ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, November 24, 2010

ರಾಜ ಮಾರ್ಗ


ಇಲ್ಲ, ರಾಜಮಾರ್ಗ ಮುಚ್ಚಲೂ  ಇಲ್ಲ
ಅದು ಪ್ರತಿಬಂದಿತವೂ ಅಲ್ಲ
ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ
ಗಮ್ಯದ ತನಕ ಸುದೃಢ ಘನ ಗಂಭೀರ
ಆದರೆ ಕ್ರ ಮಿಸರು ಅದರಲಿ ಹಲವರು
ಅವರೋ ತಾವೇ ಕಿರುದಾರಿ ಹುಡುಕುವರು
ಅಲೆದಲೆದು ಬಳಲಿ ಗಮ್ಯವ ತಲುಪದವರು
ಸೋತು ಕೈ ಕೈ ಹಿಸುಕಿ ಮರುಗುವರು
ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ
ಸುವಿಹಾರಿ ಚೇತೋಹಾರಿ  ಘನ ಗಂಭೀರದೆ
ಕಾಯುತಲಿದೆ ಅದು ಒಯ್ಯಲು ತೀರಕೆ
ಸೋತು ಬಳಲಿ ಬರುವರೆಲ್ಲರ ಗಮ್ಯಕೆ

[ಭಾವಸಂಗಮ ಪುಟದಲ್ಲಿ ಸೇರ್ಪಡೆಯಾಗಿದೆ]

3 comments:

 1. ನಿಮ್ಮ ಭಾವನೆಗಳನ್ನು ಹೊತ್ತ ಕವನಕ್ಕೆ ಮತ್ತು ನಿಮಗೆ ಸ್ವಾಗತ.

  ReplyDelete
 2. ಆತ್ಮೀಯ ಗೋಪಿನಾಥರೇ, ವೇದಸುಧೆ ಬಳಗದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಧನ್ಯವಾದ, ಸ್ವಾಗತ.

  ReplyDelete
 3. ಸನ್ಮಾನ್ಯ ಶ್ರೀಧರ್ ಅವರೇ ಮತ್ತು ಕವಿಯವರೇ
  ನಿಮ್ಮ ಆದರದ ಸ್ವಾಗತದ ಪ್ರತಿಕ್ರಿಯೆಗೆ ಶರಣು

  ReplyDelete