ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, January 10, 2013

ಕೇಂದ್ರ ಸರ್ಕಾರಕ್ಕೆ ಒತ್ತಡ ತರುವಿರಾ?

        ದೆಹಲಿಯ ರೇಪ್ ಪ್ರಕರಣದ ಬಗ್ಗೆ  ಬರೆಯುವುದರಿಂದೇನೂ ಪ್ರಯೋಜನವಿಲ್ಲ, ಬೇಡವೆಂದು  ಸುಮ್ಮನಿದ್ದೆ..ಸುಮ್ಮನಿರಲು ಸಾಧ್ಯವಿಲ್ಲ. ಕಾರಣ    ಈ ವಿಚಾರ ವ್ಯಾದಿಗಳಿಗೆ ನಿಜಕ್ಕೂ  ಸಮಾಜಿಕ ನೆಮ್ಮದಿಯ ಬಗ್ಗೆ ಸ್ವಲ್ಪವೂ ಕಳಕಳಿ ಇಲ್ಲ. ಆರ್.ಎಸ್.ಎಸ್ ನಾಯಕರು ಏನೇ ಹೇಳಿದರೂ  ಹೇಳಿಕೆಯ ಯಾವುದೋ ಅಂಶವನ್ನು ಹಿಡಿದುಕೊಂಡು             ಅಪಪ್ರಚಾರ  ಮಾಡುವುದು. ಇದು ವಿಚಾರವ್ಯಾದಿಯಲ್ಲದೆ ಮತ್ತೇನು?
       ಸನ್ಮಾನ್ಯ  ಶ್ರೀ ಮೋಹನ್ ಜಿ ಭಾಗವತ್ ರಾಗಲೀ,  ಒಬ್ಬ ಬಾಬಾ ಆಗಲೀ ಯಾವ ನಿನ್ನೆಲೆಯಲ್ಲಿ ಮಾತನಾಡಿದ್ದಾರೆಂಬ ಪೂರ್ವಾಪರ ಚಿಂತನೆ ನಡೆಸದವರಿಗೆ ಏನೆನ್ನಬೇಕು? ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಕ್ಕಾಗಿ                ಜೀವನವನ್ನೇ ಮುಡಿಪಾಗಿಟ್ಟವರು ಮಹಿಳಾ ವಿರೋಧಿಗಳು! ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ! ಎಂದು ಕುಟುಕುವವರಿಗೆ ಜೈ ಅನ್ನಬೇಕೆ? ಅಲ್ಲವೇ?
ವಿವೇಕಾನಂದರು ಈಗ್ಗೆ ನೂರ ಇಪ್ಪತ್ತು ವರ್ಷಗಳ    ಹಿಂದೆ  ಯಾವ ವಿದ್ಯಾವಂತರೆನಿಸಿಕೊಂಡವರ ಮಾನಸಿಕತೆ ಬಗ್ಗೆ ದು:ಖಿತರಾಗಿದ್ದರೋ ಅದೇ ಮಾನಸಿಕತೆಯ ವಿದ್ಯಾವಂತರೆನಿಸಿಕೊಂಡವರು ಇಂದೂ ನಮ್ಮ ಸಂಸ್ಕೃತಿ -ಪರಂಪರೆಯ ಬಗ್ಗೆ  ಅಪಪ್ರಚಾರ ಮಾಡುತ್ತಲೇ ಇದ್ದಾರೆ, ಎನ್ನದೆ ವಿಧಿ ಇಲ್ಲ. ಅವರು ಯಾಕೆ ಹೀಗೆ  ಅಪಪ್ರಚಾರ ಮಾಡುತ್ತಿದ್ದಾರೆ? ಆಳವಾಗಿ ಯೋಚಿಸಿದಾಗ ಗೊತ್ತಾಗುವುದು ಇವರು  ಏನಕೇನ ಪ್ರಕಾರೇಣ  ಪ್ರಚಾರದಲ್ಲಿರಬೇಕು. ಅಷ್ಟೆ. 
ಮಹಿಳೆ ಯೊಬ್ಬಳ ಮೇಲೆ, ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ವಾಗಿದೆ ಎಂದು ತಿಳಿದ ಕೂಡಲೇ  ನೋವು ಅನುಭವಿಸಿದ್ದ ವ್ಯಕ್ತಿಗೆ ಘಟನೆಯಿಂದ ಎಷ್ಟು ನೋವಾಗಿತ್ತೋ  ಇವರ  ಪ್ರಚಾರದಿಂದ ಅದರ ಹತ್ತರಷ್ಟು ನೋವಾಗುತ್ತದೆ!  ಇಂತಾ ಸೂಕ್ಷ್ಮ ವಿಚಾರ  ವಿದ್ಯಾವಂತರೆನಿಸಿಕೊಂಡ ವರಿಗೆ  ಅರ್ಥವೇ ಆಗುವುದಿಲ್ಲವೇ? 
ದೆಹಲಿಯ ಘಟನೆ ಸುದ್ಧಿ ಪ್ರಕಟವಾದ  ನಂತರ ನಿತ್ಯವೂ  ಅಂತಹ  ನಾಲ್ಕಾರು ಸುದ್ಧಿಗಳು ಪೇಪರ್ ನಲ್ಲಿ ಜಾಗ ಪಡೆಯುತ್ತಿವೆ. ಇದೇನು ಶುಭ ಸೂಚನೆಯೇ?  ಕೆಲವರ  ಆಕ್ಷೇಪಣೆ ಎಂದರೆ  ಇಂತಹಾ ಪ್ರಕರಣಗಳನ್ನು  ಬಲಪಂಥೀಯರು ಖಂಡಿಸಿ ಹೇಳಿಕೆ ಕೊಡುವುದೇ ಇಲ್ಲ!! ಎಂತಹಾ ದೌರ್ಭಾಗ್ಯ ನೋಡಿ. 

