ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, June 24, 2012

ಯೇಗ್ ದಾಗೆಲ್ಲಾ ಐತೆ -ಬೆನ್ನು ಹತ್ತಿಹೊರಟಾಗ. ಭಾಗ-1

ಈಗ್ಗೆ ಐದಾರು ವರ್ಷಗಳ ಹಿಂದೆ  ನಮ್ಮ ಇಲಾಖೆಯ[ಕೆ.ಪಿ.ಟಿಸಿಎಲ್] ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವೈ.ವಿ.ವೆಂಕಟಕೃಷ್ಣ ನನ್ನೊಡನೆ ಮಾತನಾಡುತ್ತಾ "ನೀವು ಯೇಗ್ ದಾಗೆಲ್ಲಾ ಐತೆ "ಪುಸ್ತಕ ಓದಿದ್ದೀರಾ? " ನಿಮ್ಮಂತವರು ಆ ಪುಸ್ತಕ ಓದಬೇಕು ಅಂತಾ ತಮ್ಮೊಡನಿದ್ದ   ಪುಸ್ತಕ [ಅದು ಮೊದಲ ಮುದ್ರಣವಿರಬೇಕು] ವನ್ನು ತೋರಿಸಿದರು. ಸರಿ "ಕೊಡಿ ಓದಿ ಕೊಡ್ತೀನೆಂದೆ. ಒಂದೆರಡು ದಿನಗಳಲ್ಲಿ ಕೊಟ್ಟುಬಿಡಬೇಕೆಂದು ಕೊಡುವಾಗಲೇ ಹೇಳಿ ಕೊಟ್ಟರು. ನನ್ನ ಕೆಲಸಗಳ ಒತ್ತಡದಲ್ಲಿ ಎರಡು ದಿನಗಳಲ್ಲಿ  ಆ ಪುಸ್ತಕವನ್ನು ಪೂರ್ಣವಾಗಿ ಓದಲಾಗಲಿಲ್ಲ. ಅಲ್ಲಲ್ಲಿ ಕೆಲವು ಪುಟ ಓದಿ ಕುತೂಹಲ ಮೂಡಿಸಿಕೊಂಡಿದ್ದೆ. ಅಷ್ಟರಲ್ಲಿ ಅವರಿಗೆ ಆ ಪುಸ್ತಕ ಹಿಂದಿರುಗಿಸಬೇಕಾಗಿ ಬಂತು. ಆನಂತರ ಒಂದೆರಡು ವರ್ಷಗಳು ಆ ಪುಸ್ತಕ ನೋಡಲಿಲ್ಲ. ಪುನ: ನನ್ನ ಅಂತರ್ಜಾಲದ ಚಟುವಟಿಕೆ ಆರಂಭವಾದಮೇಲೆ ಕಳೆದ ಎರಡು ಮೂರು ವರ್ಷಗಳಲ್ಲಿ ಮಿತ್ರರಾದ ಎಂ.ಡಿ.ಎನ್. ಪ್ರಭಾಕರ್  ಕೃಪೆಯಿಂದ  ಯೋಗ ಕೂಡಿ ಬಂತು" ಹೊಸ ಮುದ್ರಣವಾದ "ಯೇಗ್ದಾಗೆಲ್ಲಾ ಐತೆ" ನನ್ನ ಕೈ ತಲುಪಿತು. ಒಂದೆರಡು ಭಾರಿ ಓದಿದೆ. ಕುತೂಹಲ ಇಮ್ಮಡಿ ಯಾಗ್ತಾಹೋಯ್ತು. ನನ್ನ ಬ್ಲಾಗ್ ನಲ್ಲಿ  ಕೆಲವು ಪುಟ ಬರೆದೆ. ಪುನ: ಒಂದೆರಡು ವರ್ಷ ಬಿಡುವು. ಮೊನ್ನೆ ಯಾಕೋ ಮತ್ತೆ ನೆನಪಾಯ್ತು.  ಮುಕುಂದೂರು ಸ್ವಾಮಿಗಳ ಬಗ್ಗೆ  ಬರೆಯ ಬೇಕೆನಿಸಿತು. ಆರಂಭಮಾಡಿದ್ದು  ಸ್ವಾಮೀಜಿಯವರು ಶರೀರ ತ್ಯಜಿಸಿದ ದಿನ  ಶ್ರೀ ಬೆಳೆಗೆರೆ        ಕೃಷ್ಣ ಶಾಸ್ತ್ರಿಗಳಿಗೆ ಆದ  ದಿವ್ಯಾನುಭವ ಘಟನೆಯಿಂದ. 

