///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Thursday, May 29, 2014
Friday, May 23, 2014
ನಮ್ಮ ಮನೆಯೊಳಗೆ ಕೊಲೆಗಡುಕರು, ಲಫಂಗರು, ಮುಕ್ತವಾಗಿ ಪ್ರವೇಶಿಸುತ್ತಿದ್ದಾರೆ, ಎಚ್ಛರ!!
ಮೊಗೆದಷ್ಟೂ ನೀರು ಎನ್ನುವ
ಮಾತು ಕೇಳಿದ್ದೇವೆ. ವೇದದ ವಿಚಾರದಲ್ಲಿ ಇದು ನೂರಕ್ಕೆ ನೂರು ಸತ್ಯ. ಬದುಕಿನ ಯಾವ ವಿಚಾರವನ್ನು ಹುಡುಕುತ್ತಾ
ಹೋದರೂ ವೇದದಲ್ಲಿ ಅದಕ್ಕೆ ಮಾರ್ಗದರ್ಶನವಿದೆ. ಅಥರ್ವಣ ವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.
ಯನ್ಮೇ ಮನಸೋ ನ ಪ್ರಿಯಂ
ನ ಚಕ್ಷುಸೋ ಯನ್ಮೇ ಬಭಸ್ತಿ ನಾಭಿನಂದತಿ |
ತದ್ ದುಷ್ವಪ್ನ್ಯಂ ಪ್ರತಿಮುಂಚಾಮಿ ಸಪತ್ನೇ ಕಾಮಂ ಸ್ತುತ್ವೋದಹಂ ಭಿದೇಯಮ್ ||
[ಅಥರ್ವ ಕಾಂಡ-೯, ಸೂಕ್ತ-೨,
ಮಂತ್ರ-೨ ]
ಅರ್ಥ :-
ಯತ್ ಮೇ ಮನಸಃ ನಪ್ರಿಯಂ
ನ = ಯಾವುದು ನನ್ನ ಮನಸ್ಸಿಗೆ ಪ್ರಿಯವಾಗಿಲ್ಲವೋ
ಯತ್ ಮೇ ಚಕ್ಷುಷಃ ಪ್ರಿಯಂ
ನ = ಯಾವುದು ನನ್ನ ಕಣ್ಣಿಗೆ ಪ್ರಿಯವಾಗಿಲ್ಲವೋ
ಯತ್ ಮೇ ಬಭಸ್ತಿ = ಯಾವುದು
ನನ್ನನ್ನು ಭಯಪಡಿಸುತ್ತದೋ
ನ ಅಭಿನಂದತಿ = ಆನಂದವನ್ನುಂಟುಮಾಡುವುದಿಲ್ಲವೋ
ತತ್ ದುಷ್ವಪ್ನ್ಯಂ =
ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು,
ಸಪತ್ನೇ ಪ್ರತಿಮುಂಚಾಮಿ
= ವಿರೋಧಿಯೇ, ವಿಸರ್ಜಿಸಿಬಿಡುತ್ತೇನೆ
ಅಹಂ ಕಾಮಂ ಸ್ತುತ್ವಾ
= ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ
ಉತ್ ಭಿದೇಯಮ್ = ಉದ್ಧಾರಹೊಂದುತ್ತೇನೆ
ಅಥವಾ ಭಯದಿಂದ ಮೇಲೇಳುತ್ತೇನೆ
ಭಾವಾರ್ಥ :-
ಯಾವುದು ನನ್ನ ಮನಸ್ಸಿಗೆ
ಪ್ರಿಯವಾಗಿಲ್ಲವೋ, ಯಾವುದು ನನ್ನ ಕಣ್ಣಿಗೆ ಪ್ರಿಯವಾಗಿಲ್ಲವೋ, ಯಾವುದು ನನ್ನನ್ನು ಭಯಪಡಿಸುತ್ತದೋ,
ಯಾವುದು ಆನಂದವನ್ನುಂಟುಮಾಡುವುದಿಲ್ಲವೋ, ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು,
ವಿಸರ್ಜಿಸಿಬಿಡುತ್ತೇನೆ, ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ,
ಉದ್ಧಾರಹೊಂದುತ್ತೇನೆ ಅಥವಾ ಭಯದಿಂದ ಮೇಲೇಳುತ್ತೇನೆ.
ಬಹುಷ: ಗಾಂಧೀಜಿಯವರು
ಈ ವೇದ ಮಂತ್ರಾರ್ಥವನ್ನು ತಿಳಿದೇ ಮೂರು ಮಂಗಗಳನ್ನು ಚಿತ್ರಿಸಿರಬೇಕು. ಕೆಟ್ಟದ್ದನ್ನು ನೋಡುವುದಿಲ್ಲ,
ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟ ಮಾತನಾಡುವುದಿಲ್ಲ, ಎಂಬ ಸಂದೇಶವನ್ನು ಗಾಂಧೀಜಿಯವರು ಕೊಡಬೇಕಾದರೆ
ಈ ವೇದ ಮಂತ್ರವು ಅವರಿಗೆ ಸ್ಪೂರ್ಥಿ ನೀಡಿರಬೇಕು. ಯಾವುದು ನನ್ನ ಮನಸ್ಸಿಗೆ, ಕಣ್ಣಿಗೆ ಪ್ರಿಯವಾಗಿಲ್ಲವೋ,
ಯಾವುದು ನನ್ನನ್ನು ಭಯಪಡಿಸುತ್ತದೋ,ಯಾವುದು ಆನಂದ ಉಂಟುಮಾಡುವುದಿಲ್ಲವೋ, ಅಂತಹಾ ಅನಿಷ್ಟಗಳನ್ನು ನನ್ನಿಂದ
ಹೊರಹಾಕಿ ಬಿಡುವೆ. ಹಾಗೂ ಸಕಲಲೋಕಕಾಮ್ಯನಾದ ಭಗವಂತನನ್ನು ಸ್ತುತಿಸಿ ಉದ್ಧಾರ ಹೊಂದುತ್ತೇನೆ, ಭಯದಿಂದ
ಮೇಲೇಳುತ್ತೇನೆ.
