ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, May 2, 2012ಆತ್ಮೀಯ ವೇದಸುಧೆಯ ಅಭಿಮಾನಿಗಳೇ,


            ವೇದಸುಧೆಯ ಆರಂಭದಿಂದ ನೂರಾರು ಜನ ಅಭಿಮಾನಿ ಬಂಧುಗಳು ವೇದಸುಧೆಯನ್ನು ಪ್ರೀತಿಯಿಂದ ಓದುತ್ತಿದ್ದೀರಿ. ನಮ್ಮಲ್ಲಿ ಹಲವರಿಗೆ ಪರಸ್ಪರ ಪರಿಚಯವಿಲ್ಲ. ಆದರೂ ಒಂದು ಕುಟುಂಬದವರಂತೆ ನಮ್ಮೆಲ್ಲರ ಮನಸ್ಸು ಇದೆ. ಕುಟುಂಬದ ಒಬ್ಬ ಸದಸ್ಯನಾಗಿ ನಾನು ತಮ್ಮೆಲ್ಲರನ್ನೂ ನನ್ನ ಮಗನ ಮದುವೆಗೆ ಆಹ್ವಾನಿಸಲು  ನನ್ನ ಬ್ಲಾಗನ್ನೇ ಮಾಧ್ಯಮವನ್ನಾಗಿ ಮಾಡಿಕೊಂಡಿರುವೆ. ಇದನ್ನು ತಪ್ಪಾಗಿ ಭಾವಿಸದೆ ಪರಸ್ಪರ ಪರಿಚಯ ಮಾಡಿಕೊಳ್ಳಲು  ಈ ಅವಕಾಶವನ್ನು ಉಪಯೋಗಿಸಿಕೊಳ್ಳೋಣ, ಆಗಬಹುದೇ?
------------------------------------------------------------------------------------------------------------

ನಮ್ಮ ಜ್ಯೇಷ್ಠ ಪುತ್ರ
ಚಿ||ರಾ|| ಶ್ರೀಕಂಠ  ಹೆಚ್.ಎಸ್.
ಮತ್ತು
ಚಿ||ಸೌ|| ರಶ್ಮಿ ವಿ.
[ಬೆಂಗಳೂರು ವಿವೇಕಾನಂದ ಕಾಲೊನಿಯ ನಿವಾಸಿ
ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಹೆಚ್. ಡಿ. ವೆಂಕಟೇಶ್ ಇವರ ಜ್ಯೇಷ್ಠಪುತ್ರಿ]
ಇವರ ವಿವಾಹ ಕ್ಕೆ
ತಾವು ಬಂಧುಮಿತ್ರರೊಡಗೂಡಿ ಆಗಮಿಸಿ ಆಶೀರ್ವದಿಸಬೇಕಾಗಿ ಕೋರುತ್ತೇವೆ.
ಮುಹೂರ್ತ:  7.05.2012  ರಂದು ಸೋಮವಾರ ,ಬೆಳಿಗ್ಗೆ  11.45 ರಿಂದ 12.00 ಕ್ಕೆ
ಆರತಕ್ಷತೆ: ಸಂಜೆ 6.30 ರಿಂದ
ಸ್ಥಳ: MKP .ಕಲ್ಯಾಣ ಮಂಟಪ ,
        ಬನಶಂಕರಿ ಎರಡನೆಯ ಹಂತ, ಕೆ.ಆರ್. ರಸ್ತೆ , ಬೆಂಗಳೂರು
ಹಾಸನದಲ್ಲಿ  ಆರತಕ್ಷತೆ:
ದಿನಾಂಕ: 13.5.2012  ಭಾನುವಾರ  ಬೆಳಿಗ್ಗೆ 10.00 ಕ್ಕೆ
ಸ್ಥಳ:  ಶ್ರೀ ಸೀತಾರಾಮಾಂಜನೇಯ ಪ್ರವಚನ ಮಂದಿರ,
ಮಹಾರಾಜಾ ಪಾರ್ಕ್ ಹಿಂಬಾಗ, ಉತ್ತರ ಬಡಾವಣೆ, ಹಾಸನ
ತಮ್ಮ ಆಗಮನಾಭಿಲಾಶಿಗಳು
ಶ್ರೀಮತಿ ಸರ್ವಮಂಗಳ ಮತ್ತು ಹರಿಹರಪುರ ಶ್ರೀಧರ
ಮತ್ತು ಬಂಧು ಮಿತ್ರರು
ಮಾಹಿತಿಗಾಗಿ:  9663572406    

1 comment:

  1. ಶ್ರೀಧರರೆ,

    ವಿವಾಹವು ಸಾಂಗವಾಗಿ ನಡೆದು ಎಲ್ಲವೂ ಶುಭವಾಗಲಿ ಎಂದು ಬಯಸುತ್ತೇನೆ. ಬೆಂಗಳೂರಿಗೆ ಬರಲಾಗುತ್ತಿಲ್ಲ ಆದರೆ ಹಾಸನದಲ್ಲಂತೂ ಹಾಜರಾಗುವೆ . :)

    ReplyDelete