ಯಾಕೋ ನನ್ನ ಮನದಲ್ಲಿ ಸ್ವಾಮಿಗಳ ಸ್ಮರಣೆ ತುಂಬಿತ್ತು." ಮುಕುಂದೂರು ಎಂಬ ಹಳ್ಳಿ ನಮ್ಮೂರಿನ ಸಮೀಪದಲ್ಲಿದೆ. ಅಲ್ಲಿನ ಸಿದ್ಧ ಪುರುಷರ ಬಗ್ಗೆಯೇ  ನನಗೆ ಅರಿವಿಲ್ಲವಲ್ಲಾ! " ನಾನು ಬರೆಯುವುದಕ್ಕಿಂತ ಮೊದಲು ಮುಕುಂದೂರು ಸ್ವಾಮೀಜಿ ಇದ್ದ ಜಾಗವನ್ನು ನೋಡಿ ಬರಬೇಕು " ಎಂದುಕೊಂಡೆ. ರಾತ್ರಿ  ಹನ್ನೆರಡವರೆಗೂ " ಯೇಗ್ ದಾಗೆಲ್ಲಾ ಐತೆ" ಪುಸ್ತಕದ ಕೆಲವು ಪುಟ ಓದಿದೆ. ಆಗಲೇ ನಿರ್ಧರಿಸಿದೆ. ಬೆಳಗಾಗೆದ್ದರೆ ಭಾನುವಾರ ಹೋಗಿಬಂದು ಬಿಡೋಣ..ಅವರಿದ್ದುದು ಅರಸೀಕೆರೆಯ ತಾಲ್ಲೂಕು ಬಾಣಾವರದ ಸುತ್ತಮುತ್ತ. ಅವರು ದೇಹತ್ಯಾಗ ಮಾಡಿರುವುದೂ ಅಲ್ಲೇ ಎಂದು ಪುಸ್ತಕದಿಂದ ಗೊತ್ತಾಗಿದೆ. ಸರಿ ಅರಸೀಕೆರೆರೆ ಮೂಲಕ ಬಾಣಾವರಕ್ಕೆ ಹೋದರೆ ಅಲ್ಲಿ ಯಾರನ್ನಾದರೂ ಕೇಳಿಕೊಂಡು ಹೋದರಾಯ್ತು.ಎಂದು  ಕೊಂಡೆ. ನನ್ನ ಮೇಜಿನ ಮೇಲಿದ್ದ  ರೈಲ್ವೆ ವೇಳಾಪಟ್ಟಿ ಕಣ್ಣಿನೆ ಬಿತ್ತು. ಅರಸೀಕೆರೆಗೆ ಬಸ್ ನಲ್ಲಿ ಹೋಗಬೇಕೆಂದರೆ ಹರಮ ಸಂಕಟ. ಟ್ರೈನ್ ನಲ್ಲಿ ಹೋದರಾಯ್ತು, ಎಂದು                           ವೇಳಾಪಟ್ಟಿ ನೋಡಿದೆ. ಬೆಳೆಗ್ಗೆ 8.00ಕ್ಕೆ ಟ್ರೈನ್ ಇದೆ. ಹೊರಡುವ ನಿರ್ಧಾರ ಮಾಡಿ ಮಲಗಿದೆ. ಬೆಳಿಗ್ಗೆ ಎದ್ದವನೇ ಮೊದಲ್ಯು ಮಾಡಿದ ಕೆಲಸವೆಂದರೆ  ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರಿಗೆ ಫೋನ್ ಮಾಡಿದ್ದು. ಅವರಾದರೋ ಮೊಬೈಲ್ ನೂ ಮನೆಯಲ್ಲಿಯೇ ಬಿಟ್ಟು ವಾಕಿಂಗ್ ಹೋಗಿದ್ದರು. ಪತ್ನಿ ಭಾರತಿ ಹಲೋ ಎಂದರು.ವಾಕಿಂಗ್ ಹೋಗಿರುವ ವಿಷಯ ತಿಳಿಸಿದರು. ಅವರಿಗೆ ವಿಷಯ ತಿಳಿಸಿ ವಾಕಿಂಗ್ ನಿಂದ ಬಂದ ಕೂಡಲೇ ಮಾತನಾಡಲು ಹೇಳಿದೆ. ನಂತರ  ಬಾಣಾವರದ ಸಮೀಪ  ಎಲ್ಲಿ ಅಂಬುದನ್ನು  ಗೊತ್ತು ಮಾಡಿಕೊಳ್ಳಲು ಅರಸೀಕೆರೆಯ ಮಿತ್ರ ಸುಬ್ಬಣ್ಣನಿಗೆ ಫೋನ್ ಮಾಡಿದೆ. ಅವರು ಸರಿಯಾಗಿ ಗುರುತು ಹೇಳಿದರು..................ಮುಂದೇನಾಯ್ತು ಎಂಬುದನ್ನು ನಾಳೆ ಬರೆಯುವೆ.