ಎಷ್ಟು ಅದ್ಭುತವಾಗಿದೆ
ಈ ವೇದ ಮಂತ್ರ! ನನ್ನ ಮನಸ್ಸಿಗೆ, ಕಣ್ಣಿಗೆ ಪ್ರಿಯವಲ್ಲದ ಅಂದರೆ ಏನು? ಇಲ್ಲಿ ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಮಾತ್ರ ಉಪಯೋಗವಾಗುತ್ತದೆ.ಇಲ್ಲವಾದರೆ ಪ್ರಯೋಜನವಾಗಲಾರದು.
ನನ್ನ ಮನಸ್ಸು ಏನು ಬಯಸಬೇಕು, ನನ್ನ ಕಣ್ಣು ಏನು ನೋಡಬೇಕೆಂಬ ಅರಿವು ನಮಗಿದ್ದಾಗ ಮಾತ್ರ ಯಾವುದು ಅಪ್ರಿಯವೆಂದು
ಅರಿವಾಗುತ್ತದೆ. ಪ್ರತಿನಿತ್ಯ ಮಾಡುವ ಅಗ್ನಿಹೋತ್ರದ
ಆರಂಭದಲ್ಲಿ ಹೇಳುವ ಅಂಗಸ್ಪರ್ಷ ಮಂತ್ರಗಳಲ್ಲಿ ಹೇಳುತ್ತೇವೆ. . . . . . .
ಓಂ ವಾಂಙ್ಮ ಆಸ್ಯೇಸ್ತು
|| ಓಂ ನಸೋರ್ಮೇ ಪ್ರಾಣೋsಸ್ತು||
ಓಂ ಅಕ್ಷ್ಣೋರ್ಮೇ ಚಕ್ಷುರಸ್ತು||
ಓಂ ಕರ್ಣಯೋರ್ಮೇ ಶ್ರೋತ್ರಮಸ್ತು||
ಓಂ ಬಾಹ್ವೋರ್ಮೇ ಬಲಮಸ್ತು||
ಓಂ ಊರ್ವೋರ್ಮೇ ಓಜೋಸ್ತು||
ಓಂ ಅರಿಷ್ಟಾನಿ ಮೇs೦ಗಾನಿ
ತನೂಸ್ತನ್ವಾ ಮೇ ಸಹಸಂತು ||
ಭಾವಾರ್ಥ :-
ನಮ್ಮ ತುಟಿಗಳಲ್ಲಿ ಒಳ್ಳೆಯ
ಮಾತೇ ಬರಲಿ, ಮೂಗಿನಿಂದ ಒಳ್ಳೆಯ ಪ್ರಾಣವಾಯುವನ್ನು ಸ್ವೀಕರಿಸುವಂತಾಗಲಿ, ಕಣ್ಗಳು ಒಳ್ಳೆಯದನ್ನೇ ನೋಡುವಂತಾಗಲೀ, ಕಿವಿಗಳು ಒಳ್ಳೆಯದನ್ನೇ
ಕೇಳುವಂತಾಗಲೀ, ಬಾಹುಗಳಲ್ಲಿ ಬಲವಿರಲಿ, ತೊಡೆಗಳಲ್ಲಿ ಶಕ್ತಿ ಇರಲಿ, ನನ್ನ ಎಲ್ಲಾ ಅಂಗಾಗಳಲ್ಲೂ ಶಕ್ತಿ
ಇರಲಿ|
ನನ್ನ ಎಲ್ಲಾ ಅಂಗಾಂಗಗಳಿಗೂ
ಶಕ್ತಿ ಸಿಗಲಿ, ಎಂದು ದೇವರನ್ನು ಪ್ರಾರ್ಥಿಸಿದೊಡನೆ ಶಕ್ತಿ ಸಿಕ್ಕಿಬಿಡುತ್ತದೋ? ಖಂಡಿತಾ ಇಲ್ಲ. ಭಗವಂತನನ್ನು
ಪ್ರಾರ್ಥಿಸಿ ನಾವು ಅಗತ್ಯವಾದ ಆಹಾರ ಸೇವನೆ, ಮಾಡುವ ವ್ಯಾಯಾಮ, ನಮ್ಮ ಸದ್ವಿಚಾರಗಳು ನಮಗೆ ಶಕ್ತಿ
ತುಂಬುತ್ತವೆ. ಭಗವಂತನೇ ಕೊಡುವವನು ಹೌದು, ಆದರೆ ಅವನು ಸುಮ್ಮನೆ ಕೊಡುವುದಿಲ್ಲ, ಯೋಗ್ಯರಿಗೆ,ಅರ್ಹರಿಗೆ
ಮಾತ್ರ ಕೊಡುತ್ತಾನೆ. ಅಂದರೆ ಆರೋಗ್ಯಯುತವಾದ ಪುಷ್ಟಿದಾಯಕವಾದ ಆಹಾರದ ಹಿತಮಿತವಾದ ಸೇವನೆ, ಸೂಕ್ತವ್ಯಾಯಾಮ,ಧ್ಯಾನ,ಸಚ್ಚಿಂತನೆಗಳಿಂದ
ಮಾನಸಿಕವಾಗಿ,ಬೌದ್ಧಿಕವಾಗಿ ಮತ್ತು ಶಾರೀರಿಕವಾಗಿಯೂ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ
ನಮ್ಮ ಆತ್ಮಬಲವನ್ನೂ ಹೆಚ್ಚಿಸಿಕೊಳ್ಳಬಹುದು.
