Pages

Monday, August 2, 2010

ಅವಧೂತ-೩

ಒಂದು ವಿನಂತಿ:
ನಮ್ಮೆಲ್ಲಾ ಯಶಸ್ಸಿನ ಹಿಂದೆ ಭಗವಂತನ ಚೈತನ್ಯವೇ ಕೆಲಸ ಮಾಡುತ್ತಿದೆ, ಎಂಬ ಅಚಲ ನಂಬಿಕೆ ನನ್ನದು.ನನ್ನ ಜೀವಿತದ ಐವತ್ತೈದು ವರ್ಷಗಳು ಇದೇ ನಂಬಿಕೆಯಲ್ಲಿ ಕಳೆದಿದೆ. ನನ್ನ ನಂಬಿಕೆಯನ್ನು ಬೇರೆಯವರ ಮೇಲೆ ಹೇರುವ ಕೆಲಸವನ್ನು ನಾ ಮಾಡಲಾರೆ.ಆದರೆ ನನ್ನಂತೆಯೇ ನಂಬಿಕೆ ಇರುವ ಹಲವರಿಗೆ ಇಂತಾ ವಿಚಾರಗಳನ್ನು ತಿಳಿಸಬೇಕೆಂಬ ಇಚ್ಛೆಯಿಂದ ಇಲ್ಲಿ ಕೆಲವು ಘಟನೆಗಳನ್ನು ಬರೆದಿರುವೆ. ಅವಧೂತರ ಕೃಪೆಗೆ ಪಾತ್ರರಾಗಿ ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿರುವ ನನ್ನ ಹಲವು ಆತ್ಮೀಯರಿಂದ ಕೇಳಿದ ಅವರವರ ಜೀವನದಲ್ಲಿ ಅವಧೂತರ ಪ್ರಭಾವವನ್ನು "ನಂಬುವವರಿಗೆ" ತಿಳಿಸಲು ಈ ಲೇಖನವಷ್ಟೆ. ವೇದಸುಧೆಯ ಅಭಿಮಾನಿಗಳು ಅವಧೂತರ ಪ್ರಭಾವಕ್ಕೆ ಒಳಗಾಗಿದ್ದರೆ ತಮ್ಮ ಅನುಭವವನ್ನು ಹಚಿಕೊಳ್ಳಬಹುದು.