 
                       


                      


ಸ್ವಾಮಿಗಳ ಅಮೃತಶಿಲಾ ಮೂರ್ತಿ ಇರುವ ಆಶ್ರಮ

ಆಶ್ರಮದ ಮುಂಭಾಗದ ಗೋಪುರದಲ್ಲಿ ಸ್ವಾಮಿಗಳ ವಿಗ್ರಹ

ಇಲ್ಲಿ ಕಾಣುವ   ಮಂಗಳೂರು ಹಂಚಿನ ಮನೆಯೊಳಗೆ ಇರುವ ನೆಲಮಾಳಿಗೆಯೇ  ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಪುಣ್ಯಸ್ಥಳ.

ನೆಲಮಾಳಿಗೆಯಲ್ಲಿ ಸ್ವಾಮಿಗಳು ಪ್ತಪಸ್ಸು ಮಾಡುತ್ತಿದ್ದ ಸ್ಥಳದ ಜೀರ್ಣೋದ್ಧಾರವಾಗಿದ್ದು ಅಲ್ಲಿ ಸ್ವಾಮಿಗಳ ಫೋಟೋ ಇಟ್ಟು ಅದರೆದುರು ಕೃಷ್ಣಾಜಿನ  ಹಾಸಲಾಗಿದೆ.

ಆಶ್ರಮದ ದೇವಾಲಯದಲ್ಲಿ ಈಶ್ವರ ವಿಗ್ರಹ


ಆಶ್ರಮದಲ್ಲಿರುವ  ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಮತ್ತು ಸಿದ್ದಗಂಗಾ ಶ್ರೀಗಳ ಆಳೆತ್ತರದ ಚಿತ್ರ.

ಶರಣೆಯರಾದ ಶರಣಮ್ಮ ಮತ್ತು ಕಲ್ಯಾಣಮ್ಮ ಇವರ ಸಮಾಧಿ ಇಲ್ಲಿದೆ

ಶರಣೆಯರ ಸಮಾಧಿ

ಶರಣೆಯರ ಸಮಾಧಿ

ಶರಣೆಯರ ಸಮಾಧಿ
ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ


ಸ್ವಾಮೀಜಿಯರಕಾಲದ    ಜೊಂಬು ನೇರಲೆ ಮರ

ಬನ್ನಿ ಮಂಟಪ

ಸ್ವಾಮೀಜಿ ಉಪಯೋಗಿಸುತ್ತಿದ್ದ ಭಾವಿ

ಸ್ವಾಮೀಜಿಯವರ ಪೂರ್ವಾಶ್ರಮದ ಮರಿಮಗ ಪರಮೇಶ್ವರಪ್ಪನವರ ಮನೆಯಲ್ಲಿ ಸಾಹಿತಿ ಸಂಶೋದಕ ಡಾ. ಶ್ರೀವತ್ಸ ವಟಿಯವರೊಡನೆ