ಯಜ್ಞವನ್ನು ಮಾಡುವಾಗ
ಇದಂ ನಮಮ ಎಂದು ಹೇಳುತ್ತೇವೆ. ಅಂದರೆ ಇದು ನನಗಾಗಿ ಅಲ್ಲ.ಹಾಗಾದರೆ ಯಾರಿಗಾಗಿ ಯಜ್ಞ ಮಾಡಬೇಕು? ಅಂದರೆ
ನನಗಾಗಿ ಅಲ್ಲ ನಾನು ಮಾಡುತ್ತಿರುವುದು ಈ ಸಮಾಜದ ಹಿತಕ್ಕಾಗಿ. ನಾನೂ ಕೂಡ ಈ ಸಮಾಜದಲ್ಲಿದ್ದೀನಲ್ಲವೇ? ಸಮಾಜವು ಚೆನ್ನಾಗಿದ್ದರೆ ತಾನೇ ನಾನೂ ಕೂಡ ಚೆನ್ನಾಗಿರಲು
ಸಾಧ್ಯ! ನಾನು ಮಾತ್ರ ಚೆನ್ನಾಗಿರುತ್ತೀನೆಂದರೆ ನನ್ನ ಸುತ್ತ ಮುತ್ತಿನ ಅತೃಪ್ತರು ನನ್ನನ್ನು ಚೆನ್ನಾಗಿರಲು
ಬಿಡಲು ಸಾಧ್ಯವೇ ಇಲ್ಲ. ಆದ್ದರಿಂದ ನಾನು ಮಾಡುತ್ತಿರುವುದು ಸಮಾಜದ ಹಿತಕ್ಕಾಗಿ ಎಂಬ ಅರಿವು ನಮ್ಮಲ್ಲಿರಬೇಕು.
ಅದಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ, ನಮಗೆ ಇಂತಹ ಪವಿತ್ರ ಕೆಲಸ ಮಾಡಲು ಶಕ್ತಿ ಕೊಡು
ಯಾವುದು ನನ್ನ ಮನಸ್ಸಿಗೆ
ಪ್ರಿಯವಾಗಿಲ್ಲವೋ, ಯಾವುದು ನನ್ನ ಕಣ್ಣಿಗೆ ಪ್ರಿಯವಾಗಿಲ್ಲವೋ, ಎನ್ನುವಾಗ ಮೇಲಿನ ವಿಚಾರಗಳು ನಮ್ಮ
ಕಣ್ಮುಂದೆ ಬರಬೇಕು. ಯಾವುದು ಈ ವಿಚಾರಗಳಿಗೆ ವಿರುದ್ಧವಾಗಿದೆಯೋ. . . . . ತದ್ ದುಷ್ವಪ್ನ್ಯಂ ಪ್ರತಿಮುಂಚಾಮಿ ಸಪತ್ನೇ ಕಾಮಂ ಸ್ತುತ್ವೋದಹಂ ಭಿದೇಯಮ್|| ಎಂಬ ಈ ಮಂತ್ರ ಭಾಗದಲ್ಲಿ ನಾವು
ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇನೆ, ನಾನು
ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ, ಉದ್ಧಾರಹೊಂದುತ್ತೇನೆ ಅಥವಾ
ಭಯದಿಂದ ಮೇಲೇಳುತ್ತೇನೆ- ಎಂದು ಈ ವೇದಮಂತ್ರವು ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.
ಅಂದರೆ ಭಗವಂತನ ಮುಂದೆ
ಕುಳಿತು ಭಗವಂತಾ ನನ್ನಲ್ಲಿ ಸದ್ವಿಚಾರವನ್ನು ತುಂಬು, ದುಷ್ಟ ಚಿಂತನೆ ದೂರಮಾಡು ಎಂದರೆ ಸಾಕಾಗುವುದಿಲ್ಲ.
ನಮಗೆ ಸದ್ವಿಚಾರಗಳ-ದುರ್ವಿಚಾರಗಳ, ಪ್ರಿಯ ಮತ್ತು ಅಪ್ರಿಯ ವಿಚಾರಗಳ ಬಗ್ಗೆ ಸರಿಯಾದ ಕಲ್ಪನೆ ಇರಬೇಕು.