ಇತ್ತೀಚಿನ ಘಟನೆ. ಡಾ|| ವಾರಿಧಿ ಎಂಬ ವೈದ್ಯರಿಗೆ ಕೈ ಬೆರಳುಗಳನ್ನು ಮಡಿಸಲಾರದಂತಹ ಸಂಧಿವಾತ.ಹಲವು ವರ್ಷಗಳ ಚಿಕಿತ್ಸೆಯ ನಂತರವೂ ಪರಿಹಾರ ಕಾಣಲೇ ಇಲ್ಲ. ಪತಿ ಕೂಡ ವೈದ್ಯರೇ. ದಿನ ದಿನಕ್ಕೆ ವಾತರೋಗ ಜಾಸ್ತಿಯಾಗಿ ಇನ್ನೇನು ಪ್ರಾಕ್ಟೀಸ್ ಮಾಡುವುದನ್ನು ನಿಲ್ಲಿಸಿಬಿಡುವ ಆಲೋಚನೆಯಲ್ಲಿದ್ದರು. ಹೇಗಾದರಾಗಲೀ ಕಡೆಯ ಪ್ರಯತ್ನವಾಗಿ ಗುರುಗಳನ್ನೊಮ್ಮೆ ಕೇಳಿ ಬಿಡೋಣವೆಂದು ನೇರವಾಗಿ ಸಕ್ಕರಾಯ ಪಟ್ಟಣಕ್ಕೆ ಧಾವಿಸುತ್ತಾರೆ. ಮನೆಯಲ್ಲಿ ಅವಧೂತರು ಇಲ್ಲ. ಚಿಕ್ಕಮಗಳೂರಿಗೆ ಹೋಗಿರುವುದಾಗಿ ತಿಳಿದು ಅಲ್ಲಿಗೇ ಹೋಗುತ್ತಾರೆ. ಅಲ್ಲಿ ಒಂದು ಮನೆಯಲ್ಲಿ ಚಾಪೆಯಮೇಲೆ ಮಲಗಿ ಗುರುಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಡಾ|| ವಾರಿಧಿ ಆ ಮನೆಯ ಒಳಗೆ ಕಾಲಿಡುತ್ತಲೇ ಮಲಗಿದ ಜಾಗದಿಂದಲೇ " ಡಾ|| ವಾರಿಧಿ ಬನ್ನಿ, ಬನ್ನಿ, ಏನಮ್ಮಾ ನನ್ನ ಕಾಲು ಇಷ್ಟೊಂದು ನೋಯ್ತಾ ಇದೆಯಲ್ಲಾ! ಸ್ವಲ್ಪ ಕಾಲನ್ನು ಒತ್ತುವಿರಾ ?"
ಕೂಡಲೇ ಡಾ|| ವಾರಿಧಿ ಗುರುಗಳ ಕಾಲು ಒತ್ತಲು ಆರಂಭಿಸುತ್ತಾರೆ. ಎಷ್ಟು ಹೊತ್ತು ಒತ್ತಿದರೂ ಸಾಕು, ಎನ್ನಲೇ ಇಲ್ಲ. ಗುರುಗಳು ಕಣ್ಮುಚ್ಚಿರುವುದನ್ನು ಗಮನಿಸಿ ನಿಲ್ಲಿಸಿದರೆ ಕೂಡಲೇ ಕಣ್ ತೆರೆಯುತ್ತಿದ್ದರು, ಪುನ: ವಾರಿಧಿ ತಮ್ಮ ಕಾಯಕ ಮುಂದುವರೆಸುತ್ತಿದ್ದರು. ಕೊನೆಗೊಮ್ಮೆ" ಹೋಗಲಿ ಬಿಡಮ್ಮ, ಪಾಪ, ನಿಮ್ಮ ಕೈ ಎಷ್ಟು ನೋಯುತ್ತಿದೆಯೋ! "
ಡಾ|| ವಾರಿಧಿ ಕೈ ತೆಗೆಯುತ್ತಾರೆ ವಾತರೋಗ ಮಾಯ!! ಅಂದು ದೂರವಾದ ರೋಗ ಮತ್ತೆ ಕಾಣಿಸಿಕೊಂಡಿಲ್ಲವಂತೆ. ಗುರುಗಳೇ ಚಾಪೆಯಮೇಲೆ ಮಲಗುವಾಗ ತಾನು ಮಂಚದಮೇಲೆ ಸುಪ್ಪತ್ತಿಗೆಯಲ್ಲಿ ಮಲಗುವುದೆಂದರೇ! ಅಂದಿನಿಂದ ಡಾ!! ವಾರಿಧಿ ಚಾಪೆಯ ಮೇಲೆ ಮಲಗುತ್ತಿದ್ದಾರೆ. ಈಗಲೂ ಡಾ|| ವಾರಿಧಿ ಬೆಂಗಳೂರು ಸಮೀಪ ನೆಲಮಂಗಲದಲ್ಲಿದ್ದಾರೆ.

7 comments:

  1. ಸುಮಾರು ೯೭-೯೮ ನೇ ಇಸವಿಯಲ್ಲಿ ಡಾ| ಆರ್. ಗಣೇಶ್ ನನಗೆ ಹೇಳಿದ್ದು, ಸಕ್ಕರಾಯ ಪಟ್ಟಣದಲ್ಲಿ ಅವಧೂತರೊಬ್ಬರಿದ್ದಾರೆ, ತ್ರಿಕಾಲಜ್ಞಾನಿಗಳು ಎಂದು, ಅವರನ್ನು ದರ್ಶಿಸುವ ಭಾಗ್ಯ ನನಗಿರಲಿಲ್ಲ, ಹಾಗಂತ ನನ್ನ ದೂರದ ಬಂಧುವೊಬ್ಬರ ಮನೆಗೂ ಅವರು ಬಂದಿದ್ದರೂ ಬಹಳ ತಡವಾಗಿ ನನಗೆ ಈಗ ತಿಳಿದುಬಂತು ! ಅವರ ಮಹಿಮೆಗಳು ಮತ್ತು ಶಿಷ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ, ತಮಗೆ ಕಾಣಿಕೆ ಬಂದ ಹಣದಲ್ಲಿ ಬಹುಭಾಗವನ್ನು ವರದಹಳ್ಳಿಗೆ ಅವರು ಕಳುಹಿಸುತ್ತಿದ್ದರಂತೆ ಅಂತ ಅಲ್ಲಿನ ಜನ ಹೇಳುತ್ತಿದ್ದಾರೆ! ಈ ದೈವಾಂಶ ಸಂಭೂತರ ಒಳಗಿನ ಸಂಪರ್ಕವಾಹಿಣಿ ಯಾವುದು ? ತಮ್ಮೆಲ್ಲರ ಸಮಸ್ಯೆಗಳು ಅವರಿಗೆ ಹೇಗೆ ತಂತಾನೇ ಗೊತ್ತಾಗಿ ಬಿಟ್ಟಿತ್ತು ? --ಇದಕ್ಕೆಲ್ಲ ನಮಗೆ ಉತ್ತರಿಸಲು ಯಾರೂ ಸಿಗುವುದಿಲ್ಲ; ನಮ್ಮನ್ನು ಮೀರಿದ ಅದ್ಬುತ ಶಕ್ತಿ ಎಲ್ಲರಲ್ಲೂ ನೆಲೆಸಿದೆ ಎನ್ನುವುದು ಇದಕ್ಕೆ ಸೂಕ್ತ ಉತ್ತರ. ಆ ನೆಟ್ ಕನೆಕ್ಷನ್ ಪಡೆಯಲು ಮನೋಬಲ ಮತ್ತು ಆತ್ಮಬಲವೆಂಬ ಇನ್ವೆಸ್ಟ್ಮೆಂಟ್ ಬೇಕು, ಈ ಭಂಡವಾಳ ಜಾಸ್ತಿ ಆಗುತ್ತಾ ಸಾಗಿದಂತೇ ನಿಜದ ಅರಿವು ಮೂಡಲು ಸಾಧ್ಯ! ಅವಧೂತರ ಚಿತ್ರ ನೋಡಿ ಧನ್ಯನಾದೆ, ಶ್ರೀಯುತ ಶ್ರೀಧರ್, ಪ್ರಸ್ತುತಪಡಿಸಿದ ತಮಗೆ ಅನಂತ ಧನ್ಯವಾದಗಳು

