ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, June 16, 2011

ಆತ್ಮೀಯ ಅಭಿಮಾನೀ ಓದುಗರೇ,
ವೇದಸುಧೆಗೆ ಪ್ರೇರಕರಾಗಿರುವ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯವು ಉತ್ತಮವಾಗಿಲ್ಲ.ಅವರಿಗೆ ಒಂದಿಷ್ಟು ದಿನಗಳ ವಿಶ್ರಾಂತಿ ಅನಿವಾರ್ಯವಾಗಿ ಬೇಕಾಗಿದೆ. ಆದ್ದರಿಂದ ಇನ್ನು ೫-೬ ತಿಂಗಳ ಕಾಲ ಮಾನ್ಯ ಓದುಗರು ಅವರೊಡನೆ ಸಮಾಲೋಚಿಸಲು ಸಾಧ್ಯವಾಗುವುದಿಲ್ಲ.ಆದರೆ ಅವರ ವಿಚಾರಗಳ ಧ್ವನಿಯನ್ನು ಈಗಾಗಲೇ ವೇದಸುಧೆಯಲ್ಲಿ ಸಾಕಷ್ಟು ಪ್ರಕಟಿಸಲಾಗಿದೆ.ಅದರ ಉಪಯೋಗವನ್ನು ಯಾವಾಗಲೂ ಪಡೆಯಬಹುದು.ವೇದಸುಧೆಯ ಹಲವು ಪುಟಗಳಲ್ಲಿ ಹರಡಿಹೋಗಿರುವ ಅವರ ವಿಚಾರಗಳನ್ನು "ಶರ್ಮರ ಪುಟ" ಕ್ಕೆ ವರ್ಗಾಯಿಸುವ ಪ್ರಯತ್ನ ಸಾಗಿದೆ. ಬ್ಲಾಗಿನ ತಲೆಬರಹದಡಿ ಕಾಣುವ "ಶರ್ಮರ ಪುಟ" ವನ್ನು ಕ್ಲಿಕ್ ಮಾಡಿದರೆ ಶರ್ಮರ ಹಲವು ಆಡಿಯೋ ಗಳನ್ನು ಕೇಳಬಹುದಾಗಿದೆ. ಎಲ್ಲರ ಸಹಕಾರ ಎಂದಿನಂತಿರಲಿ.
ನಮಸ್ಕಾರಗಳು.
-ಹರಿಹರಪುರಶ್ರೀಧರ್

1 comment:

  1. ಹೌದು, ಶ್ರೀಧರ್, ಶ್ರೀ ಶರ್ಮರವರು ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳೇ ಬೇಕು. ನಾನು ಕುಟುಂಬದವರೊಂದಿಗೆ ಹೋಗಿ ಅವರನ್ನು ಆಸ್ಪತ್ರೆಯಲ್ಲಿ ಕಂಡು ಬಂದೆ. ಅವರ ಧೀಶಕ್ತಿಯಿಂದಾಗಿ ಅವರು ನೋವು ಸಹಿಸಿದ್ದಾರೆ.
    -ಕ.ವೆಂ.ನಾಗರಾಜ್.

    ReplyDelete