Pages

Friday, September 16, 2011

ಯೋಚಿಸಲೊ೦ದಿಷ್ಟು...೪೧

೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು ಕಲಿಸುತ್ತದೆ!!
೩.ಯಾರಿ೦ದಲಾದರೂ ನಿಜವಾದ ಪ್ರೀತಿಯನ್ನು ನಾವು ಬಯಸುವುದಕ್ಕಿ೦ತ.. ಅದನ್ನು ಮೊದಲು ನಾವೇ ಅವರಿಗೆ ನೀಡುವುದು ಲೇಸು!!
೪. ಸ೦ಬ೦ಧಗಳೊ೦ದಿಗೆ ನಮ್ಮ ಭಾವನೆಯ ಆಳ ಮುಖ್ಯವಲ್ಲ... ಭಾವನೆಗಳ ನಿರ್ವಹಣೆ ಅತಿ ಮುಖ್ಯ!
೫. ನಮ್ಮನ್ನು ನಾವು ಆರೈಕೆ ಮಾಡಿಕೊಳ್ಳಲು ಶಕ್ತರಾಗಿದ್ದರೂ ಬೇರೊಬ್ಬರು ನಮ್ಮ ಮೇಲೆ ತೋರಿಸುವ ಅಕ್ಕರೆ ಹಾಗೂ ಮಾಡುವ ಆರೈಕೆಯನ್ನು ನಾವು ಹೆಚ್ಚು ಇಷ್ಟಪಡುತ್ತೇವೆ!
೬.ಕೆಲವರು ಯಾವುದೇ ವಿಚಾರದ ಬಗ್ಗೆಗಿನ ಮ೦ಥನದಲ್ಲಿ ವಿಷಯವನ್ನು ತಿಳಿದುಕೊಳ್ಳಲು ಪ್ರಶ್ನಿಸದೇ.. ಕೇವಲ ಮರುತ್ತರ ನೀಡುವುದಕ್ಕಾಗಿಯೇ ಪ್ರಶ್ನಿಸುತ್ತಾರೆ!!
೭.ನಮ್ಮ ಯಶಸ್ಸು ನಮ್ಮ ಸಾಮರ್ಥ್ಯವನ್ನು ಲೋಕಕ್ಕೆ ಪರಿಚಯಿಸಿದರೆ.. ನಮ್ಮ ಸೋಲು ನಮಗೆ ಲೋಕದ ಪರಿಚಯ ಮಾಡಿಸುತ್ತದೆ!!
೮. ಯಾವ ಪರ್ವತವೂ ನಮ್ಮ ಆತ್ಮವಿಶ್ವಾಸಕ್ಕಿ೦ತ ಎತ್ತರವಲ್ಲ.. ನಾವುಅತೀವ ಆತ್ಮವಿಶ್ವಾಸದಿ೦ದ ಪರ್ವತದ ತುದಿಯನ್ನು ತಲುಪಿದರೆ ಆ ಪರ್ವತವೂ ನಮ್ಮ ಕಾಲಡಿಯಲ್ಲಿಯೇ!!
೯. ಜೀವನವು ನಮ್ಮನ್ನು ಯಾವತ್ತೂ ಖಾಲಿಯಾಗಲು ಬಿಡುವುದಿಲ್ಲ.. ಒ೦ದು ಸಮಸ್ಯೆಯಿ೦ದ ಹೊರಬ೦ದ೦ತೆಯೇ ಮತ್ತೊ೦ದು ಸಮಸ್ಯೆ ಧುತ್ತನೇ ಎದುರಾಗುತ್ತದೆ!!
೧೦. ಪರಿಪರಿಯಾಗಿ ಹೆಣಗಾಡಿಯೂ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕ೦ಡುಕೊಳ್ಳಲಾಗದಿದ್ದಾಗ ಅವುಗಳಿಗಾಗಿ ಚಿ೦ತಿಸುವುದು ವ್ಯರ್ಥ!
೧೧.ಎಷ್ಟು ಜನ ಮಿತ್ರರನ್ನು ಹೊ೦ದಿದ್ದೇವೆ ಎನ್ನುವುದಕ್ಕಿ೦ತಲೂ ಅವರೊ೦ದಿಗೆ ಎಷ್ಟು ಕಾಲ ಮಿತೃತ್ವವನ್ನು ಕಾಪಾಡಿಕೊ೦ಡಿದ್ದೇವೆ೦ಬುದು ಮುಖ್ಯ!
೧೨. ವೈರಿಯ ಶಕ್ತಿಯು ಕು೦ದುವವರೆಗೂ ನಮ್ಮ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಜತನವಾಗಿ ಕಾಪಿಟ್ಟುಕೊಳ್ಳಬೇಕು!!
೧೩. ತಿದ್ದಿಕೊಳ್ಳುವ ಅವಕಾಶವೇ ಇರದಷ್ಟು ತಪ್ಪುಗಳನ್ನು ಮಾಡುವುದೆ೦ದರೆ.. ನಾವು ಸರಿಯನ್ನು ಮಾಡುವುದಿಲ್ಲವೆ೦ದೇ ಅರ್ಥ!!
೧೪. ಒಬ್ಬರ ಜೀವನದಿ೦ದ ಬಹುಬೇಗ ದಾಟಿ ಹೋಗಬಹುದು.. ಆದರೆ ಅವರ ಸ೦ಗದೊ೦ದಿಗೆ ಕಳೆದ ದಿನಗಳ ನೆನಪುಗಳನ್ನು ದಾಟಿ ಹೋಗಲಾಗದು!!
೧೫. ನೆಮ್ಮದಿಯನ್ನು ಹುಡುಕಿಕೊ೦ಡು ಹೋಗದೆ.. ಜೀವನವನ್ನು ಇದ್ದ೦ತೆಯೇ ಒಪ್ಪಿಕೊ೦ಡರೆ ನೆಮ್ಮದಿಯೇ ನಮ್ಮನ್ನು ಹುಡುಕಿಕೊ೦ಡು ಬರುತ್ತದೆ!!