    ReplyDelete
  2. ನಾನಂತೂ ನಂಬುತ್ತೇನೆ.... ಶೂನ್ಯದಲ್ಲಿ ಒಂದು ಶಕ್ತಿ ಇರದೇ ಇದ್ದರೆ, ಜಗತ್ತು ನಡೆಯಲು ಸಾದ್ಯವೇ ಇಲ್ಲ... ದೇವರು ಯಾರೊಬ್ಬರ ಶರೀರದಲ್ಲಿದ್ದು ಇದನ್ನೆಲ್ಲಾ ನೋಡಿಕೊಳ್ಳುತ್ತಿದ್ದಾನೆ....

    ReplyDelete
  3. ಅವಧೂತರಿಗೆ ಇಂತಹ ಪ್ರಚಾರಗಳೆಲ್ಲಾ ಇಷ್ಟವಾಗುತ್ತಿರಲಿಲ್ಲ.ಅವರು ಶರೀರ ಧಾರಿಗಳಾಗಿದ್ದಾಗ ಅವರ ಬಗೆ ಬರೆಯಲು ಭಯವಾಗುತ್ತಿತ್ತು. ಈಗ ಈ ಚೈತನ್ಯದ ಪರಿಚಯ ಜನರಿಗೆ ಆದರೆ ತಪ್ಪಿಲ್ಲವೆಂಬ ಭಾವನೆಯಲ್ಲಿ ಕಿಂಚಿತ್ ಬರೆದಿರುವೆ.ಬರೆಯುವುದು ಬಹಳಷ್ಟಿದೆ.ಅವಧೂತರ ಕೃಪೆಗೆ ಪಾತ್ರರಾಗಿ ಅವರ ಮಾತಿನಂತೆ ಬದುಕುತ್ತಿರುವ ಸಹಸ್ರಾರು ಕುಟುಂಬಗಳಿವೆ. ಒಬ್ಬೊಬ್ಬರದೂ ಒಂದೊಂದು ಅನುಭವ. ಇದನ್ನೆಲ್ಲಾ ಪವಾಡವೆಂದು ತಿಳಿದು ಹಗುರವಾಗಿ ಮಾತನಾಡುವವರ ಪಾಲಿಗೆ ಆಹಾರವಾಗಬಾರದೆಂದು ಅವಧೂತರ ಬಗ್ಗೆ ಹೆಚ್ಚು ಬರೆಯುವ ಪ್ರಯತ್ನ ಮಾಡುವುದಿಲ್ಲ.ಸದಾ ಒಂದು ತುಂಡು ಬಟ್ಟೆಯನ್ನು ಸೊಂಟದಿಂದ ತೊಡೆ ಮುಚ್ಚುವಂತೆ ಧರಿಸಿ, ಛಳಿಮಳೆ ಎನ್ನದೆ ಮೈಯ್ಯ ಮೇಲೆ ಅಂಗಿ ಹಾಕದೆ ಓಡಾಡಿದ , ಶಿಷ್ಯರಿಗೆ ಪ್ರತ್ಯಕ್ಷ ದೇವರಾಗಿದ್ದ ಅವಧೂತರ ನಿಸ್ವಾರ್ಥ ಸರಳ ಬದುಕನ್ನು ಬಣ್ಣಿಸುವುದು ಅಷ್ಟು ಸುಲಭವಲ್ಲ. ಆ ದಿವ್ಯ ಚೈತನ್ಯವು ಸದಾಜೊತೆಗಿದ್ದು ನಮ್ಮೆಲ್ಲರನ್ನೂ ಸರಿಮಾರ್ಗದಲ್ಲಿ ಕೊಂಡೊಯ್ಯಲಿ ಎಂದು ಪ್ರಾರ್ಥಿಸುತ್ತಾ ಇಲ್ಲಿಗೆ ಆ ಲೇಖನಮಾಲಿಕೆ ನಿಲ್ಲಿಸುವೆ. ಒಂದು ವೇಳೆ ಲೇಖನ ಮುಂದುವರೆಸಬಹುದೆಂದು ಪ್ರೇರಣೆಯಾದರೆ ಆ ದಿವ್ಯಚೈತನ್ಯಕ್ಕೆ ತಲೆಬಾಗಿ ಆದೇಶ ಪಾಲಿಸುವೆ. ಸ್ಪಂಧಿಸಿದ ಎಲ್ಲರಿಗೂ ಧನ್ಯವಾದಗಳು.