ಆಶ್ರಮದ ಚಟುವಟಿಗಳಿಗೆ ಸಾಕ್ಶಿ

ಈಗಿನ ಶ್ರೀ ಬಸವಲಿಂಗ ಸ್ವಾಮೀಜಿಯವರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಸಂಶೋಧಕ  ದಾ.ಶ್ರೀವತ್ಸ ಎಸ್.ವಟಿ

 ಶ್ರೀ ಬಸವಲಿಂಗ ಸ್ವಾಮೀಜಿಯವರು

ಶ್ರೀ ಬಸವಲಿಂಗ ಸ್ವಾಮೀಜಿಯವರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಸಂಪಾದಕ ಹರಿಹರಪುರಶ್ರೀಧರ್

8 comments:

 1. ಬೆಳಗೆರೆ ಕೃಷ್ಣಶಾಸ್ತ್ರಿಗಳ - ಯೇಗ್ ದಾಗೆಲ್ಲಾ ಐತೆ ಪುಸ್ತಕದ ಅವಲೋಕನ ನನಗೆ ಇಷ್ಟವಾಯಿತು. ಆದಷ್ಟು ಶ್ರೀಘ್ರವಾಗಿ ಈ ಪುಸ್ತಕ ಕೊಂಡು ಓದುತ್ತೇನೆ.

  ಮುಕುಂದೂರು ಸ್ವಾಮಿಗಳ ಬಗೆಗಿನ ಮಾತುಗಳು ಮತ್ತು ಶ್ರೀಕ್ಷೇತ್ರದ ಚಿತ್ರಗಳು ನನಗೆ ಅಲ್ಲಿಗೆ ಭೇಟಿಕೊಡುವ ಆಸೆಯನ್ನು ಹೆಚ್ಚಿಸಿತು. ನಿಮ್ಮ ಆಶೀರ್ವಾದದಿಂದ ಅಲ್ಲಿಗೆ ಹೋಗಿ ಬರುವ ಪ್ರಾಪ್ತಿ ಸಿಗಲಿ.

  ReplyDelete
 2. ಬದರೀನಾಥ್,ಹಾಸನಕ್ಕೆ ಬನ್ನಿ, ಜೊತೆಯಲ್ಲಿ ಹೋಗಿಬರೋಣ. ನಿಮ್ಮ ಕೃಪೆಯಿಂದ ಹತ್ತಿರದಲ್ಲಿಯೇ ನಮಗೂ ಮತ್ತೊಂದು ಭೇಟಿಯ ಅವಕಾಶ ಆದಂತಾಯ್ತು.

  ReplyDelete
 3. ಆತ್ಮೀಯ ಶ್ರೀಧರ್,
  'ಯೆಗ್ದಾಗೆಲ್ಲ ಐತೆ' ಪುಸ್ತಕ ಬಹಳ ಹಿಂದೆಯೇ ಓದಿದ್ದು, ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ ಬಾಯಲ್ಲೇ ಅವರ ಅನುಭವ ಕೇಳುವ ಸದವಕಾಶ ಗುರುಕೃಪೆಯಿಂದ ಲಭ್ಯವಾಗಿತ್ತು. ಆದರೆ, ಮುಕುಂದೂರು ಸ್ವಾಮಿಗಳು ವಾಸವಿದ್ದ ಪ್ರದೇಶದ ಸ್ತೂಲ ಪರಿಚಯವನ್ನು ಚಿತ್ರಗಳ ಮೂಲಕ ನೋಡಿರಲಿಲ್ಲ. ಈ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ಎದುರಿಗೆ ಹೋಗಿ ನೋಡಲು ಅವಕಾಶವಾಗದ ನನಗೆ ಈ ಚಿತ್ರಗಳನ್ನು ನೋಡಿ ಅತ್ಯಂತ ಆನಂದವಾಗಿದೆ. ನಿಮಗೆ, ನಾಗರಾಜ ರವರಿಗೆ ತುಂಬು ಹೃದಯದ ನಮನಗಳು.
  ಪ್ರಕಾಶ್

