Pages

Saturday, January 7, 2012

ವಿದೇಶೀಯರನ್ನೂ ಆಕರ್ಷಿಸಿದ ವೇದಸುಧೆ








ವೇದಸುಧೆಯನ್ನು ಕನ್ನಡಿಗರಷ್ಟೇ ನೋಡುತ್ತಾರೆಂಬ ಭಾವನೆ ನನ್ನಲ್ಲಿತ್ತು. ಕನ್ನಡವನರಿಯದ ವಿದೇಶೀಯರಿಗೂ ವೇದದ ಹೆಸರಿನ ಮಾತ್ರದಿಂದ ವೇದಸುಧೆಯ ಪರಿಚಯವಾಗಿ ವೇದಸುಧೆಗೆ ಪ್ರೇರರಕರಾದ ಶ್ರೀ ಸುಧಾಕರಶರ್ಮರನ್ನು ಭೇಟಿಮಾಡಬೇಕೆಂದು ಮೂರ್ನಾಲ್ಕು ತಿಂಗಳ ಹಿಂದೆಯೇ ಬಯಸಿದ ಡಾ. ಜೆಸ್ಸೀ ಅವರ ಶಿಷ್ಯೆ ಕ್ರಿಸ್ತಿನಾ ಜೊತೆಗೂಡಿ ದಿನಾಂಕ 7.1.2012  ರಂದು ಬೆಂಗಳೂರಿಗೆ ಬಂದು ಶರ್ಮರನ್ನೂ ಮತ್ತು ಪಂಡಿತ್ ಶ್ರೀ ಸುಧಾಕರಚತುರ್ವೇದಿಯವರನ್ನೂ ಭೇಟಿಮಾಡಿ ವೇದದ ವಿಚಾರದಲ್ಲಿ ಅನೇಕ ಮಾಹಿತಿಯನ್ನು ಪಡೆದರು. ಇಂದಿನಿಂದ ಅದರ ವೀಡಿಯೋಗಳನ್ನು ಇಲ್ಲಿ ಪ್ರಕಟಿಸಲಾಗುವುದು. ವೀಡಿಯೋ ಅಪ್ ಲೋಡ್ ಮಾಡಲು ಸಾಕಷ್ಟು ಸಮಯ ಹಿಡಿಯುವದರಿಂದ ಎಲ್ಲಾ ವೀಡಿಯೋ ಕ್ಲಿಪ್ ಗಳನ್ನೂ ಅಪ್ ಲೋಡ್ ಮಾಡಲು ಒಂದು ತಿಂಗಳು ಕಾಲ ಬೇಕಾಗಲೂ ಬಹುದು.
  ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳಲೇ ಬೇಕು. ಶ್ರೀ ಸುಧಾಕರಶರ್ಮರ  ಆರೋಗ್ಯ ಅಷ್ಟು ಉತ್ತಮವಾಗಿಲ್ಲ ವೆಂಬ ವಿಚಾರ ಅನೇಕರಿಗೆ ತಿಳಿಯದಿರಬಹುದು. ಶ್ರೀ ಶರ್ಮರು ಕಳೆದ ಆರು ತಿಂಗಳುಗಳಿಗೂ  ಹೆಚ್ಚು ಕಾಲದಿಂದ ಹಾಸಿಗೆ ಹಿಡಿದಿದ್ದರು. ಈಗಲೂ ಅವರು ಮನೆ ಬಿಟ್ಟು ಹೊರ ಬರುವ ಸ್ಥಿತಿಯಲ್ಲಿಲ್ಲ. ಆದರೂ ಅವರ ಅನಾರೋಗ್ಯಸ್ಥಿತಿಯಲ್ಲೇ ಅವರಿಗೆ ಏನೂ ಆಗಿಲ್ಲವೇನೋ ಎಂಬ ಮಾನಸಿಕ ಸ್ಥಿತಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ವೇದದ  ಹಲವು ವಿಚಾರವನ್ನು ವಿವರವಾಗಿ ಸರಳವಾದ ಆಂಗ್ಲ ಭಾಷೆಯಲ್ಲಿ ತಿಳಿಸಿಕೊಟ್ಟರು. ಅವರ ಮನಸ್ಥೈರ್ಯಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕು. 

Dr.Jessie with Sri Sudhakarasharma



Mrs. Kristina Student of  Dr.Jessie


With Pandit Sudhakarachaturvedi



With the Family of Sri Sudhakarasharma




3 comments:

  1. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ.. ಸದ್ವಿಚಾರಗಳಿದ್ದಲ್ಲಿ ಸದ್ವಿಚಾರಿಗಳು ಸದಾ ಉಪಸ್ಥಿತರಿದ್ದೇ ಇರುತ್ತಾರೆ ಎಂಬುದಕ್ಕೆ ಉತ್ತಮ ನಿದರ್ಶನ. ಧನ್ಯವಾದಗಳು, ಶ್ರೀಧರ್ ರವರೇ

    ReplyDelete
  2. A GOOD PIECE OF CONVERSATION. THANK YOU.
    PRAKASH NARASIMHAIYA

    ReplyDelete
  3. ವಸಂತ್ ಕುಮಾರ್January 16, 2012 at 5:53 PM

    ತನ್ಮೂಲಕ ವೇದಗಳ ಬೆಳಕು ಜಗದ್ವ್ಯಾಪಿಯಾಗಲಿ ಎಂದು ಹಾರೈಸುತ್ತೇನೆ... ಅಭಿನಂದನೆಗಳು

    ReplyDelete