    ReplyDelete
  4. ಶ್ರೀಧರರೇ, ನಾವೆಲ್ಲಾ ಕಾವ್ಯ-ಸಾಹಿತ್ಯ ಬರೆಯುವುದು ಗುದ್ದಾಡುವುದು ಇದ್ದೇ ಇದೆ, ಆದರೆ ಇಂತಹ ಪುಣ್ಯಾತ್ಮರ ಕಥೆಯನ್ನು ಓದುವುದೊಂದೇ ಅಲ್ಲ-ಅಚ್ಚುಹಾಕಿಸಬೇಕು,ಅವರ ಕಥೆಗಳೂ ಪೂಜೆಗೆ ಯೋಗ್ಯ, ಇಂತಿರುವಾಗ ನಾನು ಹೇಳುತ್ತೇನೆ ಕೇಳಿ ನನ್ನ ಮನಸೂ ಹೇಳುತ್ತಿದೆ -ನಿಮಗೆ ಅವಧೂತರು ಅನುಮತಿ ಕೊಡುತ್ತಾರೆ, ಮುಂದುವರಿಸಿ, ಇಲ್ಲವೇ ನನಗಾದರೂ ಮೇಲ್ ಮಾಡಿ- ಓದಬೇಕು, ಅವರನ್ನು ಕಾಣಲಂತೂ ಆಗಲಿಲ್ಲ-ಕೊನೇಪಕ್ಷ ಕಥೆಗಳನ್ನಾದರೂ ಕೇಳೋಣ, ಧನ್ಯವಾದ

    ReplyDelete
  5. ನನ್ನ ಕಿವಿಗಿ ಬಿದ್ದಿರುವಷ್ಟನ್ನು ನಿಧಾನವಾಗಿ ಬರೆಯುತ್ತಹೋಗುವೆ ಭಟ್ಟರೇ, ನಮಸ್ಕಾರಗಳು.

    ReplyDelete
  6. ನೀವು ತಪ್ಪು ಮಾಡಿದ್ದೀರಿ, ಶ್ರೀಧರ್. ನನ್ನನ್ನೊಮ್ಮೆ ಅವರು ಬದುಕಿದ್ದಾಗ ಅವರನ್ನು ಕಾಣಲು ಕರೆದೊಯ್ಯಬೇಕಿತ್ತು.

    ReplyDelete
  7. ನಾಗರಾಜ್,
    ಇದು ನಿಮ್ಮ ಇಂದಿನ ಮನಸ್ಥಿತಿ. ನೀವು ಹೀಗೆಲ್ಲಾ ನಂಬುತ್ತಿರಲಿಲ್ಲ. ಇರಲಿ ಬಿಡಿ. ಅವಧೂತರ ಶರೀರ ಮಾತ್ರವೇ ವಿಸರ್ಜನೆಗೊಂಡಿರುವುದು, ಇನ್ನು ಮುಂದೆ ಅವರ ಚೈತನ್ಯವೇ ದಾರಿತೋರಬಹುದು.ನಮ್ಮ ಅಪ್ಪ-ಅಮ್ಮ ಸತ್ತಿದ್ದಾರೆಂದು ನನಗನಿಸುತ್ತಲೇ ಇಲ್ಲ.ಇಂದಿಗೂ ನನ್ನನ್ನು ಕೈಹಿಡಿದು ನಡೆಸುತ್ತಿರುವುದು ಅವರ ಚೈತನ್ಯವೇ ಅನ್ನೋ ನಂಬಿಕೆ ಈಗಲೂ ಬಲವಾಗಿದೆ.

    ReplyDelete