ಹಾಗಿದ್ದರೆ ನಾವು ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು, ಎಂಬುದನ್ನು ಸ್ವಯಂ ನಿರ್ಧರಿಸಲು
ಶಕ್ತರಾಗುತ್ತೇವೆ. ಅದಕ್ಕೆ ಸೂಕ್ತ ಶಕ್ತಿಕೊಡೆಂದು ಮಾತ್ರ ಭಗವಂತನಲ್ಲಿ ನಾವು ಪ್ರಾರ್ಥಿಸಬಹುದಷ್ಟೆ.
ಈ ಮಂತ್ರವನ್ನು ಸರಿಯಾಗಿ
ಅರ್ಥಮಾಡಿಕೊಂಡರೆ ನಾವು ನಮ್ಮ ನಿತ್ಯಜೀವನದಲ್ಲಿ ಏನು ನೋಡಬೇಕು, ಏನು ಕೇಳಬೇಕು,ಏನು ಮಾಡಬೇಕೆಂಬ ವಿಚಾರದಲ್ಲಿ ಸ್ಪಷ್ಟತೆಯನ್ನು ಪಡೆಯಬಹುದು. ಶ್ರೀ ಜಗ್ಗಿ ವಾಸುದೇವ್ ಅವರ
ಲೇಖನ ಒಂದನ್ನು ಓದುತ್ತಿದ್ದೆ. ಅವರ ನೇರ ನುಡಿಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ
ಹಿಂದೆಲ್ಲಾ ನಾವು ಮನೆಗೆ ಯಾರನ್ನು ಕರೆಯಬೇಕು? ಯಾರನ್ನು ಬಿಡಬೇಕು? ಯಾರನ್ನು ದೂರವಿಡಬೇಕು ? ಎಂದೆಲ್ಲಾ
ಯೋಚಿಸಿ ಅದರಂತೆ ನಡೆಯುತ್ತಿದ್ದೆವು. ಇಂದು ಈ ನಿರ್ಧಾರ ನಮ್ಮ ಕೈಲಿಲ್ಲ. ನಮ್ಮ ಮನೆಯಲ್ಲಿ ಟಿ.ವಿ.
ಎಂಬ ಪೆಡಂಬೂತ ಬಂದು ಬಿಟ್ಟಿದೆ. ಅದರ ಮೂಲಕ ನಮ್ಮ ಮನೆಯೊಳಗೆ ಕೊಲೆಗಡುಕರು, ಅತ್ಯಾಚಾರಿಗಳು, ದರೋಡೆಕೋರರು,
ಲಫಂಗರು, ಎಲ್ಲರೂ ಮುಕ್ತವಾಗಿ ಪ್ರವೇಶಿಸುತ್ತಾರೆ
ಅಬ್ಭಾ! ಎಷ್ಟು ಸತ್ಯವಾದ
ಮಾತಲ್ಲವೇ? ಒಳ್ಳೆಯ-ಕೆಟ್ಟ ಸಂಗತಿಗಳು ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ. ನಾವು ವೇದದ ಕರೆಯಂತೆ
ನಮಗೆ ಅಪ್ರಿಯವಾದ ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇವೆ,
ಎಂದು ಹೇಳಬೇಕಾದರೆ ಮೊದಲು ನಾವು ಟಿ.ವಿ.ಗೊಂದು ನೀತಿ ರೂಪಿಸಬೇಕು. ಪ್ರದರ್ಶನವಾಗುವ ಎಲ್ಲಾ ಒಳ್ಳೆಯ-ಕೆಟ್ಟ
, ಸಭ್ಯ-ಅಸಭ್ಯ , ದೃಶ್ಯಗಳನ್ನೆಲ್ಲವನ್ನೂ ನೋಡುತ್ತಾ, ಸುಶ್ರಾವ್ಯ ಸಂಗೀತದ ಜೊತೆಗೇ ಕರ್ಕಶ ಧ್ವನಿಯನ್ನೂ
ಕೇಳುತ್ತಾ ನನ್ನಲ್ಲಿ ಸುಧಾರಣೆಯಾಗಬೇಕೆಂದು ಬಯಸಿದರೆ ಅದು ಸಾಧ್ಯವಿಲ್ಲ ಮೊದಲು ಮನೆಯಲ್ಲಿ ಟಿ.ವಿಗೊಂದು
ನೀತಿ ರೂಪಿಸಬೇಕು. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬ ಸ್ಪಷ್ಟ ಕಲ್ಪನೆ ನಮಗಿದ್ದರೆ
ವೇದದ ಕರೆಯಂತೆ ನಾವು ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇನೆ,
ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ, ಉದ್ಧಾರಹೊಂದುತ್ತೇನೆ
ಅಥವಾ ಭಯದಿಂದ ಮೇಲೇಳುತ್ತೇನೆ-ಎಂಬ ವೇದದ ಕರೆಯಂತೆ ಸುಧಾರಣೆಯಾಗುವುದರಲ್ಲಿ ಸಂಶಯವಿಲ್ಲ.
Thursday, April 10, 2014
ವಿಜ್ಞಾನ ಇಷ್ಟೊಂದು ಮುಂದುವರೆದಿದೆ, ಜ್ಞಾನದ ಹಾತೊರೆಯುವಿಕೆ ಎಲ್ಲೆಲ್ಲಿಯೂ ಕಾಣಬರುತ್ತದೆ, ನಮ್ಮ ಋಷಿಮುನಿಗಳ ಚಿಂತನೆಯನ್ನು ತಿಳಿಯಲು ವಿಶ್ವದ ಜನರು ಕಾತುರರಾಗಿ ಭಾರತದ ಕಡೆ ನೋಡುತ್ತಿದ್ದಾರೆ. ಆದರೆ.......................
