ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, August 15, 2012

ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್  ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ. ಅವಳಿಗೆ ಮೊನ್ನೆ ಸನ್ಮಾನ ನಡೆಯಿತು. ಸ್ಯಾಂಟ್ರೊ  ಕಾರ್ ನ್ನು  ಅವಳಿಗೆ ಬಹುಮಾನವಾಗಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ವಾತಿಯ ಭರತನಾಟ್ಯ ಪ್ರದರ್ಶನ ಕೂಡ ಏರ್ಪಾಡು ಮಾಡೋಣ" ಕೂಡಲೇ ಸ್ವಾತಿಯ ತಂದೆ ಪ್ರಕಾಶ್ ರನ್ನು ಸಂಪರ್ಕಿಸಲಾಯ್ತು. ಅವರೂ ಒಪ್ಪಿದರು. ಭರತನಾಟ್ಯ ಕಾರ್ಯಕ್ರಮವೂ ನಿಶ್ಚಯವಾಗಿ ಆಮಂತ್ರಣ  ಮುದ್ರಣವಾಯ್ತು. ಆಮಂತ್ರಣವನ್ನು ಹಿಡಿದು ಚೆನ್ನರಾಯ ಪಟ್ಟಣದತ್ತ ಕಾರ್ ತಿರುಗಿತು. ಅವರ ಮನೆಯೊಳಗೆ ಕಾಲಿಟ್ಟ ಕೂಡಲೇ ಕಂಡ ಪ್ರಶಸ್ತಿಗಳ ಸರಮಾಲೆಯನ್ನು ನನ್ನ ಕ್ಯಾಮರಾ ಕ್ಲಿಕ್ಕಿಸಲು ವಿಫಲವಾಯ್ತು. ಅದಕ್ಕಾಗಿಯೇ ಒಂದು ವೀಡಿಯೋ ತೆಗೆದೆ. ಸಾಮಾನ್ಯ ಕ್ಯಾಮರಾವಾದ್ದರಿಂದ ವೀಡಿಯೋ ಗುಣಮಟ್ಟ ಅಷ್ಟು ಚೆನ್ನಾಗಿಲ್ಲವಾದರೂ ಅದು ಹೇಳಬೇಕಾದ್ದನ್ನು ಹೇಳುತ್ತದೆಯಾದ್ದರಿಂದ ಆ ಕ್ಲಿಪ್ ಇಲ್ಲಿ ಅಳವಡಿಸುವೆ.ಜೊತೆಗೆ ಫೋಟೋಗ    ಳನ್ನೂ    ಪ್ರಕಟಿಸಿರುವೆ.ಕು|| ಸ್ವಾತಿ ಭಾರಧ್ವಾಜ್ ,ಇವರ ವೆಬ್ ಸೈಟ್ ಕೊಂಡಿ ಕೆಳಗಿದೆ.ಹೆಚ್ಚಿನ ವಿವರ ಅಲ್ಲಿ ಲಭ್ಯ.
http://www.indiandancinglegend.com/


3 comments:

 1. ಸ್ವಾತಿಯವರ ಪ್ರತಿಭೆಗೆ ತಕ್ಕ ಗೌರವ ಸೂಚಿಸಿದ್ದೀರ ಸಾರ್.

  ಅವರಿಗೆ ಇನ್ನೂ ಹೆಚ್ಚಿನ ಸನ್ಮಾನಗಳು ಪ್ರಾಪ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

  ReplyDelete
 2. Thank you for information.congrats to swathi and vedasudhe

  ReplyDelete
 3. ವಸಂತ್ ಕುಮಾರ್August 16, 2012 at 9:55 AM

  ಅಪ್ರತಿಮ ಪ್ರತಿಭೆಗೆ ಶುಭ ಹಾರೈಕೆಗಳು...

  ReplyDelete