ಯಾವುದೇ  ಅಹಿತ ಘಟನೆ ಯಾದಾಗ ಅದಕ್ಕೆ ಪರಿಹಾರ ಕಂಡುಹಿಡಿಯಬೇಕು, ಸೂಕ್ತ ಸಹಾಯ ಮಾಡಬೇಕು, ನಮ್ಮ ಮನೆಯಲ್ಲಿ ಇಂತಹ ಘಟನೆ ನಡೆದಾಗ  ಪೇಪರ್ನಲ್ಲಿ ಸುದ್ಧಿ ಮಾಡಲು ಬಯಸುತ್ತೇವೋ ಅಥವಾ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು  ಯತ್ನಿಸುತ್ತೀವೋ? 
ಇಡೀ ದೇಶವೇ ಏಕೆ, ವಿಶ್ವವೇ ಒಂದು ಕುಟುಂಬ!  ಎಲ್ಲಿ ಇಂತಹ ಅಹಿತ ಘಟನೆಗಳು ನಡೆದರೂ ಹತ್ತಿರದಲ್ಲಿರುವವರು ಸ್ಪಂಧಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೇ ಹೊರತೂ  ಅದಕ್ಕೆ ಇನ್ನೂ ಹೆಚ್ಚಿನ  ಮಾಧ್ಯಮದ  ಪ್ರಚಾರ ಕೊಡಿಸಿ ,ಮೊದಲೇ ದು:ಖದಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು.

ಅತ್ಯಾಚಾರಿಗಳಿಗೆ ಧಿಕ್ಕಾರ! ಅದನ್ನು ಪ್ರಚಾರ ಮಾಡುವವರಿಗೂ ಧಿಕ್ಕಾರ!!  ನಿಜವಾಗಿ ದೇಶಪ್ರೇಮವಿರುವವರು ಕಾಶ್ಮೀರದ ಗಡಿಯಲ್ಲೇನಾಗುತ್ತಿದೆ? ಎಂಬುದನ್ನು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ    ಕೇಂದ್ರ ಸರ್ಕಾರಕ್ಕೆ  ಒತ್ತಡ ತರುವಿರಾ?


2 comments:

  1. ಮೋಹನ್ ಭಾಗವತ್ರ ಹೇಳಿಕೆ ಪೂರ್ವಾಪರ ವಿಚಾರಿಸದೆ ಮಾತನಾಡುತ್ತಿದ್ದಾರೆ ಎಂಬುದಕ್ಕಿಂತ ಮೊದಲು ನಾವು ವಿಚಾರಿಸಬೇಕಾದ ವಿಷಯಗಳು ಹಲವು ಇದ್ದವು, ದೇಶದಲ್ಲಿಯೇ ಅವರು ವಿಂಗಡಣೆ ರೂಪದಲ್ಲಿ ನೋಡಿದರು. ಅತ್ಯಚಾರ ಆಗುತ್ತಿರುವುದು ಭಾರತದಲ್ಲಿ ಅಲ್ಲ ಇಂಡಿಯಾದಲ್ಲಿ ಎಂಬ ಹೇಳಿಕೆಯೇ ಅವರಿಂದ ಬರಬಾರದು ಏಕೆಂದರೆ ಅತ್ಯಚಾರ ಎಂಬುದು ಕೇವಲ ಪ್ರಸ್ತುತ ದಿನಗಳಲ್ಲಿ ನಡೆಯುವ ಹೇಯ ಕೃತ್ಯ ಅಲ್ಲ ಹಿಂದಿನಿಂದಲೂ ಇಂತಹ ಕೃತ್ಯಗಳು ನಡೆಯುತ್ತಲೇ ಬಂದಿವೆ. ಆದರೆ ಮಾನಕ್ಕಂಜಿದ ಮಹಿಳೆಯರು ಅದನ್ನು ಹೊರಗೆಡವದೆ ಮತ್ತು ತಮ್ಮ ಭವಿಷ್ಯದ ದೃಷ್ಟಿಯಿಂದ ಮರ್ಯಾದೆಗೆ ಅಂಜಿ ಹೇಳಿಕೊಳ್ಳದ ಎಷ್ಟೋ ಮಹಿಳೆಯರನ್ನು ಸಮಾಜದಲ್ಲಿ ಕಾಣುತ್ತೇವೆ.

    ReplyDelete