Pages

Wednesday, September 28, 2016

ಯಾರೋ ಮೆಚ್ಚಲಿ ಎಂದು ಸುಳ್ಳನ್ನೇ ಬರೆಯಬೇಕೆ?



ಸುಳ್ಳು, ಸುಳ್ಳು,ಸುಳ್ಳು...........
ಅಬ್ಬಾ ಅದೆಷ್ಟು ಸುಳ್ಳು ಹೇಳೋದು!

ಸುಳ್ಳನ್ನು ಯಾರೋ ಅಮಾಯಕರು ಹೇಳಿದ್ದರೆ ಬೇಸರವಾಗುತ್ತಿರಲಿಲ್ಲ.ಅಮಾಯಕರಿಗೆ ಸುಳ್ಳು ಹೇಳುವವರನ್ನು ಕಂಡಾಗ ಬಲು ಬೇಸರವಾಗುತ್ತೆ.


ಪಾಪ! ಒಬ್ಬ ಅಮಾಯಕ ಅವನ ಕಷ್ಟಕಾಲದಲ್ಲಿ ಇವರನ್ನು ನಂಬಿ ಬಂದರೆ ಅವನಿಗೆ ಸಮಾಧಾನ ಹೇಳಿ ಆತ್ಮ ವಿಶ್ವಾಸವನ್ನು ತುಂಬುವ ಬದಲು ಅವನನ್ನು ಇನ್ನೂ ಪ್ರಪಾತಕ್ಕೆ ತಳ್ಳಿದರೆ!

ಇಂತಾ ಒಂದು ಘಟನೆಯನ್ನು ಅಮಾಯಕ ವ್ಯಕ್ತಿ ನನ್ನೊಡನೆ ಹೇಳಿಕೊಂಡಾಗ ಆತನಿಗೆ ಸಮಾಧಾನ ಹೇಳಿದ್ದೆ. ಆದರೂ ಆತನಿಗೆ ಪೂರ್ಣ ಸಮಾಧಾನವಿಲ್ಲ. ನನಗೆ ನಾಲ್ಕೈದು ದಿನಗಳಿಂದ ಫೋನ್ ಮಾಡುತ್ತಲೇ ಇದ್ದಾನೆ. ದುರಾದೃಷ್ಟಕ್ಕೆ ನಾನು ಸತ್ಸಂಗದಲ್ಲೋ,ಯೋಗ ತರಗತಿಯಲ್ಲೋ ಇರುವಾಗಲೇ ಆತನ ಫೋನ್ ಬರುತ್ತಿತ್ತು." ಒಂದು ಕಾರ್ಯಕ್ರಮದಲ್ಲಿರುವೆ ಮುಗಿದಮೇಲೆ ಮಾತನಾಡುವೆ" ಎಂದು ಹೇಳುತ್ತಿದ್ದೆ.ಆ ನಂತರ ಮರೆತು ಬಿಡುತ್ತಿದ್ದೆ.
ಕೊನೆಗೂ ಬಿಡುವಿದ್ದಾಗ ಫೋನ್ ಬಂತು.

- " ಸಾರ್ ನೀವು ನಮ್ಮನೆಗೆ ಬಂದು ಅಗ್ನಿ ಹೋತ್ರ ಮಾಡಿಸ ಬೇಕು.ಎಷ್ಟು ಖರ್ಚಾಗುತ್ತೆ? ಸಾರ್?

- 50 ರೂಪಾಯಿ ಖರ್ಚಾಗುತ್ತೆ.

- ಸಾರ್, ನನ್ನನ್ನು ನೋಡಿ ತಮಾಶೆ ಮಾಡ್ತೀರ ಸಾರ್?

- ಖಂಡಿತಾ ಇಲ್ಲ. ತುಪ್ಪಕ್ಕೆ 50 ರೂಪಾಯಿ ಆಗಬಹುದು ಅಷ್ಟೆ.

ಆತ ಇರುವುದು ಬೆಂಗಳೂರಿನಲ್ಲಿ. ಬೆಂಗಳೂರಿಗೆ ಹೋದಾಗ ಅವರ ಮನೆಗೆ ಹೋಗಿ ಅಗ್ನಿಹೋತ್ರ ಮಾಡಿ ಅವನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿಬರುವೆ. ಫೋನಿನ್ನಲ್ಲಿ ಸಾಕಷ್ಟು ಆಪ್ತ ಸಮಾಲೋಚನೆ ಮಾಡಿದ್ದಾಗಿದೆ.