೧. ಇನ್ನೂ ನಮ್ಮಲ್ಲಿ ಮೌಢ್ಯ ಹರಿದಿಲ್ಲ
೨. ಕಟ್ಟುಕತೆಗಳಿಗೇ ವೇದಕ್ಕಿಂತ ಹೆಚ್ಚು ಮಾನ್ಯತೆ ಕೊಡುವ ದೊಡ್ದ ದೊಡ್ದ ವಿದ್ಯಾವಂತರೆನಿಸಿಕೊಂಡವರು ನಮ್ಮಲ್ಲಿಯೇ ಇದ್ದಾರೆ.
೩. ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧು: ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುದ್ಭ್ಯ: ||
[ಋಕ್ ೫.೬೦.೫]
ಯಾರೂ ದೊಡ್ದವರಲ್ಲಾ,ಯಾರೂ ಚಿಕ್ಕವರಲ್ಲ.ಭೂತಾಯಿಯ ಮಕ್ಕಳು ನಾವು,ಪರಮೇಶ್ವರನೇ ನಮ್ಮ ತಂದೆ. ನಾವೆಲ್ಲಾ ಸೋದರೆಂದು ಸಾರುವ ಋಗ್ವೇದದ ಈ ಮಂತ್ರಕ್ಕೆ ವೇದ ತಿಳಿದವರೇ ಅಪಚಾರ ಮಾಡುತ್ತಿಲ್ಲವಾ?
೪. ವೇದದ ಹೆಸರು ಹೇಳಿದೊಡನೆ ಉರಿದು ಬೀಳುವ ಜನರು ಒಂದು ಕಡೆ, ವೇದವನ್ನು ಅರಿತವರಿಂದಲೇ ವೇದ ವಿರೋಧಿ ನಡೆ ಮತ್ತೊಂದೆಡೆ.ಇದರಿಂದ ಸಮಾಜ ಸೊರಗಿಲ್ಲವೇ?
೫. ಅತ್ಯಂತ ದೊಡ್ದ ದೊಡ್ದ ಪದವೀ ಪಡೆದವರೂ ಕೂಡ ವೇದಕ್ಕೆ ವಿರುದ್ಧವಾದ ಅಂದರೆ ಅಜ್ಞಾನದ ಅಂಧಕಾರದಲ್ಲಿ ಮುಳುಗಿಲ್ಲವೇ? ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಡವೇ?
೬. ನಿಜವನ್ನು ದೇವರಮನೆಯಲ್ಲಿಟ್ಟು ಪೂಜೆ ಮಾಡುವ ವಿದ್ಯಾವಂತರೆನಿಸಿಕೊಂಡವರು ನಿಜವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ಉದ್ಧಾರವೂ ಆಗುತ್ತದೆ,ಸಮಾಜದ ಉದ್ಧಾರವೂ ಆಗುತ್ತದೆ.
೭. ಭಾರತದಲ್ಲಿ ವೇದದ ನಿಜವಾದ ಅರಿವುಂಟಾದರೆ ಅದು ಉದ್ಧಾರವಾಗುವುದರಜೊತೆಗೆ ವಿಶ್ವವನ್ನೂ ಮೇಲೆತ್ತುವ ಶಕ್ತಿ ಭಾರತಕ್ಕಿದೆ.
೮. ಆದರೆ ಕಟ್ಟು ಕತೆಗಳನ್ನೇ ವೇದದ ಹೆಸರಿನಲ್ಲಿ ಪಾಶ್ಚಾತ್ಯರಿಗೆ ತಿಳಿಸಿ ನಿಜವನ್ನು ಗಂಟುಕಟ್ಟಿಟ್ಟಿರುವ so called ವಿದ್ವಾಂಸರೇ ದಯಮಾಡಿ ವೇದಕ್ಕೆ ಅಪಚಾರ ಮಾಡಬೇಡಿ ತನ್ಮೂಲಕ ನಿಮಗೇ ನೀವು ದ್ರೋಹ ಮಾಡಿಕೊಳ್ಳಬೇಡಿ..

Tuesday, April 8, 2014
ಇತಿಹಾಸದ ನೈಜ, ಜೀವಂತ ಪ್ರತಿನಿಧಿ: ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಪಂ. ಸುಧಾಕರ ಚತುರ್ವೇದಿ
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (೮-೦೪-೨೦೧೪) ೧೧೭ ವಸಂತಗಳನ್ನು ಕಂಡು ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ- ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು. ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು. ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು. ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಇತಿಹಾಸದ ನೈಜ ಜೀವಂತ ಪ್ರತಿನಿಧಿ.
ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ.
ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
[ದಿ.8-04-2014ರ ಜನಮಿತ್ರ ಪತ್ರಿಕೆಯಲ್ಲಿ ಈ ಲೇಖನ ಪ್ರಕಟಿತವಾಗಿದೆ.]
[ದಿ.8-04-2014ರ ಜನಮಿತ್ರ ಪತ್ರಿಕೆಯಲ್ಲಿ ಈ ಲೇಖನ ಪ್ರಕಟಿತವಾಗಿದೆ.]
