ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, July 16, 2013

ಅಭಿನಂದನೆಗಳು

     ಅಭಿನಂದನೆಗಳು. ಆತ್ಮೀಯ ಮಿತ್ರ ಹರಿಹರಪುರ ಶ್ರೀಧರ ಯಾವ ಮುಹೂರ್ತದಲ್ಲಿ ಈ ಬ್ಲಾಗ್ ಪ್ರಾರಂಭಿಸಿದರೋ, ಯಾವ ಉದ್ದೇಶದಿಂದ ಪ್ರಾರಂಭವಾಯಿತೋ ಅದು ಸಾರ್ಥಕ ರೀತಿಯಲ್ಲಿ ಮುನ್ನಡೆದಿದೆ. ಈ ವೈಚಾರಿಕ ತಾಣದ ಪುಟವೀಕ್ಷಣೆಗಳು ಒಂದು ಲಕ್ಷದ ಗಡಿ ದಾಟಿ ಮುನ್ನಡೆದಿರುವುದು ಶುಭ ಸಂಕೇತವೇ ಸರಿ. 'ವೇದಭಾರತೀ' ಅಡಿಯಲ್ಲಿ ನಡೆದಿರುವ,  ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಕಾರ್ಯಕ್ರಮಗಳಿಗೆ ಇದು ಸ್ಫೂರ್ತಿದಾಯಕವಾಗಿದೆ. ಹರಿಹರಪುರ ಶ್ರೀಧರರಿಗೆ, ಎಲ್ಲಾ ಸಹಕಾರಿಗಳಿಗೆ, ಓದುಗರಿಗೆ, ವೈಚಾರಿಕ ಜಿಜ್ಞಾಸೆ, ಚರ್ಚೆಗಳಲ್ಲಿ ಸಕ್ರಿಯರಾಗಿ ಪಾಲುಗೊಂಡ ಎಲ್ಲರಿಗೂ ಮನಃಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.

1 comment:

  1. ಹಿರಿಯಣ್ಣನಂತೆ ಗೌರವ ಸಂಪಾದಕರಾಗಿ ಮಾರ್ಗದರ್ಶನ ಮಾಡುತ್ತಿರುವ ಕವಿ ನಾಗರಾಜರ ಶ್ರಮ ಹಾಗೂ ಓದುಗರ ಸಹಕಾರಕ್ಕೆ ಸದಾ ಋಣಿ.

    ReplyDelete