Pages

Friday, September 25, 2015

ಸಂಘದ ಶಾಖೆಗಳಲ್ಲಿ ವೇದದ ಪರಿಚಯ

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ  ಮೋಹನ್ ಜಿ ಭಾಗವತ್  ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ  ಎಲ್ಲಾ  ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್  ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ  ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ ,  ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ  ಪಠಣ. ಇದು ಅದ್ಭುತ. ವೇದಭಾರತಿಯು  ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ  ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ  ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.



No comments:

Post a Comment