ಪಂಡಿತರೊಡನೆ:
ಮಾಹಿತಿಗೆ: ಎರಡು ವರ್ಷಗಳ ಹಿಂದಿನ ಫೋಟೋಗಳಿವು.
ಸಂಪದಿಗ ಗಣೇಶರು ಒದಗಿಸಿದ ಮಾಹಿತಿ:
TNN | Oct 2, 2011, 03.01 AM IST
I have no desire for death: Pt Sudhakar Chaturvedi
TNN | Oct 2, 2011, 03.01 AM IST
BANGALORE: At the World Elders Day celebrations, Pandit Sudhakar Chaturvedi, who claims to be 121 years and wants to live to be 300 years, said he had no time for death.
"I have no desire for death. Marne ko fursat nahin (no time for death)," he said, adding, "For longevity, one has to practise celibacy (brahmacharya) and also eat less so that the stomach doesn't bend."
He went on: "Now you don't find brahmacharis — there are only brashtacharis (corrupt people)."

Thursday, April 3, 2014
ಪರಮಾತ್ಮ ಸ್ತುತಿ
ಸ್ವಾಮಿ ದೇವನೆ ಸರ್ವದಾತನೆ ವಂದನೆ ಶತವಂದನೆ |
ದುರಿತವೆಲ್ಲವ ದೂರಮಾಡಿ ಒಳಿತುಗೊಳಿಸಲು ಪ್ರಾರ್ಥನೆ || ಪ ||
ಜಗವ ಸಲಹುವ ಸ್ವಾಮಿ ನೀನೇ ಒಬ್ಬನೇ ನೀನೊಬ್ಬನೇ
ಸರ್ವ ಗ್ರಹಗಳ ಶಕ್ತಿ ನೀನೆ ಲೋಕದೊಡೆಯನೆ ವಂದನೆ |
ಜ್ಯೋತಿ ನೀನೇ ಶಕ್ತಿ ನೀನೇ ಸಚ್ಚಿದಾನಂದನೊಬ್ಬನೇ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೧ ||
ಆತ್ಮದಾತನೆ ಶಕ್ತಿದಾತನೆ ಜಗದ್ವಂದ್ಯನೆ ಪರಮನೆ
ಸತ್ಯಮಾರ್ಗದಿ ನಡೆಸುವಾತನೆ ದೇವದೇವನೆ ವಂದನೆ |
ಸತ್ಯ ಸುಂದರ ಶಿವನು ನೀನೆ ಹುಟ್ಟು ಸಾವಿನ ಒಡೆಯನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೨ ||
ಪಶುಗಳೊಡೆಯನೆ ಪಕ್ಷಿಪಿತನೆ ಸಕಲ ಜೀವರ ರಾಜನೆ
ಜೀವರಾಶಿಯ ಕಾರ್ಯಕೊಡೆಯ ನ್ಯಾಯದೇವಗೆ ವಂದನೆ |
ಪ್ರಾಣದಾತನೆ ತ್ರಾಣದಾತನೆ ಹರುಷರೂಪಕೆ ತಿಲಕನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೩ ||
ಭುವಿಗೆ ಆಸರೆ ನಿನ್ನ ಕರುಣೆ ಪರಮ ಬೆಳಕಿನ ಲೋಕಕೆ
ಮುಕ್ತ ಸ್ಥಿತಿಗೆ ನೆಲೆಯ ನೀಡಿಹ ಕರುಣದೇವಗೆ ವಂದನೆ |
ಅಂತರಿಕ್ಷದ ಗ್ರಹಸಮೂಹಕೆ ಗತಿಯ ನೀಡಿಹ ಮಾನ್ಯನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೪ ||
ನಿನ್ನ ಬಿಟ್ಟು ಅನ್ಯರರಿಯೆವು ಜೀವಕುಲದ ಸ್ವಾಮಿಯೆ
ಸರ್ವ ಸೃಷ್ಟಿಯ ಜನಕ ನೀನೆ ಒಡೆಯ ನಿನಗೆ ವಂದನೆ |
ದಾಸರಾಗದೆ ಸಿರಿಗೆ ನಾವು ಒಡೆಯರಾಗಿ ಬಾಳುವ
ಕಾಮಿತಾರ್ಥದ ಫಲವು ಸಿಗಲಿ ನಿನ್ನ ಪೂಜಿಪ ಜೀವಗೆ || ೫ ||
ತೃಪ್ತಭಾವದ ಮುಕ್ತ ಸ್ಥಿತಿಯ ನಿನ್ನ ನೆಲೆಯಲಿ ಅರಸುವ
ವಿದ್ವಜ್ಜನರಿಗೆ ಜ್ಯೋತಿಯಾಗಿ ಮಾರ್ಗ ತೋರುವ ದೇವನೆ |
ನೀನೆ ಬಂಧು ನೀನೆ ದಾರಿ ನೀನೆ ಭಾಗ್ಯವಿಧಾತನು
ನಿನ್ನ ಸೃಷ್ಟಿಯ ನೀನೆ ಬಲ್ಲೆ ವಂದನೆ ಜಗದೊಡೆಯನೆ || ೬ ||
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ || ೭ ||
-ಕ.ವೆಂ.ನಾ.