3 comments:

  1. ನಾವಡರೆ,

    ತುಂಬಾ ಚೆನ್ನಾಗಿದೆ. ಗೀತೆಯ ವಾಕ್ಯದಂತಿರುವ ಮೊದಲನೆಯ ಸಾಲನ್ನು ಹೇಳಿರುವ ಶ್ರೀ ಹೆಗ್ಗಡೆಯವರಿಗೆ ನನ್ನ ಪ್ರಣಾಮಗಳು.

    ReplyDelete
  2. [೮. ಯಾವ ಪರ್ವತವೂ ನಮ್ಮ ಆತ್ಮವಿಶ್ವಾಸಕ್ಕಿ೦ತ ಎತ್ತರವಲ್ಲ.. ನಾವುಅತೀವ ಆತ್ಮವಿಶ್ವಾಸದಿ೦ದ ಪರ್ವತದ ತುದಿಯನ್ನು ತಲುಪಿದರೆ ಆ ಪರ್ವತವೂ ನಮ್ಮ ಕಾಲಡಿಯಲ್ಲಿಯೇ!!]
    ಇಂದಿನ ಯುವಕರ ಕಿವಿಗೆ ಬೀಳಿಸಬೇಕು.

    ಯೋಚಿಸಲೊಂದಿಷ್ಟು ಲೇಖನ ಮಾಲೆಯ ಬಗ್ಗೆ ಒಂದು ಮಾತು. ಈಗಾಗಲೇ ಸಾವಿರಾರು ನುಡಿಗಳನ್ನು ನೀವು ಬರೆದಿರಬಹುದು.ಅವುಗಳಲ್ಲಿ ಅತ್ಯುನ್ನತವಾದ ಕೆಲವು ನೂರನ್ನು ಆರಿಸಿ ಒಂದು ಲೇಖನ ಮಾಡಿ. ಅದೇ ಒಂದು ಕೈಹೊತ್ತಿಗೆಯೂ ಆಗಬಹುದು.ಇಲ್ಲದಿದ್ದರೆ ಸಾವಿರಾರು ನುಡಿಮುತ್ತುಗಳಲ್ಲಿ ಓದಲೇ ಬೇಕಾದ ನುಡಿಗಳು ಮುಚ್ಚಿಹೋಗುವ ಸಾಧ್ಯತೆ ಇದೆ.

    ReplyDelete
  3. ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಪೂಜ್ಯ ಸುಬ್ರಹ್ಮಣ್ಯರು ಹಾಗೂ ವ೦ದನೀಯ ಶ್ರೀಧರ್ ರವರಿಗೂ ನಾನು ಶುಣಿ.
    ವ೦ದನೀಯರ ಸಲಹೆಯನ್ನು ಸ್ವೀಕರಿಸುತ್ತೆನೆ. ಈಗೇನಿದ್ದರೂ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರುಯ ಆಗಮನದ ಗಡಿಬಿಡಿ. ಆನ೦ತರ ಅದರ ಬಗ್ಗೆ ಎಲ್ಲವನ್ನೂ ಒ೦ದು ಮಾಡಿ, ತಿದ್ದುಪಡಿಗೆ ಸೂಚಿಸಲು ತಮಗೇ ಜವಾಬ್ದಾರಿ ನೀಡಿ, ನಿಮ್ಮಲ್ಲಿ೦-ದಲೇ ಪ್ರಕಾಶಿಸುವ ಮಹತ್ತರ ಜವಾಬ್ದಾರಿಯನ್ನು ಈ ಕ್ರಿಯನಿಗಾಗಿ ತಾವೇ ಹೊತ್ತುಕೊಳ್ಳಬೇಕೆ೦ಬ ವಿನಮ್ರ ವಿನ೦ತಿ ನನ್ನಿ೦ದ.. ತಮ್ಮ ಸಹಕಾರದ ನಿರೀಕ್ಷೆಯಲ್ಲಿ..

    ReplyDelete