  ReplyDelete
 4. ಪ್ರಕಾಶ್,
  ನಿಜವಾಗಿ ನೋಡಲೇ ಬೇಕಾದ ಸ್ಥಳ.ಆದರೆ ಅಲ್ಲಿ ಏನ್ ಆಗಿದೆ ಅಂದ್ರೆ ಯಾವ ವಿಚಾರವನ್ನು ಸ್ವಾಮಿಗಳು ಹೃದಯಂಗಮ ಮಾಡಿಕೊಂದಿದ್ದರೋ ಅದನ್ನು ಬದಿಗಿಟ್ಟು ಅವರ ಆಶ್ರಮ ಅವರ ಹೆಸರಲ್ಲೇ ಒಂದು ಸಂಪ್ರದಾಯದ ಚೌಕಟ್ಟಿನಲ್ಲಿ ನಡೆಯುತ್ತಿದೆ. ಅದು ಅಲ್ಲಿನ ಜನರ ತಪ್ಪೆಂದು ನಾನು ಭಾವಿಸುವುದಿಲ್ಲ. ಆದರೆ ಸ್ವಾಮಿಗಳ ವಿಚಾರವನ್ನು ಒಪ್ಪಿರುವ ಸಹಸ್ರಾರು ಜನರು ಮುಂದೆ ಬಂದರೆ ನಿಜವಾಗಲೂ ಸ್ವಾಮಿಗಳ ವಿಚಾರವನ್ನು ಹರಡುವಂತೆ ಮಾಡಿದರೆ ನಿಜವಾದ ಅಧ್ಯಾತ್ಮದ ಕೆಲಸ ಅದಾಗುವುದರಲ್ಲಿ ಸಂಶಯವಿಲ್ಲ. ಸ್ವಾಮಿಗಳದ್ದು ಸ್ವತ: ತಪೋನುಭವ. ಭಾಷೆಯನ್ನೂ ಕಲಿಯದ ಅವರು ತಮಗೆ ತಿಳಿದಿದ್ದ ಹಳ್ಳಿ ಭಾಷೆಯಲ್ಲಿ ಬಹಳ ಮುಗ್ಧವಾಗಿ ಅಧ್ಯಾತ್ಮವನ್ನು ತಿಳಿಒಸುವ ಶೈಲಿಯಲ್ಲಿ ನಾವೂ ಕೂದ ಮಗುವಾಗಿಬಿಡುತ್ತೇವೆ. ಸ್ವಾಮಿಗಳು ಓಡಾಡಿದ ಸ್ಥಳಗಲಲ್ಲಿ ಈಗಲೂ ಅರವತ್ತಕ್ಕಿಂತ ಹೆಚ್ಚು ವಯಸ್ಸಾಗಿರುವ ಹಿರಿಯ ಜೀವಿಗಳಿಂದ ಸ್ವಾಮೀಜಿಯವರ ವಿಚಾರದ ಮೇಲೆ ಬೆಳಕು ಚೆಲ್ಲುವ ಸಂಗತಿಗಳನ್ನು ಸಂಗ್ರಹಿಸಲು ಇದುವೇ ಸಕಾಲ. ವರ್ಷ ಕಳೆದಂತೆ ಹಳಬರು ಇಲ್ಲವಾಗುತ್ತಾರೆ. ಇದುವರೆವಿಗೆ ಪ್ರಕಟವಾಗದೆ ಉಳಿದಿರುವ ಹಲವಾರು ಸಂಗತಿಗಳು ಕಾಲಗರ್ಭ ಸೇರಿಹೋಗುತ್ತವೆ.ಈಗ ಆ ದಿಕ್ಕಿನಲ್ಲಿ ಪ್ರಯತ್ನ ಮಾಡುವುದಾದರೆ ಸಮಾನ ಮಾನಸಿಕರ ಜೊತೆ ಪೂರ್ಣವಾಗಿ ಕೈ ಜೋಡಿಸಲು ನಾನಂತೂ ಸಿದ್ಧ.

