Pages

Tuesday, August 21, 2012

ವೇದ ಪಾಠದಲ್ಲಿ ಕೇಳಿದ್ದು


ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ

1.ಎಲ್ಲಾ ಜಾತಿಯವರೂ ಬರಬಹುದೇ?

2.ಹೆಂಗಸರೂ ಬರಬಹುದೇ?

3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?

4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?

5.ಶುಲ್ಕ?

6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ...ಇತ್ಯಾದಿ...ಇತ್ಯಾದಿ....

ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ." ಬನ್ನಿ ಎಲ್ಲಾ ತಿಳಿಯುತ್ತೆ"

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.

2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,.......ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.

3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!

4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

ವೇದ ಪಾಠದ ಆಡಿಯೋ ಇಲ್ಲಿ ಕೇಳಿ



2 comments:

  1. ವೇದ ಪಾಠ ಹೇಳಿಕೊಡುವುದು ಸರಿ. ಅದರೆ, ವೇದ ಮಂತ್ರಗಳನ್ನು ಕಲಿಯುವ ಅಪೇಕ್ಷೆ ಈ ಪಾಠ ಕೇಳುವವರಲ್ಲಿ ಇರುತ್ತದೆ. ಆದುದರಿಂದ ನಾವು ವೇದ ಪಾಠದ ಜೊತೆಗೆ ಒಂದು 30 ನಿಮಿಷ ಸಸ್ವರ ವೇದ ಮಂತ್ರ ಹೇಳುವುದನ್ನು ಕಲಿಸಿದರೆ ಅದು ಅತ್ಯುತ್ತಮ ಕ್ರಮವಾಗುತ್ತದೆ. ಸಂಧ್ಯಾ, ಸ್ವಸ್ತಿವಾಚನ, ಶಾಂತಿಕರಣ ಮಂತ್ರಗಳನ್ನು ಸಸ್ವರವಾಗಿ ಹೇಳುವಂತೆ ಕಲಿಸಿ. ಇದಕ್ಕೆ ಸಂಬಂಧಿಸಿದ ಮಂತ್ರದ ಕ್ಯಾಸಟ್ ನ್ನು ಆರ್ಯಸಮಾಜದಿಂದ ಪಡೆಯಬಹುದು. ಸ್ತ್ರೀಯರಿಗೆ ಇದರ ಬಗ್ಗೆ ಹೆಚ್ಚು ಉತ್ಸಾಹವಿರುತ್ತದೆ. ಏಕೆಂದರೆ, ಶತಮಾನಗಳ ಪರ್ಯಂತ ವೇದಗಳು ಅವರುಗಳಿಂದ ದೂರವಾಗಿವೆ. ವೇದಮಂತ್ರದ ಅರ್ಥ ತಿಳಿಯುವುದು ಮುಖ್ಯ. ಹಾಗೆಯೇ ವೇದ ಮಂತ್ರಗಳನ್ನು ಹೇಳುವುದೂ ಸಹ ಒಂದು ಉತ್ತಮ ಕಲಿಕಾ ವಿಧಾನ. ಹಾಸನದಲ್ಲಿ ವೇದಮಂತ್ರಗಳನ್ನು ಸಸ್ವರವಾಗಿ ಹೇಳಿಕೊಡುವಂತೆ ಬಲ್ಲವರನ್ನು ಒಪ್ಪಿಸಿ ಅವರಿಂದ ಮೇಲೆ ತಿಳಿಸಲ್ಪಟ್ಟ ವೇದಮಂತ್ರಗಳನ್ನು ಸಸ್ವರ ಉಚ್ಛಾರಣೆ ಕಲಿಸಿ. ಇದರಿಂದ ಅವರೂ ಸಹ ಬದಲಾಗುತ್ತಾರೆ. ಭಾಗವಹಿಸುವ ಜನತೆಯು ಇದರಿಂದ ಲಾಭ ಪಡೆಯುತ್ತಾರೆ.

    ReplyDelete
  2. ನಿಮ್ಮ ಸಲಹೆಯನ್ನು ನಾವು ಈಗಾಗಲೇ ಜೋಡಿಸಿಕೊಡಿದ್ದೇವೆ.ಸಸ್ವರ ವೇದಮಂತ್ರಪಾಠವೇ ಶುರುವಾಗಿದೆ.ವೇದಪಾಠದ ಆಡಿಯೋ ವನ್ನು vedasudhe.com ನಲ್ಲಿ ಪ್ರಕಟಿಸಲಾಗಿದೆ. ಇದೇ ಲೇಖನದಲ್ಲಿ ಅದರ ಕೊಂಡಿಯನ್ನು ನೋಡಿ. ಅದನ್ನು ಮುಂದುವರೆಸಲಾಗುವುದು.

    ReplyDelete