*********
ಪ್ರೇರಣೆ:
ಈ ಕೆಳಕಂಡ ವೇದಮಂತ್ರಗಳ ಪ್ರೇರಣೆಯಿಂದ ಇದನ್ನು ರಚಿಸಿದ್ದು, ಇದು ಪದಶಃ ಅನುವಾದವಲ್ಲ. ಮಂತ್ರದ ಸಾರವನ್ನು, ಭಾವವನ್ನು ಕನ್ನಡದಲ್ಲಿ ಮೂಡಿಸುವ ಸಣ್ಣ ಪ್ರಯತ್ನವಷ್ಟೆ.
ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ|| (ಯಜು.೩೦.೩.)
ಓಂ ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್| ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೧೩.೪.)
ಓಂ ಯ ಆತ್ಮದಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ ದೇವಾಃ| ಯಸ್ಯ ಚ್ಛಾಯಾಮೃತಂ ಯಸ್ಯ ಮೃತ್ಯುಃ ಕಸ್ಮೈಃ ದೇವಾಯ ಹವಿಷಾ ವಿಧೇಮ|| (ಯಜು.೨೫.೧೩.)
ಓಂ ಯಃ ಪ್ರಾಣತೋ ನಿಮಿಷತೋ ಮಹಿತ್ವೈಕ ಇದ್ರಾಜಾ ಜಗತೋ ಬಭೂವ| ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೨೫.೧೧.)
ಓಂ ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ| ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೩೨.೬.)
ಓಂ ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ| ಯತ್ ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ ರಯೀಣಾಮ್|| (ಋಕ್.೧೦.೧೨೧.೧೦.)
ಓಂ ಸ ನೋ ಬಂಧುರ್ಜನಿತಾ ಸ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ| ಯತ್ರ ದೇವಾ ಅಮೃತಮಾನಶಾನಾಸ್ತೃತೀಯೇ ಧಾಮನ್ನಧ್ಯೈರಯಂತ|| (ಯಜು.೩೨.೧೦.)
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ|| (ಯಜು.೪೦.೧೬.)

Monday, March 31, 2014
ನಿಮ್ಮ ಪ್ರಶ್ಮೆಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉತ್ತರ
ವೇದಧ್ಯಾಯಿ ಶ್ರೀಸುಧಾಕರ ಶರ್ಮ ರವರಿಗೆ ವಂದನೆಗಳು.
ತಮ್ಮ ವೇದೋಕ್ತವಾದ ನುಡಿಗಳಿಂದ ನಮ್ಮೆಲ್ಲರಿಗೂ ವೇದತತ್ವಗಳನ್ನ ಬೋಧಿಸುತ್ತಿದ್ದೀರಿ. ಅದಕ್ಕಾಗಿ ಅಭಿನಂದನೆಗಳು-ಧನ್ಯವಾದಗಳು. ಹಾಗುಬ್ಲಾಗ್.ವೇದಸುಧೆ ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ|ಸಂಪಾದಕರು:ಹರಿಹರಪುರಶ್ರೀಧರ್ ಇವರಿಗೂ
ಅಭಿನಂದನೆಗಳು-ಧನ್ಯವಾದಗಳು.

ಮಹರ್ಷಿ ದಯಾನಂದ ಸರಸ್ವತಿ ಯವರ ಜೀವನಕಥೆಯನ್ನು ಮತ್ತು ಅವರು ರಚಿಸಿದ "ಸತ್ಯಾರ್ಥಪ್ರಕಾಶ"ಗ್ರಂಥವನ್ನು ಓದಿದ್ದೇನೆ. ವೇದಸುಧೆ / ಚಂದನ ಟಿವಿ / ಶಂಕರ ಟಿವಿಮೂಲಕ ಹಲವು ವರ್ಷಗಳಿಂದ ನಿಮ್ಮ ಪ್ರವಚನಗಳನ್ನು ಆಲಿಸಿದ್ದೇನೆ. ನನ್ನ ಎಲ್ಲಾ ತಳಮಳಗಳಿಗೂ ನಿಮ್ಮ ವೇದೋಕ್ತವಾದ ನುಡಿಗಳಿಂದ ಪರಿಹಾರ ಸಿಕ್ಕಿದೆ.
ಆದರೂ ಎರಡು ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಿ.
1. ನಮ್ಮ ಮನೆ ಗುಡ್ಡಗಾಡು ಸ್ಥಳದಲ್ಲಿರುವುದರಿಂದ ವಿಷಜಂತುಗಳು ಸಾಮಾನ್ಯವಾಗಿ ಬರುತ್ತಿರುತ್ತವೆ. ನಾಗರಹಾವನ್ನು ಬಿಟ್ಟು ಬೇರೆ ವಿಷವುಳ್ಳ ಹಾವುಗಳನ್ನು ನಮ್ಮ ಊರಿನಲ್ಲಿ ಕೊಲ್ಲುವ ಕ್ರಿಯೆ ನಡೆಯುತ್ತದೆ. ಭಗವಂತನ ಈ ಅದ್ಭುತ ಸೃಷ್ಟಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಎಂದನಿಸುತ್ತಿದೆ. ತಮ್ಮ ಅಭಿಪ್ರಾಯವೇನು?