ಆತನಿಗೆ ಕಷ್ಟ ಬಂದು ತೊಂದರೆಯಲ್ಲಿರುವಾಗ ತೊಂದರೆ ಪರಿಹರಿಸಲು ಆತನಿಗೆ ಕೊಟ್ಟ ಸಲಹೆಗೆ ತಗಲುವ ಖರ್ಚು ಎಷ್ಟು ಗೊತ್ತಾ?

ಬರೋಬರಿ 50 ಸಾವಿರ ರೂ!!

ಆತನ ಹತ್ತಿರ ಎರಡು ಹೊತ್ತು ಊಟಕ್ಕೆ ಗತಿ ಇಲ್ಲ!!

ಇದರಲ್ಲಿ ಯಾವುದೂ ಉತ್ಪ್ರೇಕ್ಷೆ ಇಲ್ಲ.

ನಾನು ಹಿಂದೆ ಕೂಡ ಇಂತಹ ಘಟನೆ ಬರೆದಿರುವೆ. ಆಗ ಮಿತ್ರರೊಬ್ಬರು ನನಗೆ ಮೆಸ್ಸೇಜ್ ಮಾಡಿದರು." ನೀವೇ ಹೀಗೆ ಬರೆದು ಬಿಟ್ಟರೆ! ಜನರಲ್ಲಿ ಧಾರ್ಮಿಕ ಶ್ರದ್ಧೆಯೇ ಹೊರಟು ಹೋಗಿ ಬಿಡುತ್ತೆ. ನೀವು ಸಾಮಾಜಿಕ ತಾಣಗಳಲ್ಲಿ ಬರೆಯುವ ಬದಲು ಅವರಿಗೆ ನೇರ ಮೆಸ್ಸೇಜ್ ಮಾಡ ಬಹುದಲ್ಲ! ಅಥವಾ ಫೋನಿನಲ್ಲೇ ತಿಳಿಸ ಬಹುದಲ್ಲ!

ಅವರದು ಒಂದು ರೀತಿಯ ಆಕ್ಷೇಪಣೆಯೇ ಅಗಿತ್ತು.
ಸರಿ- ಎಂದು ಸುಮ್ಮನಾದೆ.

ಕೆಲವು ದಿಗಳ ನಂತರ ಮುಕ್ತವಾಗಿ ಸಿಕ್ಕಾಗ ಹೇಳಿದೆ " ಇಂತಾ ಸಮಸ್ಯೆಗಳಲ್ಲಿ ನೆರಳುತ್ತಿರುವ ಬೇರೆಯವರಿಗೆ ಅನುಕೂಲವಾಗುವುದಿಲ್ಲವೇ?

- ಒಟ್ಟಿನಲ್ಲಿ ಹೆಚ್ಚು ವಿರೋಧಿಗಳನ್ನು ಕಟ್ಟಿಕೊಳ್ಳುತ್ತೀರಿ. ಅವರೆಂದರು.

ನಿಜವಾಗಿ ಹೇಳುವೆ " ಜನ ಮೆಚ್ಚಲಿ ಎಂದು ಹೊಗಳಿ ಬರೆಯಲಾರೆ. ಪ್ರಪಂಚದ ಸಮಸ್ಯೆಗಳಗೆಲ್ಲಾ ಪರಿಹಾರ ಸೂಚಿಸುವ ಬ್ರಮೆ ನನಗಿಲ್ಲ. ಆದರೆ ಸಾಮಾಜಿಕ ತಾಣಗಳಿಂದಲೇ ನನ್ನ ಬಗ್ಗೆ ತಿಳಿದು ನನ್ನ ಸಲಹೆ ಕೇಳಿದಾಗ ಬರೆಯದೆ ಇರಲಾರೆ.

ಯಾರೋ ಮೆಚ್ಚಲಿ ಎಂದು ಸುಳ್ಳನ್ನೇ ಬರೆಯಬೇಕೆ?

No comments:

Post a Comment