳ ಬಗೆಗೆ ಪರ ಅಥವ ವಿರೋಧವಾ ಎಂದು ಗುರುತಿಸಲಾಗದೇ ಪರದಾಡುತ್ತಿರುತ್ತೇವೆ. ಇಂದು ಜಗತ್ತಿನಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮವೆಂದರೆ ಕಿರುತೆರೆಗಳು, ಇಂತಹ ಶಕ್ತಿ ಸಾಧನವನ್ನು ಮೌಢ್ಯವನ್ನು ಪಸರಿಸೊ ಮೊಬೈಲ್ಗಳಂತೆ ಬಳಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವ ಮಾಧ್ಯಮಕ್ಕೆ ಕಣ್ಣಿಲ್ಲವಾ...? ಓ...ಪ್ರೋಗಾಮ್ ಪ್ರೊಡ್ಯೂಸರ್ಗಳೇ, ಪ್ರೊಡಕ್ಷನ್ ಚೀಫುಗಳೇ, ಕ್ರೀಯೇಟೀವ್ ಹೆಡ್ಡುಗಳೇ,....ಇದೇನು ನಿಮಗೆ ತಿಳಿಯದ ವಿಷಯವಾ...ಇದೊಂದು ರೀತಿಯ ಜಾಣ ಕುರುಡು, ನಿಮಗೆ ಸಮಾಜದ ಉನ್ನತಿ, ಏಳಿಗೆಗಿಂತ ಚಾನಲ್ನ ಟಿ.ಆರ್.ಪಿ(ಟೆಲಿವಿಷನ್ ರೇಟಿಂಗ್ ಪಾಯಿಂಟ್) ಮಾತ್ರ ಮುಖ್ಯ. ಅಲ್ಲವೇ...? ಎನ್ನ 'ಜೀ'ಕನ್ನಡ ಕಣ್ಮಣಿಯೇ ಈ ನಾಡಿನಲ್ಲಿ ಕಲಾತ್ಮಕತೆ ಎಂಬುದು ಅನಂತ, ಆ ಅನಂತತೆಯ ಕಣ್ತೆರುದು ಕಾಣು, ಹೊಸ ತನ-ಹೊಸ ವಿಚಾರ(ಹೊಸ ಪ್ರೋಗ್ರಾಮ್) ಆ ಅನಂತತೆಯಲಿ ಹುಟ್ಟುವುದು ಖಂಡಿತ.]

    ReplyDelete
  8. ನಮಸ್ಕಾರ,

    ಬೆಂಗಳೂರಿನಲ್ಲಿ ಕಳೆದ ೩ ವರ್ಷಗಳ ಹಿಂದೆ ದಕ್ಷಿಣಾಭಿಮುಖವಾದ 20 X 30 ಜಾಗವೊಂದನ್ನು ಖರೀದಿಸಿದ್ದೆ. ಆದರೆ ಮನೆ ಕಟ್ಟುವುದಕ್ಕೆ ಹಿಂದೇಟು ಹಾಕುತಿದ್ದೆ, ಕಾರಣ ದಕ್ಷಿಣದ ಬಾಗಿಲು ಬರುತ್ತದಲ್ಲಾ ಅನ್ನುವ ಕಾರಣಕ್ಕೆ.
    ನಿಮ್ಮ ಹಳೆಯ ವಾಸ್ತು ಕುರಿತಾದ ಕೆಲ ಪ್ರತಿಕ್ರಿಯೆ ಗಳನ್ನು ಓದುತಿದ್ದೆ, ನಿಮ್ಮ ಖಡಕ್ ಪ್ರತಿಕ್ರಿಯೆಗಳು ನನ್ನ ಮನದಲ್ಲಿನ ಕೆಲ ಸಂದೇಹಗಳನ್ನು ದೂರ ಮಾಡಿವೆ.
    ಟಿವಿಯಲ್ಲಿ ಬರುವ ಜ್ಯೋತಿಷ್ಯ ವಾಸ್ತು ಕುರಿತಾದ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತವೆ. ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸದೇ ಹೋದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವುದರಲ್ಲಿ ಸಂದೇಹವಿಲ್ಲ.

    ಧನ್ಯವಾದಗಳೊಂದಿಗೆ

    ರಂಗನಾಥ.

    ReplyDelete