2. ಹೆಣ್ಣು ಮಕ್ಕಳ ತಲೆಗೂದಲು ಬಾಚುವಾಗ, ಹೇನುಗಳು ಸಿಗುತ್ತವೆ ಸಹಜ. ಸಾಮಾನ್ಯವಾಗಿ ಸಿಕ್ಕಿದ ಹೇನುಗಳನ್ನು ಕೊಲ್ಲುವ ಪದ್ದತ್ತಿಯನ್ನು ರೂಢಿಸಿಕೊಂಡಿದ್ದೇವೆ. ಇದು ಸರಿಯೇ?
ದಯವಿಟ್ಟು ಉತ್ತರಿಸುವಿರಾ?
ಧನ್ಯವಾದಗಳೊಂದಿಗೆ,
ಸುರೇಂದ್ರ ಶೆಟ್ಟಿಗಾರ್
ಕೋಟ್ನಾಕಟ್ಟೆ, ಹಿರಿಯಡಕ, ಉಡುಪಿ. Mobile: 9483931868
ಶ್ರೀಯುತ ಸುರೇಂದ್ರರೇ!
ಶ್ರೀಯುತ ಸುರೇಂದ್ರರೇ!
ನಿಮ್ಮ ಜಿಜ್ಞಾಸೆ ಸಾಧುವಾಗಿದೆ.
ಜೀವಕೊಡಲು ಸಾಧ್ಯವಿಲ್ಲದ ಮೇಲೆ ಜೀವ ತೆಗೆಯಲೂ ಹಕ್ಕಿಲ್ಲ.
ಸಕಲ ಜೀವರಾಶಿಗಳೊಡನೆ ಮೈತ್ರಿಯಿಂದ ಬಾಳಬೇಕೆಂಬುದೇ ಮಾನವೀಯತೆ.ದುಷ್ಟಜಂತುಗಳೊಂದಿಗೆ ಅಲಿಖಿತ ಒಪ್ಪಂದ ಮಾಡಿಕೊಂಡು, ಗಡುಗಳನ್ನು ಗುರುತಿಸಿಕೊಂಡು ಬಾಳಬಹುದು. ಕಾಡಿನಲ್ಲಿ ಈ ನಿಯಮವನ್ನು ಪ್ರಾಣಿಗಳು ಪಾಲಿಸುತ್ತವೆ. ಮನುಷ್ಯನು ಕಾಡನ್ನು ಆಕ್ರಮಿಸಿದಾಗ, ಕಾಡುಪ್ರಾಣಿಗಳು - ಆನೆ ಇತ್ಯಾದಿ - ನಾಡಿಗೆ ನುಗ್ಗುವುದು ಅನಿವಾರ್ಯವಾಗುತ್ತದೆ. ನಮ್ಮ ಇರುವಿಕೆಗೆ, ಓಡಾಟಕ್ಕೆ ಸ್ಪಷ್ಟವಾದ ಸ್ಥಳಗಳನ್ನು ಗುರುತಿಸಿಕೊಂಡು, ಅದನ್ನು ದಾಟದೆ ಪಾಲಿಸಿದರೆ ಇತರ ಪ್ರಾಣಿಗಳೊಡನೆ - ಅವು ಕ್ರೂರ, ವಿಷಜಂತುಗಳಾದರೂ ಸಹಿತ - ಬದುಕುವುದು ಸಾಧ್ಯವಾಗುತ್ತದೆ.
ಕೂದಲಿನ ಸ್ವಚ್ಛತೆ ಕಾಪಾಡಿಕೊಂಡಾಗ ಹೇನು ಬರುವ ಸಾಧ್ಯತೆಯೇ ಕಡಿಮೆ. ಹಾಗೂ ಬಂದರೆ ಅವನ್ನು ತೆಗೆದುಹಾಕುವುದೇ ಸರಿಯೇ ಹೊರತು ಸಾಯಿಸುವುದು ಸರಿಯಲ್ಲ.
ಇದೇ ಪ್ರಶ್ನೆ ಸೊಳ್ಳೆ, ತಿಗಣೆ, ಜಿರಳೆ ಇತ್ಯಾದಿಗಳ ವಿಚಾರದಲ್ಲೂ ಉಂಟಾಗುತ್ತದೆ. ಸ್ವಚ್ಛತೆ, ಪದಾರ್ಥಗಳ ಅತ್ಯಂತ ಕಡಿಮೆ ಸಂಗ್ರಹ, ಪದಾರ್ಥಗಳನ್ನು ಬಳಸುತ್ತಿರುವುದು, ಆಗಾಗ್ಗೆ ಶುಚಿಗೊಳಿಸುವುದು ಈ ಕ್ರಮವನ್ನು ಅನುಸರಿಸಿ ಅವುಗಳ ಕಾಟವನ್ನು ತಡೆಗಟ್ಟಬಹುದು. ಅವುಗಳನ್ನು ಕೊಲ್ಲುವ ಬದಲಿಗೆ, ಅವು ಬಾರದಂತೆ ಹೊಗೆ ಇತ್ಯಾದಿಗಳನ್ನೂ ಬಳಸಬಹುದು.
ಅಹಿಂಸೆಯನ್ನು ಪಾಲಿಸಲೇಬೇಕೆಂಬ ಹಠವಿದ್ದಾಗ ಪರಿಹಾರಗಳನ್ನು ಕಂಡುಹಿಡಿಯಬಹುದು.
ತಮ್ಮವ,
ಸುಧಾಕರ ಶರ್ಮಾ
Subscribe to:
Posts (Atom)