Pages

Monday, April 19, 2010

ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ||

ದಾನದಿಂದ ಕೈ ಶೋಭಿಸುತ್ತದೆಯೇ ಹೊರತು ಬಳೆಯಿಂದಲ್ಲ
ಸ್ನಾನದಿಂದ ಶುದ್ಧಿಯೇ ಹೊರತು ಗಂಧ-ಚಂದನ ಲೇಪನದಿಂದಲ್ಲ
ಸ್ವಾಭಿಮಾನದಿಂದ ತೃಪ್ತಿಯೇ ಹೊರತು ಭೋಜನದಿಂದಲ್ಲ
ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ.

ದಾನದಿಂದ ಕೈಗಳಿಗೆ ಶೋಭೆ ಬರುತ್ತದೆಯೇ ಹೊರತು ಮೈಮೇಲೆ ಚಿನ್ನದಾಭರಣ ಹಾಕಿಕೊಂಡು ಇತರರಿಗೆ ತೋರಿಸಿಕೊಂಡರೆ ಶೋಭಿಸುವಿದಿಲ್ಲ. ಸ್ನಾನವನ್ನೇ ಮಾಡದೆ ಮೈಗೆ ಸೆಂಟ್ ಬಳಿದುಕೊಂಡರೆ ಸಾಕೇ? ಶುದ್ಧನೀರಿನಿಂದ ಸ್ನಾನ ಮಾಡಿದಾಗ ಮಾತ್ರ ಶರೀರ ಶುದ್ಧವಾಗುತ್ತದೆ. ಮನಶುದ್ಧಿಯ ವಿಚಾರವೇ ಬೇರೆ. ವಿದ್ವಾಂಸರಿಗೆ ಸನ್ಮಾನದಿಂದ ತೃಪ್ತಿಯೇ ಹೊರತು ಪುಷ್ಕಳವಾದ ಭೋಜನದಿಂದಲ್ಲ. ಊಟ ಹೊಟ್ಟೆ ತುಂಬಲು ಮಾತ್ರ. ಕೇವಲ ತಲೆಬೋಳಿಸಿಕೊಂಡು ಕಾವಿ ಉಟ್ಟರೆ ಸಾಲದು ಆತ್ಮಜ್ಞಾನವನ್ನು ಪಡೆದುಕೊಂಡರೆ ಮಾತ್ರವೇ ಮುಕ್ತಿ.
-

3 comments:

  1. ತುಂಬ ಅರ್ಥಗರ್ಭಿತವಾಗಿದೆ.

    ReplyDelete
  2. ಯೋಗ್ಯ ಅರ್ಥವಿವರಣೆ, ಇದು ಸಕಾಲಿಕವೂ ಕೂಡ, ಅನೇಕರು ಸ್ನಾನವೇ ಇಲ್ಲದೇ ಬರೇ ಸೆಂಟು ಹಾಕಿ ಸುಮ್ಮನಾಗುತ್ತಾರೆ, ಕಾವಿಗಂತೂ ಬಹಳ ಕಷ್ಟಕಾಲ ಈಗ, ಯಾಕೆಂದ್ರೆ ಕಾವಿಯ ಕುಲವನ್ನೇ ನಾಶಮಾಡುವ ಕಳ್ಳ ಕಾವಿಗಳು ಇದ್ದಾರೆ ! ಆದರೆ ವಿದ್ವಾಂಸರಿಗೆ ಸನ್ಮಾನದಿಂದ ತೃಪ್ತಿ ಅಂದಿರಲ್ಲ, ಸ್ಥಿತಪ್ರಜ್ಞ ವಿದ್ವಾಂಸ ಯಾರೇ ಸನ್ಮಾನಿಸಲಿ ಬಿಡಲಿ ಒಂದೇ ತೆರನಾಗಿರುತ್ತಾನೆ.

    ReplyDelete
  3. [ಮಾನೇನ ತೃಪ್ತಿರ್ನ ತು ಭೋಜನೇನ]
    ಆತ್ಮೀಯ ಭಟ್ಟರೇ,
    ಅರ್ಥ ವಿವರಣೆ ಕೇವಲ ಇಲ್ಲಿನ ಸುಭಾಷಿತಕ್ಕಾಗಿ ಬರೆದದ್ದು. ನಿಮ್ಮ ಅಭಿಮತ ಒಪ್ಪುವೆ.ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಪಮನಯೋ: -ಎಲ್ಲರೂ ಒಪ್ಪುವ ಸತ್ಯ.ನಿಮಗೂ, ಪ್ರತಿಕ್ರಿಯಿಸಿದ ಶ್ರೀ ಸೀತಾರಾಮ್, ಶ್ರೀ ಸುಬ್ರಹ್ಮಣ್ಯ ಹಾಗೂ ಓದುತ್ತಿರುವ ಎಲ್ಲರಿಗೂ ಶರಣು.

    ReplyDelete