ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Wednesday, November 24, 2010

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು

 ಇಂದು ಸರ್ಕಾರಿ ರಜೆ. ನಮ್ಮ ಕೇಂದ್ರದಿಂದ ಯಾವ ಕರೆಯೂ ಬಾರದೆ ಮನೆಯಲ್ಲೇ ಇದ್ದೆ. " ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ" ಹಾಡು ನೆನಪು ಬಂತು ಹಾಗೆಯೇ ಗುನುಗುಡುತ್ತಿದ್ದೆ. ಕನ್ನಡ ಇರಲಿ, ಆದರೆ ತಾಯಿ ಭಾರತಿಯನ್ನು ನೆನೆಯುತ್ತಾ ಪದ್ಯಒಂದನ್ನು ಇದೇ ದಾಟಿಯಲ್ಲಿ ಬರೆಯಬಾರದೇಕೆ? ಎಂದುಕೊಂಡು ಪ್ರಯತ್ನ ಮಾಡಿದೆ. ನನ್ನ ನಾದಿನಿ ಶೀಮತಿ ಲಲಿತಾ ರಮೇಶ್ ಕೂಡ ಮನೆಗೆ ಬಂದಳು. ಸರಿ ರಾಗ ಹಾಕಿ, ಹಾಡಿಯೇ ಬಿಟ್ಟೆವು. ಹೇಗಿದೆ? ಹೇಳಿ.

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು|
ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು||ಪ||

ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ
ಜನ್ಮತಾಳಿದ ನಾವು ಎಂದೆಂದು ಒಂದು|
ವೇದ ಮಂತ್ರವಪಠಿಸಿ ,ಧರ್ಮಾರ್ಥಕಾಮದಲಿ
ಮುಂದೆನಡೆವೆವು ನಾವು ಧರ್ಮಸೂತ್ರದಲಿ||೧||

ಈ ಮಣ್ಣಿನಲಿ ಜನಿಸಿ, ದೇಶದಗಲದಿ ತಿರುಗಿ
ತಪವ ಮಾಡಿದ ಋಷಿಯ ಸಂತತಿಯು ನಾವು|
ತ್ಯಾಗಮಯ ಜೀವನದಿ ಸರಳಬದುಕನು ನಡೆಸಿ
ವಿಶ್ವದಲಿ ಎತ್ತರಕೆ ಮೆರದ ಜನ ನಾವು||೨||

ಶಂಕರರು ಮಧ್ವರು, ಬಸವ ರಾಮಾನುಜರು
ತೋರಿದಾ ದಾರಿಯಲಿ ಸಾಗುವೆವು ನಾವು|
ಎದುರಾಳಿ ಶತೃಗಳ ರಕ್ತತರ್ಪಣಮಾಡಿ
ಮೆರದ ವೀರರ ಜನ್ಮ ಸಾರ್ಥಕವ ಮಾಡಿ||೩||

1 comment:

  1. ಶ್ರೀಧರ್, ಕೇಳಿದೆ. ಚೆನ್ನಾಗಿದೆ. ಸಣ್ಣಪುಟ್ಟ ಪದಗಳ ಪರಿಷ್ಕರಣೆ ಮಾಡಿದರೆ ಇನ್ನೂ ಚೆನ್ನಾಗುತ್ತದೆ.

    ReplyDelete