  ReplyDelete
 5. ಆತ್ಮೀಯ ಶ್ರೀಧರ್,
  ನಿಮ್ಮ ಕಳಕಳಿ ನಿಜಕ್ಕೂ ಮೆಚ್ಚುವಂತಾದದ್ದು. ನೀವು ಅಂದುಕೊಂಡಂತೆ ಆಗಲು ನಿಮ್ಮ ಕೈ ಜೋಡಿಸಲು ನಾನಂತೂ ಸದಾ ಸಿದ್ದ. ನಿಮ್ಮ ಈ ಪ್ರಯತ್ನಕ್ಕೆ HATS OFF.
  ಪ್ರಕಾಶ್

  ReplyDelete
 6. ಅಬ್ಭಾ! ಇದು ಮುಕುಂದೂರು ಸ್ವಾಮಿಗಳ ಕೃಪೆಯೇ ಸರಿ, ನಾವು ಆಶ್ರಮಕ್ಕೆ ಹೋಗಿದ್ದಾಗ ಒಂದೆರಡು ಹೊಸ ಸಂಗತಿಗಳು ಬೆಳಕಿಗೆ ಬಂದವು. ಬಹುಷ: ಸ್ವಾಮೀಜಿಯವರು ಓಡಾಡಿದ ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಹಳ್ಳಿಗಳು, ಅರಸೀಕೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ಮಾಹಿತಿಗಳು ಸಿಗಬಹುದು.ಎಲ್ಲಕ್ಕಿಂತ ಹೆಚ್ಚಾಗಿ ಕೃಷ್ಣ ಶಾಸ್ತ್ರಿಗಳನ್ನೊಮ್ಮೆ ಭೇಟಿ ಯಾಗಿ ಬರಬೇಕು. ಸಧ್ಯಕ್ಕೆ ನಮ್ಮೊಡನೆ,ಶ್ರೀ ನಾಗರಾಜ್,ಶ್ರೀ ವಟಿ ಯವರು ಇದ್ದಾರೆ. ಬದರಿನಾಥ್ ಎಂಬ ಸಜ್ಜನರೂ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲೂ ಬಹುದು. ಈ ವಿಚಾರಕ್ಕಾಗಿಯೇ ಒಂದು ಪ್ರವಾಸ ಯೋಜಿಸೋಣ. ಆರಂಭಕ್ಕೆ ನಾವು ನಾಲ್ವರಂತೂ ಇಲ್ಲೇ ಇದ್ದೇವೆ. ಶ್ರೀ ವೆಂಕಟಕೃಷ್ಣರೂ ಕೈ ಜೋಡಿಸಬಹುದು.ದೂರವಾಣಿಯಲ್ಲೋ ಮೊಕ್ತವೋ ಮಾತನಾಡೋಣ.

  ReplyDelete
 7. This comment has been removed by the author.

  ReplyDelete
 8. ಆತ್ಮೀಯ ಶ್ರೀಧರವರಿಗೆ,
  ಬಿ.ಟಿ.ಚೇತನ್ ಮಾಡುವ ಅನಂತ ವಂದನೆಗಳು . ಮುಕುಂದೂರು ಅಜ್ಜಯ್ಯನವರ ಕುರಿತ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಬೆಳೆಗೆರೆ ಕೃಷ್ಣ ಶಾಸ್ತ್ರಿಗಳ "ಯೇಗ್ದಾಗೆಲ್ಲ ಐತೆ" ಪುಸ್ತಕವನ್ನು ಓದಿದ್ದೇನೆ. ಆದರೆ ತಮ್ಮಲ್ಲಿಂದ ಸಾಕ್ಷ್ಯ ಚಿತ್ರಗಳನ್ನು ಕಂಡು ಒಮ್ಮೆ ನಾನು ಭೆಟ್ಟಿಕೊಡಬೇಕೆನಿಸುತ್ತಿದೆ. ದಯಮಾಡಿ ಮುಕುಂದೂರು ಗುರುಗಳ ಗದ್ದುಗೆಗೆ ಹೋಗುವ ಮಾರ್ಗವನ್ನು ತಿಳಿಸುವಿರ.

  ReplyDelete